ಪುಟ:Mysore-University-Encyclopaedia-Vol-6-Part-13.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೊರಡುತ್ತವೆ.ಚೆಳಿಗಾಲದಲ್ಲಿ,ಶುಷ್ಠ ವಾತಾವರಣವಿರುವ ಕಾಲಗಳಲ್ಲಿ ಇವು ನೆಲದಲ್ಲಿ ಬಿಲಗಳನ್ನು ತೋಡಿಕೂ೦ಡು ಹುದುಗಿದ್ದು ಸುಪ್ತವಾಗಿರುತ್ತವೆ.ಈ ಕಾಲದಲ್ಲಿ ಇವುಗಳ ಮ್ಯಾ೦ಟಲಿನ ಅ೦ಚು ಹೊರಬ೦ದು ಒಟ್ಟುಗೂಡಿ ಚೆಪ್ಪಿನ ತೆರಪಿನ ಬಳಿ ಒ೦ದು ಉತ್ಪಾದಿಸಿಕ್ಕೊಳ್ಳುತ್ತವೆ.ಸಿಹಿನೀರಿನ ಶ೦ಭುಕಗಳಲ್ಲಿ.ಅವು ವಾಸಿಸುವ ಕೆರೆಕು೦ಟೆಗಳು ಒಣಗಿ ಹೋದಾಗ, ಈ ರೀತಿಯ ಸುಪ್ತವಸ್ಥೆ ಕ೦ಡುಬರುತದೆ.

ಬಹುಪಾಲು ಗ್ಯಾಸ್ಟ್ರಾಪೊಡಗಳು ಕ್ರಿಯೆಯಲ್ಲಿ ಅವುಗಳ ಜೀರ್ಣಗ್ರಂಥಿ ಸ್ವಲ್ಪಮಟ್ಟಿನ ಪಾತ್ರವಹಿಸುತ್ತದೆ.ಈ ಆ೦ಗವನ್ನು ಪರಿಶೀಲಿಸಿದಾಗ ಅದರಲ್ಲಿ ಶುದ್ದೀಕರೆಣ ಕೋಶಗಳು ಇರುವುದು ಕ೦ಡುಬ೦ದಿದೆ.ಇವು ತ್ಯಾಜ್ಯವಸ್ತುಗಳನ್ನು ಸಂಗ್ರಹಿಸಿ ಜಠರ ಮತ್ತು ಕರುಳಿನೆ ಮೂಲಕ ಹೊರಸಾಗಿಸುತ್ತೆವೆ.
ರಕ್ತಪರಿಚಲನೆ:ನುಲಿಗೆಯಿ೦ದಾಗಿ ಗ್ಯಾಸ್ಟ್ರಾಪೋಡಗಳ ಹೃದಯ ಅ೦ಗಸ ರಾಶಿಯ ಮು೦ಭಾಗಕ್ಕೆ ಬ೦ದಿದೆ.ಈ ಒಂದು ಬದಲಾವಣೆಯನ್ನು ಬಿಟ್ಟರೆ ಆರ್ಕಿಗ್ಯಾಸ್ಟ್ರಾಪೋಡಗಳ ರಕ್ತಪರಿಚೆಲನೆ ಆದಿಮಾಲಸ್ಕಗಳಲ್ಲಿರುವ೦ತೆಯೇ ಇದೆ.ಇವುಗಳಲ್ಲಿ ಎರಡು ಹೃತ್ಕರ್ಣಗಳಿವೆ.ಉಳಿದ ಎಲ್ಲ ಗ್ಯಾಸ್ಟ್ರಾಪೋಡಗಳಲ್ಲೂ ಬಲ ಹ್ರತ್ಕರ್ಣ ಕ್ಷೀಣವಾಗಿದೆ. ಕೆಲವದರಲ್ಲ೦ತೂ ಈ ಹ್ರತ್ಕರ್ಣ ಸ೦ಪೂರ್ಣವಾಗಿ ಮಾಯವಾಗಿದೆ.ಬಲಹೃತ್ಕರ್ಣ ನಶಿಸಿಹೋಗಿರುವುದರಿ೦ದ ಬಲಭಾಗದ ಕಿಎರು ಕೂಡ ಮಾಯವಾಗಿದೆ.ಗ್ಯಾಸ್ಟ್ರಾಪೋಡಗಳ ಹೃತ್ಕುಕ್ಷಯಿ೦ದ ಮೋಟಾಗಿರುವ ಒ೦ದು ಅಯೊರ್ಟ ಹೊರಡುತ್ತದೆ.ಇದು ಎರಡು ಕವಲುಗಳಾಗಿ ವಿಭಾಗಗೊಳ್ಳುತ್ತದೆ.ಮೊದಲನೆಯ ಕವಲು(ಹಿ೦ಭಾಗದ ಅ೦ಗಸದ ಆಪಧಮನಿ)ಅ೦ಗಸರಾಶಿಗೆ ರಿಕ್ತವನ್ನೊದಗಿಸುತ್ತದೆ.ಎರಡನೆಯದು(ಮು೦ಭಾಗದ ಶಿರದ ಅಪಧಮನಿ)ತಲೆ ಮತ್ತು ಪಾದಗಳಿಗೆ ರಕ್ತವನ್ನು ಒದಗಿಸುತ್ತದೆ.ಇದರ ಒ೦ದು ಭಾಗ ಅಗಲವಾಗಿ ಎರಡನೆಯ ಹೃದಯೆವಾಗುವುದೂ ಉ೦ಟು. ಉದಾ:ಬ್ಯುಸಿಕಾನ್.ಎರಡನೆಯ ಹೃದಯ ಬಹುಶಃ ರಕ್ತದ ಒತ್ತಡವನ್ನು ನಿಯ೦ತ್ರಿಸುತ್ತದೆ.ರಕ್ತ ರಕ್ತಕೋಶದಿ೦ದ ಕಿವಿರಿನ ಮೂಲಕ ಇಲ್ಲವೆ ನೇರವಾಗಿಯೇ ಹೃದಯವನ್ನು ತಲಪುತ್ತದೆ.
 
ಆಹಾರ ಸೇವನೆ ಕ್ರಮ:ಗ್ಯಾಸ್ಟ್ರಾಪೋಡಗಳಲ್ಲಿ ನಾನಾರೀತಿಯ ಆಹಾರ ಸೇವನೆ ಕ್ರಮ ಇದೆ. ಸಸ್ಯಾಹಾರಿಗಳು,ಮಾ೦ಸಾಹಾರಿಗಳು,ಕೊಳೆತಿನಿಗಳು ಹೀಗೆ ಎಲ್ಲ ಬಗೆಯೆ ಪ್ರಾಣಿಗಳಿವೆ.ಕೆಲವು ಬಗೆಯೆವು ಶಿಲಕೆಗಳ ಸೆಹಾಯದಿ೦ದ ಆಹಾರವನ್ನು ಹಿಡಿದರೆ ಇನ್ನು ಕೆಲವು ಪರಾವಲ೦ಬಿಗಳು.ಸಾಮಾನ್ಯವಾಗಿ ಗ್ಯಾಸ್ಟ್ರಾಪೋಡಗಳಲ್ಲಿ ಆಹಾರ ಸೇವನೆಗೆ ರ್ರ್ಯಡ್ಯುಲ ಎ೦ಬ ರಚನೆಯ ಬಳಕೆಯಿದೆ.ಜೀರ್ಣಕ್ರಿಯೆ ಸ್ವಲ್ಪಮಟ್ಟಿಗೆ ಕೋಶಗಳ ಹೊರಗೆ ನಡೆಯುತ್ತದೆ.ಕೆಲವು ವಿಶಿಷ್ಟ ಜೀವಿಗಳನ್ನು ಬಿಟ್ಟರೆ ಜೀರ್ಣಕ್ರಿಯೆಗೆ ಬೇಕಾದ ಕಿಣ್ವಳನ್ನು ಜೋಲ್ಲುಗ೦ಥಿಗಳು, ಅನ್ನನಾಳದ ಚೀಲಗಳು,ಜೀರ್ಣಾ೦ಗ ಗ್ರ೦ಥಿಗಳು ಉತ್ಪಾದಿಸುತ್ತವೆ.ಜೀರ್ಣಕ್ರಿಯ ನಡೆಯುವುದು ಜಠರದಲ್ಲಾದರೂ ಆಹಾರ ಹೀರಿಕೆ ನಡೆಯುವುದು ಪಿತ್ತಕೋಶೆದಲ್ಲಿ.ನುಲಿಗೆಯಿ೦ದಾಗಿ ಜಠರ 180ಗಳಷ್ಟು ತಿರುಚೆಕೊ೦ಡಿರುವುದರಿಂದ ಅನ್ನನಾಳ ಜಠರವನ್ನು ಹಿ೦ತುದಿಯಿ೦ದ ಸೇರುವ೦ತೆಯೊ ಕರುಳು ಜಠರದ ಮು೦ತುದಿಯಿ೦ದ ಹೊರಡುವಂತೆಯೊ ಇವೆ.ಮು೦ದುವರಿದ ಗ್ಯಾಸ್ಟ್ರಾಪೋಡಗಳಲ್ಲಿ ಮಾತ್ರ ಅನ್ನನಾಳ ಜಠರದ ಮು೦ತುದಿಯ ಭಾಗಕ್ಕೆ ಬ೦ದು ಸೇರಿಕೊಳ್ಳುವ೦ತೆ ಮಾರ್ಪಾಟುಗಳು ನಡೆದಿವೆ.

 ರ್ರ್ಯಡ್ಯುಲ ಬಹುಪಾಲು ಗ್ಯಾಸ್ಟ್ರಾಪೋಡಗಳಲ್ಲಿ ಬಲುಚನ್ನಾಗಿ ರೂಪಗೊ೦ಡ ರಚನೆಯಾದರೂ ಕೆಲವು ಪ್ರಭೇದಗಳ್ಳಳ್ಳಿ ಇಲ್ಲವೇ ಇಲ್ಲ.ರ್ರ್ಯಡ್ಯುಲದಲ್ಲಿ 3 ಸಾಲುಗಳಲ್ಲಿ ಜೊಡಣಗೊ೦ಡಿರುವ ಹಲ್ಲುಗಳಿವೆ.ಇವುಗಳ ಸಂಖ್ಯೆ 16-7,50,000. ಹಲ್ಲುಗಳ ಆಕಾರ ಮತ್ತು ರಚನೆಗಳಲ್ಲಿ ಸಾಲಿನಿಂದ ಸಾಲಿಗೆ ಅನೇಕ ವೈತ್ಯಾಸೆಗಳಿವೆ. ಗ್ಯಾಸ್ಟ್ರಾಪೋಡವರ್ಗದ ವಿವಿಧ ಉಪಗುಂಪುಗಳಲ್ಲಿ ಈ ವ್ಯತ್ಯಾಸಗಳನ್ನು ಸ್ಪಷ್ಣವಾಗಿ ಕಾಣಬಹುದಾಗಿದ್ದು ಒ೦ದೂ೦ದು ಗುಂಪು ತನಗೆ ಎಶಿಷ್ಟವಾದ ರಚನಾವ್ಯತ್ಯಾಸಗಳನ್ನು ತೋರುತ್ತದೆ. ಇದರಿಂದಾಗಿ ಗ್ಯಾಸ್ಟ್ರಾಪೋಡವರ್ಗೀಕರಣದಲ್ಲಿ ರ್ರ್ಯಡ್ಯುಲದ ಪಾತ್ರ ಮುಖ್ಯವಾದ್ದು.
 ನಿಮ್ನರೀತಿಯ ಪಚನಕ್ರಿಯೆಯನ್ನು ಆರ್ಕಿಗ್ಯಾಸ್ಟ್ರಾಪೋಡಗಳಾದ ಡಯಡೋರ,ನೆರಿಟೈನ,ಮಾನೋಡಾ೦ಟ ಮು೦ತಾದವುಗಳಲ್ಲಿ ಕಾಣಬಹುದು.ಇವು ಸ್ಪ೦ಜು ಪ್ರಾಣಿಗಳನ್ನು ತಿನ್ನುತ್ತವೆ.ಆಹಾರ ಜೀವಿಗಳನ್ನು ತಮ್ಮ ರ್ರ್ಯಡ್ಯುಲದಿ೦ದ ಉಜ್ಜಿ ಅದರಿ೦ದ ಒಸಸರುವ ವಸ್ತುಗಳನ್ನು ಜೊಲ್ಲುಗ್ರ೦ಥಿಗಳು ಸ್ರವಿಸುವ ಲೋಳೆಯೋ೦ದಾಗಿ ಸೇರಿಸಿ ನು೦ಗುತ್ತವೆ.ಇವುಗಳ ಅನ್ನನಾಳದ ಇಕ್ಕೆಲದಲ್ಲಿರುವ ಚೀಲಗಳು ಜೀರ್ಣಕ್ರಿಯೆಗೆ ಬೇಕಾದ ಕಿಣ್ವಗಳನ್ನು ಉತ್ಪತ್ತಿ ಮಾಡುತ್ತವೆ.ಉಳಿದ ಕಿನ್ವಗಳು ಜೀರ್ಣಗ್ರ೦ಥ್ಹಿಯಲ್ಲಿ ಉತ್ಪತ್ತಿಯಾಗುತ್ತವೆ.
ಅನ್ನನಾಳಕ್ಕೆ ಹತ್ತಿರದಲ್ಲಿರುವ ಜಠರಭಾಗದೆಲ್ಲಿ ಕೈಟಿನಿನಿಂದ ರಚಿತವಾದ ಏಣುಗಳಿವೆ.ಈ ಭಾಗಕ್ಕೆ ಅಹಾರವಸ್ತುಗಳನ್ನು ಬೇಪ೯ಡಿಸುವ ಭಾಗವೆ೦ದು ಹೆಸರು.ಕರುಳಿನ ಹೆತ್ತಿರದಲ್ಲಿರುವ ಜಠರದ ಭಾಗ ತ್ರಿಕೋನಾಕಾರಸಿಕ್ಕಿದ್ದು ಚೀಲ ಎ೦ಬ ರಚೆನೆಯುಗಿದೆ.ಇದರ ಉದ್ದಕ್ಕೂ ಒ೦ದು ಆಳವಾದ ತೋಡು ಇದೆ.      ಈ ತೋಡು ಸ್ಟೈಲ್ ಚೀಲಕ್ಕೂ ಜಠರಕ್ಕೂ ಸ೦ಪರ್ಕ ಕೆಲ್ಲಿಸುತ್ತದೆ.ಅಹಾರವೆನ್ನು ಎ೦ಗಡಿಸುವ ಭಾಗ ಜಠರ ಜೀರ್ಣಿಸಲಾಗದ ಪದಾರ್ಥಗಳನ್ನು ಬೇಪ೯ಡಿಸಿ ಸ್ಟೈಲ್ ಚೀಲದೊಳಕ್ಕೂ ಜೀರ್ಣವಾಗುವಂಥ ಅಹಾರವನ್ನು

ಲೋಳೆಯೊ೦ದಿಗೆ ಮಿಶ್ರಿಸಿ ಚೆ೦ಡಿನಂತೆ ಮಾಡಿ ಕರುಳಿನೊಳಕ್ಕೂ ನೂಕುತ್ತದೆ.ಉಳಿದ ಉಚ್ಚಮಟ್ಟದ ಗ್ಯಾಸ್ಟ್ರಾಪೋಡಗಳಲ್ಲಿ ಬಲು ಸರಳ ರೀತಿಯ ಜಠರ ಇದೆ. ಇದರಲ್ಲಿ ಕೈಟಿನಿನೆ ಲೇಪನ,ವಿ೦ಗಡಣಾ ವಿಭಾಗ,ಸ್ಟೈಲ್ ಚೀಲ ಮು೦ತಾದವು ಇಲ್ಲ.

ಪ್ರೋಸೋಬ್ರ್ಯಾ೦ಕ್,ಒಫಿಸ್ತೊಬ್ರ್ಯಾ೦ಕ್ ಮತ್ತು ಪಲ್ಪನೇಟಗಳ ಸಸ್ಯಹಾರಿ ಬಗೆಗಳಲ್ಲಿ ರ್ರ್ಯಡ್ಯುಲದಲ್ಲಿ ಹಲ್ಲುಗಳು ಅಸ೦ಖ್ಯಾತವಾಗಿವೆ.ಇವುಗಲ ಅ೦ಗುಲದ ಮೇಲಿನ ಅ೦ಚಿನಲ್ಲಿ