ಪುಟ:Mysore-University-Encyclopaedia-Vol-6-Part-13.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಂಥಾಲಯ ಪೂರೈಸುವುದಕ್ಕಾಗಿ, ಉಪಯುಕ್ತ ಗ್ರಂಥಗಳ ಸಂರಕ್ಷಣೆಯ ಕಾಯ೯ವೆಸಗುವುದಕ್ಕಾಗಿ ದೇಶದಲ್ಲಿ ಪ್ರಾಂತೀಯ ಗ್ರಂಥಾಲಯ ಸೇವಾಕೇಂದ್ರಗಳನ್ನು ಸ್ಥಾಪಿಸುವುದು. ೧೩) ವಿಷಯ ಸೂಚಿಗಳನ್ನು ಹಾಗೂ ಪ್ರಲೇಖನಗಳ ಯಾದಿಗಳನ್ನು ತಯಾರಿಸಿ ಪ್ರಕಟಿಸಲು ಪ್ರೋತ್ಸಾಹವನ್ನೀಯುವುದು. ೧೪) ಗ್ರಂಥಾಲಯ ಚಳವಳಿಯ ವ್ಯಾಪಿಕ ಹಾಗೂ ತೀವ್ರ ಪ್ರಸಾರಕ್ಕೋಸ್ಕರ ಭಾರತ ಸಕಾ೯ರಕ್ಕೆ ಸಲಹೆ ಸೂಚನೆಗಳನ್ನು ನೀಡುವುದು. ೧೫) ಪದವೀಧರ ಗ್ರಂಥಪಾಲರು ಹಾಗೂ ಅವರ ವಿಷಯ ಪ್ರಾವೀಣ್ಯವನ್ನು ಕುರಿತು ರಾಷ್ಟ್ರೀಯ ಯಾದಿಯನ್ನು ತಯಾರಿಸುವುದು. ೧೬) ಗ್ರಂಥಾಬಿವೃದ್ಧಿಯ ಕಾಯ೯ದಲ್ಲಿ ತಲೆದೋರುವ ಸಮಸ್ಯೆಗಳ ಬಗೆಗಿನ ಸಂಶೋಧನೆಗೆ ಪ್ರೋತ್ಸಾಹವನ್ನೀಯುವುದು.

ದೇಶದ ಪ್ರತಿಹಳ್ಳಿಯ ಪ್ರತಿಯೊಬ್ಬನಿಗೂ ಓದುವ ಸೌಲಭ್ಯ ದೋರಕಿ ಜ್ಞಾನ ಪ್ರಸಾರವುಂಟಾಗಿ ಅಜ್ಞಾನದಿಂದ ಜ್ಞಾನದತ್ತ ಪ್ರಗತಿಪಥದಲ್ಲಿ ಮುನ್ನಡೆ ಯುವಂತಾಗಲಿಕ್ಕೆ ಅವಿರತ ಶ್ರಮಿಸುವ ಈ ಗ್ರಂಥಾಲಯ ಪ್ರತಿಷ್ಠಾನದ ಸ್ಥಾಪನೆ ನಿಜವಾಗಿಯೂ ಶ್ಲಾಘನೀಯವಾಗಿದೆಯಲ್ಲದೆ ನಾಡಿನ ಅಜ್ಞಾನವನ್ನು ತೋಲಗಿಸಲು ಸತತ ಪ್ರಯತ್ನ ನಡೆಸಿದ ದೇಶಭಕ್ತ ರಾಜಾರಾಮ್ ಮೋಹನ್ ರಾಯರಿಗೆ ಉಚಿತವಾದ ಸ್ಮಾರಕವೂ ಆಗಿದೆ.

೩ ಕನಾ೯ಟಕದಲ್ಲಿ ಗ್ರಂಥಾಲಯಗಳು : ಇತರ ದೇಶಗಳಲ್ಲಿ ಹೇಗೋ ಹಾಗೆ ಕನ್ನಡ ನಾಡಿನಲ್ಲೂ ಆಯಾ ಕಾಲದ ರಾಜಮನೆತನದವರ ಪ್ರೋತ್ಸಾಹ ಹಾಗೂ ಜನತೆಯ ಅಶಯಗಳಿಗೆ ತಕ್ಕಂತೆ ಗ್ರಂಥಗಳ ರಚನೆ, ಷೋಷಣೆ ಮೊದಲಾದ ಸಾಂಸ್ಕೃತಿಕ ಚಟುವಟಿಕೆಗಳು ಹಿದಿನಿಂದ ನಡೆದುಬರುತ್ತಿವೆ. ಕದಂಬ, ರಾಷ್ಟ್ರಕೂಟ, ಚಾಳುಕ್ಯ, ಸೇವುಣ, ಹೊಯ್ಸಳ, ವಿಜಯನಗರದ ಅರಸರು, ಮೈಸೂರು ಒಡೆಯರು ಮುಂತಾದ ಅರಸು ಮನೆತನದವರು ಸಾಹಿತ್ಯಪ್ರಿಯರೂ ವಿದ್ಯಾಭಿಮಾನಿಗಳೂ ಆಗಿದ್ದು ತಮ್ಮ ಆಳಿಕೆಯ ಉನ್ನತಿಯ ಕಾಲದಲ್ಲಿ ಶ್ರೇಷ್ಠ ವಿದ್ಯಾಲಯಗಳನ್ನೂ ಗ್ರಂಥಾಲಯಗಳನ್ನೂ ಕಟ್ಟಿ ಪೋಷಿಸಿದರು. ಅನೇಕ ವಿಶ್ವವಿದ್ಯಾಯಗಳೂ ಗ್ರಂಥಾಲಯಗಳೂ ಉನ್ನತಿಯನ್ನು ಹೊಂದಿದ್ದವೆಂಬುದಕ್ಕೆ ಶಾಸನಾಧಾರ ಉಂಟು. ತಾಳಗುಂದ, ಪಾವಿಟ್ಟಿಗೆ (ಸಾಲೊಟಿಗಿ), ನಾಗಾವಿ, ಬಳ್ಳಿಗಾವೆ, ಕುಪಟೂರು, ಐಹೊಳೆಗಳಲ್ಲಿ ಉತ್ತಮ ಗ್ರಂಥಾಲಯಗಳನ್ನೂಳಗೊಂಡ ವಿಶ್ವವಿದ್ಯಾಲಯಗಳಿದ್ದುವೆಂದು ತಿಳಿದುಬಂದಿದೆ. ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೊಟಿನ ಗ್ರಾಮ ಹಿಂದೆ ಪಾವಿಟ್ಟಿಗೆಯೆಂದು ಹೆಸರಾಗಿತ್ತು. ೧೦ನೆಯ ಶತಮಾನದಲ್ಲಿ ರಾಷ್ಟ್ರಕೂಟ ಮುಮ್ಮಡಿ ಕೃಷ್ಣನ ಮಂತ್ರಿಯಾಗಿದ್ದ ಚಕ್ರಾಯುಧಬುಧನೆಂಬಾತ ತನ್ನ ಆಳಿಕೆಯಲ್ಲಿದ್ದ ಪಾವಿಟ್ಟಿಗೆಯ ವಿಶ್ವವಿದ್ಯಾಲಯಕ್ಕಾಗಿ ೧೨೩ ಮತ್ತರು ಭೂಮಿಯನ್ನು ವಿದ್ಯಾರ್ಥಿಗಳ ವಸತಿಗಾಗಿ ೨೭ ಭವ್ಯ ಭವನಗಳನ್ನೂ ಬಿಟ್ಟುಕೊಟ್ಟ(೯೪೫). ನಾಗಾವಿಯ ತ್ರಿಪುರೇಶ್ವರ ದೇವರ ಗುಡಿಯಲ್ಲಿ ಒಂದು ವಿಶ್ವವಿದ್ಯಾಲಯವಿತ್ತು. ಚಾಳುಕ್ಯ ತ್ರೈಲೋಕ್ಯಮಲ್ಲಿದೇವನ ಮಾಂಡಲೀಕನೂ ಕೋಳೂರಿನ ಅಧಿಪತಿಯೂ ಆಗಿದ್ದ ಅಯ್ಯರಸನೆಂಬಾತ ನಾಗಾವಿಯ ವಿಶ್ವವಿದ್ಯಾಲಯಕ್ಕೆ ೩೫೦ ಮತ್ತರು ಭೂಮಿಯನ್ನು ದತ್ತಿಯಾಗಿ ಕೊಟ್ಟ(೧೦೫೮). ಈ ಸಮಯದಲ್ಲಿ ವಿಶ್ವವಿದ್ಯಾಲಯದಲ್ಲಿ ೨೦೦ ಜನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಅವರಿಗೆ ವ್ಯಾಸಂಗ ಮಾಡಿಸಲು ತಜ್ಞ ಗುರುಗಗಳಿದ್ದರಲ್ಲದೆ ಆರು ಜನ ಗ್ರಂಥಪಾಲರೂ ಇದ್ದರೆಂಬ ವಿವರಣೆ ದೊರೆಯುತ್ತದೆ. ಅಯ್ಯರಸನ ದೇಣಿಗೆಯಲ್ಲಿ ಪ್ರತಿಯೊಬ್ಬ ಗ್ರಂಥಪಶಲನಿಗೆ ೨೨ ಮತ್ತರಿನಷ್ಟು ಭೂಮಿಯನ್ನು ಹಂಚಲಾಗಿತ್ತಂತೆ. ಬಿಜಾಪುರ ಜಿಲ್ಲೆಯ ಐಹೊಳೆ ಎಂಬಲ್ಲಿ ೫-೬ನೆಯ ಶತಮಾನದಲ್ಲಿ ಒಂದು ವಿಶ್ವವಿದ್ಯಾಲಯವಿತ್ತು. ಇಲ್ಲಿ ವಿದ್ಯಾಭ್ಯಾಸ ಮಾಡಿಸಲು ೫೦೦ ಜನ ಪಂಡಿತರಿಂದ್ದರೆಂದ ಮೇಲೆ ವಿಶ್ವವಿದ್ಯಾಲಯದ ಜೀವಾಳವಾದ ಗ್ರಂಥಾಲಯ ಎಷ್ಟು ದೊಡ್ಡದಿದ್ದಿರಬೇಕೆಂಬುದನ್ನು ಊಹಿಸಿಕೊಳ್ಳಬಹುದು.

ಇವುಗಳಲ್ಲದೆ ಅನೇಕ ಗುರುಮಠಗಳಲ್ಲಿ ಅಮೂಲ್ಯವಾದ ಕೈಬರೆಹಗಳ ಪ್ರತಿಗಳ ಅಪಾರ ಸಂಗ್ರಹಗಳೂ ಇದ್ದುವು. ಬಸವೇಶ್ವರರ ಕಾಲದಲ್ಲಿದ್ದ ವಚನಭಂಡಾರಿ ಶಾಂತರಸ ಸಾರ್ವಜನಿಕರಿಗಾಗಿ ತನ್ನ ಸ್ವಂತ ಗ್ರಂಥಭಂಡಾರವನ್ನು ಮುಕ್ತವಾಗಿಟ್ಟಿದ್ದನೆನ್ನಲು ಆದಾರಗಳಿವೆ. ಇಂದಿಗೂ ಅನೇಕ ಗುಡಿ, ಬಸದಿ ಹಾಗೂ ಮಠ ಮಾನ್ಯಗಳಲ್ಲಿ ಕೈಬರೆಹದ, ತಾಳೆಗರಿಯ ಗ್ರಂಥಸಂಗ್ರವಿರುವುದು ಈ ಮಾತಿಗೆ ಸಾಕ್ಷಿಯಾಗಿದೆ. ವೀರಶೈವ ಮಠಗಳಾದ ಯಕ್ಕುಂಡಿಯ ವಿರಕ್ತಮಠ, ಬಾದಾಮಿಯ ಶಿವಯೋಗೀಶ್ವರ ಮಠಗಳಲ್ಲಿ ಅನುಕ್ರಮವಾಗಿ ೩೦೦ ಹಾಗೂ ೬೦೦ ಹಸ್ತಪ್ರತಿಗಳ ಸಂಗ್ರಹಗಳಿವೆ. ವೈಷ್ಣವರ ಉತ್ತರಾದಿ ಮಠದಲ್ಲಿ ಇಂದಿಗೂ ನಾಲ್ಕು ಚಕ್ಕಡಿಗಳಲ್ಲಿ ತುಂಬಬಹುದಾದಷ್ಟು ಹಸ್ತಪತ್ರಗಳ ಸಂಗ್ರಹವಿದೆ. ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದರೆಯಲ್ಲಿ ಹಾಗೂ ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಜೈನಧರ್ಮಕ್ಕೆ ಸಂಬಂಧಪಟ್ಟ ಅನೇಕ ಅಮೂಲ್ಯ ಹಸ್ತಪತ್ರಿಗಳ ಸಂಗ್ರಹವಿದೆ.

ವಿಜಯನಗರದ ಅರಸರೂ ಬಿಜಾಪುರದ ಆದಿಲ್ ಷಹನೂ ಉತ್ತಮ ಗ್ರಂಥಾಲಯಗಳನ್ನು ಕಟ್ಟಿ ಷೋಷಿಸಿದರು. ಬುಕ್ಕರಾಜ ಬುಕ್ಕರಾಜ ಪೌರಾಣಿಕ ಕವಿ ಕೃಷ್ಣಭಟ್ಟನಿಗೆ ಶೃಂಗೇರಿಯ ಮಠವೊಂದರಲ್ಲಿದ್ದ ಗ್ರಂಥಾಲಯದ ಪುನರುಜ್ಜೀವನಕ್ಕಾಗಿ ಭೂಮಿಯನ್ನು ದಾನವಾಗಿ ಕೊಟ್ಟನೆನ್ನಲಾಗಿದೆ. ವಿಜಯನಗರದ ಪತನದ ಅನಂತರ ಕೊಂಚ ಕಾಲ ವಿದ್ಯಾಸಂಸ್ಥೆಗಳ ಅಭಿವೃದ್ಧಿಯೂ ಇಳಿಮುಖವಾಯಿತು.

ಬಹಮನಿ ಅರಸರು ಕೂಡ ಉತ್ತಮ ಗ್ರಂಥಾಲಯವನ್ನು ಕಟ್ಟಿಸಿಕೊಂಡಿದ್ದರು.ಅವರ ಪ್ರಸಿದ್ಧ ಮಂತ್ರಿ ಮಹಮೂದ್ ಗಾವಾನ್ ಕಟ್ಟಿಸಿದ ಗ್ರಂಥಾಲಯ ಇಂದಿಗೂ ಬೀದರಿನಲ್ಲಿದೆ. ಇದರಲ್ಲಿಯ ಗ್ರಂಥಗಳನ್ನು ಔರಂಗಜೇಬ್ ತನ್ನ ಗ್ರಂಥಾಲಯಕ್ಕೆ ಸೇರಿಸಿಕೊಂಡ. ಟಿಪ್ಪುಸುಲ್ತಾನ್ ಒಳ್ಳೆಯ ಗ್ರಂಥಾಲಯವನ್ನು ಬೆಳೆಸಿದ್ದ. ಇದರಲ್ಲಿ ೨೦೦೦ಕ್ಕೂ ಹೆಚ್ಚು ಧಾರ್ಮಿಕ ಹಾಗೂ ಇತರ ಗ್ರಂಥಗಳಿದ್ದವು. ಆಗಿನ ಕಾಲಕ್ಕೆ ಸುಮಾರು