ಪುಟ:Mysore-University-Encyclopaedia-Vol-6-Part-14.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಂಥಾಲಯ: ವಿಷಯವಣನ್ನೊಳಗೊಂಡ ಅನ್ನಪಾನವಿಧಿ, ಮಕ್ಕಳ ಬೇನೆಯ ಮೇಲೆ ಬರೆದ ಬಾಲತಂತ್ರ, ವೈದ್ಯ ನಿಘಂಟು-ಇವು ಇಲ್ಲಿವೆ. ಭಾರತ ಸರ್ಕಾರದಿಂದ ನೇಮಿಸಲ್ಪಟ್ಟ ಸಂಶೋಧಕ ತಂಡವೊಂದು ಇಲ್ಲಿ ವೈದ್ಯಶಾಸ್ತ್ರದಲ್ಲಿಯ ೩,೦೦೦ ಹಸ್ತಪ್ರತಿಗಳ ಸಂಶೋಧನೆ ನಡೆಯಿಸಿದೆ.

ಇಲ್ಲಿರುವ ಚಿತ್ರ ಹಾಗೂ ಪಟಗಳ ಸಂಗ್ರಹದಲ್ಲಿ ಮಾನವನ ಮುಖಗಳು ಹಾಗೂ ಕೆಲವೊಂದು ಪ್ರಾಣಿ-ಪಕ್ಷಿಗಳ ಮುಖಗಳಲ್ಲಿರುವ ಸಾಮ್ಯವನ್ನು ಎತ್ತಿತೋರಿಸುವ ಚಿತ್ರಗಳು, ಚೀನದೇಶದಲ್ಲಿ ಪ್ರಚಲಿತವಿದ್ದ ಕ್ರೂರಶಿಕ್ಷೆಯನ್ನು ತೋರಿಸುವ ಪಟಗಳು, ಗಿಡಮೂಲಿಕೆಗಳ ನೈಜರೂಪಗಳ ಚಿತ್ರಗಳು ಇವೆ. ಇಲ್ಲಿರುವ ಅತಿಸೂಕ್ಷ್ಮವೂ ಅಂದವೂ ಆದ ಕೈಬರೆಹಗಳೂ ಚಿಕ್ಕ ವರ್ಣಮಯ ಚಿತ್ರಗಳೂ ಪುರಾಣದ ಚಿತ್ರಗಳೂ ಬಹು ಹಳೆಯವಾದರೂ ಹೊಚ್ಚಹೊಸವೆನ್ನುವಂತಿವೆ.

ಅರಮನೆಗೆ ಸಂಬಂಧಿಸಿದ ಸ್ವತ್ತುಗಳ ಹಕ್ಕುಬಾಧ್ಯತೆ ಬಗೆಗೆ ವಾದವಿವಾದಗಳಿದ್ದುದರಿಂದ ಈ ಗ್ರಂಥಾಲಯವನ್ನು 1918ರಲ್ಲಿ ಒಂದು ಸಾರ್ವಜನಿಕ ನ್ಯಾಸವಾಗಿ ಪರಿವರ್ತಿಸಲಾಯಿತು. ಈ ಸಂಬಂಧವಾಗಿ ಸರ್ಕಾರ 5 ಅಕ್ಟೋಬರ್ 1918ರಲ್ಲಿ ಒಂದು ಆಜ್ಞೆಯನ್ನು ಹೊರಡಿಸಿ ಜಿಲ್ಲಾ ಕಲೆಕ್ಟರು, ಜಿಲ್ಲಾ ನ್ಯಾಯಾಧೀಶರು, ರಾಜ ಮನೆತನಕ್ಕೆ ಸೇರಿದ ಒಬ್ಬರು, ಇಬ್ಬರು ಖಾಸಗಿ ಸದ್ಯಸರು-ಹೀಗೆ ‌‍‍ಐವರ ಸಮಿತಿಯನ್ನು ಏರ್ಪಡಿಸಿತು. ಇವರಲ್ಲಿ ಒಬ್ಬರನ್ನು ರಾಜ್ಯಸರ್ಕಾರ ನಾಮಕರಣ ಮಾಡುತ್ತದೆ. ಆತನೇ ಗ್ರಂಥಾಲಯದ ಗೌರವಕಾರ್ಯದರ್ಶಿ ಆಗಿರುತ್ತಾನೆ. ಇನ್ನೊಬ್ಬನನ್ನು ಸಮಿತಿಯ ಸದಸ್ಯರು ನಾಮಕರಣ ಮಾಡುತ್ತಾರೆ.

ಈ ಗ್ರಂಥಾಲಯದಲ್ಲಿರುವ ಅಪಾರಸಂಖ್ಯೆಯ ಹಸ್ತಪ್ರತಿಗಳ ಸೂಚೀಕರಣವನ್ನು 1884ರಲ್ಲಿ ಜರ್ಮನ್ ವಿದ್ವಾಂಸ ಬರ್ನೆಲ್ ಪ್ರಾರಂಭಿಸಿದ. ಗ್ರಂಥಾಲಯದಲ್ಲಿನ ಸಂಸ್ಕೃತಿ ಕೃತಿಗಳ ಮೊದಲನೆಯ ಸೂಚಿಯನ್ನು ಲಂಡನ್ ಮ್ಯೂಸಿಯಂ ಪ್ರಕಟಿಸಿತು. ಪಸಿದ್ಧ ಸಂಸ್ಕೃತ ವಿದ್ವಾಂಸರಾಗಿದ್ದ ಪಿ.ಪಿ.ಸುಬ್ರಹ್ಮಣ್ಯಶಾಸ್ತ್ರಿಗಳು 1925ರಿಂದ 1930ರ ಅವಧಿಯಲ್ಲಿ ಕೆಲವು ಪಂಡಿತರ ನೆರವಿನಿಂದ ಗ್ರಂಥಾಲಯದ ಸಂಸ್ಕೃತ ಹಸ್ತಪ್ರತಿಗಳ 19 ಸಂಪುಟಗಳ ವರ್ಣಾತ್ಮಕ ಸೂಚಿಯನ್ನು ಪ್ರಕಟಿಸಿದರು. 20ನೆಯ ಸಂಪುಟ 1952ರಲ್ಲಿ ಪ್ರಕಟವಾಯಿತು. 1925-26ರ ಅವಧಿಯಲ್ಲಿ ತಮಿಳು ಹಸ್ತಪ್ರತಿಗಳ ಮೂರು ಸಂಪುಟಗಳು ಹೊರಬಿದ್ದವು. ನಾಲ್ಕನೆಯ ಹಾಗೂ ಸಂಪೂರ್ಣವಾಗಿ ವೈದ್ಯಕೀಯ ಹಸ್ತಪ್ರತಿಗಳಿಗೇ ಸಂಬಂಧಿಸಿದ ಸಂಪುಟ 1965ರಲ್ಲಿ ಬಂತು. ಅದೇ ರೀತಿ ಮರಾಠೀ ಭಾಷೆಯ ಕೃತಿಗಳ ನಾಲ್ಕು ಸಂಪುಟಗಳು ಮುದ್ರಿತವಾಗಿವೆ. ಮೊದಲನೆಯದು 1929ರಲ್ಲೂ ನಾಲ್ಕನೆಯ ಹಾಗೂ ಐದನೆಯ ಸಂಪುಟ 1963ರಲ್ಲೂ ಬಂದಿವೆ. ಈ ಗ್ರಂಥಾಲಯದಲ್ಲಿನ ತೆಲುಗು ಹಸ್ತಪ್ರತಿಗಳ ವರ್ಣಾತ್ಮಕ ಗ್ರಂಥಸೂಚಿಯ ಕಿರು ಸಂಪುಟವನ್ನು 1933ರಲ್ಲಿ ಆಂಧ್ರ ವಿಶ್ವವಿದ್ಯಾಲಯ ಪ್ರಕಟಿಸಿತು. 1965ರಲ್ಲಿ ಎರಡನೆಯ ಸಂಪುಟ ಬಂತು ಗ್ರಂಥಾಲಯಕ್ಕೆ ಹೊಸಹೊಸದಾಗಿ ಸೇರ್ಪಡೆಯಾಗುತ್ತಿರುವ ಗ್ರಂಥಗಳ ಸೂಚೀಕರಣ ಕಾರ್ಯ ಮುಂದುವರಿಯುತ್ತಲೇ ಇದೆ. ಹಸ್ತಪ್ರತಿಗಳ ಪುರವಣಿಸಂಪುಟಗಳನ್ನೂ ಗ್ರಂಥಾಲಯ ಪ್ರಕಟಿಸಿದೆ.

ಸಂಶೋಧನೆಗೆ ಅನುಕೂಲವಾಗುವಂತೆ ಹಲವು ಭಾಷೆಗಳಲ್ಲಿ ಹಸ್ತಪ್ರತಿಗಳ ಸೂಚಿಯ 30 ವರ್ಣಾತ್ಮಕ ಸಂಪುಟಗಳನ್ನು ಇದುವರೆಗೆ ಪ್ರಕಟಿಸಲಾಗಿದೆ. ವಾಚಕರ ಸೌಲಭ್ಯಕ್ಕಾಗಿ, ಬೇರೆ ಎಲ್ಲೂ ಪ್ರಕಟವಾಗಿರದ 160 ಅತ್ಯಂತ ಮುಖ್ಯ ಕೃತಿಗಳನ್ನು ಮೊದಲ ಬಾರಿ ಮುದ್ರಿಸಿ ಪ್ರಕಟಿಸಲಾಗಿದೆ. ಒಂದು ಸಾಹಿತ್ಯ ಪತ್ರಿಕೆಯನ್ನು ವರ್ಷದಲ್ಲಿ ಮೂರು ಸಾರಿ ಹೊರಡಿಸಲಾಗುತ್ತದೆ. ಚಿಕ್ಕ ಅಪ್ರಕಟಿತ ಹಸ್ತಪ್ರತಿಗಳನ್ನು ಈ ಪತ್ರಿಕೆಯ ಮೂಲಕ ಪ್ರಕಟಿಸಲಾಗುತ್ತದೆ.

ಅಪಾರ ಸಂಖೈಯಲ್ಲಿದ್ದು ರಾಜ ದಾಖಲೆಗಳು ಎಂದು ಕರೆಸಿಕೊಳ್ಳುವ, ಮೋದಿಲಿಪಿಯಲ್ಲಿದ್ದ ಬಹುಮಟ್ಟಿನ ದಾಖಲೆಗಳನ್ನು ಮರಾಠಿಗೆ ಲಿಪ್ಯಂತರಮಾಡಿ, ಅವುಗಳಲ್ಲಿ ಅತ್ಯಂತ ಮುಖ್ಯವಾದವನ್ನು ತಮಿಳಿಗೆ ಭಾಷಾಂತರಿಸಲಾಗಿದೆ. ರಾಜ್ಯಸರ್ಕಾರ ನೀಡುವ ವಿದ್ಯಾರ್ಥಿ ವೇತನದ ನೆರವಿನಿಂದ ಕೆಲವರಿಗೆ ಮೋಡಿ ಲಿಪಿಯನ್ನು ಓದುವುದರಲ್ಲಿ ಮತ್ತು ಲಿಪ್ಯಂತರಗೊಳಿಸುವುದರಲ್ಲಿ ತರಬೇತಿ ಕೊಡಲಾಗುತ್ತಿದೆ.

ವೈದ್ಯಕೀಯ ಸಂಶೋಧನ ವಿಭಾಗ ಅಪೂರ್ವ ವೈದ್ಯಕೀಯ ಕೃತಿಗಳ 16 ಸಂಪುಟಗಳನ್ನು ಇಂಗ್ಲಿಷ್, ಹಿಂದಿ ಮತ್ತು ಮರಾಠಿಗಳಿಗೆ ಭಾಷಾಂತರ ಮಾಡಿ ಪ್ರಕಟಣೆಗೆ ಸಿದ್ಧಪಡಿಸಿದೆ. ದಕ್ಷಿಣದ ವೈದ್ಯಕೀಯ ಕೃತಿಗಳ ಸಂಪತ್ತು ಭಾರತದ ಇತರ ಭಾಗಗಳಿಗೆ ದೊರಕುವಂತಾಗಲೆಂಬುದೇ ಇದರ ಉದ್ದೇಶ.

ಭಾರತದ ಹಾಗೂ ವಿದೇಶದ ವಿದ್ವಾಂಸರಿಗೆ, ತುಲನೆ ಮತ್ತು ಸಂಪಾದನೆಗಳಿಗಾಗಿ, ಸಂಸ್ಕೃತ, ತಮಿಳು, ತೆಲುಗು ಮತ್ತು ಮರಾಠಿ ಹಸ್ತಪ್ರತಿಗಳನ್ನು ಸ್ವಲ್ಪ ಖರ್ಚಿನಲ್ಲಿ ಪ್ರತಿಮಾಡಿಸಿಕೊಡುವ ಏರ್ಪಾಟಿದೆ.

ಗ್ರಂಥಾಲಯದಲ್ಲಿ ಅಧ್ಯಯನ ಮತ್ತು ಸಂಶೋಧನೆ ನಡೆಸಲು ಅಪೇಕ್ಷಿಸುವ ವಿದ್ವಾಂಸರಿಗೆ, ಸಂಶೋಧಕರಿಗೆ ಉಚಿತವಾಗಿ ಹಸ್ತಪ್ರತಿಗಳನ್ನು ಒದಗಿಸಲಾಗುತ್ತದೆ.

ಈ ಗ್ರಂಥಾಲಯವನ್ನು ರಾಷ್ಟ್ರೀಯ ಪ್ರಮುಖ ಸಂಸ್ಥೆಯನ್ನಾಗಿ ಮೇಲಿದರ್ಜೆಗೇರಿಸಬೇಕೆಂಬ ಸಲಹೆಯೊಂದು ಭಾರತ ಸರ್ಕಾರದ ಪರಿಶೀಲನೆಯಲ್ಲಿದೆ. (ಎಚ್.ಎ.ಕೆ;ಎಲ್.ವಿ.ಜಿ.)

5. ವೃತ್ತಪತ್ರಿಕಾ ಗ್ರಂಥಾಲಯಗಳು : ಸಂಪಾದಕ ವರ್ಗಕ್ಕೆ ಅತ್ಯಗತ್ಯವೆನಿಸುವ ಒಂದು ನಿರ್ದಿಷ್ಟ ವಿಷಯ ಅಥವಾ ಘಟನೆಯನ್ನು ಕುರಿತು