ಪುಟ:Mysore-University-Encyclopaedia-Vol-6-Part-11.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋದಾವರಿ ಬಳಿಯ ಬ್ರಹ್ಮಗಿರಿಯಲ್ಲಿ. 1067 ಮೀ ಎತ್ತರದಲ್ಲಿ, ನದಿ ಉಗಮಿಸ್ತೂದೆ. ಪಶ್ಚಿಮದ ಅರಬ್ಬಿ ಸೆಮುದ್ರಕ್ಕೆ ಇಲ್ಲಿಂದ ಕೇವಲ 80 ಕಿಮೀ. ನದಿ ಉಗಮಿಸುವೆಡೆಯಲ್ಲಿ ಸರೋವರವೊಂದುಂಟು. ಗಿರಿಯ ತಳದಿಂದ 690 ಮೆಟ್ಟಿಲುಗಳನ್ನು ಹತ್ತಿ ಹೋದರೆ ಸಿಗುವ ಈ ಸರೋವರದೊಳಕ್ಕೆ ಬಂಡೆಗಳ ಕಿಂಡಿಯೊಳಗಿನಿಂದ ನೀರು ಒಸರುತ್ತೆದೆ. ಉಗಮದಿಂದ ಸಂಗಮದವರೆಗೂ ನದಿ ಸಾಧಾರಣವಾಗಿ ಅಗ್ನೇಯಾಭಿಮುಖವಾಗಿಯೇ ಹರಿಯುತ್ತದೆ. ನಾಸಿಕವನ್ನು ದಾಟಿ, ಅಹಮದ್ನಗರ ಮತ್ತು ಔರಂಗಾಬಾದ್ ಜಿಲ್ಗೆಗಳ ನಡುವಣ ಗದಡಿಯಾಗಿ ಪರಿಣಮಿಸುತ್ತದೆ. ನಾಸಿಕ್ವರೆಗು ಬನ್ಡೆಗಳ ನಡುವೆ ಕಿರಿದಾದ ಪಾತ್ರದಲ್ಲಿ ಜಿಗಿಯುವ ಗೋದಾವರಿ ನದಿ ಅಲ್ಲಿರಿದ ಮುಂದಕ್ಕೆ ಮಣ್ಣಿನ ವಿಶಾಲವಾದ ಷಾತ್ರದಲ್ಲಿ ಕಡಿಮೆ ವೇಗದಲ್ಲಿ ಮುರಿದುವರಿಯುತ್ತದೆ. ನದಿ ಸ್ಥೆಲ್ಪ ದೂರ ಸಾಗಿದ ಮೇಲೆ ಬಲಗಡೆಯಿಂದ ಬಂದು ಇದನ್ನು ಸೇರುವ ಉಪನದಿ ಧಾರಣಾ. ಮುಂದೆ 27 ಕಿ.ಮೀಗಳ ದೊರದಲ್ಲಿ ಎಡದಂಡೆಯಲ್ಲಿ ಸಂಗಮಿಸುವ ನದಿ ಕಾದಬಾ. ಅನಂತರ ಗೋದಾವರಿಯೆನುಲ್ಕ ಪ್ರೆವರ ಮತ್ತು ಮುಳಾ ನದಿಗಳು ಒಂದಾಗಿ ಸೇರುತ್ತವೆ.ಪುರಾತನ ನಗರವಾದ ಪೈಟಣದ ಬಲಗಡೆಯಲ್ಲಿ ಹರಿದು ಸಾಗುವ ಗೋದಾವರಿ ನದಿ ಮಹಾರಾಷ್ಟ್ರದ ನಟ್ಟನಡುಎನಲ್ಲಿ ಮುರಿದುವರಿಯುತ್ತದೆ. ಪರ್ಬಾನಿ ಜಿಲ್ಗೆಯ ಬಳಿ ಪೂಣಾ೯ ನದಿಯೊ ನಾಂದೇಡ್ ಜಿಲ್ಲೆಯಲ್ಲಿ ಕೊಂಡಲ್ವಾಡಿಯ ಬಳಿ ಮುಂಜ್ರಾ ನದಿಯೂ ಸೇರುತ್ತೆವೆ. ಮುಂದೆ ಆಂದ್ರ ಪ್ತದೇಶೆವನ್ನು ಹೊಕ್ಕು ಬಹುತೇಕ ಪೂವಾ೯ಭಿಮುಖವಾಗಿ ಹರಿಯುವ ಗೋದಾವರಿ ನದಿಯನ್ನು ತೆಲಂಗಾಣ ಪ್ತದೇಶದ ಅದಿಲಬಾದ ಜಿಲ್ಗೆಯ ಚಿನ್ನೂರ್ ತಾಲುಕಿನಲ್ಲಿ ಕೂಡಿಕೆಣುಳ್ಳುವ ಉಪನದಿ ಮಾಣೇರ್. ಸಿರೊಂಚೆದ ಬಳಿಯಲ್ಲಿ ಎಡಗಡೆಯಿಂದ ಪ್ರಾಣಹಿತಾ ನದಿ ಹರಿದು ಬಂದು ಗೊದಾವರಿನ್ನ್ಜು ಸೇರುತ್ತದೆ. ಅದು ಪೇನಗಂಗಾ, ವಧಾ೯ ಮತ್ತು ವೈನಗಂಗಾ ನದಿಗಳನ್ನೂ ಕೂಡಿಸಿಕೊಂಡು ಮಹಾರಾಷ್ಟ್ರದಿಂದ ಹರಿದು ಬರುವ ನದಿ. ಈ ಬಳಿಯಲ್ಲಿ ನದಿ ಮತ್ತೆ ಮಹಾರಾಷ್ಟ್ರದ ಗಡಿಯನ್ನು ಮುಟ್ಟೆ ಇಲ್ಲಿಂದ ಮತ್ತೆ ಆಗ್ನೆಯ ದಿಕ್ಕಿಗೆ ಹರಿಯುತ್ತದೆ.ಮಹಾರಾಷ್ಟ್ರದ ಚಾಂದ ಮತ್ತು ಚತ್ತೀಸ್ಗಡದ ಬಸ್ತರ ಜಿಲ್ಲೆಗಳ ಗಡಿಗಳನ್ನು ಸೋಕಿ ಸ್ವಲ್ಪ ದೂರ ಮುಂದುವರಿಯುವ ಬಸ್ತೆರ್ ಜಿಲ್ಗೆಯಿಂದ ಇಂದ್ರಾವತಿಯೂ ಸ್ವಲ್ಪ ದೂರ ಕೆಳಗೆ ತಾಳ್ ನದಿಯೂ ಸೇರುತ್ತವೆ. ವಿದರ್ಭದ ನೆರೆಯಲ್ಲಿ ಹರಿಯವ ಗೋದಾವರಿಯ ಪಾತ್ರ 2-3 ಕಿಮೀ. ಈ ತಾಣ ವಿಶಾಲವಾಗಿ ಮರಳಿನಿಂದ ಕೂಡಿದೆ. ಒಂದೆರಡು ಎಡೆಗಳಲ್ಲಿ ಮಾತ್ರ ಬಂಡೆಗಳು ಅಡ್ಡಬಯೆವೆ. ಇವನ್ನು ನಿವಾರಿಸಿ,ಹತ್ತಿ ಬೆಳೆಯುವ ವಧಾ೯ ಮತ್ತು ನಾಗಪುರ ಜಿಲ್ಲೆಗಳಿಂದ ಸಮುದ್ರೆಕ್ಕೆ ಜಲದಾರಿ ಎರ್ಪಡಿಸಬೆಕೆಂದು 1854ರಲ್ಲಿ ಆಲೋಚಿಸಲಾಗಿತ್ತು. ಈ ಕಾರ್ಯಕ್ಕಾಗಿ ಸಾಕಶ್ಟು ವೆಚ್ಚವನ್ನು ಮಾಡಲಾಗಿತ್ತು. ಆದರೆ ಇದು ಸುಲಭ ಸಾಧ್ಯೆವಲ್ಲವೆಂದು ಕ್ಂಡುಬಂದದ್ದರಿಂದ 1871 ರಲ್ಲಿ ಈ ಯೋಜನೆಯೆನ್ನು ತ್ಯಜಿಸಲಾಗಿತ್ತು. ಸಿರೋಂಚದಿಂದ ಮುಂದುವರಿದು ಹರಿಯುವ ಗೋದಾವರಿಯನ್ನು ಸಂಗಮಿಸುವ ನದಿ ಶಬರಿ. ಅನಂತರ ಇದು ಗೋದಾವರಿ ಜಿಲ್ಲೆಯೆ ನಡುವೆ ಹರಿದು ಸಮುದ್ರದತ್ತ ಸಾಗುತ್ತದೆ. ಅದುವರೆಗೂ ಸಮತಲದ ಮೇಲೆ ವಿಶಾಲವಾದ ಪಾತ್ರದಲ್ಲಿ ನಿಧಾನವಾಗಿ ಹರಿಯುವ ನದಿ ಸ್ವಲ್ಬ ಮುಂದೆ ಪೋರ್ವಘಟ್ಟಗಳನ್ನು ಭೆದಿಸಿಕೊಂಡು ಮುರಿದುವೆರಿಯುವುದರಿಂದ ನದಿಯ ಪಾತ್ರ ಕಿರಿದೊ ಪ್ರವಾಹ ಹೆಚ್ಚು ವೇಗವೊ ಅಗುತ್ತದೆ. ಕಡಿದಾದ ಎತ್ತರ ದಂಡೆಗಳು ಮತ್ತು ಅವುಗಳ ಮೇಲಿನ ದಟ್ಟಕಾಡುಗಳಿಂದ ಅಲ್ಲಿಯೆ ನದಿಪ್ರದೇಶಕ್ಕ ರುದ್ರರಮಣೀಯತೆ ಉಂಟಾಗಿದೆ. ಘಟ್ಟಗಳನ್ನು ದಾಟಿದ ಮೇಲೆ ನದಿಯ ಹರಿವು ಮೆತ್ತೆ ನಿಧಾನವೊ ಪಾತ್ರ ವಿಶಾಲವೂ ಆಗಿ ಪರಿಣಮಿಸುತ್ತದೆ. ನದಿಯಲ್ಲಿ ಉಂಟಾದೆ ಹಲವು ನಡುಗಡ್ಡೆಗಳು ಹೊಗೆಸೊಪ್ಪಿನ ಬೆಳೆಗೆ ಪ್ರಸಿದ್ದವಾಗಿದೆ.ಪ್ರವಾಹ ಕಾಲದಲ್ಲಿ ನದಿ ದಡಮೇರಿ ಹರಿದು ಅನಾಹುತ ಮಾಡುವುದುಂಟು.ನದಿಯ ದಡದಲ್ಲಿ ಎತ್ತರದ ಕಟ್ಟೆ ಇದನ್ನು ತಡೆಗಟ್ಟಬೆಕಾಗುತ್ತದೆ. ರಾಜಮಹೆಂದ್ರಿ ಇಂದ ನದಿ ಎರಡು ಕವಲುಗಳಾಗಿ ಒಡೆಯತ್ತದೆ. ಈ ಎಡೆಯಲ್ಲಿ ನದಿಯ ಅಗಲ ಸು. 7 ಕಿಮೀ. ಪೋರ್ವದ ಕವಲು ಗೌತಮಿ ಗೋದಾವರಿ. ಪಶ್ಚಿಮದ್ದು ವೆಶಿಷ್ಣ ಗೋದಾವರಿ. ಈ ಕವಲುಗಳು ನದಿಯಿಂದಾದ ಮುಖಜಭೂಮಿಯನ್ನು ಹಾಯ್ದು ಸಮುದ್ರ ಸೇರುತ್ತನೆ. ಒಂದು ಕವಲು ಸ್ವಲ್ಪದೂರ ಮುನ್ನೆಡೆದ ಮೇಲೆ ಹೊರಡುವ ಒಂದು ಉಪಶಾಖೆಗೆ ವೈನತೇಯ ಎಂದು ಹೆಸರು. ಗೋದಾವರಿಯ ಕವಲುಗಳಿರುವ ಈ ಪ್ರದೇಶ ಅತ್ಯಂತ ಫಲವತ್ತಾದು. ನದಿ ಕವಲೊಡಿವುದಕ್ಕೆ ಮುನ್ನ ಮುಖ್ಯ ಧವಳೇಶ್ವರದ ಬಳಿ, ಕಟ್ಟಿದ ಅಣೆಕಟ್ಟೀನಿಂದ ಈ ಪ್ರದೇಶ ನೀರಾವರಿಗೆ ಒಳಪಟ್ಟೆದೆ.ಧೆವಳೇಶ್ವರದ ಬಳಿ ಹರಿಯುವ ಪ್ರವಾಹ ಸುಮಾರು 10 ಲಕ್ಷ ಕ್ಯೊಸೆಕುಗಳಿಂದ 20 ಲಕ್ಷ ಕ್ಯೊಸೆಕುಗಳವರೆಗೆ ವ್ಯತ್ಯಾಸವಾಗುತ್ತದೆ. ಮೇ ತಿಂಗಳಲ್ಲಿ ಅದು 15,೦೦೦ ಕ್ಯೊಸೆಕುಗಳಷ್ಟು ಕಡೀಮೆಇರಬಹುದು. ನದಿಯ ಗರಿಷ್ಣ ವಾಷಿ೯ಕ ಪ್ರವಾಹ ಸುಮಾರು 7.70.000.00.00,000 ಘನ ಅಡಿ. ಕೆನಿಷ್ಣ 43.800.00,00.000 ಘನ ಅಡಿ. ಗುಂದಾವರಿಯಲ್ಲಿ ಹರಿಯುವ ವಾರ್ಷಿಕ ಸರಾಸರಿ ನೀರು ಅಮೆರಿಕದ ಕೊಲಂಬಿಯ ನದಿಯದಕ್ಕಿಂತೆ ಹೆಚ್ಚು ಈಜಿಪ್ಟಿನ ನೈಲ್ ನದಿಯೆಕ್ಕಿಂತ ಅಧಿಕ. ಗೋದಾವರಿ ಜಿಲ್ಲೆಗಳಲ್ಲಿ ನದಿಯ ಮೇಲೆ ದೋಣಿಗಳು ಸಂಚರಿಸುತ್ತವೆ. ಕಾಲುವೆಗಳೂ ದೋಣಿಸಂಚಾರಕ್ಕೆ ಯೊಗ್ಯವಾಗಿವೆ. ಇವೆಕ್ಕೂ ಕೃಷ್ಣಾ ನದೀ ಮುಖಜಭೂಮಿಯೆ ಕಾಲುವೆಗಳಿಗೂ ಸರಿಪರ್ಕ ಏಪ೯ಟ್ಟಿದೆ. ಮಹಾರಾಷ್ಟ್ರದಲ್ಲಿ ಗೋದಾವರಿ ಮತ್ತು ಅದರ ಉತುಪನದಿಗಳನ್ನು ನೀರಾವರಿಗೆ ಹೆಚ್ಚು ಬಳಸಿಕೋಳ್ಳಲಾಗಲಿಲ್ಲ. ನಾಸಿಕದ ಬಳಿಯ ಗಂಗಾಪುರ ಕಟ್ಟೆ ಇಗತಪುರಿಯ ಬಳಿ ಧಾರಣಾ ನದೀ ಕಟ್ಟೆ, ಪ್ರವರದ ಭಂಡಾರಧಾರ ಕಟ್ಟೆ ಇವು ಮುಕ್ಯವದದ್ದು.ಆಂಧ್ರಪ್ರದೆಶದಲ್ಲೂ ಗೋದಾವರಿ ನದೀಪ್ರೆದೇಶಕ್ಕೆ ದೀಘ೯ವಾದ ಇತಿಹಾಸವುಂಟು.ಫಲವತ್ತಾದ ಕಪ್ಪುಮಣ್ಣಿನ ಕೆಣಿವೆಯಿಂದ ಕೂಡಿದ ಗೋದಾವರಿ ಆ ಪ್ರದೇಶದ ಜೀವನಾಡಿಯೆನಿಸಿತ್ತು. ಅಲ್ಲಿಯ ನಾಗರಿಕತೆಯೆ ತೊಟ್ಟಲಾಗಿತ್ತು. ನಾಸಿಕ ಮತ್ತು ಪೈಠಣ ಪ್ರಾಚೀನ ರಾಜವಂಶಗಳ ರಾಜಧಾನಿ ಗಳಾಗಿದ್ದುವು. ಕರ್ನಾಟಕೆವನ್ನಾಳಿದ ಸಾತವಾಹನ ದೊರೆಗಳು ಪ್ರತಿಷ್ಠಾನ ದಿಂದ (ಈಗಿನ ಪೈಠಣ) ಆಳುತ್ತಿದ್ದರೆಂದು ತಿಳಿದು ಬರುತ್ತದೆ (1-2ನೆಯ ಶತಮಾನ). ಕನ್ನಡ ನಾಡು ಕಾವೇರಿಯಿಂದ ಗೋದಾವರಿ ವಿಸ್ತರಿಸಿತ್ತೆಂದು ಕವಿರಾಜಮಾರ್ಗಕಾರ (9ನೆಯ ಶತಮಾನ) ಹೇಳುತ್ತಾನೆ. ಗೋದಾವರಿ ಆತ್ಯಂತ ಪವಿತ್ರ ವಾದ ನದಿಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ.ಒಂದು ಕಾಲದಲ್ಲಿ ಲೋಕದಲ್ಲೆಲ್ಲ ಕ್ಷಾಮ ವ್ಯಾಪಿಸಿದಾಗ ಋಷಿಗಳೆಲ್ಲರೂ ಕುಲಪತಿಯಾದ ಗೌತಮ ಋಷಿಯ ಆಶ್ರಮದಲ್ಲಿ ಅಶ್ರಯ ಪಡೆದು ನೆಮ್ನದಿಯಿಂದಿದ್ಧರು. ಗೌತಮನ ತಪಸ್ಸಿನ ಪ್ರಭಾವದಿಂದ ಆತನ ಭೂಮಿ ಗಳು ಫಲವತ್ತಾಗಿದ್ಧವು. ಇದಮ್ನ ನೋಡಿ ಸಹಿಸಲಾರದ ಕೆಲವು ಋಷಿಗಳು ಒಂದು ಕ್ರಿತಿಮ ಹಸುವನ್ನು ಸೃಷ್ಟಿಸಿ ಗೌತಮನ