ಪುಟ:Mysore-University-Encyclopaedia-Vol-6-Part-11.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋಪುರ ಆದರೂ ಮಹಾದ್ವಾರ ಮಾತ್ರವಲ್ಲದೆ ದೇವಾಲಯದ ಗಭ೯ಗುಡಿಯ ಮೇಲೆ ನಿಮಿ೯ತವಾಗಿರುವ ವಿಮಾನ ಅಥವ ಶಿಖರಗಳನ್ನೂ ಗೋಪುರಗಳೆಂದೇ ಕರೆಯುವ ರೂಢಿಯಿದೆ.ದೇವಸ್ಥಾನಗಳ ಉನ್ನತವಾದ ಭಾಗಗಳು ಮಾತ್ರವಲ್ಲದೆ ತಳವಿನ್ಯಾಸ ಕಿರಿದಾಗಿದ್ದು ಹಲವು ಅಂತಸ್ತುಗಳಾಗಿ ಮೇಲೆದ್ದ ಯಾವ ಕಟ್ಟಡವನ್ನಾದರೂ ಗೋಪುರವೆನ್ನುತ್ತಾರೆ. ಊರಿನ ಹೆಬ್ಬಾಗಿಲು ರಕ್ಷಣೆಯ ದೃಷ್ಟಿಯಿಂದ ಉನ್ನತವಾದ ಬುರುಜುಗಳನ್ನು ಹೊಂದಿ ಸೈನಿಕ ಕಾಯಾ೯ಚರಣೆಗೆ ಅನುಕೂಲವಾಗುವಂತೆ ಸುತ್ತಣ ಕೋಟೆಯ ಗೋಡೆಯ ಇತ್ತರವಾಗಿದ್ದುದರಿಂದ ಗೋಪುರ ಎನ್ನಿಸಿಕೊಂಡಿತು. ದೇವಾಲಯದ ರಕ್ಷಣೆಗಾಗಿ ಕಟ್ಟಿದ ಪ್ರಾಕಾರದ ಗೋಡೆಗಳ ನಡುವೆ ಇರುವ ಮಹಾದ್ವಾರಗಳ ಮೇಲಿನ ಉನ್ನತವಾದ ಕಟ್ಟಡಗಳು ಹೆಚ್ಚು ಆಲಂಕಾರಿಕವಾಗಿ ಬೆಳೆದುವು. ಕೋಟೆಗಳಿಗೆ ಅಲ್ಲಲ್ಲಿ ಎತ್ತರವಾದ ರಕ್ಷಣಾಗೋಪುರಗಳನ್ನು ಕಟ್ಟುವುದು ಅತ್ಯಂತ ಪ್ರಾಚೀನ ಕಾಲದಿಂದದಲೂ ನಡೆದು ಬಂದ ಪದ್ದತಿ.ಪ್ರ.ಶೂ.ಪೂ.೨೦೦೦ಕ್ಕಿಂತ ಹಿಂದೆಯೇ ಕಟ್ಟಿದ ಪ್ರಸಿದ್ಧವಾದ ನಿನೆವ ಕೋಟೆಗೋಡೆಯ ಮೇಲೆ ಇಂಥ ೧,೫೦೦ ರಕ್ಷಣಾಗೋಪುರಗಳಿದ್ದವು.೩,೨೦೦ ಕಿಮೀಗಳಿಗೂ ಹೆಚ್ಚು ಉದ್ದವಿರುವ ಚೀನದ ಬೃಹದ್ಗೋಡೆಯ ಹತ್ತಿರದಲ್ಲಿ ಉದ್ದಕ್ಕೂ ಅಲ್ಲಲ್ಲಿ ಎತ್ತರವಾದ ವೀಕ್ಷಣಾಗೋಪುರ ಗಳಿದ್ದವು.ರೋಮನರ ಕೋಟೆಗೋಡೆಗಳ ಉದ್ದಕ್ಕೂ ಅಲ್ಲಲ್ಲಿ ಗೋಪುರಗಳಿದ್ದವು. ಕೆಳಗಿರುವ ಶತ್ರುಗಳ ಮೇಲೆ ಅಲ್ಲಿಂದ ಕಾದ ಎಣ್ಣೆ ಮುಂತಾದನ್ನು ಸುರಿಯಲೂ ಅಲ್ಲಿ ನಿಂತು ಯುದ್ಧ ಮಾಡಲೂ ಸೌಕಯ೯ಗಳಿರುತ್ತಿದ್ದುವು.ಭಾರತದಲ್ಲೂ ಊರುಗಳ ಹತ್ತಿರದ ಎತ್ತರವಾದ ದಿಣ್ಣೆಯ ಮೇಲೋ ಊರಿನ ನಡುವೆಯೋ ಶತ್ರುಗಳ ಸುಳಿವನ್ನು ಮುಂದಾಗಿ ಕಂಡುಕೊಳ್ಳುವುದಕ್ಕಾಗಿ ಗುಂಡಾಗಿ ಎತ್ತಾರವಾಗಿ ಕಟ್ಟಿದ್ದ ವೀಕ್ಷಣಾ ಗೋಪುರಗಳು ಅಲ್ಲಲ್ಲಿ ಕಾಣಸಿಗುತ್ತವೆ. ದೇವಾಲಯದ ಕಟ್ಟಡಗಳು ಮೊದಲು ಸಾಮಾನ್ಯವಾಗಿದ್ದುವು.ಅವಕ್ಕೆ ಪ್ರಾಕಾರ ಇರುತ್ತಿರಲಿಲ್ಲ. ಆದರೂ ಗಭ೯ಗುಡಿಯ ಮೇಲೆ ಒಂದು ಅಂತಸ್ತಿನ ಕಿರುಗೋಪುರ ಕಟ್ಟುವ ಪದ್ದತಿ ಬಹು ಹಿಂದೆಯೇ ಆರಂಭವಾಗಿರಬೇಕು.ಗುಂಡಾಗಿ ಕಟ್ಟಿದ ಗುಡಿಸಲುಗಳ ನಡುವೆ ಎತ್ತರವಾದ ಕಂಬ,ಅದಕ್ಕೆ ಸೇರಿದಂತೆ ಸುತ್ತಲೂ ಇಳಿಜಾರಾಗಿ ಕಟ್ಟಿದ ಗಳುಗಳು,ಮೇಲೆ ಹುಲ್ಲಿನ ಹೊದಿಕೆ,ಮಧ್ಯದ ಕಂಬದ ತುದಿಗೆ ನೀರು ಇಳಿಯದಂತೆ ಬೋರಲು ಮುಚ್ಚಿರುವ ಮಡಕೆ - ಈ ಪದ್ದತಿ ಚರಿತ್ರ ಪೂವ೯ಕಾಲದಿಂದ ನಡೆದುಕೊಂಡು ಬಂದದ್ದು. ಇದು ದೇವಾಲಯದ ಕಟ್ಟಡಗಳಿಗೆ,ಅವುಗಳ ಗೋಪುರಗಳಿಗೆ ಮೂಲ ಸ್ಪೂತಿ೯ಯಾಗಿರಬೇಕೆಂದು ಕೆಲವಾದ ವಾದ.ಕಟ್ಟಡಗಳ ವಿನ್ಯಾಸ ಬದಲಾಗುತ್ತ ಹೋದರೂ ಗಭ೯ಗೃಹಗಳ ಮೇಲಿನ ಉನ್ನತವಾದ ಶಿಖರಗಳು ಬುಡದಲ್ಲಿ ಅಗಲವಾಗಿದ್ದು ಮೇಲೆ ಹೋಗುತ್ತ ಕಿರಿದಾಗಿ ತುದಿಯಲ್ಲಿ ಅಮಲಕ ಕಲಶಗಳನ್ನು ಹೊಂದಿರುವುದು ಈ ವಾದಕ್ಕೆ ಪುಷ್ಟಿಕೊಡುತ್ತದೆ ಈ ವಿಮಾನಗಳು, ಶಿಖರಗಳು ಭಾರಯದ ಉತ್ತರದಲ್ಲಿ,ದಕ್ಷಿಣದಲ್ಲಿ ಸ್ವತಂತ್ರವಾಗಿ ವೈವಿಧ್ಯಮಯವಾಗಿ ಬೆಳೆಯುತ್ತ ಬಂದು ನಾಗರ ದ್ರಾವಿಡ ಶೈಲಿಗಳ ಹೆಗ್ಗುರತುಗಳಗಿವೆ. ಔತ್ತರೇಯ ಶಿಖರಗಳಲ್ಲಿ ಉದ್ದುದ್ದನೆಯ ಪಟ್ಟಿಕೆಗಳಿಗೆ ಪ್ರಾಮುಖ್ಯ ಇರುತ್ತದೆ. ಗೋಪುರಗಳು ನೇರವಾಗಿ ಮೇಲೆದ್ದು ತುದಿಯಲ್ಲಿ ಒಳಕ್ಕೆ ಬಾಗಿ ಆಮಲಕ ಮತ್ತು ಕಲಶಗಳಿಂದ ಕೂಡಿರುತ್ತವೆ. ದಕ್ಷಿಣದ ದ್ರಾವಿದ ಶೈಲಿಯಲ್ಲಿ ಗಭ೯ಗುಡಿಯ ಮೇಲಿನ ಗೋಪುರದಲ್ಲಿ ಅಡ್ಡಪಟ್ಟಿಗೆ ಪ್ರಾಮುಖ್ಯ ಇರುತ್ತದೆ.ಅದು ಮೆಟ್ಟಿಲಾಗಿ ಮೇಲೇರುತ್ತದೆ,ಅಂತಸ್ತುಗಳಾಗಿ ವಿಭಾಗವಾಗಿರುತ್ತದೆ.ಈ ಎರದು ಶೈಲಿಗಳ ಮಿಶ್ರಣವನ್ನು ಚಾಳುಕ್ಯ ಶೈಲಿಯಲ್ಲೂ ಅದರಿಂದ ಮುಂದೆ ಬೆಳೆದ ಹೊಯ್ಸಳ ಶೈಲಿಯಲ್ಲೂ ಕಾಣಬಹುದು. ದಕ್ಷಿಣ ಭಾರತದಲ್ಲಿ ಪಲ್ಲವರ ಕಾಲದ ಕೊನೆಯ ದಿನಗಳಲ್ಲಿ ಒಂದಂತಸ್ತಿನ ಕಿರುಗೋಪುರವಾಗಿ ಆರಂಭವಾಗಿ ಮುಂದೆ ಚೋಳರ ಕಾಲದಲ್ಲಿ ಬೃಹದಾಕಾವಾಗಿ ಉನ್ನತವಾಗಿ ಬೆಳೆದ ವಿಮಾನದ ಗೋಪುರಗಳನ್ನು ತಂಜಾವೂರಿನ ಬೃಹದೀಶ್ವರ ದೇವಾಲಯದಂಥ ದೇವಾಲಯಗಳ ಮೇಲೆ ನೋಡಬಹುದು. ಆದರೆ ದೇವಾಲಯಗಳಿಗೆ ರಕ್ಷಣೆಯ ದೃಷ್ಟಿಯಿಂದ ಪ್ರಾಕಾರಗಳನ್ನು ಕಟ್ಟಲಾರಂಭಿಸಿದ ಮೇಲೆ ಇವುಗಳ ಮಹಾದ್ವಾರಗಳ ಮೇಲಿನ ಗೋಪುರಗಳಿಗೆ ಪ್ರಾಮುಖ್ಯ ಹೆಚ್ಚುತ್ತ ಹೋಯಿತು.ಇದನ್ನು ಮುಖ್ಯವಾಗಿ ದ್ರಾವಿಡ ಶಿಲ್ಪರೀತಿಯಲ್ಲಿ ನೋಡಬಹುದು. ಮೊದಲು ಚಿಕ್ಕದಾಗಿದ್ದ ಗೋಪುರಗಳು ವಿಜಯನಗರದ ಕಾಲದಲ್ಲಿ ತಕ್ಕ ಷ್ಟು ಉನ್ನತವಾಗಿ ನಾಯಕರ ಕಾಲದಲ್ಲಿ ೧೫೦ ಅಡಿಗೂ(೫೦ ಮೀ) ಮೀರಿ ಅದ್ಭುತವಾಗಿ ಬೆಳೆದವು. ದೇವಾಲಯಗಳಿಗೆ ಹಲವು ಪ್ರಾಕಾರಗಳನ್ನು ಕಟ್ಟಿ ನಾಲ್ಕು ದಿಕ್ಕುಗಳಿಗೂ ದ್ವಾರಗೋಪುರಗಳನ್ನು ಹಲವು ಅಂತಸ್ತುಗಳಾಗಿ ಎತ್ತರಿಸಿರುವ ಪದ್ಧತಿಯನ್ನು ಮಧುರೆ,ಚಿದಂಬರ ಮೊದಲಾದ ಎಡೆಗಳಲ್ಲಿ ನೋಡಬಹುದು. ಪ್ರತಿ ರಾಜಮನೆತನವೂ ಹಿಂದಿನ ಮನೆತನ ಕಟ್ಟಿಸಿದ್ದಕ್ಕಿಂತ ಬೃಹತ್ತಾದ ಉನ್ನತವಾದ ಗೋಪುರಗಳನ್ನು ಕಟ್ಟಿಸಬೇಕೆಂಬ ಹುರುಡನ್ನು ಪ್ರದಶಿ೯ಸಿದ್ದರಿಂದ ಹೊರ ಪ್ರಾಕಾರಗಳ ಗೋಪುರಗಳು ಅತ್ಯಂತ ಎತ್ತರವಾದುವಾಗಿದ್ದು ಕ್ರಮವಾಗಿ ಒಳಪ್ರಾಕಾರಗಳ ಗೋಪುರಗಳ ಎತ್ತರ ಕಡಿಮೆಯಾಗುತ್ತ ಹೋದವು. ಆಯತಾಕಾರವಾಗಿ ಮೂರು,ಐದು,ಏಳು,ಓಂಬತ್ತು ಅಥವಾ ಹನೊಂದು ಅಂತಸ್ತುಗಳಿದ್ದು, ಮೇಲೇರಿದಂತೆ ಕಿರಿದಾಗುವ ಈ ಗೋಪುರಗಳಲ್ಲಿ ಪ್ರತಿ ಅಂತಸ್ತಿಗೂ ಬಾಗಿಲುವಾಡಗಳೂ ಎರಡು ಕಡೆಗಳಲ್ಲೂ ದ್ವಾರಪಾಲಕರೂ ಇದ್ದು,ಗೋಡೆಗಳ ಮೇಲೆ ಅರೆಗಂಬಗಳು,ಅರೆಗೋಪುರಗಳು ಮತ್ತು ಹಲವು ಭಂಗಿಗಳಲ್ಲಿರುವ ಮೂತಿ೯ಗಳ ಅಲಂಕರಣಗಳು ತುಂಬಿರುತ್ತವೆ. ಎಲ್ಲಾ ಅಂತಸ್ತುಗಳೂ ಒಂದೆ ರೀತಿಯಲ್ಲಿದ್ದರೂ ಕೆಳಗಿನಿಂದ ಮೇಲೆ ಹೋಗಹೋಗುತ್ತ ಕಿರಿದಾಗುತ್ತವೆ. ತುತ್ತತುದಿಯಲ್ಲಿ ಪೀಪಾಯಿಯಾಕಾರದ ರಚನೆಯೂ ಅದರ ಮೇಲೆ ಐದರಿಂದ ಒಂಬತ್ತರ ವರೆಗೆ ಕಲಶಗಳೂ ಇರುತ್ತವೆ.ಮಹಾದ್ವಾರವನ್ನು ಕಲ್ಲಿನಿಂದ ಕಟ್ಟಿದ್ದು, ಮೇಲಿನ ಗೋಪುರವನ್ನು ಇಟ್ಟಿಗೆ ಗಾರೆಗಳಿಂದ ಕಟ್ಟಿರುತ್ತಾರೆ.ಪಕ್ಷಿತೀಥ೯ದಲ್ಲಿ