ಪುಟ:Mysore-University-Encyclopaedia-Vol-6-Part-13.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ಯಾಸ್ಟ್ರಾಪೊಡ ಚಿಪ್ಪಿನ ಕಾಲುಮೆಲದ ಸ್ನಾಯುಗಳಿಗೆ ಹೋಗುತ್ತದೆ. ಪ್ಲ್ಯೂರಲ್ ನರಮುಡಿಗಳಿಂದ ಒಂದು ಜೊತೆ ನರಗಳು ಪೀಡಲ್ ನರಮುಡಿಗೆ ಹೋಗುತ್ತವೆ. ಇವಕ್ಕೆ ಪೀಡಲ್ ಸಂಬಂಧಿಕೆಗಳೆಂದು ಹೆಸರು. ಅಂಗಸದ ನರಹುರಿಗಳಲ್ಲಿರುವ ಎರಡನೆಯ ಜೊತೆ ನರಮುಡಿಗಳಿಗೆ ಪರೈಟಲ್ ನರಮುಡಿಗಳೆಂದು ಹೆಸರು. ಇವು ದೇಹದ ಹಿಂಭಾಗದಲ್ಲಿವೆ. ಇವುಗಳ ನರಗಳು ಆಸ್ಫ್ರಾಡಿಯ, ಮ್ಯಾಂಟಲ್ ಮತ್ತು ಕಿವಿರುಗಳಿಗೆ ಸಾಗುತ್ತವೆ. ಅಂಗಸದ ನರಮುಡಿಗಳಿಂದ ನರಗಳು ಅಂಗಸರಾಶಿಯ ವಿವಿಧ ಅಂಗಗಳಿಗೆ ಹೋಗುತ್ತವೆ. ಈ ರೀತಿಯ ನರಜಾಲ ನುಲಿಗೆಪೂರ್ವಸ್ಥಿತಿಯಲ್ಲಿ ಕಂಡುಬರುತ್ತದೆ.

ನುಲಿಗೆಯಿಂದಾಗಿ ಗ್ಯಾಸ್ಟ್ರಾಪೊಡಗಳ ನರಮಂಡಲದಲ್ಲಿ ಕೆಲವು ವ್ಯತ್ಯಾಸಗಳು ಉಂಟಾಗಿವೆ. ಪೂರ್ವಸ್ಥಿತಿಯಲ್ಲಿ ಸಮಪಾರ್ಶ್ವ ಸ್ಥಿತಿಯಲ್ಲಿರುವ ನರಮಂಡಲ ನುಲಿಗೆಯಾದ ಮೇಲೆ ಅಸಮಪಾರ್ಶ್ವ ರೀತಿಯದ್ದಾಗಿ ೮ ಅಂಕಿಯಂತಾಗಿದೆ. ನುಲಿಗೆಯಿಂದ ನರಗಳ ಮೂಲಸ್ಥಾನ ಅದಲು ಬದಲಾಗಿದೆ. ನುಲಿಗೆ ಪೂರ್ವಸ್ಥಿತಿಯಲ್ಲಿದ್ದ ಬಲಗಡೆಯ ಪರೈಟಲ್ ನರಮುಡಿ ಈಗ ಎಡಕ್ಕೂ ಎಡಗಡೆಯ ಪರೈಟಲ್ ನರಮುಡಿ ಬಲಕ್ಕೂ ತಿರುಚಿಕೊಂದಿವೆ. ಜೊತೆಗೆ ಎಡಕ್ಕೆ ಬಂದ ನರಮುಡಿ ಅಂಗಸರಾಶಿಯ ಮೇಲ್ಭಾಗಕ್ಕೆ ಹಾಗೂ ಮುಂಭಾಗಕ್ಕೆ ಸರಿಯುತ್ತದೆ. ಇದರಿಂದಾಗಿ ಇವನ್ನು ಸುಪ್ರ ಪರೈಟಲ್ ನರಮುಡಿ ಮತ್ತು ಇನ್ಫ್ರಪರೈಟಲ್ ನರಮುಡಿ ಎಂದು ಕರೆಯಲಾಗುತ್ತದೆ. ನುಲಿಗೆಯಿಂದ ದೇಹದ ಮುಂಭಾಗದಲ್ಲಿರುವ ಪ್ಲ್ಯೂರಲ್ ನರಮುಡಿಗಳ ಸ್ಥಾನಮಾನಗಳಲ್ಲಿ ಮಾತ್ರ ಯಾವ ಬದಲಾವಣೆಯೂ ಆಗಿಲ್ಲ.

ನರಮಂಡಲದ ನುಲಿಗೆ ಗ್ಯಾಸ್ಟ್ರಾಪೊಡ ನರಮಂಡಲದ ಆದಿಮ ಸ್ಥತಿಯನ್ನು ತೋರಿಸುತ್ತದೆ. ಏಕೆಂದರೆ ನುಲಿಗೆ ಕ್ರಿಯೆ ಗ್ಯಾಸ್ಟ್ರಾಪೊಡಗಳ ವಿಕಾಸದ ಪ್ರಥಮದಲ್ಲೇ ನಡೆದಿರುವ ಕ್ರಿಯೆ. ಅಲ್ಲದೆ ನರಮಂಡಲದಲ್ಲಿ ಪ್ರತ್ಯೇಕವಾಗಿರುವ ನರಮುಡಿ ಮತ್ತು ನರಹುರಿಗಳು ಕೂಡ ಆದಿಮಾವಸ್ಥೆಯಲ್ಲಿಯೆ ಇವೆ. ಈ ರೀತಿಯ ಆದಿಮಾವಸ್ಥಡಯ ನರಮಂಡಲ ಕೆಲವು ಬದಲಾವಣೆಗಳೊಂದಿಗೆ ಹಳೆಯ ಸ್ಥಿತಿಯಲ್ಲಿಯೇ ಇರುವುದನ್ನು ಪ್ರೋಸೋಬ್ರ್ಯಾಂಕ್ ಗುಂಪಿನ ಪಡೆಲ ಮತ್ತು ಹ್ಯಾಲಿಯೋಟಿಸುಗಳಲ್ಲಿ ಕಾಣಬಹುದು. ಆದರೆ ಅನೇಕ ಗ್ಯಾಸ್ಟ್ರಾಪೊಡಗಳಲ್ಲಿ ವಿಕಾಸದಿಂದಾಗಿ ಈ ಮೂಲಭೂತ ವ್ಯವಸ್ಥೆ ವ್ಯತ್ಯಾಸವಾಗಿದೆ. ನರಮುಡಿಗಳು ಒಂದುಗೂಡಿರುವುದರಿಂದಿವುಗಳ ಸಂಬಂಧಿಕೆಗಳು ಅತಿ ಚಿಕ್ಕವಾಗಿರುವುದು ಮತ್ತು ನರಮುಡಿಗಳು ಹಾಗೂ ನರಹುರಿಗಳು ದ್ವಿತೀಯಕ ಸಮಪಾರ್ಶ್ವ ಸ್ಥಿತಿಯನ್ನು ಗಳಿಸಿಕೊಂಡಿರುವುದು-ಇವು ಈ ವ್ಯತ್ಯಾಸಗಳಲ್ಲಿ ಮುಖ್ಯವಾದವು.

ಸಾಮಾನ್ಯವಾಗಿ ಪ್ರತಿಯೊಂದು ಪ್ರಭೇದದಲ್ಲೂ. ನರಮುಡಿಗಳು ಸ್ವಲ್ಪಮಟ್ಟಿಗೆ ಕೇಂದ್ರೀಕೃತಗೊಂಡಿರುವುದು ಕಂಡುಬರುತ್ತದೆ. ಪ್ಲ್ಯೂರಲ್ ನರಮುಡಿಗಳು ಯಾವಾಗಲೂ ಸೆರಬ್ಲಲ್ ನರಮುಡಿಗಳ ಪಕ್ಕದಲ್ಲಿಯೇ ಇರುತ್ತವೆ. ಅಂಗಸದ ನರಮುಡಿಗಳು ಒಂದುಗೂಡಿ ಒಂದೇ ನರಮುಡಿಯಂತಾಗಿವೆ. ಹ್ಯಾಲಿಯೋಟಿಸಿನಲ್ಲಿ ಪೀಡಲ್ ನರಮುಡಿಗಳು ಪ್ಲ್ಯೂರಲ್ ನರಮುಡಿಗಳೊಂದಿಗೆ ಸೇರಿಬಿಟ್ಟಿವೆ. ಇವನ್ನು ಪೀಡಲ್-ಪ್ಲ್ಯೂರಲ್ ನರಮುಡಿಗಳೆಂದು ಕರೆಯಲಾಗುತ್ತದೆ. ಬ್ಯಾಸಿಕಾನಿನಲ್ಲಿ ಅಂಗಸದ ನರಮುಡಿಗಳನ್ನು ಬಿಟ್ಟು ಉಳಿದೆಲ್ಲವೂ ದೇಹದ ಮುಂಭಾಗಕ್ಕೆ ಸರಿದು ಅನ್ನನಾಳದ ಸುತ್ತ ಸೆರಬ್ರಲ್ ನರಮುಡಿಯ ಅಡಿಯಲ್ಲಿ ಕೇಂದ್ರೀಕೃತಗೊಂಡಿವೆ. ಇವುಗಳ ಅಂಗಸ ಸಂಬಂಧಿಕೆಗಳನ್ನು ಬಿಟ್ಟು ಉಳಿದ ಎಲ್ಲ ಸಂಬಂಧಿಕೆಗಳೂ ಮಾಯವಾಗಿವೆ. ಪಲ್ಮನೇಟಗಳಲ್ಲಿ ಅಂಗಸದ ನರಮುಡಿ ಸಹ ಮುಂಭಾಗಕ್ಕೆ ಸರಿದುಬಿಟ್ಟಿದೆ. ಇದರಿಂದ ಸಂಬಂಧಿಕೆಗಳ ಉದ್ದ ಕಡಿಮೆಯಾಗಿ ನರಮಂಡಲ ದ್ವಿತೀಯಕ ಸಮಪಾರ್ಶ್ವ ಸ್ಥಿತಿಯನ್ನು ತಲುಪಿದೆ. ಒಫಿಸ್ತೊಬ್ರ್ಯಾಂಕುಗಳಲ್ಲಿ ವಿನುಲಿಗೆಯಿಂದಾಗಿ ಅಂಗಸದ ನರಹುರಿಗಳು ಸಮಪಾರ್ಶ್ವ ಸ್ಥಿತಿಯನ್ನು ಗಳಿಸಿಕೊಂಡಿವೆ. ಅಪ್ಲೀಸಿಯದಲ್ಲಿ ಎಡಗಡೆಯ ಪರೈಡಲ್ ನರಮುಡಿ ಮಾಯವಾಗಿ ಬಲಗಡೆಯ ನರಮುಡಿ ಒಂದುಗೂಡಿರುವ ಆಂಗಸದ ನರಮುಡಿಗಖ ಪಕ್ಕದಲ್ಲಿದೆ.

ಜ್ಞಾನೇಂದ್ರೀಯಗಳು : ಕಣ್ಣು, ಕರಬಳ್ಳಿ, ಆಸ್ಫ್ರಾಡಿಯ ಮತ್ತು ಸ್ಟ್ಯಾಟೋಸಿಸ್ಟುಗಳೇ ಗ್ಯಾಸ್ಟ್ರಾಪೊಡಗಳ ಜ್ಞಾನೇಂದ್ರಿಯಗಳು.

ಕಣ್ಣುಗಳು ಶಿರದ ಕರಬಳ್ಳಿಗಳ ತಳದಲ್ಲಿವೆ. ಪಟೆಲದಲ್ಲಿ ಇವು ಸರಳ ಕುಳಿಗಳಂತಿವೆ. ಇವುಗಳೊಳಗೆ ಬಳೆಕನ್ನು ಗ್ರಹಿಸಬಲ್ಲ ಅಂಗವೂ ವರ್ಣದ್ರವ್ಯಕೋಶಗಳೂ ಇವೆ. ಆದರೆ ಉಳಿದ ಎಲ್ಲ ಉನ್ನತ ಗ್ಯಾಸ್ಟ್ರಾಪೊಡಗಳಲ್ಲಿ ಕುಳಿ ಮುಚ್ಚಿ ಹೋಗಿ ಅದರಲ್ಲಿ ಕಾರ್ನಿಯ ಮತ್ತು ಮಸೂರಗಳು ಬೆಳೆದುಕೊಂಡಿವೆ. ಕರಬಳ್ಳಿಯ ಬುಡದಲ್ಲಿರುವ ಕಣ್ಣುಗಳ ದ್ಯುತಿಗ್ರಾಹಕ ಅಂಗ ಯಾವಾಗಲೂ ಬೆಳಕಿನ ಮೂಲದೆಡೆಗೆ ನಿರ್ದೇಶಿತವಾಗಿರುತ್ತದೆ. ಹೆಟರಾಪೊಡ ಗುಂಪಿನ ಶಂಭುಕಗಳ ಕಣ್ಣುಗಳು ಉನ್ನತಮಟ್ಟದವಾಗಿದ್ದು ಮೀನುಗಳ ಕಣ್ಣಿಗಿಂತಲೂ ಉಚ್ಚಮಟ್ಟದವು ಎಂದು ಹೇಳಲಾಗಿದೆ. ಇಷ್ಟಾದರೂ ಗ್ಯಾಸ್ಟ್ರಾಪೊಡಗಳ ಕಣ್ಣಿನ ಕೆಲಸ ಕೇವಲ ಬೆಳಕನ್ನು ಗ್ರಹಿಸುವುದು ಮಾತ್ರ.

ಪ್ರೋಸೋಬ್ರ್ಯಾಂಕುಗಳಲ್ಲಿ ಕೇವಲ ಒಂದು ಜೊತೆ ಶಿರದ ಕರಬಳ್ಳಿಗಳಿದ್ದರೆ ಒಫಿಸ್ತೊಬ್ರ್ಯಾಂಕ್ ಹಾಗೂ ಪಲ್ಮನೇಟಗಳಲ್ಲಿ ಎರಡು ಜೊತೆ ಇವೆ.ಇವು ಕಣ್ಣುಗಳಿಗೆ ಆಶ್ರಯವಾಗಿರುವುದೊಂದೇ ಅಲ್ಲದೆ ಇವುಗಳಲ್ಲಿ ಸ್ಪರ್ಶವೇದಿ ಹಾಗೂ ರಸಗ್ರಾಹಿ ಜೀವಕೋಶಗಳಿವೆ. ನ್ಯೂಡಿಬ್ರ್ಯಾಂಕುಗಳಲ್ಲಿ ಕರಬಳ್ಳಿಯ ಮೇಲಿನ ಅರ್ಧ ಭಾಗ ಫಸಕದಂತೆ ಅಗಲವಾಗಿದೆ. ಇದರಲ್ಲಿ ಮಡಿಕೆಗಳು ಬೆಳೆದಿವೆ.ಇವು ರಸಗ್ರಾಹಿಗಳು. ಇವಕ್ಕೆ ರೈನೋಫೋರುಗಳೆಂದು ಹೆಸರು.

ಗ್ಯಾಸ್ಟ್ರಾಪೊಡಗಳ ಪಾದಗಳಲ್ಲಿ ಪೀಡಲ್ ನರಮುಡಿಯ ಬಳಿ ಒಂದು ಜೊತೆ ಸ್ಟ್ಯಾಟೋಸಿಸ್ಟುಗಳಿವೆ. ನ್ಯೂಡಿಬ್ರ್ಯಾಂಕ್ ಗಳಲ್ಲಿ ಮತ್ತು ಕೆಲವು ಒಫಿಸ್ತೊಬ್ರ್ಯಾಂಕ್ ಗಳಲ್ಲಿ ಸ್ಟ್ಯಾಟೋಸಿಸ್ಟುಗಳುಸೆರಬ್ರಲ್ ನರಮುಡಿಯ ಒಳಗೆ ಸರಿದಿರುವುದು ಕಂಡುಬರುತ್ತದೆ. ಇವು ದೇಹದ ಸಮತೋಲನ ಸ್ಥಿತಿಯನ್ನು ಕಾಯ್ದಿರಿಸಲು ಸಹಾಯಕವಾಗಿವೆ. ಗ್ಯಾಸ್ಟ್ರಾಪೊಡಗಳ ಆಸ್ಫ್ರಾಡಿಯಗಳಿಗೂ ಕಿವಿರುಗಳ ವಿಕಾಸಕ್ಕೂ ಸಂಬಂಧವಿದೆ. ಆರ್ಕಿಗ್ಯಾಸ್ಟ್ರಾಪೊಡಗಳಲ್ಲಿ ಪ್ರತಿ ಕಿವಿರಿನಲ್ಲಿಯೂ ಒಂದೊಂದು ಆಸ್ಫ್ರಾಡಿಯಯ್ ಇದೆ. ಉಳಿದ ಪ್ರೋಸೋಬ್ರ್ಯಾಂಕುಗಳಲ್ಲಿ ಒಂದೇ ಕಿವಿರು ಇರುವುದರಿಂದ ಆಸ್ಫ್ರಾಯಯ್ಕೂಡ ಒಂದೇ ಇದೆ. ಇದು ಮ್ಯಾಂಟಲ್ ಕುಹರದ ಗೋಡೆಯ ಮೇಲೆ ಕಿವಿರಿನ ಬುಡದ ಮುಂಭಾಗದಲ್ಲಿದೆ. ಬಹುಪಾಲು ಪ್ರಭೇದಗಳಲ್ಲಿ ಆಸ್ಫ್ರಾಡಿಮಿನ ಹೊರಮೈಮೇಲೆ