ಪುಟ:Mysore-University-Encyclopaedia-Vol-6-Part-14.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾರತದಲ್ಲಿ ಆಲ್ ಇಂಡಿಯ ರೇಡಿಯೋ (ಅಕಾಶವಾಣಿ) ದೊಡ್ಡ ದೊಡ್ಡ ಸಂಗೀತ ಕಚೇರಿಗಳ ಜೊತೆಗೆ ಭಾಷಾ ಶಿಕ್ಷಣಕ್ಕೆ ಸಂಬಂಧಿಸಿದ ಪಾಠಪ್ರವಚನಗಳನ್ನೂ ತಟ್ಟೆಗಳ ಮೇಲೆ ಧ್ವನಿಮುದ್ರಿಸಿಕೊಂಡೊ ಇಲ್ಲವೇ ಟೇಪ್‍ರೆಕಾರ್ಡ್ ಮಾಡಿಕೊಂಡೊ ಆಗಾಗ ಬಿತ್ತರಿಸುತ್ತದೆ. ಹೀಗಾಗಿ ಬಾನುಲಿ ನಿಲಯಗಳು ತಮ್ಮವೇ ಆದ ಧ್ವನಿಮುದ್ರಿಕೆಗಳ ಗ್ರಂಥಾಯಲಯಗಳನ್ನು ಹೊಂದಿರುತ್ತವೆ. ಈ ಗ್ರಂಥಾಲಯಗಳಲ್ಲಿ ಇಂಥ ಧ್ವನಿಮುದ್ರಿಕೆಗಳ ಜೊತೆಗೆ ಶ್ರೋತೃಗಳ ಕೋರಿಕೆಗೆ ತಕ್ಕಂತೆ ಸಂಗೀತ, ಲಘುಗೀತೆ, ನಾಟಕ, ಚಲನಚಿತ್ರ, ಭಾಷಣ ಮುಂತಾದುವಕ್ಕೆ ಸಂಬಂಧಿಸಿದ ಧ್ವನಿಮುದ್ರಿಕೆಗಳೂ ಇದ್ದು, ಅವುಗಳ ವರ್ಗೀಕರಣ, ಸೂಚೀಕರಣ ನಡೆದಿರುತ್ತದೆ. ಇದೇ ರೀತಿ ಭಾರತದಲ್ಲಿ ಇರುವ ಭಾಷಾವಿಕ್ಕು ಸಂಸ್ಥೆಗಳೂ ರಾಜ್ಯವಯಸ್ಕರ ಶಿಕ್ಷಣ ಸಂಸ್ಥೆಗಳೂ ಇತರ ಕೆಲವು ಶಿಕ್ಷಣ ಸಂಸ್ಥೆಗಳೂ ತಮ್ಮವೇ ಆದ ಧ್ವನಿಮುದ್ರಿಕೆ ಗ್ರಂಥಾಲಯಗಳನ್ನು ಹೊಂದಿವೆ. (ಎಚ್.ಎ.ಕೆ.)

೧೧.ಕುರುಡರಿಗಾಗಿ ಗ್ರಂಥಾಲಯಗಳು: ೧೮ನೆಯ ಶತಮಾನದ ಕೊನೆಯ ಭಾಗದಿಂದ ಈಚೆಗೆ ಕುರುಡರಿಗಾಗಿ ವ್ಯಾಪಕವಾದ ಸಹಾನುಭೂತಿಯೂ ನೆರವೂ ದೊರಕುತ್ತಿದೆ. ಅಂಥವರಿಗಾಗಿ ಮೊದಲನೆಯ ಶಾಲೆ ಫ್ರೆಂಚ್ ಕ್ರಾಂತಿಗಿಂತಲೂ ಮೊದಲೇ ಪ್ಯಾರಿಸಿನಲ್ಲಿ ಸ್ಥಾಪಿತವಾಯಿತು. ಯುನೈಟೆಡ್ ಕಿಂಗ್‍ಡಮಿನಲ್ಲಿ ಅಂಥದೇ ಒಂದು ಶಾಲೆಯನ್ನು ೧೭೯೧ರಲ್ಲಿ ಸ್ಥಾಪಿಸಿದರು. ಅದು ಈಗ ರಾಯಲ್ ಸ್ಕೂಲ್ ಫಾರ್ ದಿ ಬ್ಲೈಂಡ್ ಎಂದು ಪ್ರಸಿದ್ಧವಾಗಿದೆ.

೧೯ನೆಯ ಶತಮಾನ ಗ್ರಂಥಾಲಯಗಳ ಇತಿಹಾಸದಲ್ಲಿಯೇ ಒಂದು ಮುಖ್ಯವಾದ ಮಜಲನ್ನು ಗುರುತಿಸಿತು. ತತ್ತ್ವತಃ ಗ್ರಂಥಾಲಯಗಳು ಒಂದು ಸಮುದಾಯದ ಎಲ್ಲ ಸದಸ್ಯರ ಅಗತ್ಯಗಳನ್ನು ಪೂರೈಸಬೇಕು ಎಂಬ ತತ್ತ್ವ ಮುಖ್ಯವಾಯಿತು. ಪಾಶ್ಚಾತ್ಯ ಜಗತ್ತಿನ ಗ್ರಂಥಾಲಯಗಳು ಕುರುಡರ ಅಗತ್ಯಗಳನ್ನು ಪೂರೈಸಲು ತೊಡಗಿದ್ದಾಗ ಈ ಗುರಿಯ ಸಾಧನೆಯ ಕಡೆಗೆ ಧೀರ ಪ್ರಯತ್ನ ಮೊದಲಾದಂತಾಯಿತು. ಕುರುಡರು ಸಾಂಪ್ರದಾಯಿಕ ರೀತಿಯಲ್ಲಿ ಬರೆದ ಅಥವಾ ಅಚ್ಚದ ಪುಸ್ತಕಗಳನ್ನು ಒದಲಾರರಾದುದರಿಂದ, ಅವರು ಸ್ಪರ್ಶದಿಂದಲೇ ಓದಬಹುದಾದ ಬೇರೊಂದು ಮಾದರಿಯ ಪುಸ್ತಕಗಳನ್ನು ಕಂಡುಹಿಡಿಯಲಾಯಿತು.

ಈ ವರ್ಗದಲ್ಲಿ ಮುಖ್ಯವಾಗಿ ಎರಡು ಮಾದರಿಯ ಪುಸ್ತಕಗಳಿರುತ್ತವೆ. ಮೂನ್ ಮಾದರಿ ಪುಸ್ತಕಗಳಿಗೆ ಮೂಲಪುರುಷ ವಿಲಿಯಂ ಮೂನ್ (1818-94). ಈತ 1847ರಲ್ಲಿ ಸರಳವಾದ ವರ್ಣಮಾಲೆಯೊಂದನ್ನು ಕಂಡುಹಿಡಿದು ತನ್ನ ಹೆಸರಿನಿಂದ ಅದನ್ನು ಮೂನ್ ಅಕ್ಷರ ಎಂದು ಕರೆದ. ಆದರೆ ಅದಕ್ಕಿಂತಲೂ ಹೆಚ್ಚು ಜನಪ್ರಿಯವಾದ ಹೆಚ್ಚು ಬಳಕೆಯಲ್ಲಿರುವ ಪುಸ್ತಕಗಳು ಬ್ರೇಲ್ ಮಾದರಿಯ ಅಕ್ಷರಗಳಿರುವ ಪುಸ್ತಕಗಳು. ಫ್ರಾನ್ಸಿನವನಾದ ಲೂಯಿ ಬ್ರೇಲ್ (1809-52) ಇವನ್ನು ತಯಾರಿಸಿದ. ಈ ಇಬ್ಬರು ಹಾಕಿಕೊಟ್ಟ ನಿಯಮಗಳಿಗನುಸಾರವಾಗಿಯೇ ಈಗ ಪುಸ್ತಕಗಳು ತಯಾರಾಗುತ್ತಿವೆ. ಕುರುಡರು ಕಾಗದದ ಮೇಲೆ ಉಬ್ಬಿದ ಚುಕ್ಕೆಗಳ ಮೇಲೆ ಕೈಬೆರಳನ್ನು ಆಡಿಸುವುದರಿಂದ ಆ ಬರವಣಿಗೆಯ ಅರ್ಥ ಏನೆಂಬುದನ್ನು ತಿಳಿದುಕೊಳ್ಳುತ್ತಾರೆ.

1825ರ ಬ್ರೇಲ್ ಪದ್ಧತಿಗೆ ಆಧಾರವದದ್ದು ಅದಕ್ಕೂ ಹಿಂದೆ ಚಾರರ್ಲ್ ಬೆರ್ಬಿಯರ್ ರೂಪದ ಚುಕ್ಕೆ ಪದ್ಧತಿ. ಬೆರ್ಬಿಯರನ 12 ಚುಕ್ಕೆ ಪ್ರಸ್ತಾರವನ್ನು 6 ಚುಕ್ಕೆಯ ಪ್ರಸ್ತಾರಕ್ಕೆ ಬ್ರೇಲ್ ಕುಗ್ಗಿಸಿದ. ಧ್ವನಿಯ ಆಧಾರಕ್ಕೆ ಪ್ರತಿಯಾಗಿ ಅದರ ಸ್ಥಾನದಲ್ಲಿ ಅಕ್ಷರ ಆಧಾರವನ್ನು ಇರಿಸಿದ. 4 ಉಬ್ಬಿದ ಚುಕ್ಕೆಗಳನ್ನು ಉಪಯೋಗಿಸಿ ಕೊಂಡು 10 ಮೂಲ ಸಂಕೇತಗಳನ್ನು ರೂಪಿಸಿದ. ಅವು A ಯಿಂದ J ವರೆಗಿನ ಅಕ್ಷರಗಳನ್ನು ಪ್ರತಿನಿಧಿಸಿದವು. ಈ ಹತ್ತು ಅಕ್ಷರಗಳಿಗೂ ಒಂದೇ ಬಗೆಯ ಐದನೆಯ ಚುಕ್ಕೆಯನ್ನು ಸೇರಿಸಿ K ಯಿಂದ T ವರೆಗಿನ ಹತ್ತು ಅಕ್ಷರಗಳನ್ನು ರೂಪಿಸಲಾಯಿತು. ಏಕರೂಪದ ಆರನೆಯ ಚುಕ್ಕೆಯೊಂದನ್ನು ಅವುಗಳಿಗೆ ಸೇರಿಸಿ ವರ್ಣಮಾಲೆಯನ್ನು ಪೂರ್ಣಗೊಳಿಸಲಾಯಿತು. ಇದರಲ್ಲಿ ಆಘಾತಸಹಿತಾಕ್ಷರಗಳಿಗೂ ಅವಕಾಶ ಕಲ್ಪಿಸಲಾಯಿತು.

ಗ್ರಂಥಾಲಯದ ಬಳಕೆದಾರರಲ್ಲಿ ಜೀವನದಲ್ಲಿ ಸ್ವಲ್ಪ ಸಮಯದ ಅನಂತರ ಕುರುಡರಾದವರು, ಮಾನಸಿಕ ಸಾಮರ್ಥ್ಯ ಅಷ್ಟಾಗಿ ಇಲ್ಲದವರು ಅಥವಾ ಬ್ರೇಲ್ ಪದ್ಧತಿಯ ಅನ್ವಯ ತಿಳಿಯಲಾರದವರು ಅಥವಾ ಬಹು ಸೂಕ್ಷ್ಮವಾಗಿವಾದ ಸ್ಪರ್ಶೇಂದ್ರಿಯ ಶಕ್ತಿಯಿಲ್ಲದವರು ಬ್ರೇಲ್ ಬದಲಾಗಿ ಮೂನ್ ಮಾದರಿಪುಸ್ತಕಗಳನ್ನು ಓದಬಹುದು. ಅಲ್ಲದೆ ಮೂನ್ ಮಾದರಿ ಪುಸ್ತಕಗಳು ಬ್ರೇಲ್‍ಗಿಂತ ಹೆಚ್ಚುಕಾಲ ಬಾಳಿಕೆ ಬರುತ್ತವೆ. ಇವಕ್ಕೆದುರಾಗಿ ಬ್ರೇಲ್ ಪದ್ಧತಿಯ ಬರೆಹಗಳು ಸೂಕ್ಷ್ಮವಾಗಿರುತ್ತವೆ. ಇವುಗಳ ಬಳಕೆಯಲ್ಲಿ ವೇಗ ಮತ್ತು ವ್ಯಾಪ್ತಿಹೆಚ್ಚು. ಇದರ ಮೂಲಕ ಅಪಾರ ಸಂಖೈಯ ಅಂಧರಿಗೆ ಜ್ಞಾನದ ಬಾಗಿಲು ವಿಶಾಲವಾಗಿ ತೆರೆದಿದೆ. ಅಲ್ಲದೆ ಕುರುಡರ ನಡುವೆಯೇ ಅದು ಸಂಪರ್ಕ ಮಾಧ್ಯಮವಾಗಿ ಪರಿಣಮಿಸಿದೆ. ಬ್ರೇಲ್ ಮತ್ತು ಮೂನ್ ಪದ್ದತಿಗಳು ಅಪಾರವಾದ ಶಕ್ತಿಸಾಮರ್ಥ್ಯಗಳನ್ನು ಒಳಗೊಂಡಿರುವ ಬರೆಹ ರೂಪಗಳು ಎಂಬುದಾಗಿ ಡಾ. ಥಾಮಸ್ ರೋಃಡ್ಸ್ ಆರ್ಮಿಟೇಜ್ ಮತ್ತು ಅವರ ಮಿತ್ರರು ನಿರ್ಧರಿಸಿದರು. ಅವರ ಆ ನಿರ್ಣಯವೇ ಕಾರಣವಾಗಿ ಕುರುಡರಿಗೆ ಪುಸ್ತಕಗಳನ್ನು ಒದಗಿಸುವುದು ಸಾಧ್ಯವಾಯಿತು.

ಪ್ರಾರಂಭದಲ್ಲಿ ಪಶ್ಚಿಮದ ಚರ್ಚು, ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳು ಕುರುಡರಿಗಾಗಿ ಗ್ರಂಥಾಲಯ ಸೇವೆಯನ್ನು ಒದಗಿಸುವ ಪ್ರಯತ್ನದಲ್ಲಿ ಪ್ರಧಾನವಾದ ಪಾತ್ರವಹಿದವು. ಇಂಗ್ಲೆಂಡಿನಲ್ಲಿ ಸ್ವಯಂ ಕುರುಡಿಯಾಗಿದ್ದ ಮಿಸ್ ಮಾರ್ಥಾ ಆರ್ನಲ್ಡ್ ಎಂಬಾಕೆ ಮಿಸ್ ಹೌಡನ್ ಮತ್ತು ಇತರ ಕೆಲವರೊಂದಿಗೆ ಬ್ರೇಲ್ ಪುಸ್ತಕಗಳನ್ನು ಸಂಗ್ರಹಿಸತೊಡಗಿದರು. ಇದು 1882 ರಲ್ಲಿ ಕುರುಡರಿಗಾಗಿ ರಾಷ್ಟ್ರೀಯ ಗ್ರಂಥಾಲಯವೊಂದರ ಸ್ಥಾಪನೆಗೆ ಬೀಜವಾಯಿತು. ಅದನ್ನು ವ್ಯವಸ್ಥಿತವಾದ ರೀತಿಯಲ್ಲಿ ಕಟ್ಟಿದ ಕೀರ್ತಿ ಅಲ್ಲಿಯ ಗ್ರಂಥಪಾಲ ಎಥೆಲ್ ಮಿನಿಫ್ರೆಡ್ ಆಸ್ಟಿನ್‍ಗೆ ಸಲ್ಲುತ್ತದೆ.

ಹೀಗಾಗಿ ಇಲ್ಲಿ ಗಮನಿಸಬೇಕಾದ ಬಹುಮುಖ್ಯವಾದ ಒಂದು ಅಂಶ ಇದು. ಬ್ರಿಟನ್ನಿನಲ್ಲಿ ಈ ಗ್ರಂಥಾಲಯ ಸೇವೆಯ ಒಂದು ಅಗತ್ಯವನ್ನು ಸ್ವಯಂ ಅಂಧನಾದ ವ್ಯಕ್ತಿಯೊಬ್ಬನ ಪರಿಶ್ರಮದಿಂದ. ಇನ್ನೊಂದು ಮುಖ್ಯ ವಿಚಾರವೆಂದರೆ ಮೊದಲಿಂದಲೇ ಇಲ್ಲಿ ಸ್ವಯಂಪ್ರೇರಣೆಗೆ ಪ್ರಾಧಾನ್ಯ ಕೊಟ್ಟದ್ದು. ಇಂದಿಗೂ ಕುರುಡರಿಗಾಗಿರುವ ರಾಷ್ಟ್ರೀಯ ಗ್ರಂಥಾಲಯದಲ್ಲಿ ಹಾಗೂ ವಿದ್ಯಾರ್ಥಿಗಳ ಗ್ರಂಥಾಲಯದಲ್ಲಿ ಹಾಗೂ ವಿದ್ಯಾರ್ಥಿಗಳ ಗ್ರಂಥಾಲಯದಲ್ಲಿ ಲಿಪ್ಯಂತರಕ್ಕೆ ಮೊದಲಿನಿಂದಲೂ ಆಧಾರವಾಗಿ ಇಟ್ಟುಕೊಂಡಿರುವುದು ಇದೇ ಸ್ವಯಂ ಪ್ರೇರಣಯ ತತ್ತ್ವವನ್ನೇ.

ಸದ್ಯದಲ್ಲಿ ಕುರುಡರ ರಾಷ್ಟ್ರೀಯ ಗ್ರಂಥಾಲಯದಲ್ಲಿ ಕುರುಡರಿಗಾಗಿಯೇ 3 ಲಕ್ಷಗಳಿಗಿಂತಲೂ ಹೆಚ್ಚು ಪುಸ್ತಕಗಳಿವೆ. ಇದಲ್ಲದೆ ದಿ ರಾಯಲ್ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಫಾರ್ ದಿ ಬ್ಲೈಂಡ್ ಎಂಬ ಸಂಸ್ಥೆ ಬೇರೆ ಬೇರೆ ಹಂತದ, ವರ್ಗದ ವಾಚಕರಿಗೆಂದೇ ಪುಸ್ತಕಗಳನ್ನು ರಚಿಸುತ್ತಿದೆ.

ವೆಸ್ಟೆಮಿನಿಸ್ಟರನಲ್ಲಿರುವ ನ್ಯಾಷನಲ್ ಲೈಬ್ರರಿ ಫಾರ್ ದಿ ಬ್ಲೈಂಡ್ ಸಂಸ್ಥೆ ಬ್ರಿಟನ್ನಿಗೆ ಮಾತ್ರವಲ್ಲ, ಸಾಗರಾಂತರ ಪ್ರದೇಶಗಳಿಗೂ ತನ್ನ ಸೇವಾಹಸ್ತವನ್ನು ಚಾಚಿದೆ. ಪ್ರತಿ ವರ್ಷವೂ ಕುರುಡರಿಗಾಗಿ ವಾಚನ ಸ್ಪರ್ಧೆಯನ್ನು ಅದು ನಡೆಸುತ್ತದೆ. ಬ್ರೇಲ್ ಕರಡಚ್ಚು ತಿದ್ದುವವರು ಮತ್ತು ಪ್ರತಿಗಾರರಿಗೆ ಕೆಲಸ ಕೊಡುವ ಒಂದು ಯೋಜನೆ ಕೂಡ ಈ ಗ್ರಂಥಾಲಯದಲ್ಲಿದೆ. ಇದು ಆ ಗ್ರಂಥಾಲಯಕ್ಕೂ ಮನೆಯಲ್ಲಿಯೇ ಕುಳಿತು ಕೆಲಸ ಮಾಡುವವರಿಗೂ ಏಕಕಾಲದಲ್ಲಿ ನೆರವು ನೀಡುತ್ತದೆ.

ಕುರುಡು ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯವನ್ನು 1920ರಲ್ಲಿ ಸ್ಥಾಪಿಸಲಾಯಿತು. ಇದು ಒಂದನೆಯ ಮಹಾಯುದ್ಧದ ಸಮಯದಲ್ಲಿ ಅನುಭವಕ್ಕೆ ಬಂದ ಬೇಡಿಕೆಯ ಫಲ. ಸೈನ್ಯದ ಅನೇಕಾನೇಕ ಯುವಕರು ಕಣ್ಣು ಕಳೆದುಕೊಂಡಿದ್ದರು. ಯುದ್ದಾನಂತರದ ವೃತ್ತಿಗಾಗಿ ಅವರಿಗೆ ತರಬೇತಿ ಕೊಡಬೇಕಾದ ಅಗತ್ಯ ಉಂಟಾಯಿತು. ಇದರ ಫಲವಾಗಿ ಅವರಿಗೆ ಪಠ್ಯಪುಸ್ತಕಗಳನ್ನು ಒದಗಿಸಲೆಂದೇ ಒಂದು ಗ್ರಂಥಾಲಯ ಹುಟ್ಟಿದ್ದು. 1970ರ ದಶಕದಲ್ಲಿ ಅದರಲ್ಲಿ 30,000ಕ್ಕಿಂತಲೂ ಹೆಚ್ಚು ಪುಸ್ತಕಗಳಿದ್ದು ಪ್ರಪಂಚದ ಎಲ್ಲ ಭಾಗಗಳ ಅಂಧವಿದ್ಯಾರ್ಥಿಗಳಿಗೂ ಅದು ಈಗ ಸೇವೆ ಸಲ್ಲಿಸುತ್ತಿದೆ. ಅದರ ಮುಖ್ಯ ಕರ್ತವ್ಯ ವಾಚಕರಿಗೆ, ಮುಖ್ಯವಾಗಿ ಬ್ರಿಟನ್ನಿನಲ್ಲಿರುವವರಿಗೆ, ಅಧ್ಯಯನ ಅಥವಾ ವೃತ್ತಿಗೆ ಸಂಬಂಧಿಸಿದಂತೆ ವಿಷಯವನ್ನು ಬ್ರೇಲ್ ಲಿಪಿಯಲ್ಲಿ ಒದಗಿಸುವುದು.

ಕುರುಡುರ ರಾಷ್ಟೀಯ ಗ್ರಂಥಾಲಯ ಹಾಗೂ ವಿದ್ಯಾರ್ಥಿ ಗ್ರಂಥಾಲಯಗಳು ಇತರ ಗ್ರಂಥಾಲಯಗಳಿಗಿಂತ ಬೇರೆಯೇ ಆಗಿವೆ. ಅವು ಪುಸ್ತಕಗಳನ್ನು ವಿತರಣೆ ಮಾಡುವುದಲ್ಲದೆ ಪುಸ್ತಕಗಳನ್ನು ತಯಾರಿಸುತ್ತವೆ; ಅಂಚೆ ಮೂಲಕ ರವಾನಿಸುತ್ತದೆ.

ವಾಚಕರು ಪುಸ್ತಕಗಳನ್ನು ಆರಿಸಿಕೊಳ್ಳಲು ಅನುಕೂಲವಾಗುವಂತೆ ನ್ಯಾಷನಲ್ ಲೈಬ್ರರಿ ಅಚ್ಚೆನಲ್ಲೂ ಬ್ರೇಲ್‍ನಲ್ಲೂ ಸೂಚಿಗಳನ್ನು ಪ್ರಕಟಿಸುತ್ತದೆ. ಮಿಕ್ಕೆಲ್ಲ ಅಚ್ಚಾದ ಗ್ರಂಥಸೂಚಿಗಳಂತೆ ಇವು ಪ್ರಕಟವಾಗುವುದಕ್ಕೆ ಮೊದಲೇ ತುಂಬ ಹಳತಾಗಿ ಬಿಡುತ್ತಿದ್ದುದರಿಂದ ವರ್ಷಕ್ಕೆ ಆರು ಸಲ ಸಾಮಾನ್ಯ ಅಚ್ಚಿನಲ್ಲೂ ಬ್ರೇಲ್‍ನಲ್ಲೂ ಬ್ರೇಲ್ ಲೈಬ್ರರಿ ಬುಲೆಟಿನ್ ಪ್ರಕಟವಾಗುತ್ತಿದೆ.

ಅನೇಕ ವರ್ಷಗಳ ಪ್ರಯೋಗಗಳಾದ ಮೇಲೆ ರಾಯಲ್ ನ್ಯಾಷನಲ್ ಇನ್ಸಸ್ಟಿಟ್ಯೂಟ್ ಫಾರ್ ದಿ ಬ್ಲೈಂಡ್ (ಆರ್‍ಎನ್‍ಐಬಿ) ಸಂಸ್ಥೆ ತೆಳುವಾದ ಆದರೆ ಗಟ್ಟಿಯಾದ ಕಾಗದದ ಮೇಲೆ ಪ್ಲಾಸ್ಟಿಕ್ಕಿನ ಗಟ್ಟಿ ಚುಕ್ಕೆಗಳನ್ನಿಡುವ ಮತ್ತು ಶಾಖದಿಂದ ಅವನ್ನು ಸೀಲುಮಾಡುವ ವಿಧಾನವೆಂದು ವ್ಯಾಪಕವಾಗಿ ಪ್ರಸಿದ್ದಿ ಗಳಿಸಿದೆ. ಹಿಂದಿನ ಸಾಂಪ್ರದಾಯಿಕ ಬ್ರೇಲನ ವಿಧಾನದಲ್ಲಿ ಎರಡು ಅನನುಕೂಲಗಳಿದ್ದವು. ಉಪಯೋಗಿಸುವ ಕಾಗದ ಮಂದವಾಗಿದ್ದು ಹಾಗೂ ಚುಕ್ಕೆಗಳು ಹೆಚ್ಚು ಕಾಲ ಬಾಳಿಕೆ ಬರುತ್ತಿರಲಿಲ್ಲ. ಗಟ್ಟಿ ಚುಕ್ಕೆ ವಿಧಾನದಲ್ಲಿ ಬಳಸುವ ಕಾಗದ ತೆಳು, ಪ್ಲಾಸ್ಟಿಕ್ ಚುಕ್ಕೆಗಳು ಸವೆಯದಂಥವು.

ಮಾತನಾಡುವ ಪುಸ್ತಕಗಳು: ಬ್ರೇಲ್ ಓದಿಕೆಯ ಮೇಲೆ ಪರಿಣಾಮ ಮಾಡಿದ ಒಂದು ಹೊಸ ತಂತ್ರ ಮಾತನಾಡುವ ಪುಸ್ತಕಗಳನ್ನು ಕಂಡುಹಿಡಿದದ್ದು. ಆರ್ ಎನ್ ಐಬಿ ಯ ಶಾಖೆಯಾದ ಬ್ರಿಟಿಷ್ ಟಾಕಿಂಗ್ ಬುಕ್ ಲೈಬ್ರರಿ ಫಾರ್ ದಿ ಬೈಂಡ್ ಸಂಸ್ಥೆ ಇವನ್ನು