ಪುಟ:Mysore-University-Encyclopaedia-Vol-6-Part-12.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ಡಿನ್ಯಾ-ಗ್ಯಾಂಟನ ಕಾರ್ಯ ಮತ್ತು ಬೋನಸ್ ಪದ್ಧತಿ ಬೇಸಗೆಯಲ್ಲಿ ಇಲ್ಲಿ ಬಹಳ ಬಿಸಿಲು, ಚಳಿಗಾಲದಲ್ಲಿ ಬಹಳ ಚಳಿ. ಮಳೆ ಹೆಚ್ಚು. ಈ ಪ್ರದೇಶದ ಬೆಳೆಗಳಲ್ಲಿ ಮುಖ್ಯವಾದವು ಬತ್ತ, ಸೆಣಬು ಮತ್ತು ಎಣ್ಣೆಕಾಳುಗಳು.ಬ್ರಹ್ಮಪುತ್ರಾನದಿಯಲ್ಲಿ ಮೀನುಹಿಡಿಯುವುದು ಅನೇಕರ ವೃತ್ತಿ. ಗೌಹತಿ ನಗರ ರಾಜ್ಯದ ಮುಖ್ಯ ವಾಣಿಜ್ಯ ಕೇಂದ್ರ. ಇದಕ್ಕೆ ಭೂ. ಜಲ, ವಾಯು ಸಂಪರ್ಕವಿದೆ. ರಾಜ್ಯದ ಎಲ್ಲೆಡೆಗಳಿಗೂ ಇಲ್ಲಿಂದ ರಸ್ತೆಗಳುಂಟು. ಇದು ಪ್ರಮುಖ ವಿಮಾನನಿಲ್ದಾಣಗಳಲ್ಲೊಂದು. ಈಶಾನ್ಯ ಭಾರತದ ಇತರ ರಾಜ್ಯಗಳಾದ ನಾಗಾಲೆಂಡ್, ತ್ರಿಪುರ, ಮಣಿಪುರ, ಮಿಜೊರಾಂ ಮತ್ತು ಅರುಣಾಚಲ ಪ್ರದೇಶಗಳಿಗೆ ಹೋಗುವ ವಿಮಾನಗಳೆಲ್ಲವೂ ಗೌಹತಿಯ ಮೂಲಕವೇ ಹೋಗಬೇಕು. ಇದಕ್ಕೆ ಸಮೀಪದಲ್ಲಿ ನೂನ್ ಮತಿ ತ್ಯೆಲ ಶುದ್ಧಿಕರಣ ಕೇಂದ್ರವಿದೆ (ಗುವಾಹತಿ ರಿಫೈನರಿ). ಮಕ್ಕಳ ಹಾಲಿನ ಪುಡಿಯನ್ನು ಉತ್ಪಾದಿಸುವ ಕಾರ್ಖಾನೆಯೂ (ಅಮುಲ್) ಇಲ್ಲಿದೆ. ಗುವಾಹತಿ ಟೇ ಅಕ್ಷನ್ ಸೆಂಟರ್ ಪ್ರಪಂಚದಲ್ಲೇ ಅತಿದೊಡ್ಡ ಚಹಸೊಪ್ಪಿನ ಮಾರುಕಟ್ಟೆಗಳಲ್ಲೊಂದು. ಭಾರತದ ಪುರಾಣಪ್ರೋಕ್ತನವಾದ ನಗರಗಳಲ್ಲಿ ಗೌಹತಿಯೂ ಒಂದು. ಇದು ೪೦೦ರ ಸುಮಾರಿನಲ್ಲಿ ಕಾಮರೂಪ ರಾಜ್ಯದ ರಾಜಧಾನಿಯಾಗಿತ್ತೆಂದು ತಿಳಿದುಬರುತ್ತದೆ. ಆಗ ಇದಕ್ಕೆ ಪ್ರಾಗ್ ಜ್ಯೋತಿಪುರವೆಂದು ಹೆಸರಿತ್ತು. ೧೭ ನೆಯ ಶತಮಾನದಲ್ಲಿ ೫೦ ವರ್ಷಗಳ ಅವಧಿಯಲ್ಲಿ, ಎಂಟು ಸಾರಿ ಇದನ್ನು ಮುಸ್ಲಿಮರೂ ಆಹೋಂ ರಾಜ್ಯಪಾಲನ ಅಧಿಕಾರಸ್ಥಾನವೂ ೧೭೮೬ ರಲ್ಲಿ ಅಹೋಂ ದೊರೆಯ ರಾಜಧಾನಿಯೂ ಆಯಿತು. ೧೮೧೬ ಬರ್ಮೀಯರು ಇದನ್ನು ಆಕ್ರಮಿಸಿಕೊಂಡಿದ್ದರು. ೧೮೨೬ರಲ್ಲಿ ಅಸ್ಸಾಂ ಬ್ರಿಟಿಷರ ವಶವಾದಾಗ ಇದು ಅಸ್ಸಾಮಿನ ಆಡಳಿತಕೇಂದ್ರವಾಯಿತು. ಮೇಘಾಲಯ ರಾಜ್ಯ ಸ್ಥಾಪನೆಯಾದ ಮೇಲೆ ಅಸ್ಸಾಂ ಮೇಘಾಲಯಗಳೆರಡಕ್ಕೂ ಷಿಲಾಂಗೇ ರಾಜಧಾನಿಯಾಗಿತ್ತು. ೧೮೯೭ ರಲ್ಲಿ ಭೂಕಂಪದಿಂದಾಗಿ ಈ ನಗರ ನಾಶವಾಗಿತ್ತು. ಇದನ್ನು ಪುನರ್ ನಿರ್ಮಿಸಲಾಗಿದೆ. ಗ್ಡಿನ್ಯಾ : ಪೋಲೆಂಡಿನ ಒಂದು ನಗರ, ರೇವುಪಟ್ಟಣ. ಗ್ಡನ್ಸ್ಕ್ ಪ್ರಾಂತ್ಯದಲ್ಲಿ, ಡ್ಯಾನ್ಸಿಗ್ ಖಾರಿಯಲ್ಲಿ, ಡ್ಯಾನ್ಸಿಗೆ ೧೬ ಕಿಮೀ ದೂರದಲ್ಲಿದೆ. ಜನಸಂಖ್ಯೆ ೨,೪೭,೩೨೪(೨೦೧೦). ೧೯೧೯ ರ ವರ್ಸೇಲ್ಸ್ ಕೌಲಿನ ಪ್ರಕಾರ ಪೋಲೆಂಡಿಗೆ ಹಿಂದಿರುಗಿಸಲಾದ ಬಾಲ್ಟಿಕ್ ಕರಾವಳಿಯ ಪ್ರಮುಖ ರೇವುಪಟ್ಟಣವಾಯಿತು. ಎರಡನೆಯ ಮಹಾಯುದ್ಧ ಕಾಲದಲ್ಲಿ ಜರ್ಮನರು ಇದನ್ನು ಅಕ್ರಮಿಸಿಕೊಂಡರು. ಇದರ ಹೆಸರು ಗೋಟೆನ್ ಹ್ಯಾಫೆನ್ ಎಂದು ಬದಲಾವಣೆಗೊಂಡಿತು. ಹಲವು ಪೋಲಿಷರು ಕೊಲೆಗೆ ಈಡಾದರು. ಅನೇಕರು ದೇಶಭ್ರಷ್ಟರಾದರು. ಅವರ ಆಸ್ತಿಯನ್ನು ಜರ್ಮನರು ವಶಪಡಿಸಿಕೊಂಡರು. ಜರ್ಮನರು ಸೋತು ಹಿನ್ನಡೆಯುತ್ತಿದ್ದಾಗ ಬಂದರನ್ನು ಬಹುತೇಕ ನಾಶಗೊಳಿಸಿದ್ದರು. ಯುದ್ಧಾನಂತರ ಕಾಲದಲ್ಲಿ ಬಂದರು ಸ್ಥಾವರಗಳು ಮತ್ತೆ ನಿರ್ಮಿತವಾದುವು. ಈಗ ಇದು ಡ್ಯಾನ್ಸಿಗ್ ಮತ್ತು ಸಾಪಾಟ್ ಗಳೊಂದಿಗೆ ಒಂದು ಬಂದರಾಗಿದೆ. ಇದು ಪೋಲಿಷ್ ನೌಕಾನೆಲೆ, ಪ್ರಯಾಣಿಕ ಹಡಗು ಬಂದರು. ಕಲ್ಲಿದ್ದಲು, ನಾಟಾ, ಸಕ್ಕರೆ ರಫ್ತಾಗುತ್ತದೆ. ಕಬ್ಬಿಣ, ಆದಿರು, ಗೊಬ್ಬರ, ಆಹಾರಪದಾರ್ಥ ಇವು ಆಮದುಗಳು. ರಾಜ್ಯ ನೌಕಾಶಾಲೆ, ಸಾಗರಿಕ ಮೀನುಗಾರಿಕ ತಾಂತ್ರಿಕ ಕಾಲೇಜು, ಸಮುದ್ರ ಮೀನುಗಾರಿಕೆ ಸಂಸ್ಥೆ, ನೌಕಾ ವಸ್ತುಸಂಗ್ರಹಶಾಲೆ - ಇವು ಇಲ್ಲಿಯ ಮುಖ್ಯ ಸಂಸ್ಥೆಗಳು. ಇಲ್ಲೊಂದು ನಾಟ್ಯಶಾಲೆಯೂ ಇದೆ. ಗ್ಯಾಂಗ್ : ಲೋಹಮಿಶ್ರಿತ ಆದಿರು ನಿಕ್ಷೇಪಗಳಿಗೆ ಸಂಬಂಧಿಸಿದಂಥ ಬೆಲೆಯಿಲ್ಲದ ಖನಿಜಗಳ ಹೆಸರು. ನಿಕ್ಷೇಪಗಳು ಯಾವ ರೀತಿ ಉತ್ಪತ್ತಿಯಾಗಿದ್ದರೂ ಕೆಲವು ಅನುಪಯುಕ್ತ ವಸ್ತುಗಳು ಅವುಗಳೊಡನೆ ಲೋಹೇತರ ಖನಿಜಗಳೂ ಶಿಲಾಚೂರುಗಳೂ ಕೂಡಿರುವುದಿಲ್ಲದೆ ಕೆಲವು ಸಂದರ್ಭದಲ್ಲಿ ಅನುಪಯುಕ್ತ ಖನಿಜಗಳೂ ಇರುವುದುಂಟು. ಇವೇ ಗ್ಯಾಂಗ್ ರೂಪದಲ್ಲಿ ದೊರೆತು ಅದಿರಿನ ಬೆಲೆಯನ್ನು ಹೆಚ್ಚಿಸುವುದೂ ಉಂಟು. ಗ್ಯಾಂಗಿನಲ್ಲಿರುವ ಬೆಲೆಬಾಳುವ ಪದಾರ್ಥಗಳನ್ನು ಉಪಪದಾರ್ಥಗಳನ್ನಾಗಿ ಬೇರ್ಪಡಿಸಬಹುದು. ಆಗ ಗ್ಯಾಂಗಿನಲ್ಲಿರುವ ಬೆಲೆಬಾಳುವ ಪದಾರ್ಥಗಳ ದೆಸೆಯಿಂದ ಕೆಳದರ್ಜೆಯ ಅದಿರನ್ನು ಕೂಡ ಗಣಿಗಾರಿಕೆಯಿಂದ ತೆಗೆಯಬಹುದು. ಸಾಮಾನ್ಯವಾಗಿ ಖನಿಜ ಸಂಸ್ಕರಣ ನಡೆಯುವಾಗ ಈ ಅನುಪಯುಕ್ತ ವಸ್ತುಗಳನ್ನು ಬೇರ್ಪಡಿಸುತ್ತಾರೆ. ಉದಾಹರಣೆಗೆ ಕೋಲಾರದ ಚಿನ್ನದ ಗಣಿಯಲ್ಲಿ ಚಿನ್ನದ ಜೊತೆಯಲ್ಲಿ ಬೆಳ್ಳಿಯನ್ನೂ ಉಪಪದಾರ್ಥವಾಗಿ ಶೇಖರಿಸುತ್ತಾರೆ. ಗ್ಯಾಂಗ್ಟ್ ಸೆ : ಮಧ್ಯ ಟಿಬೆಟಿನ ಒಂದು ಪಟ್ಟಣ. ನ್ಯಾಂಗ್ ಚು ನದಿಯ ದಂಡೆಯ ಮೇಲೆ ಇವೆ. ಜನಸಂಖ್ಯೆ ಸು. ೬೨,೦೦೦ (೨೦೧೨). ಗಿರಿಯೇಣೊಂದರ (೪೦೦೦ ಮೀ, ೧೩,೧೨೫') ಮೇಲೆ ನಿರ್ಮಿತವಾದ ಈ ನಗರದ ಎರಡು ಮುಖ್ಯ ಕಟ್ಟಡಗಳಲ್ಲಿ ಒಂದು ಇಲ್ಲಿಯ ಕೋಟೆ. ಅದು ಈಗ ಸ್ಥಳೀಯ ನ್ಯಾಯಾಲಯ. ಇನ್ನೊಂದು, ಲಾಮಗಳ ಮಠವಾಗಿದ್ದ ಕಟ್ಟಡ. ೧೯೫೪ ರ ಪ್ರವಾಹದಲ್ಲಿ ಈ ನಗರ ಬಹುತೇಕ ನಾಶವಾಗಿತ್ತು. ಈಗ ಇದನ್ನು ಮತ್ತೆ ನಿರ್ಮಿಸಲಾಗಿದೆ. ಗ್ಯಾಂಗ್ಟ್ ಸೆ ಒಂದು ವ್ಯಾಪಾರ ಕೇಂದ್ರ. ಲಾಸ, ಷಿಗಾಟ್ಸೆ, ಯೂಟುಂಗ್ ಗಳಿಗೆ ಇಲ್ಲಿಂದ ಹೆದ್ದಾರಿಯುಂಟು. ಉಣ್ಣೆ. ತುಪ್ಪುಳ, ಕಸ್ತೂರಿ, ಬೆಣ್ಣೆ, ಬಾರ್ಲಿ, ಚಹ, ಹೊಗೆಸೊಪ್ಪು, ಸಕ್ಕರೆ , ಹತ್ತಿ, ಜವಳಿ, ಒಣಗಿದ ಹಣ್ಣು, ಕಬ್ಬಿಣ ಸಾಮಾನು, ಮರದ ಬೋಗುಣೆ, ಅಕ್ಕಿ, ಮುಂತಾದ ಸರಕುಗಳು ಇಲ್ಲಿಗೆ ಬರುತ್ತವೆ. ಗ್ಯಾಂಟನ ಕಾರ್ಯ ಮತ್ತು ಬೋನಸ್ ಪದ್ಧತಿ : ವೈಜ್ಜಾನಿಕ ವ್ಯವಸ್ಥಾಪನೆಯ ಪಿತನೆನಿಸಿದ ಫ್ರೆಡರಿಕ್ ಟೇಲರನೊಂದಿಗೆ ಕೆಲಸ ಮಾಡುತ್ತಿದ್ದ ಹೆನ್ರಿ ಎಲ್ ಗ್ಯಾಂಟ್ ಎಂಬವನು ರೂಪಿಸಿದ ಕೂಲಿ ಪಾವತಿ ಪದ್ಧತಿ (ಗ್ಯಾಂಟ್ ಟಾಸ್ಕ್ ಅಂಡ್ ಬೋನಸ್ ಸಿಸ್ಟಮ್). ಒಂದು ಕಾರ್ಖಾನೆಯಲ್ಲಿಯ ಕೆಲಸದ ಸ್ವರೂಪ ಮತ್ತು ಪರಿಸ್ಥಿತಿಯಲ್ಲಿ ಒಬ್ಬ ಪ್ರಸಾಮಾನ್ಯ ಕಾರ್ಮಿಕನ ಸಾಮರ್ಥ್ಯ ಎಷ್ಟಿರುತ್ತದೆಂಬುದನ್ನು ನಿರ್ಧರಿಸಲಾಗುತ್ತದೆ. ಇದರ ಆಧಾರದ ಮೇಲೆ ಒಂದು ನಿಗದಿಯಾದ ಸಮಯದಲ್ಲಿ ನಿರ್ದಿಷ್ಟವಾದ ಕಾರ್ಯವನ್ನು ಮಾಡಲಾಗುತ್ತದೆ. ಒಬ್ಬ ಕಾರ್ಮಿಕ ಆ ಕಾರ್ಯವನ್ನು ಆ ಸಮಯದಲ್ಲಿ ಮುಗಿಸಿದ ಪಕ್ಷದಲ್ಲಿ ಅವನಿಗೆ ಅವನ ಕೂಲಿಯ ಜೊತೆಗೆ ಆ ಕಾರ್ಯಕ್ಕೆ ಗೊತ್ತುಮಾಡಲಾದ ಶಿಷ್ಟ ಸಮಯದ (ಸ್ಪಾಂಡರ್ಡ್ ಟೈಂ) ಶೇ.