ವಿಷಯಕ್ಕೆ ಹೋಗು

ಪುಟ:Mysore-University-Encyclopaedia-Vol-6-Part-11.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋಪಾಲನಾಯಕ-ಗೋಪಾಲಸ್ವಾಮಿ, ಎಂ.ವಿ. ತನ್ನ ತಮ್ಮಂದಿರೊಂದಿಗೆ ಕೂಡಿ ಆಶುಕವಿತೆಯಲ್ಲಿ ಜಯಪ್ರದನಾಗಿ ಉತ್ತರಾದಿ ಮಠದ ಶ್ರೀಗಳವರಾದ ಸತ್ಯಬೋಧತೀರ್ಥರ ಅನುಗ್ರಹವನ್ನು ಸಂಪಾದಿಸಿದ ಘಟನೆ ಉಲ್ಲೇಖನಾರ್ಹ ವಾದುದು. ಐಜಿ ವೆಂಕಟರಾಮಾಚಾರ್ಯ ಮತ್ತು ಹೆಳವನಕಟ್ಟೆ ಗಿರಿಯಮ್ಮ ಮೊದಲಾದವರು ಗೋಪಾಲದಾಸನ ಶಿಷ್ಯವರ್ಗಕ್ಕೆ ಸೇರಿದವರಲ್ಲಿ ಪ್ರಮುಖರು, ಗೋಪಾಲದಾಸ ಕೀರ್ತನಕಾರನಾಗಿದ್ದಂತೆಯೇ ಕುಶಲಿಯಾದ ಚಿತ್ರಕಾರನೂ ಆಗಿದ್ದ. ಆ ಕಲೆಯನ್ನು ತನ್ನ ಆಧ್ಯಾತ್ಮಿಕ ಗುರಿಯನ್ನು ಸಾಧಿಸಲು ಒಂದು ಸಾಧನವನ್ನಾಗಿ ಬಳಸಿಕೊಂಡ. ಈತನಿಂದ ರಚಿತವಾದ ಏಷ್ಟೋ ಚಿತ್ರಪಟಗಳನ್ನು ಭಕ್ತರು ಸೂಚಿಸಿ, ತಮ್ಮ ತಮ್ಮ ಇಷ್ಟಾರ್ಥವನ್ನು ಪಡೆದರೆಂದು ತಿಳಿದುಬರುತ್ತದೆ. ಗೋಪಾಲದಾಸ ರಚಿಸಿರುವ ಧನ್ವಂತ್ರಿಸ್ತುತಿ, ಪಂಡರಾಪುರದ ಪಾಂಡುರಂಗ ದರ್ಶನವಿತ್ತ ಸಂದರ್ಭವನ್ನು ಕುರಿತ ಒಂದು ಸುಳಾದಿ, ಕರ್ತೃವಿನ ಅಂತರಂಗದ ಅಭೀಷ್ಟ ಮತ್ತು ಆಧ್ಯಾತ್ಮಿಕ ಪ್ರಗತಿಗಳನ್ನು ಚಿತ್ರಿಸುವ ಹಲವಾರು ರಚನೆಗಳು ಹರಿದಾಸ ಸಾಹಿತ್ಯದಲ್ಲಿ ತುಂಬ ಮನ್ನಣೆ ಗಳಿಸಿವೆ. (ವಿ.ಜಿ.) ಗೋಪಾಲನಾಯಕ : 1295-1315. ಅಲ್ಲಾವುದ್ದೀನ್ ಖಿಲ್ಲಿಯ ದರ್ಬಾರಿನಲ್ಲಿದ್ದ ಸುಪ್ರಸಿದ್ಧ ಗಾಯಕ ಮತ್ತು ಕವಿ. ಮೂಲತಃ ದೇವಗಿರಿಯವ. ಅಲ್ಲಾವುದ್ದೀನನ ಸೇನಾಪತಿ ಮಲಿಕ್ ಕಾಫೂರ್ ದಕ್ಷಿಣದ ದಂಡಯಾತ್ರೆ ಕೈಗೊಂಡ ಸಮಯದಲ್ಲಿ ಈತನ ಸಂಗೀತಕ್ಕೆ ಮನಸೋತು ದೆಹಲಿಗೆ ಮರಳುವಾಗ ಈತನನ್ನು ತನ್ನ ಜೊತೆ ಕರೆದುಕೊಂಡು ನಾಯಕ ಕದಂಬಕಮ್ ರಾಗದಲ್ಲಿನ ತಾಲವರ್ಣಗಳ ಮತ್ತು ಗ್ರಹಸ್ವರ ಪ್ರಬಂಧಮ್‌ಗಳ ಕರ್ತೃ, ದಾಕ್ಷಿ ಕಾವ್ಯ ಸಂಗೀತದಲ್ಲಿ ಮಹಾವಿದ್ವಾಂಸನೊಂದು ಈತನನ್ನು ಸಂಗೀತ ಶಾಸ್ತನಾದ ವೆಂಕಟಮಖಿ ಹೊಗಳಿದ್ದಾನೆ. ಪರ್ಷಿಯನ್ ಸಂಗೀತಜ್ಞ ಅಮೀರ್ ಖುಸ್ತು ಈತನ ಸಂಗೀತ ನೈಪುಣ್ಯವನ್ನು ಕಂಡು ಬೆರಗಾದನಂತೆ. ಒಂದು ವಾರ ಪರ್ಯಂತ ಬಿಡದೆ ಗೋಪಾಲನಾಯಕನ ಹಿಂದೆ ಅವಿತುಕೊಂಡು ಸಂಗೀತವನ್ನು ಆಲಿಸಿದ ಖುಸ್ರು ಎಂಟನೆಯ ದಿನ ಹುಬೇಹೂಬ್ ಆತನಂತೆಯೇ ಹಾಡಿ ಎಲ್ಲರನ್ನೂ ದಿಗ್ಧಮೆಗೊಳಿಸಿದನೆಂದು ಪ್ರತೀತಿ. ಅನಂತರ ಅಮೀರ್ ಏಸು ಮತ್ತು ಗೋಪಾಲ ನಾಯರಿಬ್ಬರೂ ಪರಮ ಮಿತ್ತರಾದರು. ಗೋಪಾಲರಾವ್‌ ಹಿರಿಯಡಕ : 1919- ಕರ್ನಾಟಕದ ಕರಾವಳಿಯ ಯಕ್ಷಗಾನದ ಬಡಗುತಿಟ್ಟಿನ ಪ್ರಸಿದ್ಧ ಮದ್ದಲೆ ಕಲಾವಿದ ಹಾಗೂ ಯಕ್ಷಗಾನ ಗುರು. ಉಡುಪಿ ತಾಲ್ಲೂಕಿನ ಹಿರಿಯಡಕದಲ್ಲಿ 1919ರ ಡಿಸೆಂಬರ್ 15ರಂದು ಜನನ. ತಂದೆ ಶೇಷಗಿರಿರಾವ್, ತಾಯಿ ಲಕ್ಷ್ಮೀ, ಗೋಪಾಲರಾಯರು ಉಡುಪಿಯ ಅನಂತೇಶ್ವರ ದೇವಸ್ಥಾನದ ಜಗಲಿಯಲ್ಲಿದ್ದ ಪ್ರಾಥಮಿಕ ಶಾಲೆಯಲ್ಲಿ ಆರನೆಯ ತರಗತಿಯ ವರೆಗೆ ವಿದ್ಯಾಭ್ಯಾಸ ಮಾಡಿದರು. ಇವರು ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲಿ ತಂದೆಯಿಂದ ಮದ್ದಳೆಯನ್ನು, ತಂದೆಯವರ ಗುರು ನಾಗಪ್ಪ ತಮ್ಮಿಯವರಿಂದ ಯಕ್ಷಗಾನ ಕುಣಿತವನ್ನು ಕಲಿತರು. ಇವರು ಹಿರಿಯಡಕದ ವೀರಭದ್ರ ದೇವಸ್ಥಾನದ ಮೇಳದಲ್ಲಿ ವೇಷಧಾರಿಯಾಗಿ ರಂಗಪ್ರವೇಶ ಮಾಡಿದ್ದು 1934ರಲ್ಲಿ. ಒತ್ತು ಮದ್ದಳೆಗಾರನಾಗಿ ಮೇಳದಲ್ಲಿ ಸೇವೆ (1936), ನಿಜಮದ್ದಳೆಗಾರನಾಗಿ ಅಮೃತೇಶ್ವರಿ ಮೇಳದಲ್ಲಿ ಸೇವೆ (1939), ಅನಂತರ 1968ರ ತನಕ ಬಡಗುತಿಟ್ಟಿನ ಭಾಗವತಿಕೆಯ ಸೀಮಾಪುರುಷ ಕುಂಜಾಲು ಶೇಷಗಿರಿ ತಿನಿಯವರ ಜತೆಯಲ್ಲಿ ಮದ್ದಳೆಗಾರನಾಗಿ ಮಂದರ್ತಿ ಮೇಳದಲ್ಲಿ ಸುದೀರ್ಘ ಸೇವೆ-ಇವು ಗೋಪಾಲರಾಯರ ಕಲಾಜೀವನದ ಮೈಲಿಗಲ್ಲುಗಳು. 1958ರಲ್ಲಿ ಶಿವರಾಮ ಕಾರಂತರು ಬ್ರಹ್ಮಾವರದಲ್ಲಿ ಆಯೋಜಿಸಿದ ಪ್ರಪ್ರಥಮ ಯಕ್ಷಗಾನ ಗೋಷ್ಠಿಯಲ್ಲಿ ಇವರು ಮದ್ದಳೆಗಾರನಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಕಾರಂತರು ಇವರ ಮದ್ದಳೆಯ ಮೋಡಿ, ಪ್ರತಿಭೆ, ಸೃಜನಶೀಲತೆಗಳನ್ನು ಗುರುತಿಸಿದರು. 1968ರಲ್ಲಿ ಕಾರಂತರು ಬ್ರಹ್ಮಾವರದಲ್ಲಿ ಒಂದು ವರ್ಷ ನಡೆಸಿದ ಯಕ್ಷಗಾನ ಕೇಂದ್ರದಲ್ಲಿ ಇವರು ಮುಖ್ಯ ಅಧ್ಯಾಪಕರಾಗಿದ್ದರು. ಕಾರಂತರ ನಿರ್ದೇಶನದಲ್ಲಿ ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಆರಂಭವಾದ ಯಕ್ಷಗಾನ ಕೇಂದ್ರದಲ್ಲಿ ಇವರು 1971ರಿಂದ 76ರ ತನಕ ಗುರುವಾಗಿ ಸೇವೆ ಸಲ್ಲಿಸಿದರು. ಅಮೆರಿಕದ ಕ್ಯಾಲಿಫೋರ್ನಿಯಾದ ಹೇವಾರ್ಡ್ ವಿಶ್ವವಿದ್ಯಾನಿಲಯದಲ್ಲಿ ಮಾನವ ಶಾಸ್ತ್ರಜ್ಞ ಪೀಟರ್ ಜೆ. ಕ್ಲಾಸ್ 1968ರಲ್ಲಿ ಇಲ್ಲಿಗೆ ಬಂದು ಒಂದು ವರ್ಷ ಮದ್ದಳೆ ಕಲಿತರು. ಕಾರಂತರ ಮಾರ್ಗದರ್ಶನದಲ್ಲಿ ಯಕ್ಷಗಾನ ಕುರಿತು ಸಪ್ರಬಂಧ ಬರೆಯಲು ಬಂದ ಅವರಿಗೆ ಗೋಪಾಲರಾಯರು ಯಕ್ಷಗಾನ ಕಲಿಸಿದರು. 1977ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿ ಹದಿನಾಲ್ಕು ಕಡೆ ಯಕ್ಷಗಾನ ಪ್ರಾತ್ಯಕ್ಷಿಕೆ ನೀಡಿದರು. 1979-80ರಲ್ಲಿ ಬಿ.ವಿ.ಆಚಾರ್ಯರ ನೇತೃತ್ವದಲ್ಲಿ ಎರಡನೆಯ ಬಾರಿ ವಿದೇಶ ಪ್ರವಾಸ ಮಾಡಿ ಗೋಪಾಲರಾಯರು ಅಮೆರಿಕದಲ್ಲಿ ಹದಿನಾಲ್ಕು, ಜರ್ಮನಿಯಲ್ಲಿ ನಾಲ್ಕು ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿದರು. ಬಿ.ವಿ.ಕಾರಂತರ ನಿರ್ದೇಶನದಲ್ಲಿ ಕಲ್ಕತ್ತದಲ್ಲಿ (1982) ನಡೆದ ಕಲಾಗೋಷ್ಠಿಯಲ್ಲಿ ಗೋಪಾಲರಾಯರು ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸ ನೀಡಿದರು. 1993-95ರವರೆಗೆ ಇವರು ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದರು. ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1972), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ (1997), ಕರ್ನಾಟಕ ಸರ್ಕಾರದ ಜಾನಪದಶ್ರೀ ಪ್ರಶಸ್ತಿ (1998), ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮಿಗಳು ನೀಡಿದ ರಾಮವಿಠಲ ಪ್ರಶಸ್ತಿ (2003), ಉಡುಪಿಯ ಯಕ್ಷಗಾನ ಕಲಾರಂಗದವರ ದಶಾವತಾರಿ ರಾಮಕೃಷ್ಣ ಹೆಬ್ಬಾರ, ಭಾಗವತ ವಾದಿರಾಜ ಹೆಬ್ಬಾರ ಪ್ರಶಸ್ತಿ (2004)- ಇವು ಇವರಿಗೆ ಸಂದ ಮುಖ್ಯ ಪ್ರಶಸ್ತಿಗಳು, ಜಪಾನಿನಲ್ಲಿ ನಡೆದ ಏಷಿಯನ್ ಕಲ್ಬರಲ್ ಸೆಮಿನಾರ್‌ನ ಸಂದರ್ಭದಲ್ಲಿ ಪ್ರಕಟವಾದ ಡಾನ್ಸ್ ಅಂಡ್ ಮ್ಯೂಸಿಕ್ ಇನ್ ಸೌತ್ ಇಂಡಿಯನ್ ಡ್ರಾಮ (1981) ಗ್ರಂಥದಲ್ಲಿ ಮದ್ದಳೆಯ ಲಯವಿನ್ಯಾಸವನ್ನು ಕುರಿತ ಇವರ ಲೇಖನ ಪ್ರಕಟವಾಗಿದೆ. ಇವರ ಆತ್ಮಕತೆ ಮದ್ದಳೆಯ ಮಾಯಾಲೋಕ (ನಿರೂಪಣೆ ಕೆ.ಎಂ. ರಾಘವ ನಂಬಿಯಾರ್) 1997ರಲ್ಲಿ ಪ್ರಕಟವಾಗಿದೆ. ಇದು ಇಪ್ಪತ್ತನೆಯ ಶತಮಾನದ ಇತಿಹಾಸಕ್ಕೆ ಸಂಬಂಧಪಟ್ಟ ಸಮೃದ್ಧ ವಿವರಗಳಿರುವ ಅಮೂಲ್ಯ ಸಾಂಸ್ಕೃತಿಕ ದಾಖಲೆಯಾಗಿದೆ. (00.000.) ಗೋಪಾಲಸ್ವಾಮಿ ಬೆಟ್ಟ : ಚಾಮರಾಜನಗರ ಜಿಲ್ಲೆಯಲ್ಲಿ ಗುಂಡ್ಲುಪೇಟೆಯಿಂದ 15 ಕಿಮೀ ನೈರುತ್ಯಕ್ಕಿರುವ ಬೆಟ್ಟ, ಸುಂದರ ತಾಣ, ಐತಿಹಾಸಿಕ ಸ್ಥಳ. ಸಮುದ್ರಮಟ್ಟದಿಂದ 1446 ಮೀ ಎತ್ತರವಿದೆ. ಹಿಮವದ್ ಗೋಪಾಲಸ್ವಾಮಿ ದೇವಸ್ಥಾನ ಶಿಖರವನ್ನೇರಲು 5 ಕಿಮೀ ಮಾರ್ಗ ಸವೆಸಬೇಕಾಗುತ್ತದೆ. ಬೆಟ್ಟದಲ್ಲಿ ಅನೇಕ ನೀರುಬುಗ್ಗೆಗಳಿದ್ದು ಜಲಾಂಶ ಅಧಿಕವಾಗಿದೆ. ಬೆಟ್ಟ ಸದಾ ಹಸಿರುಮಯವಾಗಿರುತ್ತದೆ. ವರ್ಷದ ಬಹುಕಾಲ ಮಂಜುಮೋಡಗಳಿಂದ ಮುಸುಕಿರುವುದರಿಂದ ಇದು ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಂದೇ ಪ್ರಸಿದ್ಧವಾಗಿದೆ. ಹವಾಮಾನ ಚನ್ನಾಗಿರುವಾಗ ಮೈಸೂರು ಮತ್ತು ವೈನಾಡು ಪ್ರದೇಶಗಳ ಮನೋಹರ ದೃಶ್ಯವನ್ನು ಕಾಣಬಹುದು. ಬೆಟ್ಟದ ಮೇಲುಭಾಗವನ್ನು ಸುತ್ತುವರಿದಿದ್ದ ಹಳೆಯ ಕೋಟೆ ಮತ್ತು ಕಂದಕದ ಅವಶೇಷಗಳನ್ನು ದೂರದಿಂದಲೇ ಗುರುತಿಸಬಹುದು. ಕೋಟೆಯ ಒಳಭಾಗದಲ್ಲಿ ಗೋಪಾಲಸ್ವಾಮಿ ದೇವಾಲಯವಿದೆ. ಇದು ಹೊಯ್ಸಳ 3ನೆಯ ಬಲ್ಲಾಳನ ಮಂತ್ರಿ ಮಾಧವ ದಣ್ಣಾಯಕನಿಂದ ನಿರ್ಮಾಣವಾದುದು (ಸು. 1300), ಇಲ್ಲಿ ವರ್ಷಕ್ಕೊಮ್ಮೆ ರಥೋತ್ಸವ ನಡೆಯುತ್ತದೆ. ಪುರಾಣಗಳಲ್ಲಿ ಈ ಬೆಟ್ಟವನ್ನು ಕಮಲಾದ್ರಿ, ದಕ್ಷಿಣ ಗೋವರ್ಧನಗಿರಿ ಎಂದು ಕರೆಯಲಾಗಿದೆ. ಈ ಪ್ರದೇಶಕ್ಕೆ ಬೆಟ್ಟದಕೋಟೆ, ಮೂಡಣ ಕೋಟೆ ಎಂಬ ಹೆಸರುಗಳೂ ಇದ್ದುವು. ಇಲ್ಲಿಯ ಕೋಟೆಯನ್ನು ಕಟ್ಟಿದವನು ಸೋಮಣ್ಣ ಡಣಾಯಕನೆಂದು ಒಂದು ಹೇಳಿಕೆ. ಪ್ರಾಯಶಃ ಇದೂ ಮಾಧವ ದಣ್ಣಾಯಕನ ಕಾಲದ್ದು. 15-17ನೆಯ ಶತಮಾನಗಳಲ್ಲಿ ಇದು ಕೋಟೇಸೀಮೆ ಎಂಬ ಪಾಳೆಯಪಟ್ಟಿನ ಮುಖ್ಯ ಸ್ಥಳವಾಗಿತ್ತು. ಆ ಸೀಮೆಯ ಅರಸುಗಳ ಅನುಕ್ರಮ ಹೀಗಿದೆ: ಇಮ್ಮಡಿ ರಾಜ ಒಡೆಯ ನಂಜರಾಜ ಒಡೆಯ (1489) - ದೇವರಾಜ ಒಡೆಯ (1503) ಗೋವಣ್ಣ ಒಡೆಯ (1504) - ದೇವೊಡೆಯ (1512) – ಸಿಂಗಪ್ಪ ಒಡೆಯ - ಚೆನ್ನರಾಯ ಒಡೆಯ (1517) - ಕೋಟೆ ಒಡೆಯ (1513) - ಮಾಧವ ನಾಯಕ (1530-48) ದೊಡ್ಡ ಮಲ್ಲರಾಯ ಒಡೆಯ (1559) - ಲಿಂಗರಾಜ ಒಡೆಯ (1650-54) - ನಂಜರಾಜ ಒಡೆಯ (1569). (ಟಿ.ಎಸ್.) - - ಗೋಪಾಲಸ್ವಾಮಿ, ಎಂ.ವಿ. : 1896-1957. ಪ್ರಸಿದ್ಧ ಭಾರತೀಯ ಮನಶಾಸ್ತ್ರಜ್ಞ ಮತ್ತು ಶಿಕ್ಷಣತಜ್ಞ, ಅಂದಿನ ಮದ್ರಾಸು ರಾಜ್ಯದಲ್ಲಿ 1896ರ ಡಿಸೆಂಬರ್ 31ರಂದು ಶ್ರೀಮಂತ ಮನೆತನದಲ್ಲಿ ಜನಿಸಿದರು. ತಂದೆ ಒಬ್ಬ ನ್ಯಾಯಾಧಿಕಾರಿ, ಸಣ್ಣ