ಪುಟ:Mysore-University-Encyclopaedia-Vol-6-Part-13.pdf/೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ಯಾಬಾನ್ ೬೨೧ ಹೆಚ್ಚು. ಇಡೀ ರಾಜ್ಯ ನಿತ್ಯಹಸುರಿನ ಕಾಡುಗಳಿಂದ ಕೂಡಿದೆ. ಸುಮಾರು ೩,೦೦೦ ಜಾತಿಗಳ ಮರಗಳು ಇಲ್ಲಿವೆ. ಓಕೌಮೆ ಅಥವಾ ಗ್ಯಾಬಾನ್ ಮಹಾಗನಿ ವಾಣಿಜ್ಯ ಮೌಲಯವುಳ‍್ಳದ್ದು. ಕರಾವಲ್ಲಿ ಗುಲ್ಮವೃಕ್ಷಗಳು ಅಧಿಕ.ಕೆಳ ಓಗೊವೇ ಪ್ರದೇಶದ ಸರೋವರದಲ್ಲಿ ಪಪೈರಸ್ ಸಾಮಾನ್ಯ. ಬಗೆಬಗೆಯ ಕೋತಿಗಳು, ಗೊರಿಲ, ಜಿಂಕೆ,ಕಾಡುಕೋಣ, ನೀರುಕುದುರೆ ಇವು ಇಲ್ಲಿಯ ವನ್ಯಮೃಗಗಳು.

ಜನಜೀವನ: ಗ್ಯಾಬಾನಿನಲ್ಲಿ ಸು.೧೦,೦೦೦ ಮಂದಿ ಐರೋಪ್ಯರಿದ್ದಾರೆ. ಬೇಟೆ, ಆಹಾರ ಸಂಗ್ರಹ - ಇವು ಇವರ ಜೀವನೋಪಾಯ. ಇಲ್ಲಿಯ ಜನರಲ್ಲಿ ತುಂಬ ಮುಂದುವರಿದವರಾದ ಮ್ವಾಂಗ್ವೇಗಳು ವಶೇಷವಾಗಿ ಕರಾವಳಿಯಲ್ಲಿ ವಾಸಿಸುತ್ತಾರೆ. ಇವರು ಫಾಂಗ್ ಜನರೊಂದಿಗೆ ಭಾಗಶಃ ಬೆರೆತಿದ್ದಾರೆ. ಈಶಾನ್ಯದಲ್ಲಿ ಬಕೋಟ ಮುಂತಾದ ತಂಡಗಳುಂಟು. ಈ ಜನ ಕ್ಯಾಮರೂನಿನ ಗುಂಪುಗಳಿಡನೆ ಸಂಬಂಧ ಹೊಂದಿದ್ದಾರೆ. ಮಧ್ಯಭಾಗದಲ್ಲಿ ಕಾಂಡ ಜನರಿದ್ದಾರೆ.ಇಲ್ಲಿಯ ಜನ ಮೂಲತಃ ಸರ್ವಚೇತನವಾದಿಗಳು. ಈಚೆಗೆ ಇಲ್ಲಿ ಕ್ರೈಸ್ತಮತ ಪ್ರಚಾರಕ್ಕೆ ಬಂದಿದೆ. ನೆಲದ ಒಡೆತನ ಸಮೂಹಿಕವಾಗಿದ್ದು, ಗುಂಪುಗಳ ಯಜಮಾನರು ಅದನ್ನು ನಿರ್ವಹಿಸುತ್ತಾರೆ. ಕಾಡುಗಳನ್ನು ಸುಟ್ಟು ಕೃಷಿ ಮಾಡುವ ಪದ್ಧತಿ ಇದೆ. ಉತ್ತರದ ಜನ ಫಾಂಗ್ ಭಾಷೆ ಆಡುತ್ತಾರೆ. ಉಳಿದೆಡೆಗಳಲ್ಲಿ ಬಾಂಟು ಉಪಭಾಷೆಗಳು ಬಳಕೆಯಲ್ಲಿವೆ. ಫ್ರೆಂಚ್ ಅಧಿಕೃತ ಭಾಷೆಯಾಗಿ ಸ್ವೀಕೃತವಾಗಿದೆ. ಅದೇ ಸದ್ಯಕ್ಕೆ ಶಿಕ್ಷಣ ಮಾಧ್ಯಮ.

ಆರ್ಥಿಕ ಪರಿಸ್ಥಿತಿ: ಕೃ‍‍‍‍‍‍‍ಷಿ ಇಲ್ಲಿಯ ಜನರ ಮುಖ್ಯ ಜೀವನೋಪಾಯ. ಬಾಳೆ, ಮರಗೆಣಸು, ಕೆಸವು ಮುಖ್ಯ ಉತ್ಪನ್ನಗಳು. ಸಮುದ್ರತೀರದಲ್ಲಿ ಮೀನುಗಾರಿಕೆಯೂ ಒಂದು ಮುಖ್ಯ ಕಸುಬು. ರಬ್ಬರ್, ಕೋಕೋ - ಇವು ಇತರ ಬೆಳೆಗಳು. ತಾಳ್ಳೆ ಎಣ್ಣೆ, ದಂತ, ಮರ ಇವು ಅರಣ್ಯೋತ್ಪನ್ನಗಳು. ಪೋರ್ಟ್-ಜೆಂಟಿಲಿನಲ್ಲಿ ಪದರ ಹಲಗೆ(ಪ್ಲೈವುಡ್) ಕಾರ್ಖಾನೆಯುಂಟು. ಚಿನ್ನ, ವಜ್ರ, ಕಲ್ಲು, ಪೊಟಾಷ್ ಇಲ್ಲಿಯ ಮುಖ್ಯ ಖನಿಜಗಳು. ಲೋಪೆಜ್ ಭೂಶಿರ ಭಾಗದಲ್ಲಿ ಪೆಟ್ರೋಲಿಯಂ ಸಿಗುತ್ತದೆ.ಫ್ರಾನ್ಸ್-ವೀಲ್ ಬಳಿ ಮ್ಯಾಂಗನೀಸ್ ನಿಕ್ಷೇಪಗಳಿವೆ. ಈಶಾನ್ಯದಲ್ಲಿರುವ ಮೆಕಾಂಬೊದಲ್ಲೂ ನೈರುತ್ಯದ ಟ್ವೆಬಾಂಗದಲ್ಲೂ ಕಬ್ಬಿಣ ಅದುರು ಉಂಟು. ಫ್ರಾನ್ಸ್-ವೀಲ್ ಬಳಿ ಮೌನಾನದಲ್ಲಿ ಯುರೇನಿಯಂ ಸಿಗುತ್ತದೆ.

         ಗ್ಯಾಬಾನ್ ರಾಜ್ಯದ ಮುಖ್ಯ ಆಮದುಗಳು ಆಹಾರ ಮತ್ತು ಯಂತ್ರೋಪಕರಣ. ರಫ್ತುಗಳು ಚೌಬೀನೆ, ಮ್ಯಾಂಗನೀಸ್, ಯುರೇನಿಯಂ, ಕಚ್ಚಾತೈಲ, ಪೆಟ್ರೋಲಿಯಂ, ತಾಳೆ ಎಣ್ಣೆ. ಪೋರ್ಟ್ - ಜೆಂಟಿಲ್ ಮುಖ್ಯ ರೇವು ಮತ್ತು ಕೈಗಾರಿಕಾ ಕೇಂದ್ರ ನಡ್ಜೊಲೇ, ಮೌಯಿಲ, ಫ್ರಾನ್ಸ್-ವೀಲ್ ಮತ್ತು ಲಂಬಾರೇನೇ - ಇವು ಇತರ ಪಟ್ಟಣಗಳು. ಲಂಬಾರೇನೇಯಲ್ಲಿ ಆಲ್ಬರ್ಟ್ ಷ್ವೀಟ್ಜ್ಜ಼ರ್ ೧೯೧೩ರಲ್ಲಿ ಆಸ್ಪತ್ರೆ ಸ್ಥಾಪಿಸಿದ್ದರು.

ಇತಿಹಾಸ: ಗ್ಯಾಬಾನಿನಲ್ಲಿ ಹಳೆ ಶಿಲಾಯುಗಗಳ ಉಪಕರಣಗಳು ಸಿಕ್ಕಿವೆ. ಪ್ರಾರಂಭದಲ್ಲಿ ಮ್ಯೆನೇ ಭಾಷಾಗುಂಪಿನ ಜನ ಓಗೊವೇ ನದೀಬಯಲು ಮತ್ತು ಸಾಗರತೀರದಲ್ಲಿ ಜೀವಿಸುತ್ತಿದ್ದರು. ಕಾಲಕ್ರಮದಲ್ಲಿ ಇತರ ಬಣಗಳು ಈ ಭಾಗ್ಯಕ್ಕೆ ಬಂದುವು. ೧೯ನೆಯ ಶತಮಾನದ ಹೊತ್ತಿಗೆ ಮ್ಪಾಂಗ್ವೇ, ಮಿಟ್ಷೂಗೊ - ಓಕಂಡೆ, ಬಪುನ ಎಷಿರ, ಮ್ಬೇಡೆಆಡುಮ - ಟೇಕೇ, ಫ್ಯಾಂಗ್ ಮತ್ತು ಬಕೇಲೇ ಬಣಗಳು ನೆಲೆಸಿದುವು

            ಪೋರ್ಚುಗೀಸ್ ನಾವಿಕರು ಸು.೧೪೭೨ರಲ್ಲಿ ಗ್ಯಾಬಾನ್ ಪಶ್ಚಿಮ ತೀರದ ಆಳಿವೆಯನ್ನು ಕಂಡುಹಿಡಿದು ಅದಕ್ಕೆ ಗ್ಯಾಬಾನ್ ಎಂದು ಹೆಸರಿಟ್ಟರು. ತರುವಾಯ ಲೋಪೊ ಗಾನ್-ಸಾಲ್ವಿಸ್ ಎಂಬ ನಾವಿಕ ಲೋಪೆಜ್ ಭೂಶಿರವನ್ನು ಬಳಸಿದ. ೧೪೭೫ರಲ್ಲಿ ರ್ಯಡಿ ಸೆಕ್ವೇರ ೧೬೦ ಕಿಮೀ ದಕ್ಷಿಣಕ್ಕಿರುವ ಸೇಂಟ್ ಕ್ಯಾದರೀನ್ ಭೂಶಿರವನ್ನು ಮುಟ್ಟಿದ. ೧೭ನೇ ಶತಮಾನದಲ್ಲಿ ಡಚ್ಚರು ಕೊರಿಸ್ಕೊ ದ್ವೀಪದಲ್ಲಿ ನೆಲಸಿ ಅಲ್ಲಿಂದ ಗ್ಯಾಬಾನ್ ತೀರ ಅಳಿವೆಯನ್ನು ಸೂರೆ ಮಾಡಿದರು. ಇಂಗ್ಲಿಷರೂ ಫ್ರೆಂಚರೂ ವ್ಯಾಪಾರದಲ್ಲಿ ಪೈಪೋಟಿ ನಡೆಸಿದರೂ ಗ್ಯಾಬಾನಿನ ಸರಕುಗಳನ್ನು ಪೋರ್ಚುಗೀಸರೇ ಹೆಚ್ಚಾಗಿ ಕೊಂಡು ವ್ಯಾಪಾರವನ್ನು ನಿಯಂತ್ರಿಸಿದ್ದರು. ೧೮೧೫ರಲ್ಲಿ ಗುಲಾಮ ಮಾರಾಟವನ್ನು ಹೆಸರಿಗೆ ಮಾತ್ರ ರದ್ದು ಮಾಡಲಾಯಿತು. ೧೮೮೦ ರವರೆಗೆ ಇದು ನಡೆಯುತ್ತಲೇ ಇತ್ತು. ಮ್ಪಾಂಗ್ವೇ,ಓರುಂಗು ಮತ್ತು ಗ್ಯಾಲೋ ಬುಡಕಟ್ಟಿನ ವ್ಯಾಪಾರಿಗಳು ತಮ್ಮ ಬಣಗಳ ಜನರನ್ನು ಹಿಡಿದು ದೋಣಿಗಳಲ್ಲಿ ಸಾಗಿಸಿ ಸಾಗರತೀರದಲ್ಲಿ ಗುಲಾಮರನ್ನಾಗಿ ಮಾರುತ್ತಿದ್ದರು. ಅಲ್ಲಿಂದ ಇವರನ್ನು ಹಡಗುಗಳಲ್ಲಿ ವಿದೇಶಗಳಿಗೆ ಸಾಗಿಸಲಾಗುತ್ತಿತ್ತು. ೧೮೩೯ರಲ್ಲಿ ಕ್ಯಾಪ್ಟನ್ ಎಲ್.ಇ. ಬಾಯೆಟ್ - ವಿಲಿಯಂಮೆಜ಼್ ಗುಲಾಮ ವ್ಯಾಪಾರವನ್ನು ತಡೆಯುವ ಕೆಲಸಕ್ಕೆ ನೇಮಿತನಾಗಿ ಗ್ಯಾಬಾನ್ ಅಳಿವೆಯ ಬಲದಂಡೆಯನ್ನುಬಣದ ನಾಯಕನೊಡನೆ ಒಪ್ಪಂದ ಮಾಡಿಕೊಂಡ; ಇನ್ನೊಬ್ಬ ನಾಯಕನಿಮದ ಎಡದಂಡೆಯ ಪಡೆದುಕೊಂಡು ಅಲ್ಲಿ ೧೮೪೩ ರಲ್ಲಿ ಕೋಟೆಯೊಂದನ್ನು ಕಟ್ಟಿದ. ೧೮೪೨-೪೪ರ ಅವಧಿಯಲ್ಲಿ ಕ್ರೈಸ್ತ ಪಾದ್ರಿಗಳು ಅಲ್ಲಿ ನೆಲಸಿ ಕ್ರೈಸ್ತಧರ್ಮ ಪ್ರಚಾರ ಮಾಡತೊಡಗಿದರು. ೧೮೪೮ರಲ್ಲಿ ಈ ನೆಲೆ, ಕ್ಯಾಪ್ಟನ್ ಬಾಯಿಟ್ ವಿಲಿಯಂಮೆಜ಼್ ಸ್ಥಾಪಿಸಿದ ಫ್ರೆಂಚ್ ಕೋಟೆ ಇವೆರಡನ್ನೂ ಸೇರಿಸಿ ಲೀಬ್ರವೀಲ್ ಎಂಬ ಹೆಸರಿಡಲಾಯಿತು. 
    ೧೮೮೬ರಲ್ಲಿ ಗ್ಯಾಬಾನಿಗೆ ಫ್ರೆಂಚ್ ಗವರ್ನರೊಬ್ಬ ನೇಮಕನಾದ. ಆಗ ಇದು ಫ್ರಂಚ್ ಕಾಂಗೋಗೆ ಸೇರಿತ್ತು (೧೮೮೯-೧೯೦೪). ತರುವಾಯ ಇದು ಆಫ್ರಿಕ ಸಮಭಾಜಕವೃತ್ತೀಯ ಫ್ರೆಂಚ್ ಪ್ರಾಂತವಾಯಿತು. ಗ್ಯಾಬಾನ್ ಮತ್ತು ಕ್ಯಾಮರೂನ್ ನಡುವಣ ಗಡಿಯನ್ನು ೧೮೮೫ ರಲ್ಲಿ ನಿರ್ಧರಿಸಲಾಯಿತು.ಸ್ಪ್ಯಾನಿಷ್ ಗಿನಿಯ ಕಡೆಯ ಗಡಿಯನ್ನು ೧೯೦೦ ರಲ್ಲಿ ಖಚಿತಗೊಳಿಸಲಾಯಿತು.