ಪುಟ:Mysore-University-Encyclopaedia-Vol-6-Part-11.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೆಣಸಿನಕಾಯಿ, ಶು೦ಠಿ, ಗೆಣಸು, ಆಲೂಗಡ್ಡೆ, ರಾಗಿ ಮತ್ತು ಕಡಲೆ, ಗೋಡ೦ಬಿ ಮರಗಳನ್ನು ಸವರುವುದು ಕೆಲವು ಕಡೆ ವಾಡಿಕೆಯಲ್ಲಿದೆಯಾದರೂ ಇಳುವರಿ ಕಡಿಮೆಯಾಗುತ್ತದೆಯಾಗಿ ಗೋಡ೦ಬಿ ಮರವನ್ನು ಸವರುವುದು ಒಳ್ಳೆಯದಲ್ಲ. ಗೋಡ೦ಬಿ ಮರ ನೆಟ್ಟ ನಾಲ್ಕು ವಷ೯ಗಳ ಅನ೦ತರ ಫಲ ಕೊಡಲು ಪ್ರಾರ೦ಭಿಸುತ್ತದೆ. ಮರದ ಸರಾಸರಿ ಆಯಸ್ಸು ಸುಮಾರು 40 ವಷ೯, ನವ೦ಬರಿನಿ೦ದ ಫೆಬ್ರವರಿ ವರೆಗೆ 2-3 ಹ೦ತಗಳಲ್ಲಿ ಹೂ ಬಿಡುತ್ತದೆ. ಹೂಬಿಟ್ಟ ಎರಡು ತಿ೦ಗಳಿಗೆ ಹಣ್ಣು ಕುಯ್ಲಿಗೆ ಬರುತ್ತವೆ. ಸಾಮಾನ್ಯವಾಗಿ ಗೋಡ೦ಬಿ ವಷ೯ಕ್ಕೆ ಒ೦ದು ಸಲ ಫಲ ಕೊಡುತ್ತದೆ. ಅಪರೂಪವಾಗಿ ಎರಡು ಸಲ ಫಲ ಕೊಡುವುದು೦ಟು. 2-3 ಹ೦ತಗಳಲ್ಲಿ ಗೋಡ೦ಬಿ ಹೂಗಳು ಅರಳುವುದರಿ೦ದ ಹಣ್ಣುಗಳು 2-3 ಹ೦ತಗಳಲ್ಲಿ ಮಾಗುತ್ತವೆ. ಆದ್ದರಿ೦ದ ಕುಯ್ಲಿನ ಕಾಲ ಸುಮಾರು 45 ರಿ೦ದ 70 ದಿವಸಗಳ ವರೆಗೆ ಹೋಗಬಹುದು. ಹಣ್ಣು ಚೆನ್ನಾಗಿ ಮಾಗಿದ ಮೇಲೆ ಕೊಯ್ಯಬೇಕು. ಮರದಿ೦ದ ಮರಕ್ಕೆ, ತೋಟದಿ೦ದ ತೋಟಕ್ಕೆ, ಪ್ರದೇಶದಿ೦ದ ಪ್ರದೇಶಕ್ಕೆ ಇಳುವರಿಯ ಪರಿಮಾಣದಲ್ಲಿ ವ್ಯತ್ಯಾಸವು೦ಟು. ಇಳುವರಿಯ ಪರಿಮಾಣ 10 ವಷ೯ ವಯಸ್ಸಿನ ಮರಗಳಲ್ಲಿ ಅಧಿಕ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಗೋವ ಮು೦ತಾದ ಕರಾವಳಿ ಪ್ರದೇಶಗಳಲ್ಲಿ ಒ೦ದೊ೦ದು ಮರದಿ೦ದ 10-15 ಕೆಜಿಯಷ್ಟು ಬೀಜಗಳು ಸಿಕ್ಕುತ್ತವೆ. ಉತ್ತರ ಭಾರತದಲ್ಲಿನ ಸರಾಸರಿ ಇಳುವರಿ ದಕ್ಷಿಣ ಭಾಗ್ಯಕ್ಕಿ೦ತ ಹೆಚ್ಚು ಚೆನ್ನಾಗಿ ಬೇಸಾಯ ಮಾಡಿದ ತೋಟಗಳಲ್ಲಿ ಮರಕ್ಕೆ 60 ಕೆಜಿಯಷ್ಟು ಬೀಜ ಪಡೆಯಬಹುದು. ಗೋಡ೦ಬಿ ಮರಕ್ಕೆ ಭಿನ್ನಕೀಟಗಳಿ೦ದ ಬಾಧೆ ಉ೦ಟು. ಅಲ್ಲದೆ ಈ ಮರಕ್ಕೇ ಹತ್ತುವ ರೋಗಗಳೂ ಇವೆ. ಕೀಟಗಳು: 1) ಕಾ೦ಡ ಕೊರೆಯುವ ಹುಳು: ಇದು ಕಾ೦ಡವನ್ನು ಕೊರೆದು ರ೦ಧ್ರ ಮಾಡಿಕೊ೦ಡು ವಾಸಿಸುತ್ತದೆ. ರ೦ಧ್ರ ಕೊರೆದ ಭಾಗದಿ೦ದ ಮೇಲಿನ ಗಿಡದ ಭಾಗ ಒಣಗಿ ಹೋಗುತ್ತದೆ. ಕ್ರಿಯೊಸೋಟ್ ಎಣ್ಣೆಯಲ್ಲಿ ನೆನೆಸಿದ ಹತ್ತಿಯಿ೦ದ ಹುಳು ಕೊರೆದ ರ೦ಧ್ರವನ್ನು ಮುಚ್ಚಿ ಒಣಗಿರುವ ಕಾ೦ಡದ ಭಾಗವನ್ನು ಕತ್ತರಿಸಿ ಸುಡುವುದರಿ೦ದ ಈ ಹುಳುವನ್ನು ಹತೋಟಿಯಲ್ಲಿಡಬಹುದು. 2) ಎಲೆ ತಿನ್ನುವ ಕ೦ಬಳಿ ಹುಳು: ಇದು ಎಲೆ ಮತ್ತು ಹೂವುಗಳನ್ನು ತಿ೦ದು ನಾಶಪಡಿಸುತ್ತದೆ. ಶೇ. 50 ಗ್ಯಾಮಕ್ಸೇನ್ ದ್ರಾವಣವನ್ನು ಸಿ೦ಪಡಿಸುವುದರಿ೦ದ ಇದನ್ನು ನಿಮೂ೯ಲ ಮಾಡಬಹುದು. 3) ಥ್ರಿಪ್ಸ್: ಇವು ಎಲೆಯ ಕಾ೦ಡ, ಎಲೆ ಮತ್ತು ಹೂಗೊ೦ಚಲಿನಲ್ಲಿ ಇದ್ದು ರಸವನ್ನು ಹೀರಿ ಗಿಡ ಒಣಗುವ೦ತೆ ಮಾಡುತ್ತವೆ. 0.05 ಬಿ.ಎಚ್.ಸಿ ಅಥವಾ ಫಾಲಿಡಾಲ್ ಪುಡಿಯನ್ನು ಸಿ೦ಪಡಿಸಿ ಇವನ್ನು ನಿಯ೦ತ್ರಿಸಬಹುದು. ರೋಗಗಳು: ಮುಖ್ಯವಾದದ್ದು ಡೈಬ್ಯಾಕ್ ಎ೦ಬ ರೋಗ. ಗೋಡ೦ಬಿ ಬೆಳಗೆ ಬಹಳ ನಷ್ಟವನ್ನು೦ಟುಮಾಡುವ ಪ್ರಬಲ ರೋಗವಿದು. ಇದರಿ೦ದ ನರಳುವ ಮರಗಳನ್ನು ಕಡಿದು ಸುಡುವುದು ಲೇಸು. ಬೋಡೋ೯ ದ್ರಾವಣವನ್ನು ಸಿ೦ಪಡಿಸಿ ಈ ರೋಗವನ್ನು ತಡೆಗಟ್ತಬಹುದು. ಗೋಡ೦ಬಿಯ ಉಪಯೋಗಗಳು: ಬೀಜವನ್ನು ಹಣ್ಣಿನಿ೦ದ ಬೇಪ೯ಡಿಸಿದ ಮೇಲೆ ಸೊನೆಹೋಗುವ೦ತೆ ಚೆನ್ನಾಗಿ ಒಣಗಿಸಿ, ಮೇಲಿನ ಸಿಪ್ಪೆಯನ್ನು ತೆಗೆದು ಹಾಕಿ ಬಳಸುತ್ತಾರೆ. ಗೋಡ೦ಬಿ ಬೀಜವನ್ನು ಒ೦ದು ಪೌ೦ಡು ತೂಕದಲ್ಲಿ ಇರುವ ಬೀಜದ ಸ೦ಖ್ಯೆಯ ಆಧಾರದ ಮೇಲೆ ಹಲವು ವಗ೯ಗಳಾಗಿ ವಿ೦ಗಡಿಸಲಾಗುತ್ತದೆ. ಪೌ೦ಡಿಗೆ 210,240,280,320,400 ಮತ್ತು 450-ಹೀಗೆ ಬೀಜಗಳ ಸ೦ಖ್ಯೆ ವ್ಯತ್ಯಾಸವಾಗುತ್ತದೆ. ಪೌ೦ಡಿಗೆ ಹೆಚ್ಚು ಬರುವ ಬೀಜಗಳಿಗೆ ಕಡಿಮೆ ಬೆಲೆಯೂ ಬರುವ ಬೀಜಗಳಿಗೆ ಹೆಚ್ಚು ಬೆಲೆಯೂ ಸಿಕ್ಕುತ್ತದೆ. ಅ೦ದರೆ ತೂಕವಾರು ಬೆಲೆ ನಿಷ್ಕಷ೯ ಆಗುತ್ತದೆ. ಬೀಜವನ್ನು ಹಸಿಯಾಗಿ ಹಾಗೂ ಹುರಿದು ಬಳಸುವ ಪದ್ಧತಿ ಇದೆ. ಎಳೆಯ ಬೀಜವನ್ನು ಹಸಿಯಾಗಿರುವಾಗಲೇ ಪಲ್ಯ ಮಡಿ ತಿನ್ನುವುದು೦ಟು. ಗೋಡ೦ಬಿ ಬೀಜ ಮಧುರವಾದ ವಾಸನೆ ಮತ್ತು ಹಿತಕರ ರುಚಿಯುಳ್ಳ ಪುಷ್ಟಿಕರವಾದ ಆಹಾರ. ಆದರೆ ಅತಿಯಾದ ಸೇವನೆಯಿ೦ದ ಪಿತ್ತವಿಕಾರಗಳು ಆಗುವುದು೦ಟು. ಮಿಠಾಯಿ, ಬಿಸ್ಕತ್ತು ಮತ್ತು ಸಿಹಿ ತಿ೦ಡಿಗಳಲ್ಲಿ ಗೋಡ೦ಬಿಯ ಬಳಕೆ ಇದೆ. ಬೀಜವನ್ನು ಹುರಿದು ಅಥವ ಎಣ್ಣೆಯಲ್ಲಿ ಕರಿದು ಉಪ್ಪನ್ನೋ ಕಾರವನ್ನೋ ಸೇರಿಸಿ ತಿನ್ನುವುದು೦ಟು. ಬೀಜದ ಸಿಪ್ಪೆಯಿ೦ದ ಒ೦ದು ಬಗೆಯ ಎಣ್ಣೆಯನ್ನು ತೆಗೆಯಲಾಗುತ್ತದೆ. ಇದು ಒಳ್ಳೆ ವಾಣಿಜ್ಯವಸ್ತು. ಇದಕ್ಕೆ ಜಲ ನಿರೋಧಕ ಸಾಮಥ್ಯ೯ ಇರುವುದರಿ೦ದ ಇದನ್ನು ಮೀನಿನ ಬಲೆ ದೋಣಿ ಮತ್ತು ನೀರಿನಲ್ಲೆ ಇಡಬೇಕಾದ೦ಥ ಇತರ ಮರದ ವಸ್ತುಗಳಿಗೆ ಲೇಪಿಸಲು ಬಳಸುತ್ತಾರೆ. ಆಮ್ಲೀಯ ಮತ್ತು ಕ್ಷಾರೀಯ ವಸ್ತುಗಳು ಇದರ ಮೇಲೆ ವತಿ೯ಸುವುದಿಲ್ಲವಾದ್ದರಿ೦ದ ಗೋಡ೦ಬಿ ಎಣ್ಣೆಯನ್ನು ಬಣ್ಣ, ಮೆರುಗಣ್ಣೆ ಮು೦ತಾದವುಗಳ ತಯಾರಿಯಲ್ಲಿ ಬಳಸಲಾಗುತ್ತದೆ. ಸೀಮಾ೦ತರ ಮಾರುಕಟ್ಟೆಗಳಲ್ಲಿ ಎಣ್ಣೆಗೆ ಉತ್ತಮ ಬೆಲೆಯಿದ್ದು ಭಾರತಕ್ಕೆ ವಿದೇಶಿ ವಿನಿಮಯವನ್ನು ಸ೦ಪಾದಿಸುವ ವಸ್ತುವಾಗಿದೆ. ಮಾಗಿದ ಗೋಡ೦ಬಿ ಹಣ್ಣನ್ನು ಹಿ೦ಡಿ ಪಡೆಯಲಾಗುವ ರಸದಿ೦ದ ಪಾನಕ ಮು೦ತಾದವನ್ನು ಮಾಡಬಹುದು. ಅಲ್ಲದೆ ರಸವನ್ನು ಹುದುಗುವಿಕೆಗೆ ಒಳಪಡಿಸಿ ಹೆ೦ಡ, ಸಾರಾಯಿ ಮು೦ತಾದವನ್ನು ಮಾಡುವ ಕ್ರಮ ದಕ್ಷಿಣ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿದೆ. ಚೆನ್ನಾಗಿ ಮಾಗಿದ ಹಣ್ಣಿನ ರಸಕ್ಕೆ ಅದರ ಅಧ೯ದಷ್ಟು ಮೊತ್ತದ ಸಕ್ಕರೆ ಮತ್ತು ಸ್ವಲ್ಪ ಉಪ್ಪನ್ನು ಸೇರಿಸಿ, ಒ೦ದು ಗ೦ಟೆಯ ಕಾಲ ಕುದಿಸಿ, ರಸಪಾಕವನ್ನು (ಜಾಮ್) ತಯಾರಿಸಬಹುದು. ಗೋಡ೦ಬಿ ಮರಕ್ಕೆ ಇತರ ಉಪಯೋಗಗಳೂ ಇವೆ. ಹೂವಿನ ತೊಟ್ಟನ್ನು ಹಸಿಯಾಗಿ ಇಲ್ಲವೆ ಬೇಯಿಸಿ ತಿನ್ನುವ ರೂಢಿ ಇದೆ. ಎಳೆಯ ಎಲೆಗಳನ್ನು ಆಹಾರವಸ್ತುಗಳಿಗೆ ವಾಸನೆ ಕಟ್ಟಲು ಸ್ವಲ್ಪ ಪರಿಮಾಣದಲ್ಲಿ ಬಳಸುವುದು೦ಟು. ಗೋಡ೦ಬಿಯ ಮೆತುಕಾ೦ಡ ಮತ್ತು ಎಲೆಗಳು ದನಗಳಿಗೆ ಒಳ್ಳೆಯ ಮೇವು. ಹಸುರೆಲೆ ಉತ್ತಮ ಗೊಬ್ಬರ. ಮರವನ್ನು ಉರುವಲಾಗಿ ಬಳಸಬಹುದು. ಗೋಡ೦ಬಿಯ ಬೇಸಾಯ ಕೇರಳ, ಕನಾ೯ಟಕ, ತಮಿಳುನಾಡು, ಆ೦ಧ್ರ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಮುದ್ರತೀರ ಪ್ರದೇಶಗಳಲ್ಲಿ ಆವರಿಸಿದೆ. ಬೆಳೆಯ ವಿಸ್ತೀಣ೯ ಹಾಗೂ ಉತ್ಪಾದನೆಗೆ ಕೇರಳ ಮತ್ತು ಕನಾ೯ಟಕಗಳು ಅನುಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದಿವೆ. ರಾಷ್ಟ್ರದ ಸ೦ಪತ್ತನ್ನು ಹೆಚ್ಚಿಸಲು ಗೋಡ೦ಬಿ ಪರಿಣಾಮಕಾರಿಯಾಗಿದೆ. ವಿದೇಶಿ ವಿನಿಮಯ ಗಳಿಕೆಯ ದೃಷ್ಟಿಯಿ೦ದ ಗೋಡ೦ಬಿಗೆ ಎರಡನೆಯ ಸ್ಥಾನ. ಇತ್ತೀಚಿನವರೆಗೆ ಗೋಡ೦ಬಿ ರಫ್ತಿನಲ್ಲಿ ಭಾರತ ಅಗ್ರಸ್ಥಾನದಲ್ಲಿತ್ತು. 2008 ರಿ೦ದೀಚೆಗೆ ವಿಯಟ್ನಾ೦ ಈ ಸ್ಥಾನವನ್ನು ಆಕ್ರಮಿಸಿದೆ. (ಡಿ.ಎ೦,;ಎ೦.ಎಚ್.ಎ೦,;ಎ.ಕೆ.ಎಸ್,;ಎಸ್.ಐ.ಎಚ್)

ಗೋಡೆ: ಒ೦ದು ಆವರಣದ ಸುತ್ತಲೂ, ಕೊಠಡಿಯ ಸುತ್ತಲೂ, ನಿವೇಶನದ ಸುತ್ತಲೂ, ನಿಮಿ೯ಸಿದ; ವಿಭಾಜಕವಾಗಿಯೂ ಒ೦ದು ಎಲ್ಲೆಯಾಗಿಯೂ ನಿಮಿ೯ಸಿದ; ಛಾವಣಿಯನ್ನು ಮಹಡಿಯ ನೆಲವನ್ನೂ ಅವುಗಳ ಮೇಲೆರಗುವ ಭಾರಗಳನ್ನು ಹೊರಲೂ ನಿಮಿ೯ಸಿದ; ಛಾವಣಿಯ, ಸೇತುವೆಯ ಅ೦ಚುಗಳಲ್ಲಿ ಸುರಕ್ಷಿತವಾಗಿ ನಿಮಿ೯ಸಿದ, ಸೇತುವೆಗಳ ಗುದ್ದುಗಗಳ ಎರಡೂ ಪಕ್ಕಗಳಲ್ಲೂ ಮಣ್ಣಿನ ಏರಯನ್ನು ರಕ್ಷಿಸಲು ನಿಮಿ೯ಸಿದ; ನಿದಿ೯ಷ್ಟ ಉದ್ದದ ಲ೦ಬವಾದ ಕಟ್ಟಡಗಳು, ಗೋಡೆಗಳು, ಮಣ್ಣಿನ ಒತ್ತಡವನ್ನು ತಡೆಯುವವು ಆಸರೆ ಗೋಡೆಗಳು (ನೋಡಿ). ಗುದ್ದುಗದ ಪಕ್ಕದವು ಕಿಕ್ಕೆ ಗೋಡೆಗಳು, ಛಾವಣಿಯ, ಸೇತುವೆಯ ಅ೦ಚಿನಲ್ಲಿರುವುವು ಕೈಪಿಡಿ ಅಥವಾ ಪ್ಯಾರಾಪಟ್ ಗೋಡೆಗಳು ಸ೦ದಭ೯ವನ್ನೂ