ಪುಟ:Mysore-University-Encyclopaedia-Vol-6-Part-15.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಂಥಾಲಯ

1.ಪುಸ್ತಕಶಾಸ್ತ್ರ ; ಪುಸ್ತಕದ ಬಾಹ್ಯಸ್ವರೂಪ ಹೇಗಿರಬೇಕು ಎಂಬುದನ್ನು ವಿವರಿಸುವ ಶಾಸ್ತ್ರಕ್ಕೆ ಈ ಹೆಸರಿದೆ (ಫಿಸಿಕಲ್ ಬಿಬ್ಲಿಯಾಗ್ರಫಿ). ಇಂಗ್ಲಿಷಿನ ಬಿಬ್ಲಿಯಾಗ್ರಫಿ ಎಂಬುದನ್ನು ಗ್ರಂಥಸೂಚಿ ಅಥವಾ ವಾಜ್ಮಯಸೂಚಿ ಎಂಬ ಅರ್ಥವದಲ್ಲೂ ಬಳಸಲಾಗಿದೆ. ಪುಸ್ತಕಶಾಸ್ತ್ರದ ಅಭ್ಯಾಸ ಮೊದಲನೆಯದಾಗಿ ವಾಜ್ಮಯಸೂಚಿಗಳನ್ನು ತಯಾರಿಸುವಲ್ಲಿ ಉಪಯೋಗಕ್ಕೆ ಬರುತ್ತದೆ. ಎರಡನೆಯದಾಗಿ ಗ್ರಂಥಪಾಲಕರು ಆಪೂರ್ವ ಇಲ್ಲವೆ ಪ್ರಾಚೀನ ಪುಸ್ತಕಗಳನ್ನು ಕೊಳ್ಳುವ ಪ್ರಸಂಗ ಬಂದಾಗ, ಅವು ಮಾಸದವಲ್ಲ, ನಿಜವಾದ ಮೂಲಕೃತಿಗಳು- ಎಂದು ಕಂಡುಹಿಡಿಯಲಿಕ್ಕಾಗುವುದು. ಮೂರನೆಯದಾಗಿ ಗ್ರಂಥ ಸಂಪಾದಕಕಾರ್ಯದಲ್ಲಿ ಅದು ಭಾಷಾ ಪಂಡಿತನಿಗೆ ಶಾಸ್ತ್ರೀಯ ಹಿನ್ನೆಲೆಯನ್ನು ಒದಗಿಸುತ್ತದೆ. ಆಧುನಿಕ ಪುಸ್ತಕವೊಂದನ್ನು ಕೈಗೆತ್ತಿಕೊಂಡಾಗ ಸಾಮಾನ್ಯವಾಗಿ ಕಂಡುಬರುವ ಅದರ ಬಾಹ್ಯಾಂಗಗಳಿವು: 1. ಮೇಲು ಹೊದಿಕೆ; ಇದನ್ನು ಮರೆಹಾಳೆ ಎಂದೂ ಕರೆಯುತ್ತಾರೆ (ಬುಕ್ ಜಾಕೆಟ್). ಪುಸ್ತಕದ ಹೊರೆ ಮೈಗೆ ಹೊದ್ದಿಸಿರುವ ಈ ಕಾಗದ ಆಕರ್ಷಕವಾಗಿರುತ್ತದೆ. ಅದರ ಮಡಿಸಿದ ಒಳಬದಿಗಳಲ್ಲಿ ಆ ಪುಸ್ತಕದ ಬಗ್ಗೆ ಹಾಗೂ ಲೇಖಕನ ಬಗ್ಗೆ ಮಾಹಿತಿಯನ್ನು ಕೊಟ್ಟಿರುತ್ತಾರೆ. 2.ರಟ್ಟಿನ ಮುಖಪುಟ ; ಇದರಲ್ಲಿ ಪಸ್ತಕದ ಶೀರ್ಷಿಕೆ, ಲೇಖಾನ,ಪ್ರಕಾಶಕರ ಹೆಸರು ಇರುತ್ತದೆ. ಅದನ್ನೇ ಸಂಕ್ಷಿಪ್ತವಾಗಿ ರಟ್ಟಿನ ಬೆನ್ನಿನಲ್ಲಿ ಕೊಟ್ಟಿರುತಾರೆ. ಮುಖಾಪುಟ್ಟದ ಮೇಲೆ ಚಿತ್ರವೂ ಇರಬಹುದು. ಗ್ರಂಥಾಲಯಗಳು ಯಾವಾಗಲೂ ದಪ್ಪ ರಟ್ಟಿನ (ಕ್ಯಾಲಿಕೊ ಆದರೆ ಉತ್ತಮ) ಸೆಕ್ಷನ್ ಹೊಲಿಗೆ ಹಾಕಿದ ಪುಸ್ತಕಗಳನ್ನೇ ಕೊಳ್ಳುವುದು ಒಳ್ಳೆಯದು. ಪಿನ್ನು ಹೊಲಿಗೆಯ ತೆಳುರಟ್ಟಿನ ಪುಸ್ತಕಗಳು ಹೆಚ್ಚು ಬಾಳಿಕೆ ಬರುವುದಿಲ್ಲ. 3.ಜೋಡಾಣೆಯ ಕಾಗದ (ಫ್ಲೈಲೀಫ್) ; ಮುಖಪುಟವನ್ನು ತೆರೆದೊಡನೆ ಅದರ ರತ್ತಿಗೆ ಒಂದು ಕಾಗದ ಅಂಟಿಸಿ, ಅದರ ಇನ್ನೊಂದು ಪದರನ್ನು ಪುಸ್ತಕದ ಮುದ್ರಿತ ಪುಟಗಳಿಗೆ ಜೋಡಿಸಿರುತ್ತಾರೆ. ರಟ್ಟು ಪುಸ್ತಕದಿಂದ ಬಿಚ್ಚಿ ಅಥವಾ ಹರಿದು ಹೋಗದಂತೆ ಈ ಕಾಗದ ರಕ್ಷಿಸುತ್ತದೆ. ಇದು ಸಾಮಾನ್ಯವಾಗಿ ಒಂದೇ ಬಣ್ಣದ ದಪ್ಪ ಕಾಗದ. ಒಮ್ಮೊಮೆ ಚಿತ್ರವನ್ನೋ ಭೂಪಟವನ್ನೋ ಇದರ ಮೇಲೆ ಮುದ್ರಿಸಿರುವುದೂ ಉಂಟು. 4.ಹ್ರಸ್ವ ಶೀರ್ಷಿಕೆಯ ಪುಟ (ಷಾರ್ಟ್ ಟೈಟಲ್ ಪೇಜ್) ; ಪುಸ್ತಕದ ಶೀರ್ಷಿಕೆಯೊಂದನ್ನೇ ಇಲ್ಲಿ ಮುದ್ರಿಸಲಾಗುತ್ತದೆ. ಗ್ರಂಥಮಾಲೆಯ ಹೆಸರನ್ನೂ ಒಮ್ಮೊಮೆ ಕೊಡುವುದುಂಟು. 5.ಶೀರ್ಷಿಕೆಯ ಪುಟ (ಟೈಟಲ್ ಪೇಜ್) ; ಇದರಲ್ಲಿ ಗ್ರಂಥದ ಶೀರ್ಷಿಕೆ, ಲೇಖಕನ ಹೆಸರು, ಅವನ ಹುದ್ದೆ, ಪ್ರಕಾಶಕರ ಹೆಸರು,ಪ್ರಕಾಶನ ವರ್ಷ-ಇವುಗಳಿರುತ್ತದೆ. ಈ ಪುಟದ ಹಿಂದೆ ಗ್ರಂಥಸ್ವಾಮ್ಯದ ವಿಚಾರ ಹಾಗೂ ಪ್ರಕಾಶಕರ, ಮುದ್ರಕರ ವಿಳಾಸಗಳನ್ನು ಕೊಡಾಲಾಗುತ್ತದೆ. ದೇಶೀ ಭಾಷಾ-ಪುಸ್ತಕಗಳಿದ್ದರೆ, ಇಂಗ್ಲಿಷಿನಲ್ಲಿ ಅದರ ಶೀರ್ಷಕೆ, ಲೇಖಕನ ಹೆಸರು, ಜಿಲ್ಲೆ ಮುಂತಾದ್ದನ್ನು ಕೊಡುವ ಕ್ರಮ ಈಚೆಗೆ ಬಂದಿದೆ. ಗ್ರಂಥಗಳ ಆಯ್ಕೆಯಲ್ಲಿ ಮುಖ್ಯವಾಗಿ ಗಮನಿಸಬೇಕಾದ ಒಂದಂಶವಿದೆ. ಶಸ್ತ್ರಗ್ರಂಥಗಳನ್ನು ಮುಖ್ಯವಾಗಿ ವಿಜಾನಗ್ರಂಥಗಳನ್ನು ಆಯುವಾಗ ಇತ್ತೀಚಿನ ಪರಿಷ್ಕೃತ ಆವೃತ್ತಿಗಳನ್ನೇ ಕೊಳ್ಳುವುದು ಮೇಲು. ಪುಸ್ತಕ ಹಳೆಯದಾದಷ್ಟು ವಿಷಯವೂ ಹಳೆಯದಾಗಿ ಬಿಡುತ್ತದೆ. ಹೀಗೆಂದ ಮಾತ್ರಕ್ಕೆ ಹಳೆಯ ಆವೃತ್ತಿಗಳಿಗೆ ಬೆಲೆ ಇಲ್ಲವೆಂದಲ್ಲ. ತೀರ ಹಳೆಯ ಗ್ರಂಥಗಳಿಗೆ ಐತಿಹಾಸಿಕ ಮೌಲ್ಯವಿರುತ್ತದೆ. ಅಂಥವನ್ನು ಹಚ್ಚಿನ ಬೆಲೆ ಕೊಟ್ಟು ಕೊಳ್ಳುವ ಗ್ರಂಥಾಲಯವೂ ಉಂಟು. 6.ಅರ್ಪಣೆಯ ಪುಟ ; ಗ್ರಂಥ ಯಾರಿಗಾದರೂ ಆರ್ಪಿತವಾಗಿದ್ದರೆ, ಅದನ್ನಿಲ್ಲಿ ನಮೂದಿಸಿರುತ್ತಾರೆ. 7.ಉಪಕಾರ ಸ್ಮರಣೆ ; ವಿವಿಧ ಲೇಖಕರ ಬರೆಹಗಳ ಸಂಗ್ರಹವಿದ್ದರೆ ಆಯಾ ಲೇಖಕರ, ಪ್ರಕಾಶಕರ ಉಪಕಾರ ಸ್ಮರಣೆ ಇರುವ ಪುಟವಿದು. 8.ಮುನ್ನುಡಿ; ಹಿರಿಯರಿಂದ, ತಜರಿಂದ ಬರೆಯಿಸಲಾದ ಪ್ರಸ್ತಾವನೆ ಇಲ್ಲಿ ಬರುತ್ತದೆ. ಲೇಖಕನೇ ಮುನ್ನುಡಿ ಬರೆಯುವುದೂ ಉಂಟು. 9.ಪೀಠಿಕೆ; ಲೇಖಕನ ನಿವೇದನೆ ಇಲ್ಲಿ ಬರುತ್ತದೆ. 10.ಒಳಪಿಡಿ; ಅಧ್ಯಾಯಗಳ ಶೀರ್ಷಿಕೆಗಳು ಮತ್ತು ಅವು ಮೊದಲಾಗುವ ಪುಟ ಸಂಖ್ಯೆಗಳನ್ನು ಇಲ್ಲಿ ಕೊಟ್ಟಿರುತ್ತದೆ. ವಿಷಯದ ವಿಸ್ತಾರ ಪ್ರತಿಪಾದನೆಯಿದ್ದರೆ ಒಂದೊಂದು ಅಧ್ಯಾಯದ ಉಪ ಶೀರ್ಷಿಕೆಗಳನ್ನೂ ಕೋಡುವ ಕ್ರಮವಿದೆ. 11.ಚಿತ್ರ ಹಾಗೂ ನಕ್ಷೆಗಳ ಪಟ್ಟಿ ; ಮುಖ್ಯ ಚಿತ್ರಗಳೋ ನಕ್ಷೆಗಳ ಪಟ್ಟಿ, ಅವು ಇರುವ ಪುಟಸಂಖ್ಯೆ ಇವು ಇಲ್ಲಿ ಬರುತ್ತವೆ. 12.ಮುಖಚಿತ್ರ ಪುಟ ; ಇಲ್ಲಿ ಮೊದಲ ಮುಖ್ಯ ಚಿತ್ರ ಇರುತ್ತವೆ. ಗ್ರಂಥ ವಿಷಯಕ್ಕೆ ಸಂಬಂಧಿಸಿದ ಮುಖ್ಯ ಚಿತ್ರವನ್ನಿಲ್ಲಿ ಹಾಲು ಬಿಳುಪಿನ ಆರ್ಟ್ ಕಾಗದದ ಮೇಲೆ ಕೊಡುವುದು ವಾಡಿಕೆ. 13.ಪಾಠ ; ಇದು ಪುಸ್ತಕದ ಮುಖ್ಯ ಅಂಗ ; ಲೇಖಕ ಹೇಳಬೇಕೆಂದಿರುವ ವಿಷಯದ ಪ್ರತಿಪಾದನೆ ಇಲ್ಲಿರುತ್ತದೆ. ಪ್ರತಿಯೊಂದು ಪುಟದ ಮೇಲ್ಗಡೆ ಸಣ್ಣ ಅಕ್ಷರದಲ್ಲಿ ಅಧ್ಯಾಯದ ಶೀರ್ಷಿಕೆಯನ್ನೂ ಮುದ್ರಿಸಿರುತ್ತಾರೆ. 14.ಆಧಾರ ಗ್ರಂಥಗಳ ಪಟ್ಟಿ ; ಗ್ರಂಥಕರ್ತ ಉಪಯೋಗಿಸಿದ ಅಥವಾ ನೆರವು ಪಡೆದ ಗ್ರಂಥಗಳ ಯಾದಿ. ಇದು ಪುಸ್ತಕದ ಕೊನೆಯಲ್ಲಿ ಇಲ್ಲವೆ ಆಯಾ ಅಧ್ಯಾಯಗಳ ಕೊನೆಯಲ್ಲಿ ಬರುತ್ತದೆ. 15.ಪಾರಿಭಾಷಿಕ ಶಬ್ದಗಳ ಪಟ್ಟಿ ; ಅಕಾರಾದಿಯಾಗಿರುತ್ತದೆ. ದೇಶೀ ಭಾಷೆಯ ಪದವಾದರೆ ಅದರ ಗ್ರೀಕ್ ಅಥವಾ ಲ್ಯಾಟಿನ್ ಮೂಲ, ಅದು ಮೊದಲ ಬಾರಿಗೆ ಬಂದಿರುವ ಪುಟ ಸಂಖ್ಯೆ ಇಲ್ಲಿ ಸಿಗುತ್ತದೆ. 16.ಅನುಬಂಧಗಳು; ಮುಖ್ಯ ವಿಷಯಕ್ಕೆ ಪೂರಕವಾಗಿರುವ ಅಂಶಗಳ ಉಲ್ಲೇಖ ಇಲ್ಲಿರುತ್ತದೆ. 17.ಅಕಾರಾದಿ ಸೂಚಿ ; ಇದು ಪಾಠದಲ್ಲಿ ಬಂದಿರುವ ಹೆಸರುಗಳ, ವಿಷಯಗಳ ಅಕಾರಾದಿಯಾದ ಸೂಚಿ. ಶಾಸ್ತ್ರಗ್ರಂಥಗಳಲ್ಲಿ ಇದು ಅವಶ್ಯ ಇರತಕ್ಕದ್ದು. ಯಾವುದೊಂದು ಪುಸ್ತಕದಲ್ಲಿ ಮೇಲೆ ಕಾಣಿಸಿದ ಎಲ್ಲ ಅಂಗಗಳೂ ಇರಬೇಕೆಂದಿಲ್ಲ. ಯುದ್ಧಕಾಲದ ಅಥವಾ ಇನ್ನಾವುದೇ ಮಿತವ್ಯಯ ಧೋರಣೆಯ ಮಾತು ಬಂದಾಗ ಪುಸ್ತಕದ ಬಾಹ್ಯಸ್ವರೂಪ ವಿವರಗಳನ್ನು ಮೊಟಕು ಮಾಡುವುದುಂಟು. ಅದಾವ ನಿರ್ಬಂಧವೂ ಇಲ್ಲದೆ ಇರುವ ಕಾಲದಲ್ಲಿ ಸಾಲಂಕೃತವಾದ ಪುಸ್ತಕಗಳು ಬಂದಿರುವುದೂ ಉಂಟು. ಡಿ.ವಿ.ಜಿ ಅವರ ಅಂತಃಪುರ ಗೀತೆ, ಎ.ಆರ್.ಕೃ. ಅವರ ವಚನಭಾರತ, ಶಿವರಾಮ ಕಾರಂತರಿಗೆ ಅರ್ಪಿಸಿದ ಕಾರಂತ ಪ್ರಪಂಚ ಎಂಬ ಗೌರವ ಗ್ರಂಥ-ಇವು ಉತ್ತಮ ಮುದ್ರಣ ಹಾಗೂ ವಿನ್ಯಾಸಕ್ಕೆ ಹೆಸರಾದ ಕೆಲವು ಪುಸ್ತಕಗಳು. ಪುಸ್ತಕದ ಬಾಹ್ಯಸ್ವರೂಪಕ್ಕೆ ಸಂಬಂಧಿಸಿದ ಪುಟ್ಟ ಸಂಖ್ಯೆ ಆಕಾರ, ನಕ್ಷೆಗಳು ಮೊದಲಾದ ಕೆಲವನ್ನು, ಸೂಚಿಯನ್ನು ತಯಾರಿಸುವಾಗ ಕಾಣಿಸುವುದುಂಟು. (ಎಸ್ . ಎಚ್) 2. ಪುಸ್ತಕ ವಿಕಸನ ; ಪುಸ್ತಕ ಎಂಬ ಪದಕ್ಕೆ ಸಂವಾದಿಯಾಗಿ ಇಂದು ಗ್ರಂಥ, ಹೊತ್ತಗೆ (ಪುಸ್ತಕ ಎಂಬ ಸಂಸ್ಕೃತ ರೂಪದ ತದ್ಭವ ) ಎಂಬ ಶಬ್ದಗಳು ಬಳಕೆಯಲ್ಲಿವೆ. ಇಂಗ್ಲಿಷಿನಲ್ಲಿ ಪುಸ್ತಕವನ್ನು ಬುಕ್ ಎನ್ನುತ್ತಾರೆ. ಚಿಕ್ಕ ಪುಸ್ತಕಕ್ಕೆ ಬುಕ್ ಲೆಟ್-ಪುಸ್ತಿಕೆ ಎಂಬ ಮಾತುಗಳನ್ನು ಬಳಕೆಯಲ್ಲಿವೆ. ಪುಸ್ತಕ, ಗ್ರಂಥ ಎಂಬ ಮಾತುಗಳನ್ನು ಹೊಲಿಗೆ ಇನ್ನೂ ಬಳಕೆಗೆ ಬಾರದಂದಿನ ಪುಸ್ತಕ ಸ್ವರೂಪವನ್ನು ಸೂಚಿಸುತ್ತವೆ. ಹಿಂದೆ ಹಾಳೆಗಳನ್ನು