ಪುಟ:Mysore-University-Encyclopaedia-Vol-6-Part-12.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋವ ಆಸ್ಸಾಮಿನ ಉಳಿದ ಭಾಗಗಳಿಗಿಂತ ಇಲ್ಲಿ ಚಳಿ ಕಡಿಮೆ, ಸೆಕೆ ಹೆಚ್ಚು. ಪೂರ್ವದ್ವಾರ ಮತ್ತು ತರಾಯೀ ಭಾಗಗಳು ಮಲೇರಿಯಭೂಯಿಷ್ಟ. ಉಳಿದ ಕಡೆಗಳಲ್ಲಿ 80"-90" ಮಳೆಯಾಗುತ್ತದೆ. ರಾಜ್ಯದ ಉಳಿದ ಎಲ್ಲ ಭಾಗಗಳಿಂದ ಇಲ್ಲಿ ಭೂಕಂಪನಗಳ ಸಂಭವ ಹೆಚ್ಚು. ಈ ಭಯದಿಂದಾಗಿ ಇಲ್ಲಿ ಬಿದಿರಿನ ಬೊಂಬುಗಳಿಂದ ಕಟ್ಟಿದ ಮನೆಗಳೇ ಹೆಚ್ಚು. ಶೇ.84 ರಷ್ಟು ಜನರ ಉದ್ಯೋಗ ಕೃಷಿ. ಗೋಲ್ಪಾರಾ ಪಟ್ಟಣ ಹಿಂದೆ ಈಸ್ಟ್ ಇಂಡಿಯ ಕಂಪೆನಿಯ ಅದಿಕಾರ ಕಕ್ಷೆಯಲ್ಲಿತ್ತು. ಇಲ್ಲಿ ನೆಲೆಯೂರಿದ ಇಂಗ್ಲಿಷರು ಬಂಗಾಲದ ಬಹುತೇಕ ವ್ಯಾಪಾರವನ್ನು ಬಲವಂತದಿಂದ ತಮ್ಮ ಕಡೆಗೆ ಸೆಳೆದುಕೊಂಡರು. 1878ರಲ್ಲಿ ಇಲ್ಲಿ ಪೌರ ಸಮಿತಿಯ ಸ್ಥಾಪನೆಯಾಯಿತು. ಇಲ್ಲಿ ಟೀ, ತಬ್ಬರ್, ಹತ್ತಿ, ಎಳ್ಳು, ಮರ, ಸೆಣಬು ಮುಂತಾದವುಗಳ ವ್ಯಾಪಾರ ಹೆಚ್ಚಾಗಿ ನಡೆಯುತ್ತದೆ. ಇಲ್ಲಿಯ ವರೆಗೆ ಸಣ್ಣ ಹಡಗುಗಳು ಬಂದುಹೋಗುತ್ತವೆ. 2006ರಲ್ಲಿ ಭಾರತ ಸರ್ಕಾರ ಈ ಜಿಲ್ಲೆಯನ್ನು ದೇಶದಲ್ಲಿ ಆತ್ಯಂತ ಹಿಂದುಳಿದ ಜಿಲ್ಲೆಗಳಲ್ಲೊಂದೆಂದು ಪರಿಗಣಿಸಿ ಅನುದಾನ ನೀಡುತ್ತಿದೆ. ಗೋವ : ಭಾರತದ ಆತಿ ಚಿಕ್ಕ ರಾಜ್ಯ ಉತ್ತರದಲ್ಲಿ ಮಹಾರಷ್ಟ್ರ, ಪೂರ್ವ ಮತ್ತು ದಕ್ಷಿಣದಲ್ಲಿ ಕರ್ನಾಟಕ ರಾಜ್ಯಗಳೂ ಪಶ್ಜಿಮದಲ್ಲಿ ಅರಬ್ಬೀ ಸಮುದ್ರವೂ ಇದನ್ನು ಸುತ್ತುವರೆದಿವೆ. ಇದರ ವಿಸ್ತೀರ್ಣ 3,702. ಚ.ಕಿಮೀ. ಜನಸಂಖ್ಯೆ 14,57,723(2011). ಆಡಳಿತ ಕೇಂದ್ರ ಪಣಜಿ. ಗೋವ ಉತ್ತರದಲ್ಲಿ ತೇರೇಖೋಲ್ ನದಿಯಿಂದಾಗಿ ಮಹಾರಾಷ್ಟ್ರದಿಂದ ಪ್ರತ್ಯೇಕಿಸಲ್ಪಟ್ಟಿದೆ. ಸಹ್ಯಾದ್ರಿಯ ಸೆರಗಿನಲ್ಲಿರುವ ಗೋವದ ಪೂರ್ವಭಾಗ ಮಲೆನಾಡು. ಪೂರ್ವದಿಂದ ಪಶ್ಚಿಮಕ್ಕೆ ಹಲವಾರು ನದಿ ತೊರೆಗಳು ಹರಿದು ಅರಬ್ಬೀ ಸಮುದ್ರವನ್ನು ಸೇರುತ್ತವೆ. ಇವುಗಳಲ್ಲಿ ಮೂಖ್ಯವಾದವು ಮಾಂಡವೀ, ಜುವಾರೀ (ಆಘನಾಶಿನೀ), ಜಲಮಾರ್ಗಗಳೇರ್ಪಟ್ಟಿವೆ. ಮಾಂಡವೀ ಗೋವದ ಈಶಾನ್ಯ ಭಾಗದಲ್ಲಿರುವ ಪರ್ವತ ಭೀಮಗಡದಲ್ಲಿ ಹುಟ್ಟಿ ಅಗ್ವಾದ ಕಿಲ್ಲೆಯ ಹತ್ತಿರ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಜುವಾರೀ ನದಿ ಹೇಮಾಡ್ ಬಾರ್ಸ್ ಮತ್ತು ಅಷ್ಟಾಗ್ರಹಾರ ಎಂಬ ಭಾಗದಲ್ಲಿ ಹುಟ್ಟಿ ಮುರ್ ಗಾಂವ್ ಕೊಲ್ಲಿಯಲ್ಲಿ ಸಮುದ್ರವನ್ನು ಸೇರುತ್ತದೆ. ತೇರೇಖೋಲ್ ಕಿಲ್ಲೆಯ ಹತ್ತಿರ ಸಮೂದ್ರವನ್ನು ಸೇರುತ್ತದೆ. ಈ ನದಿಯ ದಡಗಳಲ್ಲಿ ತೆಂಗು ಅಡಿಕೆಗಳ ತೋಟಗಳನ್ನು ವಿಶೇಷವಾಗಿ ಕಾಣಹುದು. ಸಹ್ಯಾದ್ರಿಯ ಕವಲಿಗಳು ಗೋವದಲ್ಲಿವೆ. ಇವುಗಳಲ್ಲಿ ಪೂಎವಕ್ಕಿರುವ ಸೊಂಸೋಗಡ ಬೆಟ್ತ ಪ್ರಸಿದ್ದವಾಗಿದೆ. ಆದರ ಉತ್ತರಕ್ಕೆ ಸತ್ತರೀ ಮಹಾಲದಲ್ಲಿ ವಾಘೇರಿ ಬೆಟ್ಟವಿದೆ. ಇನ್ನೂಂದು ಬೆಟ್ತ ಮೋರ್ಲೆಗಡ. ಸಮಪಾತಳಿಯ ಮೇಲೆ ಇರುವ ಚಂದ್ರನಾಥ ಬೆಟ್ತ ಸೃಷ್ಟಿಸೌಂದರ್ಯ ವೀಕ್ಷಣೆಗೆ ಪ್ರಸಿದ್ದವೆನಿಸಿದೆ. ಗೋವದ ವಾಯುಗುಣ ತೇವೋಷ್ಣಮಯ. ಉಷ್ಣತೆಯಲ್ಲಿ ಹೆಚ್ಚು ವಾರ್ಷಿಕ ಆಂತರಗಳಿಲ್ಲ. 100 ಮೀಗಿಂತ ಹೆಚ್ಚು ಎತ್ತರವೆಲ್ಲದ ಪೂರ್ವಾರ್ದ ಭಾಗದಲ್ಲಿ 90"-120" (2800-3500ಮಿಮೀ) ಮಳೆಯಾಗುತ್ತದೆ. ಉಷ್ಣತೆ 70 ಫ್ಯಾ - 90 ಫ್ಯಾ. (22 ಸೆಂ-32 ಸೆಂ). ಹೆಚ್ಚು ಎತ್ತರದ ಪ್ರದೇಶವಾದ ಹೆಚ್ಚು ಮಳೆಯಾಗುತ್ತದೆ (ಗರಿಷ್ಟ 300"). ಇಲ್ಲಿ ಉಷ್ಣತೆಯ ಆಂತರವೂ ಆದಿಕ. ಗೋವದ ಶೇ.29 ಪ್ರದೇಶ ಅರಣ್ಯಾವೃತ. ವೈಜ್ಜಾನಿಕವಗಿ ಅರಣ್ಯವನ್ನು ರಕ್ಷಿಸುವ ಕಾರ್ಯ ಇತ್ತೀಚಿನ ವರೆಗೂ ನಡೆದಿರಲಿಲ್ಲಿ. 1963 ರಿಂದೀಚೆಗೆ ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ. ನೀಲಗಿರಿ, ತೇಗ, ಗೋಡಂಬಿ, ರಬ್ಬರ್, ಬಿದಿರು, ಕ್ಯ್ಯಾಸುವರೈನ, ಸವಾರ್, ಮಾವು-ಈ ಮರಗಳನ್ನು ಈಗ ಬೆಳೆಸಲಾಗುತ್ತಿದೆ. ಗೋವದಲ್ಲಿ 1.4 ಲಕ್ಷ ಹೆಕ್ಟೇರು ಪ್ರದೇಶದಲ್ಲಿ ಸಾಗುವಳಿ ಮಾಡಲಾನ್ನೂಗುತ್ತಿದೆ. ಬತ್ತ ಇಲ್ಲಿಯ ಮುಖ್ಯ ಬೆಳೆ. ಇತರ ಮುಖ್ಯ ಬೆಳೆಗಳು ಬೇಳೆ ಮತ್ತು ಇತರ ದಾನ್ಯಗಳು, ಕಬ್ಬು, ತರಕಾರಿ, ತೆಂಗು, ಆಡಿಕೆ, ಗೋಡಂಬಿ ಮತ್ತು ಹಣ್ಣುಗಳು. ಗೋವದ .ಮುಖ್ಯ ನೀರಾವರಿ ಯೋಜನೆಗಳು ಇವು:1 ಸಾಂಗೆ ತಾಲ್ಲೂಕಿನ ಸಾತಾಲಿ ಮತ್ತು ದೂದ್ ಸಾಗರ್. 2 ಬಾರ್ದೆಜ್ ತಾಲ್ಲೂಕಿನಲ್ಲಿ ಅಂಜುನಾ, ಮಹಾರಷ್ಟ್ರದೊಂತಿಗೆ ಕೂಡಿ ತಿಲಾರಿ ಯೋಜನೆಯನ್ನು ಹಮ್ಮಿಕೊಂಡಿದ್ದು ಇದರ ಅಂಗವಾಗಿ ತಿಲಾರಿ ಅಣೆಕಾಟ್ಟನ್ನು ನಿರ್ಮಿಸಲಾಗುತ್ತಿದೆ. 2013ರ ಹೊತ್ತಿಗೆ ಈ ಯೋಜನೆ ಪೂರ್ಣಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬರುವ ನಿರೀಕ್ಷೆಯೆದೆ. ವ್ಯವಸಾಯದ ಜೊತೆಗೆ ಮೀನುಗಾರಿಕೆಯೂ ಇಲ್ಲಿಯ ಜನರ ಒಂದು ಮುಖ್ಯ ಕಸಬು. ಇಲ್ಲಿ 250 ಕಿಮೀ ಉದ್ದದ ಕರಾವಳಿಯೂ ಸು 100 ಹೆಕ್ಟೇರುಗಳಷ್ಟು ವಿಸ್ತಾರವಾದ ಸಿಹಿನೀರಿನ ಸರೋವರಗಳೂ ಇವೆ. ಕಡಲತೀರದ ಮತ್ತು ಒಳನಾಡಿನ ಜಲದಲ್ಲಿ ಮತ್ಸ್ಯಸಂಪತ್ತು ಸಮೃದ್ದಯಾಗಿದೆ. ವಂಗಡೆ, ಬೈಗೆ, ಕೊರಲ, ಆರ್ಕುಲೈ ಮುಖ್ಯವಾದವು. ಕರಾವಳಿಯಲ್ಲಿ ಮೀನು ಹಿಡಿಯುವ ದೋಣಿಗಳಿಗೆ ರಕ್ಷಣೆಯಾಗಿ ಹಲವರು ಕಡಲ ಚಾಚುಗಳೂ ಅಳಿವೆಗಳೂ ಇವೆ. ಮತ್ಸ್ಯೋದ್ಯಮ ರಾಜ್ಯದ ಆರ್ಥಕ ಸಂಪನ್ಮೂಲಗಳಲ್ಲೊಂದು. ಗೋವದಲ್ಲಿ ಒಟ್ಟು 60 ಮೆವಾ.ಸ್ಥಾಪಿತ ಸಾಮರ್ಥ್ಹ್ಯದ ಜಲವಿದ್ಯುತ್ ಮತ್ತು ಉಷ್ಣವಿದ್ಯುತ್ ಕೇಂದ್ರಗಳಿವೆ. ನೆರೆಯ ಕರ್ನಾಟಕ, ಮಹಾರಾಷ್ಟ್ರಗಳಿಂದ ಗೋವಕ್ಕೆ ವಿದ್ಯುತ್ ಸರಬರಾಜು ಆಗುತ್ತದೆ. ಗೋವದಲ್ಲಿ ಖನಿಜಸಂಪತ್ತು ದಾರಾಳವಾಗಿದೆ. ಕಬ್ಬಿಣದ ಆದಿರು, ಕೆಳೆಶ್ರೇಣಿಯ ಮ್ಯಾಂಗನೀಸ್ ಆದಿರು, ಬಾಕ್ಸೈಟ್ ಇವು ವಿಶೇಷವಾಗಿ ನಿರ್ಯಾತವಾಗುತ್ತವೆ. ಭಾರತದಿಂದ ರಫ್ತಾಗುವ ಕಬ್ಬಿಣ ಆದಿರಿನಲ್ಲಿ ಸುಮಾರು ಆರ್ದಭಾಗ ಗೋವದಿಂದ ನಿರ್ಯಾತವಾಗುತ್ತದೆ. ಬಿಚೋಲಿ, ಕುದ್ನೇಮ್, ಪಾಲಿ, ಪೈಲ್ ಗಾಂವ್ ಮತ್ತು ಸಿರಿಗಾಂವ್ ಗಳಲ್ಲಿ ಕಬ್ಬಿಣ ಆದಿರನ್ನೂ ಸಾಂಗೆ.