ಪುಟ:Mysore-University-Encyclopaedia-Vol-6-Part-11.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋದಾವರಿ

   ನೀರಾವರಿ ಮತ್ತು ವಿದ್ಯುತ್ ವ್ಯವಸ್ಥೆ:ಗೋದಾವರಿ ನದೀ ಪ್ರದೇಶದಲ್ಲಿ ಪ್ರಕೃತದಲ್ಲಿ ನೀರಾವರಿ ಒದಗಿಸುತ್ತಿರುವ ಯೋಜನೆಗಳು ಇವು:
     ಆಂಧ್ರಪ್ರದೇಶದಲ್ಲಿ ಗೋದಾವರಿ ಮತ್ತು ಉಪನದಿಗಳಿಂದ ನೀರಾವರಿ ವ್ಯವಸ್ಥೆ:
     ೧.ನಿಜಾಮಸಾಗರ:ಗೋದಾವರಿ ಮತ್ತು ಉಪನದಿ ಮಂಜ್ರಾ (ಮಂಜರಾ) ನದಿಗೆ ಹೈದಾರಬಾದ್ ಗೆ ವಾಯವ್ಯದಲ್ಲಿ 144 ಕಿಮೀ ದೂರದಲ್ಲಿ ಅಣೆಕಟ್ಟೆಯನ್ನು ಕಟ್ಟಿದ್ದಾರೆ.ಇದರ ನೀರಿಂದ 1.1 ಲಕ್ಷ ಹೆ.ಜಮೀನು ಸಾಗುವಳಿಯಲ್ಲಿದೆ.ಈ ಅಣೆಕಟ್ಟೆಯು ಹೈದರಾಬಾದ್ ಮತ್ತು ಸಿಕಂದರಬಾದ್ ನಗರಗಳಿಗೆ ನಿರನ್ನು ಒದಗಿಸುತ್ತದೆ.
     ೨.ಮನಾಯಿರ್ (ಕಳೆ) ಜಲಾಶಯ:ಕರೀಂನಗರ ಜಿಲ್ಲೆಯಲ್ಲಿದೆ. ಈ ನದಿ ಗೋದಾವರಿಯ ಉಪನದಿ.ಈ ಅಣೆಕಟ್ಟು ನಿರ್ಮಾಣವನ್ನು 1974ರಲ್ಲಿ ಪ್ರಾರಂಭಿಸಿ 1985ರಲ್ಲಿ ಪೂರ್ಣಗೊಳಿಸಲಾಯಿತು.
      ೩.ರಾಮಗುಂಡಮ್ ಅಣೆಕಟ್ಟು:ಇದು ಕರೀಂನಗರದಲ್ಲಿದೆ.ಇದಕ್ಕೆ ಶ್ರೀರಾಮಸಾಗರ ಅಣೆಕಟ್ಟೆಯಿಂದ ಮತ್ತು ಪೋಚಂಪಾಡ್ ಜಲಾಶಯ ಕಾಲುವೆಯಿಂದ ನೀರು ಹರಿಯುತ್ತದೆ. ಇದರಿಂದ ಆಂಧ್ರಪ್ರದೇಶ, ಕರ್ನಾಟಕ, ಕೇರಳ,ಗೋವ,ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳು ಉಪಯೋಗ ಪಡೆಯುತ್ತವೆ.
     ೪.ದುಮ್ಮಗುಡಮ್ ಅಣೆಕಟ್ಟು:ಇದು ವಿದ್ಯುದುತ್ಪಾದೆಯ ಯೋಜನೆ. ಗೋದವರಿ ನದಿಗೆ ಖಮ್ಮಮ್ ಜಿಲ್ಲೆಯ ಭದ್ರಾಚಲಂ ಪ್ರದೇಶದ ಪಮುಲಪಲ್ಲಿ ಗ್ರಾಮದಲ್ಲಿ ನಿರ್ಮಾಣವಾಗಿದೆ.
     ೫.ಶ್ರೀರಾಮಸಾಗರ ಜಲಾಶಯ:ಗೋದಾವರಿ ನದಿಗೆ ನಿರ್ಮಿಸಿರುವ ಜಲಾಶಯ. ಇದರಿಂದ 27 ಮೆವ್ಯಾ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. 18 ಲಕ್ಷ ಹೆಕ್ಟೇರು ಭೂಮಿಗೆ ನೀರಾವರಿ ಒದಗುತ್ತದೆ.
     ಗೋದಾವರಿ ಅಣೆಕಟ್ಟು:ಗೋದಾವರಿ ಜಿಲ್ಲೆಗಳ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನೊದಗಿಸುವ ಉದ್ದೇಶದಿಂದ ಬ್ರಿಟಿಷ್ ಆಡಳಿತದ ಕಾಲದಲ್ಲಿ ಕಟ್ಟಲಾದ ಅಣೆಕಟ್ಟು.
ಈ ಪ್ರದೇಶದಲ್ಲಿ 1833ರಲ್ಲೂ ಮತ್ತೆ 1845ರಲ್ಲೂ ಘೋರ ಕ್ಷಾಮ ತಲೆದೋರಿ ಸರ್ಕಾರಕ್ಕೆ ನಷ್ಟವಾದ್ದರಿಂದ,ಕಾವೇರಿ ಮುಖಜಭೂಮಿಯಲ್ಲಿ ಸುಭಿಕ್ಷ ತಂದಿದ್ದ ಮೇಜರ್ ಕಾಟನನ ಸಲಹೆಯನ್ನು ಬ್ರಿಟಿಷ್ ಸರ್ಕಾರ ಕೇಳಿತು. ಈತ ಗೋದಾವರಿ ನದಿಗೆ ಅಡ್ಡಲಾಗಿ ಧವಳೇಶ್ವರ ಬಳಿ ಒಂದು ಅಣೆಕಟ್ಟನ್ನೂ ಗೋದಾವರಿ ನದಿಯ ಎರಡು ಮುಖ್ಯ ಕವಲುಗಳ ಆಚೀಚೆ ಬದಿಗಳಿಗೆ ಒಂದೊಂದು ಕಾಲುವೆಯನ್ನೂ ಸೂಚಿಸಿದ. ಕೂಡಲೆ ಈತನ ಮೇಲ್ವಿಚಾರಣೆಯಲ್ಲಿ ಕೆಲಸಗಳು ಪ್ರಾರಂಭವಾದುವು.
            ಅಣೆಕಟ್ಟಿನ ಮೇಲೆ ಕೆಲವು ವರ್ಷಗಳ ಅನಂತರ ಮಳೆಗಾಲದಲ್ಲಿ ಹೆಚ್ಚು ನೀರನ್ನು ಕೂಡಿಸಲು 2 ಎತ್ತರದ ಬಾಗಿಲುಗಳನ್ನಿಟ್ಟರು.1935ರಲ್ಲಿ 3 ಎತ್ತರದ ಬಾಗಿಲುಗಳು ಬಂದುವು.ಪ್ರಹಾಹ ಬಂದಗ ಈ ಬಾಗಿಲುಗಳು ತಾವಾಗಿಯೇ ಬೀಳುತ್ತವೆ.ಆ ಮೇಲೆ ಅವನ್ನು ಎತ್ತಬೇಕು. 1987ರಲ್ಲಿ ಈ ಅಣೆಕಟ್ಟನ್ನು ನಿರ್ಮಿಸಿ ಅದಕ್ಕೆ ಆರ್ಥರ್ ಕಾಟನ್ ಎಂದು ಹೆಸರಿಡಲಾಗಿದೆ. ಈ ಅಣೆಕಟ್ಟಿನ ಮೇಲೆ ರಸ್ತೆಯನ್ನೂ ನಿರ್ಮಿಸಿದ್ದು ಆದು ಪೂರ್ವ ಹಾಗೂ ಪಶ್ಚಿಮ ಗೋದಾವರಿ ಜಿಲ್ಲೆಗಳನ್ನು ಕೂಡಿಸುತ್ತದೆ.
  ಕವಲುಗಳ ಪೂರ್ವದ ಮುಖಜಭೂಮಿಯ ವಿಸ್ತೀರ್ಣ 19,450 ಚ.ಮೈ. ಮಧ್ಯದ ಮುಖಜಭೂಮಿಯ ವಿಸ್ತೀರ್ಣ 400 ಚ.ಮೈ. ಪಶ್ಚಿಮದ ಮುಖಜಭೂಮಿ ಕೋಲೇರ್ ಸರೋವರದ ವರೆಗೂ 1,000 ಚ.ಮೈ. ವಿಸ್ತಾರವಾಗಿ ಹರಡಿದೆ.ಮೊದಲನೆಯ ಎರಡು ಮುಖಜಭೂಮಿಗಳಲ್ಲಿ ನೀರಾವರಿ ಸಮಲ್ಕೋಟ ಮತ್ತು ಎಲೂರು ಶಾಖೆಗಳಿಗೂ ಗೋದಾವರಿಯ ಶಾಖೆಗಳಿಗೂ ನಡುವೆ ಹರಡಿದೆ.ನಡುವಣ ನೆಲದಲ್ಲಿ 8 ತಿಂಗಳಲ್ಲಿ ಕಟ್ಟಿ ಮುಗಿಸಿದ ಗುನ್ನಾವರಂ ಮೇಲುಗಾಲುವೆಯಿದೆ.ಈ ಪ್ರದೇಶವನ್ನು ಗೋದಾವರಿ ಜಿಲ್ಲೆಯ ತೋಟವೆನ್ನುತ್ತಾರೆ. ಪೊಲ್ಲಾವರಂ ದ್ವೀಪಕ್ಕೆ ನೀರಾವರಿಯನ್ನು ಒದಗಿಸಲು ಪೊಲ್ಲಾವರಂ ಮೇಲುಗಾಲುವೆಯನ್ನು ಕಟ್ಟಿದ್ದಾರೆ.ಪ್ರವಾಹಗಳಿಂದ ರಕ್ಷಣೆಗಾಗಿ ಶಾಖೆಗಳ ದಡಗಳಲ್ಲಿ ಎಲ್ಲ ಕಡೆಗಳಲ್ಲೂ ಏರಿಗಳನ್ನು ಕಟ್ಟಿದ್ದಾರೆ.
             ಅಗಲವಾದ ನದಿಯಲ್ಲಿಯ ದ್ವೀಪಗಳನ್ನು ಒಟ್ಟುಗೂಡಿಸುವ ಅಣೆಕಟ್ಟು ನಾಲ್ಕು ವಿಭಾಗಗಳಲ್ಲಿವೆ.
            ನಾಲೆಗಳು:೧.ಗೋದಾವರಿಯ ಪೂರ್ವ ಪ್ರದೇಶದ ಪ್ರಧಾನ ನಾಲೆಯ ಉದ್ದ ಎಡದಡದಲ್ಲಿ 7 ಕಿಮೀ.ಶಾಖಾನಾಲೆಗಳ ಉದ್ದ 250 ಕಿಮೀ. ಇದರಲ್ಲಿ ನೀರು ಇಲ್ಲ ಕಾಲಗಳಲ್ಲೂ ಹರಿಯುತ್ತದೆ. ನಾಲೆ ಗರಿಷ್ಠವಾಗಿ 48.75 ಕ್ಯೂಸೆಕುಗಳನ್ನು ಸಾಗಿಸುತ್ತದೆ.
    ೨.ಮಧ್ಯದ ಮುಖಜ ಭೂಮಿಯ ಪ್ರಧಾನ ನಾಲೆಯ ಉದ್ದ 188 ಕಿಮೀ. ಇಳಿಯುವ ಮಟ್ಟ ರೇಖಯ ಮೇಲೆ (ಫಾಲಿಂಗ್ ಕಾಂಟೂರ್) ಎಲ್ಲ ನಾಲೆಗಳೂ ಹೋಗುತ್ತವೆ. ಗರಿಷ್ಠವಾಗಿ ಇದು 3,400 ಕ್ಯೂಸೆಕುಗಳನ್ನು ಸಾಗಿಸುತ್ತದೆ.
     ೩.ಪಶ್ಚಿಮದ ಮುಖಜಭೂಮಿಯಲ್ಲಿ ನದಿಯ ಬಲದಡದಲ್ಲಿ ಹೋಗುವ ಪ್ರಧಾನ ನಾಲೆಯ ಉದ್ದ 7 ಕಿಮೀ. ಶಾಖಾನಾಲೆಗಳ ಉದ್ದ 333 ಕಿಮೀ.ಗರಿಷ್ಠವಾಗಿ ಇದು 7,500 ಕ್ಯೂಸೆಕುಗಳನ್ನು ಸಾಗಿಸುತ್ತದೆ.