ಪುಟ:Mysore-University-Encyclopaedia-Vol-6-Part-13.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೭೦ ಗ್ರಂಥಾಲಯ ಗ್ರಂಥಾಲಯಗಳ ಮೇಲ್ವಿಚಾರಣೆ ಸನ್ಯಾಸಿಗಳಾದ್ದಾಗಿತ್ತು. ವಷ೯೦ಪ್ರತಿ ಕಾಲೇಜಿನ ಮೇಲಧಿಕಾರಿಯ ಸಮಕ್ಷಮದಲ್ಲಿ ಗ್ರ೦ಥಗಳ ಲೆಕ್ಕ ನಡೆಯುತ್ತಿತ್ತು.ಕಳೆದುಹೋದ ಗ್ರ೦ಥಗಳ ಮೌಲ್ಯವನ್ನು ಗ್ರ೦ಥಪಾಲರು ತೆರಬೇಕಾದ ಪ್ರಸ೦ಗಗಳು ಇಲ್ಲದಿರಲಿಲ್ಲ. ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಗ್ರಂಥಾಲಯಗಳ ಗ್ರ೦ಥಗಳ ಉಪಹೋಗ ಎಲ್ಲರಿಗೂ ದೊರಕುತ್ತಿತ್ತು. ಗ್ರ೦ಥಗಳು ಹಾಳಾದಲ್ಲಿ ಹೊಸ ಪ್ರತಿಗಳನ್ನು ತಯಾರಿಸುತ್ತಿದ್ದರು. ಮಧ್ಯಯುಗದ ಗ್ರಂಥಭಂಡಾರಿಗಳಿಂದ ಸಾವಿರಾರು ವಿದ್ಯಾಥಿ೯ಗಳು ಜ್ಞಾನ ಪಾಸಕರಾಗುವಂತಾಯಿತು.ವೈದ್ಯಶಾಸ್ತ್ರ,ತತ್ವಶಾಸ್ತ್ರ,ನ್ಯಾಯಶಾಸ್ತ್ರ ಮುಂತಾದ ವಿಷಯಗಳಲ್ಲಿ ಅಪಾರ ಜ್ಞಾನ ಸಂಪಾದಿಸಿ ಅನೇಕರು ಪರದೇಶಗಳಿಗೆ ಹೋಗಿ ಜ್ಞಾನ ಪ್ರಸಾರ ಮಾಡಿದರು. ಮಧ್ಯಯುಗದ ವಿಶ್ವವಿದ್ಯಾಲಯಗಳಿಂದ ಮತ್ತು ಅವುಗಳ ಗ್ರ೦ಥಪಾಲರಿಂದ ಜನತೆಗೆ ಜ್ಞಾನದ ಮೊತ್ತ ಲಭ್ಯವಾಯಿತು. ಮುಂದಿನ ಶತಮಾನದಲ್ಲಾದ ಸಾಹಿತ್ಯ ಮತ್ತು ಕಲೆಗಳ ಪುನರುಜ್ಜೀವನದ ದೊಡ್ಡ ಕ್ರಾಂತಿಗೆ ಸಹಕಾರಿಯಾಗುವುದರಲ್ಲಿ ಗ್ರಂಥಾಲಯಗಳು ಯಶಸ್ವಿಯಾದವು. 1500 ರ ಹೊತ್ತಿಗೆ ಮುದ್ರಣ ಕಲೆಯ ಪ್ರಸಾರದಿಂದಾಗಿ ಬಹುಸಂಖ್ಯೆಯಲ್ಲಿ ಪುಸ್ತಕಗಳು ಗ್ರಂಥಾಲಯವನ್ನು ಸೇರುವಂತಾಯಿತು.16 ನೆಯ ಶತಮಾನದಿಂದ 19 ನೆಯ ಶತಮಾನದವರೆಗೆ ಯುರೋಪಿನಲ್ಲಿ ವ್ಯಾಪಿಸಿದ ರಾಜಕೀಯ ಕ್ರಾಂತಿಗೊಂದಲಗಳಿಂದಾಗಿ ಬಹುತೇಕ ಚಚ್೯ಗಳು ಮುಚ್ಚಲ್ಪಟ್ಟವು. ಅವುಗಳಿಗೆ ಸೇರಿದ ಪುಸ್ತಕಗಳು ಮತ್ತು ಅಪಾರ ಹಸ್ತಪ್ರತಿಗಳು ವಿಶ್ವವಿದ್ಯಾಲಯಗಳ ಹಾಗೂ ಕಾಲೇಜುಗಳ ಗ್ರಂಥಭಂಡಾರಗಳಿಗೆ ಸೇರಿಸಲ್ಪಟ್ಟವು.1550 ರಲ್ಲಿ 8 ನೆಯ ಹೆನ್ರಿಯ ಅಧಿಕಾರಿಗಳು ಕೇಂಬ್ರಿಜ್ ಮತ್ತು ಆಕ್ಸ್ಫ಼ಡ್೯ ವಿಶ್ವವಿದ್ಯಾಲಯಗಳಿಗೆ ಪ್ರವೇಶಿಸಿ ಹಲವಾರು ಗ್ರಂಥಗಳನ್ನು ನಿನಾ೯ಮಗೊಳಿಸಿದರು. ಮುಂದೆ ಸರ್ ಥಾಮಸ್ ಬ್ಲೋಡೆಯ ಅಪಾರ ಪರಿಶ್ರಮಗಳಿಂದಾಗಿ 1602ರಲ್ಲಿ ಆಕ್ಸ್ಫ಼ಡಿ೯ನ ಪ್ರಧಾನ ಗ್ರಂಥಾಲಯಗಳು ಮತ್ತೊಮ್ಮೆ ಚಿಗುರುವಂತಾದವು. ಈತ ತನ್ನ ಸ್ವಂತ ಗ್ರಂಥಸಂಗ್ರಹಗಳನ್ನು ದಾನವಾಗಿತ್ತನಲ್ಲದೆ ಅನೇಕ ಗ್ರಂಥಗಳನ್ನು ಕ್ರಯಕ್ಕೆ ಪಡೆದು ಆಕ್ಸ್ಫ಼ಡ್೯ ಗ್ರಂಥಾಲಯಕ್ಕೆ ಸೇರಿಸಿದ. ಸಾಮಾನ್ಯ ಪ್ರಜೆಯಾಗಿಯೂ ಸಕಾ೯ರದ ಪ್ರತಿನಿಧಿಯಾಗಿಯೂ ದೇಶದ ಎಲ್ಲೆಡೆ ಸಂಚರಿಸಿ ನಾನಾಕಡೆಗಳಿಂದ ಗ್ರಂಥಗಳನ್ನೂ ಅಮೂಲ್ಯ ಹಸ್ತಪ್ರತಿಗಳನ್ನೂ ಈತ ಸಂಗ್ರಹಿಸಿದ. ಮುಂದೆ ಈ ಗ್ರಂಥಾಲಯಕ್ಕೆ ಬೋಡ್ಲೀಯನ್ ಲೈಬ್ರರಿ ಎಂದೆ ನಾಮಕರಣವಾಯಿತು. ಈತನ ಕಾಲದಲ್ಲಿ 655 ಪುಟಗಳ ಗ್ರಂಥಸೂಚಿಯೊಂದು ಸಿದ್ದವಾಯಿತು(1605).1605 ರಲ್ಲಿ ಪ್ರಥಮ ಗ್ರಂಥಪಾಲನಾಗಿದ್ದ ಥಾಮಸ್ ಜೇಮ್ಸ್ ಪ್ರಥಮ ಮುದ್ರಿತ ಗ್ರಂಥಸೂಚಿಯನ್ನು ತಯಾರಿಸಿದ. ಅಲ್ಲಿಂದೀಚೆಗೆ ಈ ಗ್ರಂಥಾಲಯ ನಿರಂತರವಾಗಿ ಪ್ರವಧ೯ಮಾನಗೊಂಡಿದೆ. 1900 ವೇಳೆಗೆ ಆಕ್ಸ್ಫ಼ಡ್೯ ಗ್ರಂಥಾಲಯ ಎಂಟು ಲಕ್ಷಕ್ಕೂ ಹೆಚ್ಚು ಗ್ರಂಥಗಳನ್ನು,40000 ಹೆಚ್ಚು ಹಸ್ತಪ್ರತಿಗಳನ್ನು ಪಡೆದಿತ್ತು. 16ನೆಯ ಶತಮಾನದ ಕೊನೆಗೆ ಹಾಗೂ 17ನೆಯ ಶತಮಾನದ ಆದಿ ಭಾಗದಲ್ಲಿ ಕಾಲೇಜು ಗ್ರಂಥಾಲಯಗಳು ಪುನರ್ರಚನೆಗೊಂಡವು. 1612ರಲ್ಲಿ ಸ್ಥಾಪನೆಗೊಂಡ ವಾಧಾಮ್ ಕಾಲೇಜು ಎರಡೆನೆಯ ವಷ೯ದಲ್ಲಿ ಸ್ವಂತ ಗ್ರಂಥಾಲಯವನ್ನು ಏಪ೯ದಿಸಿಕೊಂಡಿತು. 1612ರಲ್ಲಿ ಬೋಡ್ಲೀಯನ್ ಗ್ರಂಥಾಲಯ ನೂತನ ಕಟ್ಟಡವನ್ನು ಪಡೆಯಿತು,1700ರ ಹೊತ್ತಿಗೆ ಈ ಗ್ರಂಥಾಲಯದಲ್ಲಿ ಸುಮಾರು 30,000 ಗ್ರಂಥಗಳಿದ್ದವು.ಈ ಶತಮಾನದಲ್ಲಿ ಗ್ರಂಥಾಲಯಗಳಿಗೆ ಬಂದ ಗ್ರಂಥಗಳಲ್ಲಿ ಮಹನೀಯರಿಂದ ಕೊಡುಗೆಯಾಗಿ ಬಂದವೇ ಹೆಚ್ಚು ಕ್ರೈಸ್ತ ಪಾದ್ರಿ ಲಾಡ್ ಗೆ ಸೇರಿದ 1300 ಅಮೂಲ್ಯ ಹಸ್ತಪ್ರತಿಗಳು,ಖ್ಯಾತ ವಕೀಲ ಜಾನ್ ಸೆಲ್ಡನ್ನಿಗೆ ಸೇರಿದ 8,000 ಗ್ರಂಥಗಳು ದಾನವಾಗಿ ಬಂದವು. 1714ರಲ್ಲಿ ಜಾನ್ ರಯಡ್ ಕ್ಲಿಫ಼್ ಎಂಬ .ವೈದ್ಯವಿಜ್ಞಾನಕ್ಕೆ ಸಂಬಧಿಸಿದ ಗ್ರಂಥಗಳನ್ನು ಕೊಡುಗೆಯಾಗಿತ್ತ. 16ನೆಯ ಶತಮಾನದ ಆರಾಜಕ ಪರಿಸ್ಥಿತಿಗಳಿಂದಾಗಿ ಕೇಂಬ್ರಿಜ್ ವಿಶ್ವವಿದ್ಯಾಲಯ ಗ್ರಂಥಾಲಯದ ಬೆಳವಣಿಗೆ ಕುಂಠಿತಗೊಂಡಿತು. 1650ರಲ್ಲಿ ಗ್ರಂಥಾಲಯದಲ್ಲಿ ಕೇವಲ 1,000 ಗ್ರಂಥಗಳು ಮತ್ತು 400 ಹಸ್ತಪ್ರತಿಗಳು ಇದ್ದವು. ಇಂಗ್ಲೆಂಡಿನ ರಾಜಪ್ರಭುತ್ವ ಸ್ಥಾಪನೆಗೊಂಡ ಮೇಲೆ 2ನೆಯ ಚಾಲ್ಸ್೯ ದೊರೆ ಕೇಂಬ್ರಿಜ್ ವಿಶ್ವವಿದ್ಯಾಲಯದ ಸುಧಾರಣೆಯತ್ತ ಗಮನ ಹರಿಸಿದ. ಅನೇಕ ಮಹನೀಯರಿಂದ ಗ್ರಂಥಗಲು ಹಸ್ತಪ್ರತಿಗಳು ಉದಾರವಾಗಿ ಬಂದವು. 1715ರಲ್ಲಿ 1 ನೆಯ ಜಾಜ್೯ ದೊರೆ ಬಿಷಪ್ ಮೂರ್ಗೆ ಸೇರಿದ 30,000 ಗ್ರಂಥಗಳ್ಳನ್ನು ಗ್ರಂಥಾಲಯಕ್ಕೆ ಕೊಟ್ಟ. ಈ ಸಂಗ್ರಹದಲ್ಲಿ ಇಂಗ್ಲೆಂಡಿನ ಇತಿಹಾಸ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಖಚಿತ ಮಾಹಿತಿಗಳಿವೆ. 1755ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯ ಗ್ರಂಥಾಲಯಕ್ಕೆ ಹೊಸ ಕಟ್ಟಡ ಬಂತು. 1900ರಲ್ಲಿ ಈ ಗ್ರಂಥಾಲಯದಲ್ಲಿ ಸುಮಾರು 10 ಲಕ್ಷ ಗ್ರಂಥಗಳ ಸಂಗ್ರಹವಿತ್ತು. ಅನೇಕ ಶತಮಾನಗಳ ವರೆಗೆ ಇಂಗ್ಲೆಂಡಿನಲ್ಲಿ ಆಕ್ಸ್ಫ಼ಡ್೯ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯಗಳು ಮಾತ್ರ ಇದ್ದವು. ಕ್ರಮೇಣ ಸ್ಕಾಟ್ಲೆಂಡ್ ಮತ್ತು ಐಲೆ೯೦ಡ್ ಗಳಲ್ಲೂ ವಿಶ್ವವಿದ್ಯಾಲಯಗಳು ಪ್ರಾರಂಭಗೊಂಡವು. ಗ್ಲ್ಯಾಸ್ಗೊ ವಿಶ್ವವಿದ್ಯಾಲಯ 1453ರಲ್ಲಿ ಸ್ಥಾಪನೆಗೊಂಡಾಗ ಅದರಲ್ಲಿ ಒಂದು ಸುಸಜ್ಜಿತ ಗ್ರಂಥಲಯವಿತ್ತು. ಸ್ಕಾಟ್ಲೆಂಡಿನಲ್ಲಿ ಪ್ರಾರಂಭಗೊಂಡ(1610) ಸೇಂಟ್ ಆಂಡ್ರೂ ವಿಶ್ವವಿದ್ಯಾಲಯಲ್ಲೂ ಅಷ್ಟೆ. ಕ್ಲೆಮೆಂಟ್ ಲಿಟಲ್ ಎಂಬ ಧನಿಕ ವ್ಯಾಪಾರಿ ಬೇಕಾದಷ್ಟು ಧನ ಹಾಗೂ ಗ್ರಂಥಗಳನ್ನು ದಾನವಾಗಿತ್ತ ಪ್ರಯುಕ್ತ 1533ರಲ್ಲಿ ಎಡಿನ್ ಬರೊ ವಿಶ್ವವಿದ್ಯಾಲಯಕ್ಕೆ ಉತ್ತಮ ಗ್ರಂಥಾಲಯವೊಂದು ಒದಗಿದಂತಾಯಿತು.1634ರಲ್ಲಿ ಅಬರ್ ಡೀನ್ ನಲ್ಲಿ ಪ್ರಾರಂಭಗೊಂಡ ವಿಶ್ವವಿದ್ಯಾಲಯ ಒಂದು ಗ್ರಂಥಾಲಯವನ್ನು ಹೊಂದಿತ್ತಾದರೂ ಗಾತ್ರದಲ್ಲಿ ಮತ್ತು ಗ್ರಂಥಗಳ ಸಂಖ್ಯೆಯಲ್ಲಿ ಕಿರಿದಾಗಿತ್ತು. 1601ರಲ್ಲಿ ಐಲೆ೯೦ಡಿನ ಡಬ್ಲಿಕ್ ಎಂಬಲ್ಲಿನ ಟ್ರಿನಿಟಿ ಕಾಲೇಜಿನಲ್ಲಿ ಗ್ರಂಥಾಲಯದ ಸ್ಥಾಪನೆಯಾಯಿತು. 1604ರಲ್ಲಿ ಕೇವಲ 4,000 ಗ್ರಂಥಗಳಿದ್ದ ಈ ಗ್ರಂಥಾಲಯ ಕ್ರಮೇಣ ಸಾಕಷ್ಟು ಪುಷ್ಟಿಗೊಂಡು ಐಲೆ೯೦ಡಿನ ಗ್ರಂಥಾಲಯಗಳಲ್ಲಿ ಪ್ರಧಾನವೆನಿಸಿಕೊಂಡಿತು. 19 ಹಾಗೂ 20ನೆಯ ಶತಮಾನಗಳಲ್ಲಿ ಇನ್ನೂ ಹಲವು ಎಡೆಗಳಲ್ಲಿ ಕಾಲೇಜುಗಳು ಸುಸಜ್ಜಿತ ಗ್ರಂಥಾಲಯಗಳ ಸಮೇತ ಪ್ರಾರಂಭವಾದವ.