ಪುಟ:Mysore-University-Encyclopaedia-Vol-6-Part-14.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಂಥಾಲಯ ಕ್ಯಾಟಲಾಗ್). ಇದರಲ್ಲಿ ಯಾವುದೇ ಒಂದು ವಿಷಯದ ಸ್ಥೂಲ ಹಾಗು ಸುಕ್ಷ್ಮ ಅಂಶಗಳನ್ನೊಳಗೊಂಡ ಅನೇಕ ಗ್ರಂಥಗಳು ಕಾರ್ಡುಗಳು ಒಂದಡೆ ವ್ಯವಸ್ಥಿತ ರೀತಿಯಲ್ಲಿ ಇರುತ್ತವಾದ್ದರಿಂದ ಸಂಶೋಧಕರಿಗೆ ಹೆಚ್ಚು ಸಹಾಯವಾಗುವುದು. ವರ್ಗೀಕೃತ ಗ್ರಂಥಸೂಚಿಯ ವಿಧಾನದಲ್ಲಿ ಕಾರ್ಡುಗಳನ್ನು ಜೋಡಿಸಿದ ಕ್ರಮದಲ್ಲಿಯೇ ಕಪಾಟುಗಳಲ್ಲಿ ಗ್ರಂಥಗಳನ್ನು ಇಟ್ಟಿರುವುದರಿಂದ ಮುಕ್ತದ್ವಾರಪದ್ಧತಿ (ಓಪನ್ ಆಕ್ಸೆಸ್) ಇರುವಂಥ ಗ್ರಂಥಾಲಯಗಳಲ್ಲಿ ಓದುಗ ಸೂಚಿಯ ಅವಲೋಕನಾ ನಂತರ ತನಗೆ ಬೇಕಾದ ಗ್ರಂಥವನ್ನು ಸುಲಭವಾಗಿ ಕಪಾಟಿನಿಂದ ಆಯ್ದುಕೊಳ್ಳಬಹುದು. ವಿಷಯಗಳು ಯಾವುದೇ ಭಾಷೆಯಲ್ಲಿ ಲಿಪಿಯಲ್ಲಿದ್ದರೂ ವರ್ಗಾಂಕಗಳು ಏಕರೀತಿಯವಾಗಿರುವುದರಿಂದ ಈ ಕ್ರಮ ಅಂತಾರಾಷ್ಟ್ರೀಯ ಸಹಕಾರಗ್ರಂಥಸೂಚಿಯಾಗಲು ಬೇಕಾದ ಎಲ್ಲ ಅರ್ಹತೆಗಳನ್ನೂ ಹೊಂದಿದೆ. 3 ಮಿಶ್ರ ಜೋಡಣೆ; ಮೇಲಿನ ಎರಡೂ ಬಗೆಯ ವಿಧಾನಗಳ ಮಿಶ್ರಣವಿದು. ಗ್ರಂಥಗಳನ್ನು ಬೇಕಷ್ಟು ವರ್ಗಗಳಲ್ಲಿ ವಿಂಗಡಿಸಿ ಪ್ರತಿಯೊಂದು ವರ್ಗದಲ್ಲಿನ ಉಲ್ಲೇಖ ಕಾರ್ಡುಗಳನ್ನು ಅಕ್ಷರಾನುಕ್ರಮದಲ್ಲಿ ಹೊಂದಿಸಿ, ಈ ಬಗೆಯ ಗ್ರಂಥಸೂಚಿಯನ್ನು ತಯಾರಿಸುತಾರೆ. ಗ್ರಂಥಪಾಲಯ ತಮ್ಮ ವಾಚಕರ ಸೌಲಭ್ಯಕ್ಕನುಗುಣವಾಗಿ ಉಲ್ಲೇಖ ಕಾರ್ಡುಗಳನ್ನು ಮತ್ತಾವುದೇ ಸೂಕ್ತರೀತಿಯಲ್ಲಿ ಹೊಂದಿಸಿಕೊಳ್ಳಲು ಅವಕಾಶವಿರುತ್ತದೆ. ಗ್ರಂಥಸೂಚಿಗಳಲ್ಲಿ ಬಗೆಗಳುಂಟು. ವೈಯಕ್ತಿಕ ಗ್ರಂಥಸೂಚಿ, ವಿಷಯ ಗ್ರಂಥಸೂಚಿ, ರಾಷ್ಟ್ರೀಯ ಗ್ರಂಥಸೂಚಿ, ಪ್ರಾದೇಶಿಕ ಗ್ರಂಥಸೂಚಿ, ಅಂತಾರಾಷ್ಟ್ರಿಯ ಗ್ರಂಥಸೂಚಿ - ಹೀಗೆ ಒಂದು ವಿಷಯಕ್ಕೆ ಸಂಬಂಧಿಸಿದ ಗ್ರಂಥಗಳ ಇಲ್ಲವೇ ಲೇಖನಗಳ ಬಗ್ಗೆ ಪೊರ್ಣಮಾಹಿತಿಗಳು ಇದ್ದ ಪಕ್ಷಕ್ಕೆ ಅಂಥವನ್ನು ಸಂಪೂರ್ಣ ಗ್ರಂಥಸೂಚಿಗಳೆಂದೂ ಕೆಲವೇ ಗ್ರಂಥಗಳ ಇಲ್ಲವೇ ಲೇಖನಗಳ ಬಗ್ಗೆ ಪೂರ್ಣ ಮಾಹಿತಿ ಇದ್ದ ಪಕ್ಷಕ್ಕೆ ಅಂಥವನ್ನು ಆಯ್ದ ಗ್ರಂಥಸೂಚಿಗಳೆಂದೂ ಕರೆವುದಿದೆ. ಪ್ರಪಂಚದ ಹಲವಾರು ರಾಷ್ಟ್ರಗಳ ಗ್ರಂಥಾಲಯಗಳು ತಮ್ಮ ಅಗತ್ಯಗಳಿಗನುಣವಾಗಿ ತಮ್ಮವೇ ಆದ ರಾಷ್ಟ್ರೀಯ ಗ್ರಂಥಸೂಚಿಗಳನ್ನು ನಿರ್ಮಿಸಿಕೊಂಡಿವೆ. ಇಂಥವಲ್ಲಿ ಪ್ರಮುಖವೆನಿಸಿರುವ ಭಾರತ ರಾಷ್ಟ್ರೀಯ ಗ್ರಂಥಸೂಚಿ ಮತ್ತು ಬ್ರಿಟಿಷ್ ರಾಷ್ಟ್ರೀಯ ಗ್ರಂಥಸೂಚಿಗಳನ್ನು ಕುರಿತು ಇಲ್ಲಿ ಪ್ರಸ್ತಾಪಿಸಲಾಗಿದೆ. ಭಾರತದ ರಾಷ್ಟ್ರೀಯ ಗ್ರಂಥಸೂಚಿ ; ಇದು ಭಾರತ ಸರ್ಕಾರದ ಪರವಾಗಿ 1958 ರಿಂದ ಮೊದಲುಗೊಂಡು ತ್ರೈಮಾಸಿಕವಾಗಿಯೂ ಅನಂತರ 1968 ರಿಂದ ಮಾಸಿಕವಾಗಿಯೂ ಕಲ್ಕತ್ತದಿಂದ ಪ್ರಕಟವಾಗುತ್ತಿದೆ. ಭಾರತ ಸರ್ಕಾರದ ಗ್ರಂಥಾಲಯ ಕಾಯಿದೆಗೆ ಅನುಗುಣವಾಗಿ ಭಾರತದಲ್ಲಿ ಪ್ರಕಟವಾಗಿರುವ ಹಾಗೂ ಅವುಗಳ ಪ್ರಕಾಶಕರಿಂದ ಕಳುಹಿಸಲ್ಪಟ್ಟ ಗ್ರಂಥಗಳ ವಿವರಗಳನ್ನು ಈ ಸೂಚಿಯಲ್ಲಿ ಕೊಡಲಾಗುತ್ತದೆ. ಸಮಾವೇಶದ ಎಲ್ಲ ಗ್ರಂಥಗಳ ಬಗ್ಗೆ ವಿವರಗಳನ್ನು ರೋಮನ್ ಲಿಪಿಯಲ್ಲಿ ಉಲ್ಲೇಖಿಸಿ ಕೊನೆಯಲ್ಲಿ ಗ್ರಂಥಗಳ ಭಾಷೆಯನ್ನು ಸಂಜೆಯ ಮೂಲಕ ಸೂಚಿಸಿರುತ್ತಾರೆ. ಗ್ರಂಥಗಳನ್ನೆಲ್ಲ ದಾಶಮಿಕ ವರ್ಗೀಕರಣ ಅಂಕವನ್ನು ದಾಶಮಿಕ ವರ್ಗೀಕರಣ ಪದ್ಧತಿಯ ಕ್ರಮದಲ್ಲೂ ದ್ವಿಬಿಂದು ವರ್ಗೀಕರಣ ಪದ್ಧತಿಯ ಕ್ರಮದಲ್ಲೂ ತೋರಿಸಿರುತ್ತಾರೆ. ಸೂಚಿಯ ಕೊನೆಯಲ್ಲಿ ಅಕಾರಾದಿಯಾಗಿ ಕೊಟ್ಟಿರುವ ಪರಿಶಿಷ್ಪದ ಸಹಾಯದಿಂದ ಒಬ್ಬ ಲೇಖಕನ ಯಾವ ಯಾವ ಕೃತಿಗಳು ಗ್ರಂಥಸೂಚಿಯಲ್ಲಿ ಸಮಾವೇಶವಾಗಿವೆಯೆಂಬುದನ್ನು ಸುಲಭವಾಗಿ ತಿಳಿಯಬಹುದು. ಭಾರತದಲ್ಲಿ ಪ್ರತಿವರ್ಷ ಬೇರೆ ಬೇರೆ ಭಾಷೆಗಳಲ್ಲಿ ಹಾಗೂ ಬೇರೆ ಬೇರೆ ವಿಷಯಗಳಲ್ಲಿ ಎಷ್ಟು ಗ್ರಂಥಗಳು ಪ್ರಕಟವಾಗಿವೆಯೆಂಬುದನ್ನೂ ತಿಳಿಯಬಹುದು. ವರ್ಷದ ಕೊನೆಯಲ್ಲಿ ಪ್ರತಿ ತಿಂಗಳಿನ ಸಂಚಿಕೆಯಲ್ಲಿ ಸಮಾವೇಶವಾದ ಗ್ರಂಥಗಳ ದಾಖಲೆಗಳನ್ನು ಒಂದುಗೂಡಿಸಿ ಒಂದು ಪ್ರತ್ಯೇಕ ಸಂಪುಟವನ್ನು ಪ್ರಕಟಿಸಲಾಗುತ್ತಿದೆ. ಪ್ರತಿಯೊಂದು ಸಂಚಿಕೆಯಲ್ಲಿಯೂ ಎರಡು ಭಾಗಗಳಿದ್ದು ಮೊದಲ ಭಾಗದಲ್ಲಿ ವೈಯಕ್ತಿಕ ಲೇಖಕರು ಹಾಗು ಸಂಘಸಂಸ್ಥೆಗಳಿಂದ ಪ್ರಕಟವಾದ ಗ್ರಂಥಗಳ ಬಗ್ಗೆಯೂ ಎರಡನೆಯ ಭಾಗದಲ್ಲಿ ಕೆಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪ್ರಕಟವಾದ ಗ್ರಂಥಗಳ ಬಗ್ಗೆಯೂ ವಿವರಗಳನ್ನು ಕೊಡಲಾಗಿರುತ್ತದೆ. ಬ್ರಿಟಿಷ್ ರಾಷ್ಟ್ರೇಯ ಗ್ರಂಥಸೂಚಿ ; ಇದು ಬ್ರಿಟಿಷ್ ನ್ಯಾಷನಲ್ ಬಿಬ್ಲಿಯೋಗ್ರಫಿ ಎಂಬ ಹೆಸರಿನಿಂದ 1950 ರಿಂದಲೂ ಪ್ರಕಟವಾಗುತ್ತಿದೆ. ಈ ಸೂಚಿಯಲ್ಲಿ ಬ್ರಿಟನ್ನಿನಲ್ಲಿ ಪ್ರಕಟವಾಗುವ ಎಲ್ಲ ಗ್ರಂಥಗಳ ಬಗ್ಗೆ ವಿವರಗಳನ್ನು ದಾಶಮಿಕ ವರ್ಗೀಕರಣ ಕ್ರಮದಲ್ಲಿ ಕೂಡಲಾಗಿದೆ. ಸೂಚಿಯ ಕೊನೆಯಲ್ಲಿ ಅಕಾರಾದಿಯಾಗಿ ಕೊಟ್ಟಿರುವ ಪರಿಶಿಷ್ಪದ ಸಹಾಯದಿಂದ ಯಾವೊಬ್ಬ ಲೇಖಕನ ಯಾವ ಯಾವ ಕೃತಿಗಳು ಸಮಾವೇಶ ವಾಗಿವೆಯೆಂಬುದು ಸುಲಭವಾಗಿ ತಿಳಿಯಬಹುದು. ಈ ಗ್ರಂಥಸೂಚಿ ವಾರಕ್ಕೊಮ್ಮೆ ಪ್ರಕಟಗೊಳ್ಳುತ್ತಿದು ಪ್ರಕಟವಾದ ಸೂಚಿಗಳನ್ನು ಕೂಡಿಸಿ ಪ್ರಕಟಗೊಳಿಸಲಾಗುತ್ತದೆ. ಕ್ಯುಮ್ಯುಲೇಟಿವ್ ಬುಕ್ ಇಂಡೆಕ್ಸ್ ಎಂಬುದು ಇನ್ನೊಂದು ಜಗತ್ ಪ್ರಸಿದ್ಧ ಗ್ರಂಥಸೂಚಿ. ಗ್ರಂಥಾಲಯ ಜಗತ್ತಿನಲ್ಲಿ ಪ್ರಮುಖ ಪರಾಮರ್ಶನ ಗ್ರಂಥಗಳನ್ನು ಪ್ರಕಟಿಸುತ್ತಿರುವ ನ್ಯೂಯಾರ್ಕಿನ ಎಚ್.ಡಬ್ಲ್ಯೂ. ವಿಲ್ಸನ್ ಕಂಪನಿ ಈ ಗ್ರಂಥಗಳನ್ನು ಪ್ರಕಟಿಸುತ್ತಿದೆ. ಅಮೆರಿಕದ ಸಂಯುಕ್ತಸಂಸ್ಥಾನದಲ್ಲಿ ಪ್ರಕಟವಾಗುವ ಎಲ್ಲ ಗ್ರಂಥಗಳ ಹಾಗೂ ಇತರ ದೇಶಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಗುವ ಎಲ್ಲ ಗ್ರಂಥಗಳ ಬಗ್ಗೆ ಉಪಯುಕ್ತವಾದ ಮಾಹಿತಿಯನ್ನು ಈ ಸೂಚಿ ನೀಡುತ್ತದೆ. ಸಮಾವೇಶವಾದ ಗ್ರಂಥಗಳ ಬಗ್ಗೆ ವಿವರಗಳನ್ನು ಅಕಾರಾದಿಯಾಗಿ ಕೊಟ್ಟಿರುವದರಿಂದ ಗ್ರಂಥಕ್ಕೆ ಸಂಬಂಧಪಟ್ಟ ಯಾವುದೇ ಒಂದು ವಿಷಯ ಗೊತ್ತಿದ್ದರೂ ಸಾಕು, ಆ ಗ್ರಂಥದ ಇತರ ವಿವರಗಳನ್ನು ಕಂಡುಹಿಡಿಯಲು ಬರುತ್ತದೆ. ಪ್ರತಿ ತಿಂಗಳಿಗೊಮ್ಮೆ ಪ್ರಕಟವಾಗುವ ಈ ಗ್ರಂಥಸೂಚಿಯನ್ನು ಆರು ತಿಂಗಳಿಗೊಮ್ಮೆ ಕೂಡಿಸಿ ವರ್ಷದಲ್ಲಿ ಎರಡು ಸಂಪುಟಗಳಲ್ಲಿ ಪ್ರತ್ಯೇಕವಾಗಿ ಪ್ರಕಟಿಸುತ್ತರೆ. ವರ್ಷದ ಕೊನೆಯಲ್ಲಿ ಈ ಎರಡೂ ಸಂಪುಟಗಳನ್ನೊಳಗೊಂಡ ಒಂದೇ ಸಂಪುಟವನ್ನು ಪ್ರಕಟಿಸುವುದೂ ಉಂಟು. ಇಲ್ಲವೆ ಮೂರು ವರ್ಷದ ಸಂಪುಟಗಳನ್ನು ಸೇರಿಸಿ ಒಂದು ಹಾಗೂ ಸಂಪುಟದ ಕೊನೆಯಲ್ಲಿ ಪ್ರಕಾಶಕರ ಪಟ್ಟಿಯೊಂದನ್ನು ಅವರ ವಿಳಾಸ ಸಹಿತ ಅಕಾರಾದಿಯಾಗಿ ಕೊಟ್ಟಿರುತ್ತಾರೆ. ಅಮೆರಿಕದಲ್ಲಿ ಪ್ರಕಟವಾಗುತ್ತಿರುವ ಇಂಗ್ಲೀಷ್ ಭಾಷೆಯ ವಿವಿಧ ಗ್ರಂಥಗಳ ವಿವರಗಳನ್ನು ನ್ಯೂಯಾರ್ಕಿನ ಆರ್. ಆರ್. ಬೌಕರ್ ಕಂಪನಿ ಪ್ರತಿವರ್ಷ ಪ್ರಕಟಿಸುವ ಬುಕ್ ಇನ್ ಪ್ರಿಂಟ್ ಎಂಬ ಸೂಚಿ ನೀಡುತ್ತದೆ. ಭಾರತದಲ್ಲಿ ಪ್ರಚಲಿತವಿರುವ ವಿವಿಧ ಭಾಷಾಗ್ರಂಥಸೂಚಿಗಳ ಪ್ರಕಟನೆಯನ್ನು ವಿವಿಧ ಸಂಘಸಂಸ್ಥೆಗಳು ಕೈಗೊಂಡಿವೆ. ಅಂಥ ಕೆಲವು ಸೂಚಿಗಳ ವಿಚಾರವನ್ನು ಇಲ್ಲಿ ಸಂಕ್ಷಿಪ್ತವಾಗಿ ಪ್ರಸ್ತಾಪಿಸಲಾಗಿದೆ. 1995-67ರ ಅವಧಿಯಲ್ಲಿ ಪ್ರಕಾಶಿತವಾದ ಇಂಗ್ಲಿಷ್ ಭಾಷೆಯ ಪುಸ್ತಕಗಳ ಬಗ್ಗೆ ವಿವರಗಳನ್ನು ಕೊಡುವ ಇಂಡಿಯನ್ ಬುಕ್ ಇನ್ ಪ್ರಿಂಟ್ 1955-67 ಎಂಬ