ಪುಟ:Mysore-University-Encyclopaedia-Vol-6-Part-12.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋವ ಗೋವದಲಿ ಹಿಂದೂ ಕ್ರೈಸ್ತ ದರ್ಮಗಳು ಪ್ರಚಾರದಲಿವೆ.ಕದಂಬರ ಕಾಲದ ಸಪ್ತಕೋಟೇಶ್ವರ ದೇವಾಲಯ, ಸೇಂಟ್ ಪ್ರಾನ್ಸಿಸ್ ಜ್ಜೇವಿಯರನ ಸಮಾದಿಬವನ ಪ್ರಸಿದ್ದವಾದವು.ಸಂತ ಜ್ಜೇವಿಯರನ ಪಾರ್ಥೀವ ಶರೀರವನ್ನು ಬಕ್ತರಿಗೆ ಹತ್ತು ವರ್ಷಗಲಳೀಗೊಮ್ಮೆ ಪ್ರದರ್ಶೀಸುತ್ತಾರೆ.ಹಳೇಯ ಗೋವದಲಿ ಲೆಂಟ್ ಉಪವಾಸ ದೀನಗಳಲಿ ಸಂತರ ವಿಗ್ರಹಗಳನ್ನು ಮೆರೆವಣೇಗೆ ಮಾಡುತ್ತಾರೆ. ಪೋರ್ಚುಗೀಸರು ಬಂದಮೇಲೆ ಗೋವದಲಿ ಕ್ರ್ಯಸ್ತಮತ ಪ್ರಚಾರವಾಯಿತು.ಡಾಮಿನಿಕ್ ಪಂಥದ ಕ್ರ್ಯಸ್ತ್ ಸನ್ಯಾಸಿಗಳು ಗೋವಕ್ಕೆ ಬಂದದ್ದು 1510ದಲಿ.1517ರಲಿ ಬಂದ ಪ್ರಾನ್ಸಿಸ್ಕನ್ ಪಾದ್ರಿಗಳು ಕ್ರ್ಯಸ್ತಮತ ಪ್ರಚಾರವನ್ನು ಆರಂಬಿಸಿದರು.ಪ್ರಾನ್ಸಿಸ್ಕನ್ ಪಂಥದ ಸನ್ಯಾಸಿ ಜೊವಾನ್ ದ ಆಲ್ಬುಕರ್ಕ್ 1538ರಲ್ಲಿ ಗೋವದ ಪ್ರಥಮ ಬಿಷಪ್ ಆಗಿ ನೇಮಕವಾದ. 1542ರಲ್ಲಿ ಪ್ರಾನ್ಸಿಸ್ ಜ್ಜೇವಿಯರ್ ಸ್ಥಳೀಯ ಮತಪ್ರಚಾರಕರಿಗೆ ತರಬೇತು ನೀಡುವ ಸಾಂತಾಪಿ ಕಾಲೇಜಿನ ಮೇಲ್ವಿಚಾರಕನಾದ. ತರುವಾಯ ಈ ಕಾಲೇಜಿಗೆ ಸೇಂಟ್ ಪಾಲ್ ಕಾಲೇಜು ಎಂದು ಹೆಸರಾಯಿತು. 1557ರ ಪೆಬ್ರವರಿ 4 ಪೋಪ್ ಹೊರಡಿಸಿದ ಆಜ್ಜ್ನೆಯ ಪ್ರಕಾರ ಗೋವವೂ ಆರ್ಚಬಿಷಪನ ಆದಿಕಾರವ್ಯಾಪ್ತಿಯ ಕೇಂದ್ರವೂ ಪ್ತಾಚ್ಯ ಪ್ರಾಂತಗಳ ರೋಮನ್ ಕೆಥೊಲಿಕ್ ಪ್ರಾದ್ರಿಗಳ ಕೇಂದ್ರವೂ ಆಯಿತು. 20ನೆಯ ಶತಮಾನದಲ್ಲಿ ಪೋಪ್ ಹೊರದಡಿಸಿದ ಆದಿಕೃತ ನಿಯಮಗಳ ಪ್ರಕಾರ ಗೋವದ ಆರ್ಚಬಿಷಪ್ ಆದಿಕಾರ ಇಡೀ ಪೋರ್ಚುಗೀಸ್ ಬಾರತಕ್ಕೆ ಆನ್ವಯಿಸಿತು(1953). (ವಿ.ಜಿ.ಕೆ.;ಐ.ಎ) ಇತಿಹಾಸ: ಗೋವದ ಇತಿಹಾಸ ಪ್ರಾಚೀನವಾದ್ದು. ಹಲವು ಪುರಾಣಗಳಲ್ಲೂ ಶಾಸನಗಳಲ್ಲೂ ಗೋವದ ಉಲ್ಲೇಖಗಳಿವೆ ಪರಶುರಾಮ ಮಿಥಿಲೆಯಿಂದ ಬ್ರಾಹ್ಮಣ ಕುಟುಂಬಗಳನ್ನು ಕರೆತಂದ ಇಲ್ಲಿ ನೆಲೆಗೊಳಿಸಿದನೆಂದು ಪ್ರತೀತಿಯಿದೆ. ಇತಿಹಾಸಕಾಲದಲ್ಲಿ ಗೋವ ಮೌರ್ಯ ಸಾಮ್ರಾಜ್ಯದ ಬಾಗವಾಗಿತ್ತು. ದಖನಿನಲ್ಲಿ ಸಾಮ್ರಾಜ್ಯ ಸ್ದಾಪಿಸಿ ದೀರ್ಘಕಾಲ ರಾಜ್ಯವಾಳಿದ ಸಾತವಾಹನರು ತಮ್ಮ ಸಾರ್ವ ಭೌಮತ್ವವನ್ನು ಗೋವದ ಮೇಲೂ ಸ್ದಾಪಿಸಿದ್ದರು. ರೋಮನ್ ಸಾಮ್ರಾಜ್ಯಕ್ಕೂ ದಖನ್ ಪ್ರದೇಶಕ್ಕೂ ವ್ಯಾಪಾರ ಸಂಪರ್ಕವಿತ್ತು. ಗೋವ ಪಟ್ಟಣ ಮೂಖ್ಯ ವ್ಯಾಪಾರ ಕೇಂದ್ರ ಹಾಗೂ ಪ್ರಮೂಖ ಬಂದರು ಆಗಿತ್ತೆಂದು ತಿಳಿದುಬರುತ್ತದೆ. ಸಾತವಾಹನರ ಸಾಮ್ರಾಜ್ಯ ಅವನತಿ ಹೊಂದಿದ ಆನಂತರ ತಲೆಯೆತ್ತಿದ ಬನವಾಸಿ ಕದಂಬ ಮನೆತನ ಗೋವದ ಬಹುಬಾಗದಲ್ಲಿ ತನ್ನ ಆದಿಕಾರವನ್ನು ಸ್ಥಾಪಿಸಿತ್ತು. ಆರನೆಯ ಶತಮಾನದ ಕೊನೆಯಲ್ಲಿ ಬಾದಾಮಿ ಚಳುಕ್ಯ ಮನೆತನ ಪ್ರಬಲವಾಗಿ ಕದಂಬರನ್ನು ಸೋಲಿಸಿತು. ಒಂದನೆಯ ಕೀರ್ತಿವರ್ಮ ಕೊಂಕಣದ ಹಲವು ಪ್ರದೇಶಗಳ ಮೇಲೆ ಚಳುಕ್ಯರ ಆದಿಕಾರವನ್ನು ಸ್ಥಾಪಿಸಿದ. ಇಮ್ಮಡಿ ಪುಲಕೇಶಿ ತನ್ನ ದಿಗ್ವಿಜಯ ಕಾಲದಲ್ಲಿ ಕೊಂಕಣ ಪ್ರದೇಶವನ್ನು ಪೂರ್ಣವಾಗಿ ಜಯಿಸಿ ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೋಂಡ. ಇವನು ಗೋವದ ಉತ್ತರ ಪ್ರದೇಶದಲ್ಲಿ ಆಳುತ್ತಿದ್ದ ಮೌರ್ಯ ಶಾಖೆಯ ರಾಜನನ್ನು ಸೋಲಿಸಿದ ಸಂಗತಿ ಐಹೊಳೆಯ ಶಾಸನದಿಂದ ತಿಳಿದುಬರುತ್ತದೆ. ಬಾದಾಮಿ ಚಳುಕ್ಯ ಸಾಮ್ರಾಜ್ಯ 757ರಲ್ಲಿ ಕೊನೆಗೊಂಡ ಅನಂತರ ಗೋವ ಪ್ರದೇಶ ರಾಷ್ತ್ರಕೂಟ ಸಾಮ್ರಾಜ್ಯದ ಬಾಗವಾಯಿತು. ಚಳುಕ್ಯ ಮತ್ತು ರಾಷ್ತ್ರಕೂಟ ಸಮ್ರಾಟರ ಕಾಲದಲ್ಲಿ ಆರೇಬೆಯ,ಪರ್ಷಿಯ ಮತ್ತು ದಖನ್ ಗಳ ನಡುವೆ ವ್ಯಾಪಾರ ಸಂಪರ್ಕ ವಿಶೇಷವಾಗಿ ಆಬಿವೃದ್ದಿ ಹೊಂದಿತ್ತು. ವಿದೇಶೀ ಹಡಗುಗಳು ಗೋವ ಬರುತ್ತಿದ್ದುವು. ಗೋವ ಪಟ್ಟಣ ಪಶ್ಚಿಮ ತೀರದ ಮೂಖ್ಯ ವ್ಯಾಪಾರ ಕೇಂದ್ರಗಳಲ್ಲೋಂದಾಗಿತ್ತು. ರಾಷ್ತ್ರಕೂಟರ ಕೊನೆಗಾಲದಲ್ಲಿ ಗೋವ ಪ್ರದೇಶದಲ್ಲಿ ಕದಂಬರು ರಾಜ್ಯ ಸ್ಥಾಪಿಸಿದರು. ಇವರಿಗೆ ಗೋವೆಯ ಕದಂಬರೆಂದೇ ಹೆಸರಾಗಿದೆ. ಗೋವದ ಕದಂಬ ಮನೆತನ ಕದಂಬ ಮನೆತನದ ಉಪಶಾಖೆಗಳಲ್ಲೊಂದಾಗಿತ್ತು. ಗೋವದ ಸಮೀಪದ ಚಂದ್ರಪುರ (ಇಂದಿನ ಚಂದೂರು) ಇವರ ರಾಜದಾನಿಯಾಗಿತ್ತು. ಈ ಶಾಖೆಯ ಆರಂಬ ಕಾಲದ ಕಂಟಕಾಚಾರ್ಯ, ನಾಗವರ್ಮ, 1ನೆಯ ಗುಹಲದೇವ ಮೊದಲಾದವರು ಆಷ್ಟೂ ಪ್ರಬಲರಾಗಿರಲಿಲ್ಲ. ಒಂದನೆಯ ಷಷ್ಟದೇವ ಆಥವಾ ಚತುರ್ಬುಜನೆಂಬ ರಾಜ 970ರ ಸುಮಾರಿನೆಲ್ಲಿ ಪ್ರಬಲನಾಗಿದ್ದುದಲ್ಲದೆ ರಾಷ್ತ್ರಾಕೂಟ ಸಾಮ್ರಾಜ್ಯವನ್ನು ಕೊನೆಗಾಣಿಸುವಲ್ಲಿ ಕಲ್ಯಾಣಿ ಚಾಳುಕ್ಯ ತೈಲಪನಿಗೆ ಸಹಾಯ ಮಾಡಿದನೆಂದು ತಿಳಿದುಬಂದಿದೆ. 11ನೆಯ ಶತಮಾನದ ಪ್ರಾರಂಬದಲ್ಲಿ ಆಳುತ್ತಿದ್ದ 2ನೆಯ ಗುಹಿಲದೇವನ ಕಾಲದಲ್ಲಿ ಗೋವ ಪ್ರಸಿದ್ದವಾದ ವಾಣಿಜ್ಯ ಕೇಂದ್ರವೂ ರೇವು ಪಟ್ಟಣವೂ ಆಗಿತ್ತೆಂದೂ ಆ ವೇಳೆಗೆ ಆರಬ್ ವರ್ತಕರು ಗೋವಯಲ್ಲಿ ನೆಲಸಿದ್ದರೆಂದೂ ತಿಳಿದುಬರುತ್ತದೆ.ಅನಂತರ ಆಳಿಯದ 2ನೆಯ ಷಷ್ಟದೇವ ಇಡೀ ಕೊಂಕಣ ಪ್ರದೇಶದ ಮೇಲೆ ತನ್ನ ಆಳಿಕೆ ಸ್ದಾಪಿಸಿದ. ಇವನಿಗೆ ಚಟ್ಟಲ ಮತ್ತು ಚಟ್ಟಯ್ಯ ಎಂಬ ಹೆಸರುಗಳಿದ್ದುವು. ಚಾಳುಕ್ಯ ಜಯಸಂಹನ ಆಶ್ರಿತನಾಗಿದ್ದ ಇವಾ ಆಳಿಕೆಯಲ್ಲಿ ಗೋವ ಪಟ್ಟಣ ವಣಿಜ್ಯ ಕೇಂದ್ರವಗಿ ವಿಶೇಷ ಪ್ರಸಿದ್ದಿ ಪಡೆದಿತ್ತು. ಗೋವ ರೇವು ಪಟ್ಟ್ಣಣ ಬವ್ಯ ಬವನಗಳಿಂದಲೂ ಇಬ್ಬದಿಯ ದೊಡ್ಡ ದೊಡ್ಡ ಮಳಿಗೆಗಳಿಂದ ಕೂಡಿದ ವಿಶಾಲ ಬೀದಿಗಳಿಂದಲೂ ಉದ್ಯಾನಗಳಿಂದಲೂ ಕಂಗೊಳಿಸುತ್ತಿತ್ತೆಂದು ಆ ಕಾಲಬ ಶಾಸನಗಳಲ್ಲಿ ವರ್ಣಿಸಲಾಗಿದೆ. ಷಷ್ಟದೇವನ ಆನಂತರ ಆವನ ಮಗನಾದ 1ನೆಯ ಜಯಕೇಶಿ ಗೋವದ ರಾಜನಾದ. ಗೋವ ರಾಜ್ಯ ಇವನ ಆಳಿಕೆಯ ಕಾಲದಲ್ಲಿ ಕಪಾರ್ಡಿಕ ದ್ವೀಪ, ಕೊಂಕಣ, ಹ್ವೆವೆ, ಹಲಸೀಗೆ ಮೊದಲಾದ ಪ್ರದೇಶಗಳನ್ನೊಳಗೊಂಡಿತ್ತು. ಪರಾಕ್ರಮಿಯೂ ದೂರದರ್ಶಿಯೂ ಆದ ಈತ ಕಲ್ಯಾಣಿ ಚಾಳುಕ್ಯ ವಿಕ್ರಮಾಬಿತ್ಯನಿಗೆ ತನ್ನ ಒಬ್ಬ ಮಗಳನ್ನೂ ಅನಿಲ್ ವಾಡದ ಚಾಳುಕ್ಯ ಕರ್ಣನಿಗೆ ತನ್ನ ಮತ್ತೊಬ್ಬ ಮಗಳನ್ನು ಕೊಟ್ಟು ವಿವಾಹ ಮಾಡಿ ಗೋವ ಕದಂಬ ಸಂತತಿಯ ಪ್ರಬಾವವನ್ನು ವಿಸ್ತರಿಸಿದ. ಈತ ಗೋವ ಪಟ್ಟಣವನ್ನು ತನ್ನ ರಾಜದಾನಿಯನ್ನಾಗಿ ಮಾಡಿಕೊಂಡ್. ಆನೇಕ ಸಮಕಾಲೀನ ಶಾಸನಗಳಲ್ಲಿ ಅಂದಿನ ಗೋವ ನಗರದ ಸೌಂದರ್ಯವೂ ಐಶ್ವರ್ಯವೂ ವರ್ಣಿಸಲ್ಟಟ್ಟಿವೆ. ರಾಜಮಾರ್ಗಗಳಲ್ಲಿ ಪಂಡಿತರೂ ಶ್ರೀಮಂತರೂ ದನಕನಕ ಐಶ್ವರ್ಯಾದಿಗಳೂ ಕಣ್ಮನಗಳಿಗೆ ಹಬ್ಬವನ್ನುಂಟು ಮಾಡುತ್ತ ನಗರ ಅಮರಪುರಿಯಂತೆ ಕಂಗೊಳಿಸುತ್ತದ ಎಂಬೂದಾಗಿ ಹಲವು ಶಾಸನಗಳಲ್ಲಿ.