ಪುಟ:Mysore-University-Encyclopaedia-Vol-6-Part-11.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋಡಂಬಿ ಚರ್ಮಿಲವಾಗಿರುತ್ತದೆ. ಎಲೆಯ ನಾಳವಿನ್ಯಾಸ ಪ್ರಮುಖವಾಗಿ ಕಾಣುವಂತಿದೆ. ಹೂಗಳು ಕೆಂಪು ಮತ್ತು ಪರಿಮಳಯುಕ್ತ; ಏಕಲಿಂಗ ಇಲ್ಲವೆ ದ್ವಿಲಿಂಗಿಗಳು. ಅವಿ ಪ್ಯಾನಿಕಲ್ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಎರಡು ಬಗೆಯ ಹೂಗಳೂ ಒಂದೇ ಗೊಂಚಲಿನಲ್ಲಿರುತ್ತವೆ. ಪ್ರತಿ ಹೂವಿನಲ್ಲಿ ಹಸುರು ಬಣ್ಣದ ೫ ಪುಷ್ಪಪತ್ರಗಳು, ೫ ದಳಗಳು, ೧೦ ಕೇಸರುಗಳು, ಏಕಕಾರ್ಪೆಲಿನ ಉಚ್ಚಸ್ಥಾನದ ಅಂಡಾಶಯ (ಗಂಡು ಹೂ ಬಿಟ್ಟು) ಇವೆ. ಫಲ ನಟ್ ಮಾದರಿಯದು. ಮೂತ್ರಪಿಂಡದಾಕಾರದ ಇದು ಸುಮಾರು ೩ ಸೆಂಮೀ ಉದ್ದವೂ ೨.೫ ಸೆಂಮೀ ಅಗಲವೂ ಇದೆ. ಇದರ ಬಣ್ಣ ಬೂದುಮಿಶ್ರಿತ ಕಂದು. ಇದರಲ್ಲಿ ಗಡುಸಾದ ಹೊರಾವರಣ ಮತ್ತು ಎರಡು ಬೀಜದಳಾಗಳು ಇವೆ. ರೂಢಿಯಲ್ಲಿ ಬೀಜ ಎಂದು ಕರೆಯುವುದು ಫಲವನ್ನೆ. ಯಾವುದನ್ನು ಗೇರು ಹಣ್ಣು ಎಂದು ಕರೆಯಲಾಗುತ್ತದೊ ಅದು ವಾಸ್ತವವಾಗಿ ಹಣ್ಣಲ್ಲ. ಬದಲಿಗೆ ಹೂವಿನ ತೊಟ್ಟು, ಪುಷ್ಪಪೀಠ ಮತ್ತು ಅಂಡಾಶಯವನ್ನು ಸುತ್ತುವರಿದಿರುವ ತಟ್ಟೆಯಂಥ ಭಾಗಗಳಿಂದ ಕೂಡಿದ ರಚನೆ. ಇದರ ಆಕಾರ ಪಿಯರ್ ಹಣ್ಣಿನಂತೆ, ಬಣ್ಣ ಕೆಂಪು ಇಲ್ಲವೆ ಹಳದಿ. ಇದಕ್ಕೆ ತೆಳುಸಿಪ್ಪೆಯೂ ಮಧುರವಾದ ರುಚಿಯೂ ಒಂದು ವಿಶಿಷ್ಟ ಬಗೆಯ ಕಟುವಾಸನೆಯೂ ಇದೆ. ಗೋಡಂಬಿ ಬೆಳೆಯ ಬೇಸಾಯ : ಕರ್ನಾಟಕದ ಹವಾಗುಣ ಗೇರಿನ ಬೇಸಾಯಕ್ಕೆ ಹಿತಕರವಾಗಿದ್ದು ಎಲ್ಲ ಜಿಲ್ಲೆಗಳಲ್ಲೂ ಇದರ ಬೇಸಾಯ ಮಾಡಬಹುದು. ಗೋಡಂಬಿ ಒರಟು ಬೆಳೆಯಾದ್ದರಿಂದ ಮಳೆ ಅಧಿಕವಾಗಿ ಹಾಗೂ ಬಹಳ ಕಡಿಮೆ ಬೀಳುವ ಪ್ರದೇಶಗಳಲ್ಲಿ ಬೆಳೆಯಬಹುದು. ಆದರೆ ಹೆಚ್ಚು ಮಳೆ ಬೀಳುವ ಬೆಟ್ಟದ ಇಲಿಜಾರುಗಳಲ್ಲಿ ಯಶಸ್ವಿಯಾಗಿದೆ. ಬೇಸಾಯ ಸಮುದ್ರ ಮಟ್ಟದಿಂದ ಹಿಡಿದು ಸುಮಾರು ೮೦೦ ಮೀ ಎತ್ತರದವರೆವಿಗೆ ವ್ಯಾಪಿಸಿದೆ. ಗೋಡಂಬಿಯನ್ನು ಎಂಥ ಮಣ್ಣಿನಲ್ಲಾದರೂ ಬೇಸಾಯ ಮಾಡಬಹುದು. ಸಮುದ್ರ ತೀರಗಳ ಮರಳುಭೂಮಿಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಆದರೂ ಜಂಬಿಟ್ಟಿಗೆಮಣ್ಣು (ಲ್ಯಾಟರೈಟ್) ಮತ್ತು ಕೆಂಪು ಜೇಡಿಮಣ್ಣು ಉತ್ತಮವಾದವು. ಕ್ಷಾರೀಯ ಹಾಗೂ ಆಮ್ಲೀಯ ಭೂಮಿಗಳಲ್ಲೂ ಗೋಡಂಬಿಯನ್ನು ಬೆಳೆಸಬಹುದು. ಇದರ ವೃದ್ಧಿ ಬೀಜ(ಲಿಂಗರೀತಿ) ಮತ್ತು ಲೇಯರುಗಳಿಂದ (ನಿರ್ಲಿಂಗರೀತಿ) ಸಾಧ್ಯ. ಗೋಡಂಬಿಯಲ್ಲಿ ಅನ್ಯ ಪರಾಗಸ್ಪರ್ಶದಿಂದ ನಿಷೇಚನವಾಗುವುದರಿಂದ ಅಧಿಕ ಇಳುವರಿ ಕೊಡುವ ಒಂದು ಮ ತನ್ನ ಈ ಲಕ್ಷಣವನ್ನು ಉಳಿಸಿಕೊಂಡು ಹೋಗುವ ಸಾಧ್ಯತೆ ಕಡಿಮೆ. ಆದ್ದರಿಂದ ಲೇಯರುಗಳಿಂದ ವೃದ್ಧಿ ಮಾಡುವುದೇ ಉತ್ತಮವೆಂದು ಬಗೆಯಲಾಗಿದೆ. ಬೀಜಗಳಿಂದ ವೃದ್ಧಿ: ಹೆಚ್ಚಿನ ಇಳುವರಿ ಕೊಡುವ ಹಾಗೂ ರುಚಿ ಮತ್ತು ಆಕರ್ಷಕವಾದ ಹಣ್ಣುಗಳನ್ನು ಬಿಡುವ ಗೋಡಂಬಿ ಮರದಿಂದ ಬೀಜಗಳನ್ನು ಆರಿಸಿ, ಒಣಗಿಸಿ, ಎತ್ತರದ ಪಾತಿಗಳಲ್ಲಿ ಬೀಜಗಳ ನಡುವೆ ೨೦ ಸೆಂಮೀ ಅಂತರವಿರುವಂತೆ ನೆಡಬೇಕು. ಸಾಲುಗಳ ನಡುವಣ ಅಂತರವೂ 20 ಸೆಂಮೀ ಇರಬೇಕು. ನೇರವಾಗಿ ಭೂಮಿಯಲ್ಲೇ ಅಲ್ಲದೆ ಪಾಲಿತೀನ್ ಚೀಲ ಅಥವಾ ಕುಂಡಗಳಲ್ಲಿ ಕೂಡ ಬೀಜಗಳನ್ನು ನೆಡಬಹುದು. ದೂರ ಸ್ಥಳಗಳಿಗೆ ಸುಲಭವಾಗಿ ಸಾಗಿಸಲು ಸಾಧ್ಯವಾಗುವುದರಿಂದ ಪಾಲಿತೀನ್ ಚೀಲದಲ್ಲಿ ಸಸಿಗಳನ್ನು ಬೆಳೆಸುವುದು ಒಳ್ಳೆಯದು. ಬೀಜಗಳಿಗೆ ಕಾಲಕ್ಕೆ ಸರಿಯಾಗಿ ನೀರು ಹಾಕಿದಲ್ಲಿ ಸುಮಾರು ೨೦ ದಿವಸಗಳ ಅನಂತರ ಮೊಳೆಯುತ್ತವೆ. ಸಸಿಗಳು ಎರಡು ತಿಂಗಳು ದೊಡ್ಡವಾದ ಮೇಲೆ ಭೂಮಿಯಲ್ಲಿ ನೆಡಲು ಯೋಗ್ಯವಾಗಿರುತ್ತವೆ. ಲೇಯರಿಂಗ್: ಈ ಕ್ರಮಕ್ಕೆ ಒಂದು ವರ್ಷ ವಯಸ್ಸಿನ ಮರದ ರೆಂಬೆ ಸೂಕ್ತವಾದ್ದು. ಈ ವಯಸ್ಸಿನ ರೆಂಬೆಯ ಬೆಳೆವಣಿಗೆ ಚುರುಕಾಗಿರುತ್ತದೆ. ಆರಿಸಿದ ರೆಂಬೆಯ ಒಂದು ಭಾಗದಲ್ಲಿ ೨.೫ ಸೆಂಮೀನಷ್ಟು ಮೇಲಿನ ತೊಗಟೆಯನ್ನು ತೆಗೆದು ಹಾಕಿ, ತೆಂಗಿನ ಗುಂಜು ಅಥವಾ ಸುತಲಿದಾರದಿಂದ ಸುತ್ತಬೇಕು. ಅನಂತರ ನಯವಾದ ಮಣ್ಣನ್ನು ಹಾಕಿ ಪ್ಲಾಸ್ಟಿಕ್ ಹಾಳೆಯಿಂದ ಕಟ್ಟಿ ನೀರಿನಿಂದ ಚೆನ್ನಾಗಿ ನೆನೆಸಬೇಕು. ಸುಮಾರು ೪೦-೪೫ ದಿವಸಗಳ ಬಳಿಕ ನೇರಳೆಬಣ್ಣದ ಬೇರುಗಳು ಹೊರಮೂಡುತ್ತವೆ. ಆಗ ಲೇಯರನ್ನು ತಾಯಿಮರದಿಂದ ಬೇರ್ಪಡಿಸಬೇಕು. ಲೇಯರ್ ಮಾಡಲು ಅಕ್ಟೋಬರ್-ಏಪ್ರಿಲ್ ತಿಂಗಳ ನಡುವಣ ಕಾಲ ಸೂಕ್ತವಾದ್ದು. ಕಸಿ ಕಟ್ಟುವಿಕೆ : ಕಡಿಮೆ ದರ್ಜೆಯ ಗೋಡಂಬಿಯ ಬೊಡ್ಡೆಗೆ ಉತ್ತಮ ಗುಣವುಳ್ಳಾ ಮರದ ರೆಂಬೆಯನ್ನು ಕಸಿ ಮಾಡಿ ಮರವಾಗಿ ಬೆಳೆಸುವುದರಿಂದ ಉತ್ತಮ ಇಳುವರಿ ಸಿಕ್ಕುವಂತೆ ಮಾಡಬಹುದು. ಗೋಡಂಬಿ ಸಸಿಗಳನ್ನು ಸಾಮಾನ್ಯವಾಗಿ ಮುಂಗಾರು ಮಳೆಯ ಕಾಲದಲ್ಲಿ ನೆಡುತ್ತಾರೆ. ನೆಡುವುದಕ್ಕೆ ಮುಂಚೆ ಸುಮಾರು ಒಂದು ತಿಂಗಳು ಮುಂಚೆ, ಗುಂಡಿಯಿಂದ ಗುಂಡಿಗೆ ೮-೧೦ ಕಿಮೀ ಅಂತರವಿರುವಂತೆ, ೧ ಘನಮೀಟರ್ ಅಳತೆಯ ಗುಂಡಿಗಳನ್ನು ಬೂದಿ ಅಥವಾ ಸುಟ್ಟ ಮಣ್ಣು ಮತ್ತು ಮಣ್ಣುಗಳ ಮಿಶ್ರಣದಿಂದ ತುಂಬಬೇಕು. ಸಸಿಗಳು ಎಳೆಯವಾಗಿರುವಾಗ ಮಾತ್ರ ನೀರು ಹಾಯಿಸುವುದು ಅಗತ್ಯ. ಆಗಿಂದ್ದಾಗ್ಗೆ ಕೃತಕಗೊಬ್ಬರ, ಹಸುರೆಲೆ ಗೊಬ್ಬರ ಮುಂತಾದವನ್ನು ಹಾಕುತ್ತಿದ್ದರೆ ಬೆಳೆ ಹುಲುಸಾಗಿ ಬರುತ್ತದೆ. ಮಧ್ಯವರ್ತಿ ಬೇಸಾಯ: ಗೋಡಂಬಿ ಮರಗಳ ಮಧ್ಯೆ ವರ್ಷಕ್ಕೆ ಒಂದು ಬಾರಿ ಉಳುಮೆ ಮಾಡುವುದು, ಮರಗಳ ಸುತ್ತಲೂ ನೆಲವನ್ನು ಅಗೆಯುವುದು, ರೋಗ, ಕೀಟ ಅಥವಾ ಬೇರೆ ಕಾರಣಗಳಿಂದ ಒಣಗಿ ಹೋಗಿರುವ ಭಗಗಳನ್ನು ತೆಗೆಯುವುದು ಮುಂತಾದವು ಮಧ್ಯವರ್ತಿ ಬೇಸಾಯದ ಕೆಲವು ಕ್ರಮಗಳು. ಗೋಡಂಬಿ ತೋಟಗಳಾಲ್ಲಿ ಬೇರೆ ಜಾತಿಯ ಬೆಳೆಗಳನ್ನು ಕೃಷಿ ಮಾಡಬಹುದು. ಆದರೆ ಮಿಶ್ರ ಬೆಳೆಗೆ ಮೊದಲು ೩-೪ ವರ್ಷಗಳು ಮಾತ್ರ ಸಾಧ್ಯತೆ ಉಂಟು. ರೂಢಿಯಲ್ಲಿರುವ ಮಿಶ್ರಬೆಳೆಗಳೆಂದರೆ