ಪುಟ:Mysore-University-Encyclopaedia-Vol-6-Part-12.pdf/೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋಬಿ ಮೀನು-ಗೋಮೇದಕ ಚಕ್ರವರ್ತಿ ಔರಂಗಜೇಬನಿಗೆ ಅವನ ಮತದ್ವೇಷವನು ಖಂಡಿಸಿ ಗೋಬಿಂದ ಒಂದು ಪತ್ರಬರೆದ.ಇದು ಜಫರ್ ನಾಮಾ ಎಂಬ ಹೆಸರಿಂದ ಪ್ರಸಿದ್ಡವಾಯಿತು.ಅಯುಷ್ಯವೆಲ್ಲ ಧರ್ಮರಕ್ಷೆಣೆಗಾಗಿ ಕಾದಿ ಗೋಬಿಂದ ಸಿಂಹ ೧೭೦೮ರಲ್ಲಿ ಇಹಲೋಕವನ್ನು ತೊರೆದ. ಕಾದಾಟಾದಲ್ಲಿ ಇವನ ಮಕ್ಕಳಲ್ಲಿ ಇಬ್ಬರು ಯುದ್ದದಲ್ಲಿ ಮಡಿದರು,ಇಬ್ಬರು ಹಗೆಯ ಕೈಗೆ ಸಿಕ್ಕಿ ಬಲಿಯಾದರು.ಇಷ್ಥಾದರು ಈ ಧಮ್ರಸಿಂಹ ಧೈಯಗೆಡಲಿಲ್ಲ: ಬಂದ ಧುಖಕ್ಕೆ ತಲೆಕೊಟ್ಟೂ ಶಿಷ್ಯರಿಗೆ ಮೇಲ್ಪಂಕ್ತಿಯಾಗಿ ಬಾಳಿದ. ಹಿಂದಿನ ಗುರುಗಳು ಕೃತಿಗಳನ್ನೆಲ್ಲ ಸಂಗ್ರಹಿಸಿ ಷರಿಷ್ಕರಿಸಿ ಅವಕ್ಕೆ ಒಂದು ಸ್ಥಿರವಾದ ರೂಪವನ್ನು ಕೊಟ್ಟದ್ದು ಗುರು ಗೊಬಿಮಂದ ಸಿಂಹ ಮಾಡಿದ ಮಹತ್ಕಾರ್ಯಗಳಲ್ಲಿ ಒಂದು.ಗೊಬಿಹಿಂದ ಸಿಂಹ ತಾನೂ ಕ್ರುತಿಗಳನ್ನು ರಚಿಸಿದ.ಆದರೆ ಅದನ್ನು ಗ್ರಂಥ್ ಸಾಹೆಬ್ನಲ್ಲಿ ಸೇರಿಸಿಲ್ಲ.ಈತ ತೀರಿದ ಆನಂತರ ಶಿಷ್ಯನೊಬ್ಬ ಆ ಕ್ರುತಿಗಳನ್ನು ಸಂಗ್ರಹಹಿಸಿದ.ಅದು ದಶಮಗ್ರಂಥ ಎಂದರೆ ಹತ್ತೆನೆಯ ಗುರುವಿನ ಗ್ರಂಥ ಎಂಬ ಹೆಸರಿನಿಂದ ಬಳಕೆಗೆ ಬಂತು.ಇದರಲ್ಲಿ ಗೊಬಿಹೆಂದ ಸಿಂಹನ ಸುಮಾರು ೨೦೦೦ದಷ್ಟು ಕ್ರುತಿಗಳು ಇವೆ.ಗುರು ನಾನಕ್ ಆರಂಭಿಸಿದ ಪಂಥ ಕೆಲವು ಕಾಲದಲ್ಲಿ ಒಂದು ಪ್ರತ್ಯೇಕ ಪಂಥ ಎಂದಾಗಿ ಗುರುಗೋಬಿಂದಸಿಂಹನ ಕಾರ್ಯದಿಂದ ಒಂದು ನಿಷ್ಕ್ರಷ್ಟ ರೂಪವನ್ನು ತಳೆಯಿತು;ಭರತವರ್ಷದ ಇತಿಹಾಸದಲ್ಲಿ ಒಂದು ವಿಶಿಷ್ಟ ಸೇವೆಯನ್ನು ಸಲ್ಲಿಸಲು ಕ್ಷಮವಾದ ಒಂದು ದಕ್ಷ ಧರ್ಮಸಂಘ ಆಯಿತು. ಗೋಬಿ ಮೀನು:ಪರ್ಸಿಫಾರ್ಮೀಸ್ ಗಣದ ಗೋಬಿಯಿಡೀ ಕುಟಂಬಕ್ಕೆ ಸೇರಿದ ಹಲವಾರು ಮೀನುಗಳಿಗೆ ಇರುವ ಸಾಮಾನ್ಯ ಹೆಸರು.ಈ ಕುಟುಂಬಕ್ಕೆ ಸೇರಿದ ಹಲವಾರು ಮೀನುಗಳಿಗೆ ಇರುವ ಸಾಮಾನ್ಯ ಹೆಸರು.ಈ ಕುಟುಂಬದಲ್ಲಿ ನೂರಾರು ಪ್ರಭೇದಗಳಿವೆ.ಇವು ಉಷ್ಣವಲಯದ ಕಡಲುಗಳು ಇಲ್ಲವೇ ಸರೋವರಗಳ ತಳದಲ್ಲಿ ವಸಿಸುತ್ತವೆ.ಸಾಮಾನ್ಯವಾಗಿ ಇವು ಚಿಕ್ಕ ಗಾತ್ರದವು.ಫಿಲಿಪೀನ್ಸ್ ನಲ್ಲಿನ ಲುಜಾನ್ ಎಂಬಲ್ಲಿರುವ ಒಂದು ಸರೋವರದಲ್ಲಿ ಕಂಡುಬರುವ ಪಂಡಾಕ ಪಿಗ್ಮೀಯ ಎಂಬ ಗೋಬಿ ಮೀನು ಕೇವಲ ೧೨ ಮಿಮೀ ಉದ್ದ ಇದ್ದು ಅತ್ಯಂತ ಚಿಕ್ಕ ಕಶೇರುಕ ಎನಿಸಿಕೊಂಡಿದೆ.ಉಳಿದವು ಸುಮಾರು ೮ ರಿಂದ ೩೦ ಸೆಂಮೀ ವರೆಗೆ ಬೆಳೆಯಬಲ್ಲವು. ಸಾಲುಗಳಲ್ಲಿರುವ ಸಣ್ಣ ಹಲ್ಲುಗಳು,ದುಂದಾದ ಬಾಲದ ಈಜುರೆಕ್ಕೆಗಳಿವೆ.ಗುದದ ಈಜುರೆಕ್ಕೆಗಳು ದೇಹದ ಅಧೋಭಾಗದಲ್ಲಿ ಒಂದುಗೂಡಿ ಒಂದು ರೀತಿಯ ಹೇರು ಬಟ್ಟಲಾಗಿ ಪರಿವರ್ತನೆಯಾಗಿವೆ.ಇದರ ಸಹಾಯದಿಂದ ಗೋಬಿ ಬಂಡೆಗಳಿವೆ,ಮರಳಿಗೆ ಅಂಟಿಕೊಂಡಿರುತ್ತದೆ.ಇವು ಸಣ್ಣ ಕೀಟಗಳು,ಇತರೆ ಸಣ್ಣ ಜಲಚರಗಳು ಹಾಗೂ ಮೀನುಗಳನ್ನು ತಿನ್ನುತ್ತವೆ. ವಸಂತ ಋತುವಿನ ಪ್ರಾರಂಭದಲ್ಲಿ ಗೋಬಿಗಳು ಪ್ರಜನನ ಕ್ರಿಯೆಯಲ್ಲಿ ತೊಡಗುತ್ತವೆ.ಹೆಣ್ಣು ಮೊಟ್ಟೆಗಳನ್ನು ಇಟ್ಟ ಮೇಲೆ ಗಂಡು ಮೀನು ಕಾವಲಿರುತ್ತದೆ.ಇದು ಮೊಟ್ಟೆಗಳನ್ನು ತಿನ್ನಲು ಬರುವ ಇತರೆ ಮೀನುಗಳೊಡನೆ ಕಾದಾಡಿ ರಕ್ಷಣೆ ನಿಡುವುದಲ್ಲ್ಲದೆ,ತನ್ನ್ನ ಭುಜದ ಈಜು ರೆಕ್ಕೆಗಲ್ಲಿಂದ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ ಬೆಳೆಯುವ ಮರಿಗಳಿಗೆ ಅನುಕೂಲ ವಾತಾವರಣವನ್ನು ಕಲ್ಪಿಸುತ್ತದೆ. ವಾಣಿಜ್ಯವಾಗಿ ಅಷ್ಟು ಪ್ರಾಮುಖ್ಯವಲ್ಲದಿದ್ದರೂ ಈ ಮೀನು ತಿನ್ನಲು ಯೋಗ್ಯವಾಗಿವೆ. ಗೋಮತೀ ನದಿ:ಭಾರತದ ಉತ್ತರಪ್ರದದೇಶ ರಾಜ್ಯದಲಲ್ಲಿ ಹರಿಯುವ ಒಂದು ನದಿ,ಗಂಗಾನದಿಯ ಉಪನದಿಗಳಲ್ಲೊಂದು.ಪೀಲಿಭೀತ್ನಿಂದ ಪೂರ್ವಕ್ಕೆ ೩೨ಕಿಮೀ ೧೯ಕಿಮೀ ವರೆಗೆ ಝರಿಯಂತೆ ಹರಿಯುತ್ತದೆ.೫೬ ಕಿಮೀ ಹರಿದ ಅನಂತರ ನದಿ ಇದನ್ನು ಸಂಗಮಿಸುತ್ತದೆ.ಅಲ್ಲಿಂದ ಮುಂದೆ ಶಾಶ್ವತವಾದ ಪ್ರವಾಹ ರೂಪದಲ್ಲಿ ಇದು ಹರಿಯತೊಡಗುತ್ತದೆ.ಸ್ವಲ್ಪ ದೂರದಲ್ಲಿ ಶಹಜಹಾನ್ ಪುರ ದಿಂದ ಖೇರೀಗೆ ಹೋಗುವ ಮಾರ್ಗದಲ್ಲಿ ಗೋಮತಿಗೆ ೬೩ ಮೀ ಉದ್ದದ ಸೆತುವೇ ನಿರ್ಮಣವಾಗಿದೆ.ಸೆತುವೇಯನ್ನು ದಾಟಿದ ಮೇಲೆ ಮಂದಗತಿಯಿಂದ ಹರಿಯುವ ಈ ನದಿಗೆ ಅನೇಕ ಉಪನದಿಗಳೂ ನಾಲೆಗಳೂ ಒಂದು ಸೇರುತವೆ.ಮುಹಮ್ಮದೀಯಿಂದ ಲಖನೌ ವರೆಗೆ ನದಿಯ ಪಾತ್ರದ ೩೦-೩೬ಮೀ.ಇಲ್ಲಿ ನದಿಯ ದಡಗಳು ತಕ್ಕಮಟ್ಟಿಗೆ ಎತ್ತರವಾಗಿವೆ.ಸೀತಾಪುರ ಜಿಲ್ಲೆಯಲ್ಲಿ ಗೋಮತಿಯನ್ನು ಒಂದು ಸೇರುವ ನದಿಗಳು ಕಥ್ ನಾ ಮತ್ತು ಸರಾಯಾನ.ಲಖನೌ ನಗರದಲ್ಲಿ ಇದಕ್ಕೆ ಅನೇಕ ಸೇತುವೆಗಳಿವೆ.ಲಖೌನದಿಂದ ಮುಂದೆ ಈ ನದಿ ಬಾರಾಬಂಕಿ,ಸುಲ್ತಾನ್ ಪುರ ಮತ್ತು ಚೌನ್ ಪುರ ಜಿಲ್ಲೆಗಳನ್ನು ದಾಟಿ ಮುಂದುವರೆಯುತ್ತದೆ.ಅಲ್ಲಿ ನದಿಯ ಮಾರ್ಗ ಅಂಕುಡೊಂಕು;ಪಾತ್ರದ ಅಗಲ ೬೦-೧೮೦ಮೀ. ಚೌನ್ ಪುರದಲ್ಲಿ ೧೬ನೆಯ ಶತಮಾನದಲ್ಲಿ ಕಟ್ಟಿದ ೧೯೬ ಮೀ ಉದ್ದದ ಶಾಹೀ ಎಂಬ ಕಲ್ಲುಸೇತುವೆ ತುಂಬ ಪ್ರಸಿದ್ದವಾದುದು.ಮುಂದೆ ಗೋಮತಿಯನ್ನು ಸೇರುವಾಗ ನದಿ ಸಯೀ.ವಾರಾಣಸಿಯಿಂದ ಉತ್ತರಕ್ಕೆ ೩೨ ಕಿಮೀ ದೂರದಲ್ಲಿ ಗೋಮತೀ ನದಿ ಘಾಜೆಪುರ ಜಿಲ್ಲೆಯ ಸೈದ್ ಪುರ ಎಂಬ ಊರಿನ ಹತ್ತಿರ ಗಂಗಾನದಿಯನ್ನು ಸಂಗಮಿಸುತ್ತದೆ.ನದಿಯ ಒಟ್ಟು ಉದ್ದು ಸು.೯೪೦ ಕಿಮೀ. ಗೋಮತೀ ನದಿ ಮತ್ತು ಅದರ ಉಪನದಿಗಳಿಂದ ೩೦,೪೩೭ ಚ.ಕಮೀ ಪ್ರದೇಶ ಫಲವತ್ತಾಗಿದೆ.ಆತಿವ್ರುಷ್ಟಿಯಿಂದ ಆಗಾಗ್ಗೆ ನದಿಯಲ್ಲಿ ಮುಹಮ್ಮದೀವರೆಗೆ ದೋಣಿ ಸಂಚಾರ ಸಾಧ್ಯ ಲಖನೌ,ಸೀತಾಪುರ,ಬಾರಾಬಂಕಿ,ರಾಯ್ ಬರೇಲಿ,ಸುಲ್ತಾನ್ ಪುರ,ಚೌನ್ ಪುರ ನಗರಗಳು ಗೋಮತೀ ನದಿಯ ದಂಡೆಯ ಮೇಲಿವೆ. ಗೋಮೇದಕ:ಆದರ್ಶಿಕ್ರುತ ರಾಸಾಯನಿಕ ಸೂತ್ರ ZrSiO4 ಇರುವ ಒಂದು ಖನಿಜ.ನವರತ್ನಗಳಲ್ಲಿ ಒಂದು.ಜಿರ್ಕೋನಿಯಮ್ ಧಾತುವಿನ ಬಲುಮುಖ್ಯ ಆಕರ.ಇದರ ರಾಸಾಯನಿಕ ಸಂಯೋಜನೆಯಲ್ಲಿ ಅಲ್ಪ ಮೊತ್ತದಲ್ಲಿ ಯುರೇನಿಯಮ್ ಪ್ರವೇಶಿಸಿದರೆ ಅದಕ್ಕೆ ಸಿರ್ಟೊಲ್ಯಿಟ್ ಎಂದು ಹೆಸರಾಗುತ್ತದೆ.