ಪುಟ:Mysore-University-Encyclopaedia-Vol-6-Part-14.pdf/೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಂಥಾಲಯ

ಥಾಮಸ್ ಗ್ರೆನವಿಲ್ ನ(೧೭೫೫-೧೮೪೬) ಗ್ರಂಥಾಲಯದಲ್ಲಿ ಪ್ರಾಚೀನ ಗ್ರೀಕ್ ಗ್ರಂಥಗಳೂ ಅಮೆರಿಕದ ಮಾಹಿತಿಗಳನ್ನು ನೀಡಬಲ್ಲ ಬಗೆಯ ಗ್ರಂಥಗಳೂ ೧೫ನೆಯ ಶತಮಾನದಲ್ಲಿ ಮುದ್ರಿತವಾದ ಗ್ರಂಥಗಳೂ ಇದ್ದವು.ಕೊನೆಗೆ ಇವು ಬ್ರಿಟಿಷ್ ಮ್ಯೂಸಿಯಮಿಗೆ ಸೇರಿದವು. ಹಸ್ತಪ್ರತಿಗಳ ಸಂಗ್ರಹದಲ್ಲಿ ದಾಖಲೆ ಸ್ಥಾಪಿಸಿದ ಥಾಮಸ್ ಫಿಲಿಪ್ಸ‍್ ನ ದಾಖಲೆ ಸಂಗ್ರಹದಲ್ಲಿ ಕಾನುನೂ,ಅದ್ಯಾತ್ಮ,ಭಾಷೆ ಮತ್ತು ಸಾಹಿತ್ಯಗಳಿಗೆ ಸಂಬಂದಿಸಿದ ೬೦,೦೦೦ ಹಸ್ತಪ್ರತಿಗಳಿದ್ದವು.

ಹೀಗ ಅನೇಕ ವೈಯಕ್ತಿಕ ಸಂಗ್ರಹಗಳು ದೇಶದ ದೊಡ್ಡ ಗ್ರಂಥಾಲಯಗಳಿಗೆ ಸೇರಿಹೋದವು. ಸಮಗ್ರ ಯುರೋಪಿನ ಸಾಹಿತ್ಯ,ಇತಿಹಾಸ,ಕಲೆ,ಧರ್ಮ ಮೊದಲಾದವುಗಳ ಬಗ್ಗೆ ಅಮೂಲ್ಯವಾದ ಕೃತಿಗಳನ್ನು ಕೂಡಿಸಿ ಉಳಿಸಿಕೊಂಡು ಬಂದ ಕೀರ್ತಿ ಅಲ್ಲಿನ ಖಾಸಗಿ ಗ್ರಂಥಾಲಯಗಳಿಗೆ ಸಲ್ಲುತ್ತದೆ.

ಸಾರ್ವಜನಿಕ ಗ್ರಂಥಾಲಯಗಳು: ಮೊದಲು ಶ್ರಿಮಂತರು ಹಾಗೂ ರಾಜರು ಖಾಸಗಿಯಾಗಿ ಹೊಂದಿದ್ದ ಗ್ರಂಥಾಲಯಗಳು ಕ್ರಮೇಣ ಒಟ್ಟುಗೂಡಿ ಸಾರ್ವಜನಿಕ ಗ್ರಂಥಾಲಯಗಳಿಗಾಗಿ ಮಾರ್ಪಟ್ಟವು.ಆಗ ಅನೇಕ ವಿಶ್ವವಿದ್ಯಾಲಯಗಳ ಗ್ರಂಥಭಂಡಾರಗಳನ್ನು ಸರ್ಕಾರವೇ ನಡೆಸುತ್ತಿತ್ತು. ಒಂದು ದೃಷ್ಟಿಯಿಂದ ಅವು ಅಗ ಸಾರ್ವಜನಿಕ ಗ್ರಂಥಾಲಯಗಳೇ ಆಗಿದ್ದವು. ನಿಜವಾದ ಸಾರ್ವಜನಿಕ ಗ್ರಂಥಾಲಯಗಳು ಕಾಣಿಸಿಗುವುದು ೧೭ನೆಯ ಶತಮಾನದ ಪ್ರಾರಂಭದ ವರ್ಷಗಳಿಂದ.

ಬ್ರಿಸ್ಟಲ್‍ನಲ್ಲಿ ಟೋಬಿ ಮಾಥ್ಯೂ ಮತ್ತು ರಾಬರ್ಟ್ ರೆಡ್‍ವುಡ್ಡ್ ಅವರ ಪ್ರಯತ್ನದ ಫಲವಾಗಿ ೧೬೧೫ರಲ್ಲಿ ಪ್ರಸಿದ್ದವಾದ ಸಾರ್ವಜನಿಕ ಗ್ರಂಥಾಲಯವೊಂದು ತೆರೆಯಲ್ಪಟ್ಟಿತು.೧೬೩೨ರಲ್ಲಿ ಲೀಸ್ಪರ್‍ ನಲ್ಲೂ ೧೯೫೩ರಲ್ಲಿ ಮ್ಯಾಂಚೆಸ್ಟರ್ ನಲ್ಲೂ ಹಂಫ್ರಿ ಬಿಹಾಮ್ ಎಂಬಾತನ ಕೊಡುಗೆಯ ಫಲವಾಗಿ ಸಾರ್ವಜನಿಕ ಗ್ರಂಥಾಲಯಗಳು ಆರಂಭಗೊಂಡವು.ಈ ಗ್ರಂಥಾಲಯಗಳ ಹೆಚ್ಚಿನ ಗ್ರಂಥಗಳು ಪ್ರಾಚೀನ ಹಾಗೂ ಆಧ್ಯಾತ್ಮಪರವಾದವುಗಳಾದ್ದರಿಂದ ಸಾರ್ವಜನಿಕರಿಗೆ ಎರವಲು ಸಿಗುತಿರಲಿಲ್ಲ.ಹೀಗಾಗಿ ಇವುಗಳಿಂದ ವಾಸ್ತವವಾಗಿ ಸಾರ್ವಜನಿಕರಿಗೆ ಹೆಚ್ಚಿನ ಉಪಯೋಗವಾಗುತ್ತಿರಲಿಲ್ಲ.


೧೮ನೆಯ ಶತಮಾನದಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಸಂಖ್ಯೆ ಅಧಿಕಗೊಂಡಿತು.ಈ ಶತಮಾನದಲ್ಲಿ ಪ್ಯಾರಿಷ್ ಗ್ರಂಥಾಲಯಗಳು ಹಾಗೂ ವಂತಿಗೆ ಗ್ರಂಥಾಲಯಗಳು ಸಾರ್ವಜನಿಕರ ಉಪಯೋಗಕ್ಕಾಗಿ ಹೆಚ್ಚಿನ ಕೆಲಸ ಮಾಡಿದವು.ಥಾಮಸ್ ಬ್ರೇ ಎಂಬಾತ ಇಂಗ್ಲೆಂಡಿನಲ್ಲಿ ೬೦ ಪ್ಯಾರಿಷ್ ಗ್ರಂಥಾಲಯಗಳನ್ನು ಸ್ಥಾಪಿಸಿ ಗ್ರಂಥಾಲಯಗಳ ಉಪಯೋಗವನ್ನು ಬಹುವಾಗಿ ಹೆಚ್ಚಿಸಿದ.ಇವುಗಳಲ್ಲಿ ರಾಜಕೀಯ,ಆಧ್ಯಾತ್ಮಿಕ ಗ್ರಂಥಗಳು ಹೆಚ್ಚಿನವುಗಳಾಗಿದ್ದು ಇವನ್ನು ಜನ ಸಾಮಾನ್ಯರು ಬಳಸಿಕೊಳ್ಳಲು ಅಧಿಕ ಶುಲ್ಕ ತೆರಬೇಕಾಗಿತ್ತು.

ವಂತಿಗೆ ಗ್ರಂಥಾಲಯಗಳು:ಇವು ಮುಖ್ಯವಾಗಿ ಗ್ರಂಥವ್ಯಾಪಾರಿಗಳು ಲಾಭಗಳಿಸಲು ನಡೆಸುತ್ತಿದ್ದಂಥವು.ಕೆಲವು ಲಾಭದಾಸೆಯಿಲ್ಲದೆ ಕೆಲಸ ಮಾಡುತ್ತಿದ್ದದೂ ಉಂಟು.೧೭೨೫ರಲ್ಲಿ ಎಡಿನ್ ಬರೊದಲ್ಲೂ ೧೭೪೦ರಲ್ಲಿ ಲಂಡನ್ನಿನಲ್ಲೂ ಈ ಬಗೆಯ ಗ್ರಂಥಾಲಯಗಳು ಅಸ್ತಿತ್ವಕ್ಕೆ ಬಂದವು.ಜನಸಾಮಾನ್ಯರು ತಿಂಗಳಿಗೆ ಒಂದು ಷಿಲಿಂಗಿನಂತೆ ಶುಲ್ಕ ಕೊಟ್ಟು ಗ್ರಂಥಗಳನ್ನು ಎರವಲು ಪಡೆಯಬಹುದಾಗಿತ್ತು.೧೮೦೦ರ ಹೊತ್ತಿಗೆ ಇಂಗ್ಲೆಂಡಿನ ಅನೇಕ ಪಟ್ಟಣಗಳಲ್ಲಿ ಸಂಚಾರಿ ಗ್ರಂಥಾಲಯಗಳು ಸ್ಥಾಪಿತಗೊಂಡು ಪ್ರಸಿದ್ಧಿ ಪಡೆದವು.ಲಂಡನ್ನಿನ ವಿಲಿಯಂ ಲೇನ್ ಎಂಬಾತ ಇಂಥ ಸಂಚಾರಿ ಗ್ರಂಥಾಲಯಗಳ ಸರಪಣಿಯನ್ನೇ ಸ್ಥಾಪಿಸಿ ಅನೇಕ ಜನಪ್ರಿಯ ಕಾದಂಬರಿಗಳನ್ನು ಅವುಗಳಲ್ಲಿ ಸೇರಿಸಿದ.ಅದರಂತೆ ಚಾರ್ಲ್ಸ್ ಎಡ್ವರ್ಡ್ ಸ್ಥಾಪಿಸಿದ ಮುಡೀಸ್ ಸಂಚಾರಿ ಗ್ರಂಥಾಲಯಗಳು ಬಹಳ ಪ್ರಸಿದ್ಧವಾದವು.೨೦ನೆಯ ಶತಮಾನದಲ್ಲಿ ಪ್ರಾರಂಭವಾದ ವಾರಿಸ ಸಾರ್ವಜನಿಕ ಗ್ರಂಥಾಲಯಗಳು ಹಾಗೂ ಪೇಪರ್ ಬ್ಯಾಕ್ ಗ್ರಂಥಗಳಿಂದಾಗಿ ಸಂಚಾರಿ ಗ್ರಂಥಾಲಯಗಳು ಕ್ರಮೇಣ ಕಡಿಮೆಯಾದವು.

‍ಠೇವಣಿ ಗ್ರಂಥಾಲಯಗಳು:೧೮ನೆಯ ಶತಮಾನದ ಕೊನೆಯ ಭಾಗದಲ್ಲಿ ಈ ಬಗ್ಗೆಯ ಗ್ರಂಥಾಲಯಗಳು ಬೆಳೆದವು.ಸಮಾಜದ ಕೆಲವು ಪ್ರತಿಷ್ಟಿತ ವ್ಯಕ್ತಿಗಳು ಸೇರಿ ವಾಚನಾಲಯವನ್ನೂ ಜೊತೆಗೆ ಸದಸ್ಯರ ಉಪಯೋಗಕ್ಕಾಗಿ ಗ್ರಂಥಾಲಯವನ್ನೂ ಸ್ಥಾಪಿಸುತ್ತಿದ್ದರು.ಇಂಥ ಸಂಸ್ಥೆಗಳಿಗೆ ಸದ್ಯಸರಾಗಬಯಸುವವರು ತಿಂಗಳಿಗೆ ಒಂದು ಸಾರಿ ಇಲ್ಲವೆ ವರ್ಷಕ್ಕೆ ಒಂದು ಸಾರಿಯಾಗಲಿ ನಿಗದಿಯಾದ ಚಂದಾಹಣವನ್ನು ಕೊಡಬೇಕಾಗಿತ್ತು.ಬಾಡಿಗೆಗೆ ಪಡೆದ ಮನೆಗಳಲ್ಲಾಗಲಿ ದೊಡ್ಡ ಪಡಸಾಲೆಗಳಲ್ಲಾಗಲಿ ಗ್ರಂಥಗಳನ್ನು ಜೋಡಿಸಿ ಕೆಲವೇ ಗಂಟೆಗಳು ತೆರೆದಿದ್ದು ಯಾರಾದರೊಬ್ಬರ ಮೇಲ್ವಿಚಾರಣೆಯಲ್ಲಿ ಪುಸ್ತಕ ವಿತರಣೆ ನಡೆಯುವ ಏರ್ಪಾಡಿತ್ತು.ಇದ್ದರಿಂದ ಸಾರ್ವಜನಿಕರಿಗೆ ಠೇವಣಿಯ ಮೇಲೆ ಗ್ರಂಥಗಳು ಸಿಗುವಂತಾಯಿತು.ಬ್ರ್ಯಾಡ್‍ಫರ್ಡ್,ಬರ್ಮಿಂಗ್‍ಹ್ಯಾಮ್,ಲೀಸ್ಪರ್,ನ್ಯೂಕ್ಯಾಸಲ್,ಯಾರ್ಕ್,ಲಿವರ್ ಪೂಲ್ ಮೊದಲಾದ ಎಡೆಗಳಲ್ಲಿ ಠೇವಣಿ ಗ್ರಂಥಾಲಯಗಳು ಉತ್ತಮವಾಗಿ ವ್ಯವಹರಿಸಿದವು.

ಕಸಬುದಾರರ ಗ್ರಂಥಾಲಯಗಳು:ಕೆಲಸಗಾರರ ಹಾಗೂ ಸಣ್ಣ ಉದ್ದಿಮೆದಾರರ ಮತ್ತು ವ್ಯಾಪಾರಿಗಳ ಉಪಯೋಗಕ್ಕಾಗಿ ಕೆಲವು ಉದಾರ ವ್ಯಕ್ತಿಗಳ ನೆರವಿನಿಂದ ಕೆಲಸಗಾರರ ಸಂಸ್ಥೆಗಳು ನಿರ್ಮಾಣವಾದವು.ಈ ಸಂಸ್ಥೆಗಳು ಗ್ರಂಥಾಲಯಗಳನ್ನು ತೆರೆದವು.ಇಲ್ಲಿ ಕಡಿಮೆ ಶುಲ್ಕ ಪಡೆದು ಖ್ಯಾತ ಗ್ರಂಥಗಳನ್ನು ಓದಲು ಕೊಡುತ್ತಿದ್ದರು.ಬರ್ಮಿಂಗ್ ಹ್ಯಾಮ್ ಕಸಬುದಾರರ ಗ್ರಂಥಭಂಡಾರ(೧೭೯೫) ಈ ಶ್ರೇಣಿಯಲ್ಲಿ ಹುಟ್ಟಿದ ಮೊದಲ ಸಂಸ್ಥೆ. ೧೮೨೩ರಲ್ಲಿ ಹುಟ್ಟಿಕೊಂಡ ಗ್ಲಾಸ್ಗೋ ಕೆಲಸಗಾರರ ಸಂಸ್ಥೆ ಗ್ರಂಥಾಲಯವನ್ನು ನಡೆಸುವ ಹೊಣೆಯ ಜೊತೆಗೆ ಕೆಲಸಗಾರರ ತರಬೇತಿಯನ್ನು ನಿರ್ವಹಿಸಹತ್ತಿತು.ಅನಂತರ ಈ ಸಂಸ್ಥೆ ಕಾಲೇಜಾಗಿ ಪರಿವರ್ತನೆಗೊಂಡಿತು.ಹೀಗೆ ೧೮೨೧ರಲ್ಲಿ ಎಡಿನ್ ಬರೊದಲ್ಲಿಯೂ ೧೮೨೩ರಲ್ಲಿ ಲಿವರ್ ಪೂಲಿನಲ್ಲಿಯೂ ೧೮೨೪ರಲ್ಲಿ ಆಬರ್ ಡೀನ್ ಮತ್ತು ಲಂಡನ ನಗರಗಳಲ್ಲಿಯೂ ಈ ತೆರನಾದ ಗ್ರಂಥಾಲಯಗಳು ಹುಟ್ಟಿಕೊಂಡವು.ಬ್ರಿಟನ್ನಿನಲ್ಲಿ ೧೮೫೦ರ ಸುಮಾರಿಗೆ ಇಂಥ ೪೦೦ಕ್ಕೂ ಮಿಕ್ಕಿದ ಗ್ರಂಥಾಲಯಗಳು ಕಾರ್ಯವೆಸಗುತ್ತಿದ್ದವು.ಸಾರ್ವಜನಿಕ ಗ್ರಂಥಾಲಯ ಕಾಯಿದೆ ಬ್ರಿಟನ್ನಿನಲ್ಲಿ ಜಾರಿಗೆ ಬಂದ ಮೇಲೆ ಅಂಥ ಗ್ರಂಥಾಲಯಗಳು ಸಾರ್ವಜನಿಕ ಗ್ರಂಥಾಲಯಗಳಿಗೆ ಕೂಡಿಸಲ್ಪಟ್ಟವು.ಹೀಗೆ ಸಾರ್ವಜನಿಕ ಗ್ರಂಥಾಲಯಗಳ ಬೆಳೆವಣಿಗೆಯಲ್ಲಿ ಠೇವಣಿ ಹಾಗೂ ಕಸಬುದಾರರ ಗ್ರಂಥಾಲಯಗಳು ವಿಶಿಷ್ಟಪಾತ್ರಗಳನ್ನು ವಹಿಸಿದ್ದವು.ಕ್ರಮೇಣ ಜನರಿಗೆ ಓದಿನ ಅಭಿರುಚಿ ಹುಟ್ಟಿಸುವಲ್ಲಿ ಈ ಗ್ರಂಥಾಲಯಗಳು ಅಸ್ತಿತ್ವ ತುಂಬ ಸಹಕಾರಿಯಾಯಿತು.

ಉಚಿತ ಸಾರ್ವಜನಿಕ ಗ್ರಂಥಾಲಯಗಳು:೧೮೪೭ ಗ್ರೇಟ್ ಬ್ರಿಟನ್ನಿನ ಸಾರ್ವಜನಿಕ ಗ್ರಂಥಾಲಯಗಳ ಚರಿತ್ರೆಯಲ್ಲಿ ಅವಿಸ್ಮರಣ್ಣಿಯ ವರ್ಷ.ಬ್ರಿಟಿಷ್ ಪಾರ್ಲಿಮೆಂಟು ಸಾರ್ವಜನಿಕ ಗ್ರಂಥಾಲಯ ಸಮಿತಿಯೊಂದನ್ನು ರಚಿಸುವ ಕಾಯಿದೆಯನ್ನು ಅಂಗೀಕರಿಸಿತು.ಅದರಂತೆ ದೇಶದ ಎಲ್ಲೆಡೆ ಗ್ರಂಥಾಲಯಗಳನ್ನು ಸ್ಥಾಪಿಸುವ ಅವಶ್ಯಕತೆಯನ್ನು ವಿಮರ್ಶಿಸುವಂತೆ ಸಮಿತಿಗೆ ಆದೇಶ ನೀಡಿತು.ಇದರ ಫಲವಾಗಿ ಬ್ರಿಟಿಷ್ ಪಾರ್ಲಿಮೆಂಟು ೧೮೫೦ರ ಆಗಸ್ಟ್ ೧೪ರಂದು ಸಾರ್ವಜನಿಕ ಗ್ರಂಥಾಲಯ ಕಾಯಿದೆಯನ್ನು ಜಾರಿಗೆ ತಂದಿತು.ಈ ಮಸೂದೆಗೆ ಅನೇಕರ ವಿರೋಧವಿತ್ತಾದರೂ ಎಡ್ ವರ್ಡ್ಸ್,ವಿಲಿಯಂ ಎವರ್ಟ್ ಮುಂತಾದ ಉತ್ಯಾಹಿಗಳ ಹಾಗೂ ಇನ್ನಿತರ ಗಣ್ಯರ ಪ್ರಯತ್ನಗಳ ಫಲವಾಗಿ ಕಾಯಿದೆ ಅನುಷ್ಠಾನಕ್ಕೆ ಬರುವಂತಾಯಿತು.ಇದರಿಂದಾಗಿ, ಗ್ರಂಥಾಲಯ ಕಟ್ಟಡ ನಿರ್ಮಾಣ ಹಾಗೂ ಗ್ರಂಥಾಲಯ ನಿರ್ವಹಣೆಗಾಗಿ ಪೌಂಡಿಗೆ ಅರ್ಧ ಪೆನ್ನಿಯಂತೆ ಕರ ಎತ್ತುವ ಅಧಿಕಾರ ಪ್ರತಿಯೊಂದು ನಗರಸಭೆಗೂ ಬಂತು.ಜೊತೆಗೆ ಈ ಕಾಯಿದೆಯಿಂದಾಗಿ ಸಾರ್ವಜನಿಕರಿಗೆ ಗ್ರಂಥಾಲಯ ಸೇವೆ ಉಚಿತವಾಗಿ ದೊರೆಯುವಂತಾಯಿತು.೧೮೫೫ರಲ್ಲಿ ಆದ ಕಾಯಿದೆ ತಿದ್ದುಪಡಿಯ ಪ್ರಕಾರ ೫,೦೦೦ ಜನರುಳ್ಳ ಪ್ರತಿ ನಗರವೂ ಸಾರ್ವಜನಿಕ ಗ್ರಂಥಾಲಯವನ್ನು