ಪುಟ:Mysore-University-Encyclopaedia-Vol-6-Part-13.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಡರಹ್ಯಾಮಿನಲ್ಲಿ(೧೮೩೨) ಲಂಡನ್ನಿನಲ್ಲಿ (೧೮೩೭),ಮ್ಯಾಂಚೆಸ್ಟರ್ನಲ್ಲಿ (೧೮೫೧),ಲಿವರಪೂಲಿನಲ್ಲಿ(೧೮೮೨),ಪ್ರಾರಂಭಗೊಂಡ ವಿಶ್ವವಿದ್ಯಾಲಯಗ ಇಂದು ಬಹುದೊಡ್ಡ್ ಗ್ರಂಥಾಲಯಗಳಿಂದ ಸಜ್ಜಾಗಿವೆ.೫೦ ವರ್ಷಗಳ ಒಳಗಾಗಿ ಇವುಗಳಲ್ಲಿ ಒಂದು ಲಕ್ಷದಿಂದ ಐದು ಲಕ್ಷದವರೆಗೆ ಗ್ರಂಥಾಗಳು ಶೇಖರಿಸಲ್ಪಟ್ಟವು. ೧೯೫೦ರ ಸುಮಾರಿಗೆ ಆಕ್ಸಫರ್ಡ್ ಅನೇಕ ಗ್ರಂಥಲಯಗಳ ಆಗರವೆನಿಸಿತು.ಬೋಡ್ಲಿಯನ್ ಗ್ರಂಥಲಯ ಮುಖ್ಯವಾಗಿ ವಿಶ್ವವಿದ್ಯಾಲಯದ ಗ್ರಂಥಲಯವಾಗಿದ್ದರೂ ವಸ್ತುತಃ ಬೋಡ್ಲೆ ಸಮುದಾಯದ ಒಂದು ಗ್ರಂಥಾಲಯವಾಗಿ ಹೀಗೆ ವರ್ಷಗಳು ಸರಿದಂತೆ ಹೊಸ ಕಾಲೇಜುಗಳು ಅವನ್ನು ಅನುಸರಿಸಿ ಗ್ರಂಥಲಯಗಳು ಹುಟ್ಟಿಕೂಂಡು ಇಂದಿಗೆ ವ್ಯಾಪಕವಾಗಿ ಬೆಳೆದು ನಿಂತಿವೆ.ಬಹುಪಾಲು ಗ್ರಂಥಲಯಗಳು ಸಂಶೋಧನ ಕೇಂದ್ರಗಳಾಗಿ ವಿಸ್ತರಣಗೊಂಡಿವೆ. .

ಖಾಸಗಿ ಗ್ರಂಥಲಯ : ಮಧ್ಯಯುಗದ ಯುರೋಪಿನಲ್ಲಿ ಅನೇಕ ಶ್ರೀಮಂತರು, ಚರ್ಚುಗಳ ಅಧಿಕಾರಿ ವರ್ಗದವರು ತಮ್ಮದೆ ಆದ ಖಾಸಗಿ ಗ್ರಂಥಾಲಯಗಳನ್ನು ಬೆಳೆಸಿಕೊಂಡಿದ್ದರು. ಆ ಕಾಲದ ಸಾಹಿತ್ಯ, ಕಲೆ, ಆಧ್ಯಾತ್ಮ ಮತ್ತು ಇನ್ನಿತರ ವೈಶಿಷ್ಟ್ಯಗಳಲ್ಲಿ ಸಾಕಷ್ಟು ಮಾರ್ಗದರ್ಶಿಯೆನಿಸುವ ಅವರ ಗ್ರಂಥ ಸಂಗ್ರಹಗಳು ಕ್ರಮೇಣ ವಿಶ್ವವಿದ್ಯಲಯಗಳಿಗೆ ಮತ್ತು ಸಾರ್ವಜನಿಕ ಗ್ರಂಥಾಲಯಗಳಿಗೆ ದತ್ತಿಯಾಗಿ ಬಂದು ಸೆರಿದವು. ಖಾಸಗಿ ಗ್ರಂಥಾಲಯಗಳಲ್ಲಿದ್ದ ಗ್ರಂಥಗಳು ಅಂದವಾಗಿ ರಟ್ಟು ಹಾಕಲ್ಪಟ್ಟವು. ಮುದ್ದಾದ ಆ ಗ್ರಂಥಗಳನ್ನು ವಿಶೇಷ ಎಚ್ಚರಿಕೆಯಿಂದ ನೋಡಿಕೊಂಡು ಬರಲಾಗುತ್ತಿತ್ತು. ಕ್ರೈಸ್ತಪಾದ್ರಿಗಳು, ಶ್ರಿಮಂತರುಗಳಲ್ಲದೆ ಇನ್ನೂ ಅನೇಕ ಗಣ್ಯರು ವೈದ್ಯರೊ ಕುಶಲ ಕೆಲಸಗಾರರು ಸ್ವಂತಕ್ಕಾಗಿ ಗ್ರಂಥಗಳನ್ನು ಸಂಪಾದಿಸುತ್ತಿದ್ದರು. ಇಂಗ್ಲೆಂಡಿನ ಪ್ರಸಿದ್ಧ ಗ್ರಂಥ ಪ್ರೇಮಿಯಾದ ಡರಹ್ಯಾಮಿನ ಬಿಷಪ್ ರಿಚರ್ಡಡಿ ಬರಿ ತನ್ನ ಪ್ರೀತಿಯ ಗ್ರಂಥಗಳ ಬಗ್ಗೆ ಹಾಗೂ ಗ್ರಂಥ ಸಂಗ್ರಹ ಕಾರ್ಯಕ್ರಮದ ಬಗ್ಗೆ ಸವಿವರವಾದ ಕೃತೆಗಳ್ನ್ನು ರಚಿಸಿದ್ದಾನೆ. ಇಂಗ್ಲೆಂಡಿನ ರಾಜರನೇಕರು ಗ್ರಂಥ ಪ್ರೇಗಳಾಗಿದ್ದು ತಮ್ಮ ಖಾಸಗಿ ಗ್ರಂಥ ಸಂಗ್ರಹಗಳನ್ನು ವಿಸ್ತರಿಸಿದ್ದರು.
        

ಗ್ರಂಥಾಲಯಗಳ ಬೆಳೆವಣಿಗೆಯ ದೃಷ್ಟಿಯಿಂದ ೧೯ನೆಯ ಷತಮಾನದಲ್ಲಿ ಅನೇಕ ವ್ಯಕ್ತಿಗಳ ವೈಯಕ್ತಿಕ ಗ್ರಂಥಾಲಯಗಳು ಹೆಚ್ಚಿನ ಪಾತ್ರವನ್ನು ವಹಿಸಿದವು. ಸ್ಪೇನಿನಿಂದ ಇಂಗ್ಲೆಂಡಿನವರೆಗೂ ಅನೇಕ ಕಲಾತ್ಮಕ ಕಟ್ಟಡಗಳು ಗ್ರಂಥಾಲಯಗಳಿಗಾಗಿಯೇ ಮುಕ್ತದ್ವಾರವಾಗಿದ್ದವು. ಓದುವ ಸಲುವಾಗಿ ದ್ವಿಪ್ರತಿಗಳಿರುವ ಗ್ರಂಥಗಳನ್ನು ಎರವಲು ಕೊಡುತ್ತಿದ್ದರು. ಎರವಲು ಪಡೆಯಲು ಕೆಲವೆಡೆ ಠೇವಣಿಗಳನ್ನು ಕ್ಟ್ಟಿಡಬೇಕಾಗುತ್ತಿತ್ತು. ನಕಲು ತೆಗೆದು ಪ್ರತಿಗಳನ್ನು ತಯಾರಿಸುವುದು, ಹರಿದ ಗ್ರಂಥಗಳನ್ನು ದುರಸ್ತಿ ಮಾಡಿಸುವುದು, ರಟ್ಟು ಹಾಕಿಸುವುದು ಮೊದಲಾದ ಕೆಲಸಗಳಿಗೆ ವಿಶೇಷ ಗಮನ ನೀಡಲಾಗುತ್ತಿತ್ತು. ವಿದ್ಯಾರ್ಥಿಗಳು, ಪಂಡಿತರು, ಲೇಖಕರು, ಕವಿಗಳು, ಸಂಗೀತಗಾರರು,ಹೀಗೆ ಎಲ್ಲರಿಗೂ ಈ ಗ್ರಂಥಾಲಯಗಳಲ್ಲಿ ಓದಲು ಅವಕಾಶವಿರುತ್ತಿತ್ತು. ಮಧ್ಯಕಾಲದ ಸಾಹಿತ್ಯ ಮತ್ತು ಕಲೆಗಳ ಮುನರುಜ್ಜೀವನಕ್ಕೆ ಈ ಗ್ರಂಥಾಲಯಗಳು ಬಹಳ ಮಟ್ಟಿಗೆ ನೆರವಾದವು. ಮುದ್ರಣ ಸೌಲಭ್ಯ ಒದಗಿದಂದಿನಿಂದ ಗ್ರಂಥಗಳ ಬೆಲೆ ಕಡಿಮೆಯಾಯಿತು. ಅದರಂತೆ ಬಹುಸಂಖ್ಯೆಯಲ್ಲಿ ಹೊರಬಂದವು. ಇದರಿಂದಾಗಿ ವಿದ್ಯಾವಂತ ವರ್ಗದಲ್ಲಿ ಓದುಗರ ಸಂಖ್ಯೆ ಅಪಾರವಾಗಿ ಹೆಚ್ಚಿತು. ಖಾಸಗಿ ವ್ಯಕ್ತಿಗಳು ಅಪೂರ್ವಗ್ರಂಥಗಳನ್ನು ಶೇಖರಿಸಿ ತಮ್ಮ ಅಭಿರುಚಿಯನ್ನು ಪ್ರಕಟಿಸಿದರು. ಕ್ರಮೇಣ ಇವು ಪೀಳಿಗೆಯಿಂದ ಪೀಳಿಗೆಗೆ ಬೆಳೆಯುತ್ತ ಬಂದವು, ಯುರೋಪಿನ ಸಾಹಿತ್ಯ ಮತ್ತು ಕಲೆಗಳ ಪುನರುಜ್ಜೀವನ ಕಾಲದಲ್ಲಿ ಇವು ವಹಿಸಿದ ಪಾತ್ರ ಗಮನಾರ್ಹವಾದುದು.

 ೧೭ ರಿಂದ ೧೯ನೆಯ ಶತಮಾನದವರಿಗಿನ ಕಾಲದಲ್ಲಿ ಖಾಸಗಿ ಗ್ರಂಥಾಲಯಗಳು ಬಹಳ ಉಚ್ಛ್ರಾಯ ಸ್ಥಿತಿಗೆ ಬಂದವು. ಈ ವೇಳೆಯಲ್ಲಿ ಇಂಗ್ಲೆಂಡಿನ ರಾಜಪ್ರಭುತ್ವವೂ ವಿಸ್ತಾರವಾಗುತ್ತ ಬಂತು. ಹೊಸದಾಗಿ ಕೈವಶವಾದ ದೇಶಗಳ ಸಂಸ್ಕೃತಿ ಸಾಹಿತ್ಯಗಳನ್ನು ಅರಿಯಲೋಸುಗ ಆಯಾ ದೇಶಗಳ ಅಮುಲ್ಯ ಕೃತಿಗಳನ್ನು

ಸಂಗ್ರಹಿಸಲಾಯಿತು. ಇಂಗ್ಲೆಂಡಿನ ಜಾನ್ ಲೀಲ್ಯಾಂಡ ಎಂಬಾತ ಇಂಥ ಸಂಗ್ರಾಹಕರಲ್ಲಿ ಮುಖ್ಯಾನಾದವನು. ಇವನ ಖಾಸಗಿ ಸಂಗ್ರಹ ಈಗ ಬ್ರಿಟಿಷ್ ಮ್ಯೂಸಿಯಂ ಮತ್ತು ಬೋಡ್ಲಿಯನ್ ಗ್ರಮ್ಥಲಯಗಳಲ್ಲಿ ಸೇರಿದೆ. ಇಂಗ್ಲೆಂಡಿನ ಆರ್ಚಬಿಷಪ್ ಮ್ಯಾಥ್ಯು ಪಾರ್ಕರ್ ಅಪೂರ್ವ ಗ್ರಂಥರಾಶಿಯನ್ನು ಸಂಗ್ರಹಿಸಿದ್ದ. ಅದು ಕೊನೆಯಲ್ಲಿ ಕೇಂಬ್ರಿಜ್ ಕಾರ್ಪಸ್ ಕ್ರಿಸ್ಟಿ ಕಾಲೇಜಿನಲ್ಲಿ ಐಕ್ಯವಾಯಿತು. ಪ್ರಸಿದ್ಧ ಇತಿಹಾಸಕಾರ ವಿಲಿಯಂ ಕಾಮಡನನ್ನು (೧೫೫೧-೧೬೨೩) ಅಪೂರ್ವ ಗ್ರಂಥಗಳು ಹಾಗೂ ಹಸ್ತಪ್ರತಿಗಳನ್ನು ಸರ್ ರಾಬರ್ಟ್ ಕಾಟನ್ನನ ಗ್ರಂಥಲಯದಲ್ಲಿ ಸಂಗ್ರಹವಾಗಿದ್ದವು. ಈ ಎಲ್ಲಾ ಖಾಸಗಿ ಗ್ರಂಥಲಯಗಳು ಕೊನೆಹೆ ಕೇಂಬ್ರಿಜ್ ಮತ್ತು ಆಕ್ಸಫರ್ಡ್ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ವಿಲೀನಗೊಂಡವು. ಹೀಗೆ ಖ್ಸಗಿ ಗ್ರಂಥಾಲಯಗಳನ್ನು ಹೊಂದಿ ಕಡೆಗೆ ಅವನ್ನು ಕೊಡುಗೆಯಾಗಿ ಇತ್ತ್ವರಲ್ಲಿ ಆರ್ಜಬಿಷಪ್ ವಿಲಿಯಂ ಲಾಡ್, ಕೆನೆಮ್ ಡಿಗ್ಬಿ, ಸರ್ ರಾಬರ್ಟ್ ಬ್ರೋಸ್, ಕಟನ್ ಜಾರ್ಜ್ ಥಾಮಸ್ ಇವರು ಪ್ರಮುಖರು.

 ಥಾಮಸ್ ರಾಲಿನಸನ್ (೧೬೮೧-೧೭೨೫) ಎರಡು ಲಕ್ಷ ಅಪೂರ್ವ ಗ್ರಂಥಗಳನ್ನು ಸಂಗ್ರಹಿಸಿದ್ದ. ೧೭೨೧ ರಿಂದ ೩೪ರ ಅವಧಿಯಲ್ಲಿ ೧೬ ಬಾರಿ ಇವನ ಗ್ರಂಥ ಸಂಗ್ರಹವನ್ನು ಮಾರಲಾಯಿತು. ಕೆಲವು ಅತ್ಯಮೂಲ್ಯ ಗ್ರಂಥಗಳೂನ್ನು ಬೋಡ್ಲಿಯನ್ ಗ್ರಂಥಗಳಯಕ್ಕೆ ಕೊಡಾಲಾಯಿತು. ಸರ್ ಹ್ಯಾನ್ಸ ಸ್ಲೋನನ ೫೦,೦೦೦ಕ್ಕೂ ಹೆಚ್ಚಿನ ಗ್ರಂಥಗಳನ್ನು ಹಾಗೂ ೪,೦೦೦ ಹಸ್ತಪ್ರತಿಗಳನ್ನು ಬ್ರಿಟಿಷ್ ಸರ್ಕಾರ ಕೊಂಡುಕೊಂಡು ಬ್ರಿಟಿಷ್ ಮ್ಯೂಸಿಯಮಿಗೆ ಅಸ್ತಿಭಾರ ಹಾಕಿತು. ಅಂಥೋನಿ ಅಸ್ಕೂ, ವಿಲಿಯಂ ಹಂಟರ್, ಜಾನ್ಸನ್ - ಇವರು ಸಾವಿರಾರು ಕೃತಿಗಳನ್ನು ತಮ್ಮ ಖ್ಯಾತ ನಟ ಡೇವಿಡ್ ಗ್ಯಾರಿಕ ಷೇಕ್ಸಪಿಯರನ ಅನೇಕ ನಾಟಕ ಗ್ರಂಥರಾಶಿಯನ್ನೂ ಹೊಂದಿದ್ದ. ಇವೆಲ್ಲ ಕೊನೆಗೆ ಬ್ರಿಟಿಷ್ ಮ್ಯೂಸಿಯಮಿಗೆ ಸೇರಿದವು. 
   ೧೯ನೆಯ ಶತಮಾನದಲ್ಲಿ ಶ್ರೀಮಂತ ವರ್ಗದವರಲ್ಲಿ ಗ್ರಂಥಗಳನ್ನು ಸಂಗ್ರಹಿಸುವ ಆಸಕ್ತಿ ಬಹಳವಾಗಿತ್ತು. ಅದಕ್ಕಾಗಿ ಅವರು ಅಪಾರ ಹಣವನ್ನು ತೆರುತ್ತಿದ್ದರು. ಲಾರ್ಡ್ ಸ್ಪೆನ್ಸರ್ (೧೭೫೮-೧೮೩೪) ವಂಶಪಾರಮ್ಪರ್ಯವಾಗಿ ಬಂದ ತನ್ನ ಗ್ರಂಥಲಯಕ್ಕೆ ಬಹುದೊಡ್ಡ ಸಂಖ್ಯೆಯಲ್ಲಿ ಗ್ರಂಥಗಳನ್ನು ಸೇರಿಸಿದ. ಗ್ರಂಥಗಳ ಮೇಲ್ವಿಚಾರಣೆಗೆ ಮತ್ತು ಸೂಚಿಪಟ್ಟಿಯನ್ನು ತಯಾರಿಸಲು ಥಾಮಸ್ ಎಫ್.ಡಿಬಡನ್ ಎಂಬುವನನ್ನು ನೇಮಿಸಿಕೊಂಡಿದ್ದ. ಮುದ್ರಣ ಪ್ರಾರಾಂಭದ ಕಾಲದ ಗ್ರಂಥಗಳು ಗುಟೆನಬರ್ಗ್ ಬೈಬಲ್, ಇತರೆ ನೂರಾರು ಬೈಬಲ್ ಪ್ರತಿಗಳು, ಸ್ತೋತ್ರ ಗೀತಗಳು, ಬಾಷಾಂತರಗಳು, ಚರ್ಮಪತ್ರಗಳ ಮೇಲೆ ಬರೆದ ಗ್ರಂಥಗಳು, ಅನೇಕ ಅಪೂರ್ವ ಗ್ರಂಥಗಳು ಇವನ ಸಂಗ್ರಹದ ವಿಶೇಷಗಳಾಗಿದ್ದವು. ೧೮೯೨ರ ವರೆಗೂ ಇವು ಅಲತ್ರೋಫನ ನಿವಾಸದಲ್ಲಿ ಸುರಕ್ಷಿತವಾಗಿದ್ದವು. ಈಗ ಈ ಸಂಗ್ರಹ ಮ್ಯಾಂಚೆಸ್ಟರನ ಜಾನ್ ರಾಯಲ್ಯಾಂಡ್ಸ್ ಗ್ರಂಥಾಲಯದ ಪ್ರಮುಖ ಭಾಗವಾಗಿದೆ.