ಪುಟ:Mysore-University-Encyclopaedia-Vol-6-Part-12.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋವಿಂದ ಪೈ ಅರಮನೆಯ ಅಧಿಕಾರವನ್ನು ಬಿಟ್ಟಮೇಲೆ ಪಿಳ್ಳೆ ತಿರುವನಂತಪುರದಲ್ಲಿ ವಕೀಲನಾದ್. ಅದೇ ಸಂದರ್ಭದಲ್ಲಿ ಒಂದು ಇಂಗ್ಲಿಷ್ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದ್ದಲ್ಲದೆ ಅದುವರೆಗೆ ಬೆಳಕು ಕಾಣದೆ ಇದ್ದ ಭಾಷಾ ನೈಷಧ ಚಂಪು,ದಕ್ಷಯಾಗ ಕಿಳಿಪ್ಪಾಟ್ಟು-ಮುಂತಾದುವನ್ನು ಪ್ರಕಟಸಿ ಬೆಳಕಿಗೆ ತಂದ.ರೋಮನ್ ಚರಿತ್ರೆ ಮತ್ತು ಎ ಹ್ಯಾಂಡ್ ಬುಕ್ ಆಫ್ ಟ್ರ್ಯಾವಂಕೂರ್ ಎನ್ನುವ ಎರಡು ಸ್ವಂತ ಕ್ರುತಿತಿಗಳ ರಚಿಸಿ ಪ್ರಕಟಿಸಿದ. ಒಂದು ಇಂಗ್ಲಿಷ್-ಮಲಯಾಳಂ ನಿಘಂಟನ್ನು ಸಿದ್ಧಪಡಿಸಿ ಪ್ರಕಟಿಸುವ ಯೋಜನೆ ಹಾಕಿಕೊಂಡು ಪಿಳ್ಳೆ ಅದಕ್ಕಾಗಿ ಶ್ರಮಿಸಿದ್ದುಂಟು.ಆದರೆ ಅದು ಈತನ ಜೀವನದಲ್ಲಿ ಸಿದ್ಧಿಸಲಿಲ್ಲ. ಗೋವಿಂದ ಪೈ:೧೮೩೩-೧೯೬೩.ಕನ್ನಡದ ಹೆಸರಾಂತ ವಿಮರ್ಶಕ,ಕವಿ.ರಾಷ್ಟಕವಿ ಪ್ರಶಸ್ತಿಗೆ ಭಾಜನರದವರು.ಅನೇಕ ವಿಧದಲ್ಲಿ ಕನ್ನಡ ನಾಡು ನುಡಿಗಳ ಎಳಿಗೆಗೆ ಏಕೀಕರಣಕ್ಕೆ ಕೆಲಸ ಮಾಡಿದರು.ಆಸ್ತಿ ಮನೆ ಎಲ್ಲ ಮಂಜೇಶ್ವರದಲ್ಲಿದ್ದು ಅಲ್ಲಿಯೇ ಇವರು ನೆಲೆ ನಿಂತರಾದರೂ ಇವರ ಹೆಸರಿನ ಮೊದಲಿಗೆ ಬರುವ ಎಂ.ಎಂಬುದು ಮಂಗಳೂರಿನ ಪ್ರತೀಕವೇ ಹೊರತು ಮಂಜೇಶ್ವರದಲ್ಲಿ.ಇವರ ಗೌಡ ಸಾರಸ್ವತ ಸಮಾಜದ ಮಂಗಳೂರಿನ ಬಾಪೈ ಮನೆತನಕ್ಕೆ ಸೇರಿದವರು. ತರುಣ ಗೋವಿಂದ ಪೈಗಳು ಇಂಥ ಸುಸಂಸ್ಕ್ರುತ ಆವರಣದಲ್ಲಿ ಬೆಳೆದವರು.ಪಂಚೆ ಮಂಗೇಶರಾಯರಿಂದ ನೇರವಾಗಿ ಶಾಲೆಯಲ್ಲಿ ಪಾ ಠ ಕಲಿತರು.ಚುರುಕು ಬುದ್ಧಿಯ ಭಾವುಕ ಮನೋಧರ್ಮದ ತರುಣ ಮೇಲೆ ಈ ಪವಿತ್ರ ವಾತಾವರಣ ಪ್ರಭಾವ ಬಲವಾಗಿ ಬಿತ್ತು.ಆನಂತರ ಪೈ ವಿದ್ಯಾಭಯಾಸಕ್ಕೆಂದು ಮದ್ರಾಸಿಗೆ ಹೋಗಿ ಜಾಣ ಎನಿಸಿಕೊಂಡರು. ಅಪ್ಪ ತೀರಿಕೊಂಡ ಮೇಲೆ ಸಂಸಾರದ ಹೊಣೆ ಹೊತ್ತು ಊರಿನಲ್ಲಿಯೇ ನಿಂತರು.ಆದರೆ ಇವರ ಸಾಂಸಾರಿಕ ಜೀವನವೂ ಅಂಥ ಸುಖಮಯವೇನೂ ಆಗಲಿಲ್ಲ .ದಾಂಪತ್ಯ ಜೀವನದ ಹರೆಯದಲ್ಲಿಯೇ ಪತ್ನಿಯನ್ನು ಕಳೆದುಕೊಂಡರು.ಮತ್ತೆ ಮದುವೆಯಾಗಲಿಲ್ಲ.ಮಕ್ಕಳಿಲ್ಲವೆಂದು ವ್ಯಥೆಪಡಲಿ ಙಲ್ಲ.ತಮ್ಮ ಕುಟುಂಬದಲ್ಲಿಯೇ ಬೆಳೆಯೂತ್ತಿದ್ದ ತಮ್ಮನ ಮಕ್ಕಳಲ್ಲಿಯೇ ಅ ಅಕ್ಕರೆಯನ್ನು ತೋರಿಸುತ್ತ ಅವರನ್ನು ಬೆಳೆಸಿದರು. ಗೋವಿಓದ ಪೈಗಳ ಮೊಟ್ಟಮೊದಲ ಲೇಖನ ೧೯೦೦ರಲ್ಲಿ ಸುವಾಸಿನಿ ಪತ್ರಿಕೆಯಲ್ಲಿ ಪ್ರಕಟಾವಾಯಿತು.೧೯೬೨ರಲ್ಲಿ ಪ್ರಕಟಗೊಂಡು ಮಂಜೇಶ್ವರ ದೇವಸ್ಥಾನದ ಮೇಲಿನ ಲೆಖನ ಇವರ ಕೊಎಯ ಬರವಣೆಗೆಯಾಯಿತು.ಹೀಗೆ ಸುಮಾರು ೬೨ ವರ್ಷಗಳ ವರೆಗೆ ಸತತವಾಗಿ ಸೇವೆಯಲ್ಲಿ ತೊಡಗಿದ್ದು ಕನ್ನಡ ಸಾಹಿತ್ಯವನ್ನಿವರು ಶ್ರಿಮಂತ ಗೊಳಿಸಿದರು