ಪುಟ:Mysore-University-Encyclopaedia-Vol-6-Part-12.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋರ್, ಕ್ಯಾಥರೀನ್ ಗ್ರೇಸ್,ಫ್ರಾನ್ಸಸ್-ಗೋರಖ್ ಪುರ ಗೋರ್,ಕ್ಯಾಥರೀನ್ ಗ್ರೇಸ್,ಫ್ರಾನ್ಸಸ್:೧೭೯೯-೧೮೬೧.ಆಂಗ್ಲ ಕಾದಂಬರಿಗಾರ್ತಿ.ಹುಟ್ಟಿದ್ದು ನಾಟಿಂಗ್ ಹಂಷ್ಶ್ಯೆರಿನ ರೆಟ್ ಫರ್ಡನಲ್ಲಿ.ತಂದೆ ಮದ್ಯ ವ್ಯಾಪಾರಿ.ಗಂಡ ಕ್ಯಾಪ್ಪನ್ ಗೋರ್.ಈಕೆ ತನ್ನ ಬರವಣಿಗೆಯೆಂದಲೇ ಜೀವನವನ್ನು ಸಾಗಿಸಿದಳು.೧೮೨೪ ರಿಂದ ೧೮೬೧ ರವರೆಗೆ ಈಕೆಯ ೭೦ ಕ್ರುತಿಗಳು ಹೊರಬಿದ್ದವು.ಅವುಗಳಲ್ಲಿ ಬಹುತೇಕ ಕಾದಂಬರಿಗಳು ಆಂಗ್ಲರ ಸೊಗಸು ಜೀವನವನ್ನು ಚಿತ್ರಿಸುತ್ತವೆ.ಮ್ಯಾನರ್ಸ್ ಆಫ್ ದಿ ಡೇ,ಸೆಸಿಲ್ ಆರ್ ದಿ ಅಡ್ವೆಂಚರ್ಸ್ ಆಫ್ ಎ ಕಾಕ್ಸ್ ಕೂರಾನ್ ದಿ ಬ್ಯಾಂಕರ್ಸ್ ವ್ಯೆಫ್ ಈ ಕಾದಂಬರಿಗಳು ಹೆಸರಿಸತಕ್ಕವು. ಗೋರಂಟಿ:ಲಿತ್ರೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ ಮದರಂಗಿ ಪರ್ಯಾಯನಾಮ.ಇದರ ಶಾಸ್ತ್ರೀಯ ಹೆಸರು ಲಾಸೋನಿಯ ಇನರ್ಮಿಸ್.ಇಂಗ್ಲಿಷಿನಲ್ಲಿ ಇದನ್ನು ಅಲಂಕಾರಕ್ಕಾಗಿಯೂ ಇದರಿಂದ ಪಡೆಯಲಾಗುವ ಬಣ್ಣಕ್ಕಾಗಿಯೂ ಬೆಳೆಸಲಾಗುತ್ತದೆ. ಗೋರಂಟಿ ವಿಪುಲವಾಗಿ ಕವಲೊಡೆದು ಬೆಳೆಯುವ ಒಂದು ಪೊದೆಸಸ್ಯ ಬೂದು ಕಂದ ಮಿಶ್ರಿತ ಬಣ್ಣದ ತೊಗಟೆ,ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿರುವ ಸರಳ,ಅಖಂಡ ಹಾಗೂ ಅಂಡಾಕಾರದ ಎಲೆಗಳು ಇದರ ಮುಖ್ಯ ಲಕ್ಷಣಗಳಲ್ಲಿ ಕೆಲವು.ಹೂಗಳು ಚಿಕ್ಕ ಗಾತ್ರದವು ಮತ್ತು ಬಿಳಿ ಇಲ್ಲವೆ ಗುಲಾಬಿ ಬಣ್ಣದವು;ಸಂಕೀರ್ಣ ಮಾದರಿಯ ಮಧ್ಯಾರಂಭಿ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ.ಇವಕ್ಕೆ ಸುವಾಸನೆಯಿದೆ.ಫಲ ಸಂಪುಟ ಮಾದರಿಯದು.ಹಣ್ಣಿನೊಳಗೆ ನಯವಾದ ಆಸಂಖ್ಯಾತ ಬೀಜಗಳಿವೆ. ಗೋರಂಟಿ ಗಿಡವನ್ನು ಉಷ್ಣ ಹಾಗೂ ಸಮಶೀತೋಷ್ಣ ವಾಲಯಗಳ ಅನೇಕ ಪ್ರದೇಶಗಳಲ್ಲಿ ಬೆಳೆಸುತ್ತಾರೆ.ಭಾರತ,ಈಜಿಪ್ಟ್,ಪರ್ಷಿಯ,ಪಾಕಿಸ್ತಾನ,ಸೂಡಾನ್,ಮಡಗಾಸ್ಕರ್ ಗಳಲ್ಲಿ ಇದರ ಎಲೆಗಳಿಂದ ದೊರೆಯುವ ಬಣ್ಣಕ್ಕಾಗಿ ಬೆಳೆಸುವ ಪ್ರದೇಶಗಳಲ್ಲಿ ಮುಖ್ಯವಾದವು ಪಂಜಾಬ್,ಗುಜ್ ರಾತ್,ಮಧ್ಯಪ್ರದೇಶ ಮತ್ತು ರಾಜಸ್ತಾನಗಳು.ಅದರಲ್ಲೂ ಪಂಜಾಬಿನ ಫರೀದಾಬಾದ್ ಮತ್ತು ಗುಜರಾತಿನ ಬಾರ್ದೋಲಿ ಹಾಗೂ ಮಾಧಿಗಳು ಗೋರಂಟಿ ಉತ್ಪಾದನೆಯ ಮುಖ್ಯ ಕೇಂದ್ರಗಳಾಗಿವೆ. ಗೋರಂಟಿ ಗಿಡ ಯಾವ ರೀತಿಯ ಮಣ್ಣಿನಲ್ಲಾದರೂ ಬೆಳೆಯಬಲ್ಲದು.ಆದರೆ ನೆಲ ಜವುಗಾಗಿರಬಾರದು.ಗೋರಂಟಿಯ ಎಲೆಗಳನ್ನು ವರ್ಷಕ್ಕೆ ಎರಡು ಸಲ ಮೇ ಮತ್ತು ಅಕ್ಟೋಬರ್ ಕಟಾಯಿಸುತ್ತಾರೆ ಒಂದು ಎಕರೆಗೆ ಸುಮಾರು ೩೫೦-೭೫೦ ಕಿಗ್ರಾಂ ಒಣ ಎಲೆಗಳನ್ನು ಪಡೆಯಬಹುದು.ನೀರಾವರಿ ಭೂಮಿಯಲ್ಲಿ ಇಳುವರಿ ೯೨೦ ಕಿಗ್ರಾಂನಷ್ಟು ಹೆಚ್ಚಾಗೆರಬಹುದು.ಗೋರಂಟಿಯ ಎಲೆಗಳನ್ನು ಬಹಳ ಹಿಂದಿನ ಕಾಲದಿಂದಲೂ ಭಾರತ ಮತ್ತು ಮಧ್ಯಪ್ರಾಚ್ಯಗಳಲ್ಲಿ ಅಂಗ್ಯ,ಅಂಗಾಲು ಹಾಗೂ ಕೈ ಬೆರಳಿನ ಉಗುರುಗಳಿಗೆ ಬಣ್ಣ ಹಾಕಲು ಉಪಯೋಗಿಸುತ್ತಾರೆ.ತಲೆಗೂದಲು,ಗಡ್ಡ,ಹುಬ್ಬು,ಕುದುರೆಗಳ ಬಲಾ,ಅಯಾಲು,ಚರ್ಮ ಮುಂತಾದವುಗಳಿಗೆ ಬಣ್ಣ ಕೊಡುವುದಕ್ಕೆ ಸಹ ಇದನ್ನು ಬಳಸುವುದುಂಟು.ಹಿಂದಿನ ಕಾಲದಲ್ಲಿ ರೇಷ್ಮೆ ಹಾಗೂ ಉಣ್ಣೆ ಬಟ್ಟೆಗಳಿಗೆ ಬಣ್ಣ ಕೊಡಲು ಗೋರಂಟಿಯನ್ನು ಬಳಸುತ್ತಿದ್ದರು.ಗೋರಂಟಿ ಎಲೆಗಳಿಗೆ ಗುಣಗಳಿವೆ.ಕಷಾಯದ ರೂಪದಲ್ಲಿ ಎಲ್ಲವೆ ಸರಿಯ ರೂಪದಲ್ಲಿ ಇವನ್ನು ಹುಣ್ಣು,ತರಚು ಹಾಗು ಸುಟ್ಟಗಾಯಗಳು ಮತ್ತು ಕೆಲವು ಚರ್ಮರೋಗಗಳಿಗೆ ಬಳಸುತ್ತಾರೆ.ಕಷಯಾ ಗಂಟಲುನೋವಿಗೆ ಒಳೆಯ ಮದ್ದು.ಗೋರಂಟಿಯ ಹೂವನ್ನು ಆವಿ ಅಸವಿಕರಣಕ್ಕೊಳಪಡಿಸಿ ಒಂದು ಬಗೆಯ ಪರಿಮಳಯುಕ್ತ ಚಂಚಲ ತೈಲವನ್ನು ಪಡೆಯಬಹುದು.ಇದಕ್ಕೆ ಮೆಹಂದಿ ಎಣ್ಣೆ ಎಂದು ಹೆಸರು.ಇದನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳುಸುತ್ತಾರೆ.ಗೋರಂಟಿಯ ಚೌಬೀನೆಯನ್ನು ಉಪಕರಣಗಳ ಹಿಡಿ,ಗೂಟ ಮುಂತಾದವುಗಳ ತಯಾರಿಕೆಗೆ ಉಪಯೋಗಿಸುತ್ತಾರೆ.ಎಳೆಯ ಕಡ್ಡಿಗಳನ್ನು ಹಲ್ಲುಜ್ಜಲು ಇಂಡೋನೇಷ್ಯದಲ್ಲಿ ಬಳಸುತ್ತಾರೆ. ಗೋರಖ್ ನಾಥ್:ಭಾರತ ಪ್ರಸಿದ್ದ ಹಟಯೋಗಿಗಳಲ್ಲೊಬ್ಯ.ಕಾನ್ ಫಟ ಎಂಬ ಪಂಥದ ಸ್ಥಾಪಕ.ಈತನ ಹೆಸರು ಸಂಸ್ಕ್ರುತದ ಗೋರಕ್ಷನಾಥ ಎಂಬುದರ ಅಪಭ್ರಂಶವಾಗಿದೆ.ಈತನ ಕಾಲ ನಿಷ್ಕರ್ಷೆಯಾಗಿಲ್ಲ.ಏಳನೆಯಾ ಶತಮಾನದ ನೇಪಾಳಿ ರಾಜಮನೆತನಕ್ಕೆ ಸಂಬಂಧಪಟ್ಟವನೆಂದು ಒಂದು ಪ್ರತೀತಿ ಇದೆ.ಸು.೧೧೨೦ ಎಂದು ಹೇಳುವವರೂ ಇದ್ದರೆ.ಈತ ಮತ್ಸ್ಯೇಂದ್ರನಾಥನ ಶಿಷ್ಹ್ಯನೆಂದು ಹೆಳಲಾಗಿದೆ.ಗುರುವಿಗೆ ಒಮ್ಮೆ ಉಂಟಾದ ಅತೀವ ಸ್ತ್ರೀವ್ಯಾಮೋಹವನ್ನು ಈತ ಹೋಲಾಡಿಸಿ ಅಧಪತನದಿಂದ ಆತನನ್ನು ಪಾರುಮಾಡಿದನಂತೆ.ತನ್ನ ಪಂಥದ ಶಿಷ್ಯರನ್ನು ಗುರುತು ಹಚ್ಚುವ ಸಲುವಾಗಿ ಅವರ ಕಿವಿಗಳನ್ನು ಸೀಳುವ ಪದ್ದತಿಯನ್ನು ಈತ ಜಾರಿಗೆ ತಂದ.ಕಾನ್ ಫಟ ಎಂದರೆ ಕಿವಿ ಸೀಳಿದ ಯೋಗಿಗಳು ಎಂದು ಅರ್ಥ.ಸಿಳೀದ ಕಿವಿಗಳಲ್ಲಿವರು ದೊಡ ದೊಡ್ಡ ಕುಂಡಲಗಳನ್ನು ಧರಿಸುತ್ತಾರೆ.ಗೋರಖ್ ನಾಥ್ ಸಂಸ್ಕ್ರುತದಲ್ಲಿ ರಚಿಚಿರುವ ಹಟಯೋಗದಿಂದ ಪಡೆಯಬಹುದಾದ ದೇಹಶುದ್ದಿಗೆ ಗೋರಖ್ ನಾಥ ಹೆಚ್ಚು ಗಮನ ಕೊಟ್ಟಿದ್ದಾನೆ.ಆಸನ,ಶೋಧನ,ಪ್ರಾಣಾಯಾಮ,ಮುದ್ರಾ-ಇವುಗಳಿಂದ ಅನೇಕ ಸಿದ್ದಿಗಳನ್ನು ಪಡೆದು ಕಡೆಗೆ ಸಮಾಧಿಯನ್ನು ಹೊಂದಬಹುದೆಂದು ಈತನ ಅಭಿಮತ.ಈತ ದೇವಾಂಶಸಂಭೂತನೆಂದು ಇವನ ಪಂಥದವರು ನಂಬುತ್ತಾರೆ.ನೇಪಾಳದಲ್ಲಂತೂ ಇವನನ್ನು ಸಂರಕ್ಷಕ ದೇವತೆಯೆಂದು ಆರಾಧಿಸುತ್ತರೆ.ಉತ್ತರಭಾರತದಲ್ಲಿ ಇವನ ಹೆಸರಿನಲ್ಲಿ ಅನೇಕ ದೇವಸ್ಥಾನಗಳಿವೆ.ಇವನ ಮುಖ್ಯ ಮಂದಿರ ಗೋರಖ್ ನಾಥ ಎನ್ನುವ ಸ್ಥಳದಲ್ಲಿದೆ. ವೀರಶ್ಯವ ವಿಭೂತಿಗಳಾದ ಪ್ರಭುದೇವ,ರೇವಣಿಸಿದ್ದ,ಸಿದ್ದರಾಮರು,ಗೋರಖ್ ನಾಥನನ್ನು ಜಯಸಿದಂತೆ ತತ್ಸಂಬಂಧವಾದ ಪುರಾಣಗಳಲ್ಲಿ ಉಲ್ಲೇಖನವಿದೆ. ಸತ್ತಾಗ ಈ ಪಂಥದ ಯೋಗಿಗಳನ್ನು ಸುಡುವುದಿಲ್ಲ.ಪದ್ಮಾಸನದಲ್ಲಿ ಕೂಡಿಸಿ ಸಮಾಧಿ ಮಾದುತ್ತಾರೆ. ಈ ಪಂಥದವರಲ್ಲಿ ಅನೇಕ ವಾಮಾಚಾರಗಳು ಬಳಕೆಯಲ್ಲಿವೆ. ಗೋರಖ್ ಪುರ:ಉತ್ತರ ಪ್ರದೇಶದ ಒಂದು ಆಡಳಿತ ವಿಭಾಗ,ಜಿಲ್ಲೆ ಮತ್ತು ಅದರ ಮುಖ್ಯ ಪಟ್ಟಣ.ಗೋರಖ್ ಪುರ ವಿಭಾಗದಲ್ಲಿ ಗೋರಖ್ ಪುರ,ದೇವತೆಯ,ಬಸ್ತಿ ಮತ್ತು ಅಜಮ್ ಗಡ್ ಜಿಲ್ಲೆಗಳಿವೆ.ವಿಭಾಗದ ವಿಸ್ತೀರ್ಣ ೨೪೮೯೫ ಚ.ಕಿ.ಮೀ. ಜನಸಂಖ್ಯೆ ೧೧೫೪೯೧೮೦ ಜಿಲ್ಲೆ:ಗೋರಖ್ ಪುರ ಜಿಲ್ಲೆಯ ವಿಸ್ತೀರ್ಣ ೩೩೨೧ ಚ.ಕಿಮೀ.೪೪೩೬೨೭೫.ಉತ್ತರ ಪ್ರದೇಶದ ಈಶಾನ್ಯ ದಿಕ್ಕಿನಲ್ಲಿ ಹಿಮಾಲಯದ ದಕ್ಷಿಣದ