ಪುಟ:Mysore-University-Encyclopaedia-Vol-6-Part-15.pdf/೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಂಥಾಲಯ ಭಾರತದ ವೈಸ್ರಾಯ್ ಆಗಿದ್ದ ಕರ್ಜನ್ ಕಲ್ಕತ್ತಕ್ಕೆ ಭೇಟಿಯಿತ್ತಾಗ ಈ ಗ್ರಂಥಾಲಯವನ್ನು ಸಂದರ್ಶಿಸಿ (೧೮೯೯) ಅದರ ಅಂದಿನ ದುಃಸ್ಥಿತಿಯನ್ನು ಗಮನಿಸಿ ಅದರ ಸ್ವಾಮ್ಯವನ್ನು ಕೊಂಡುಕೊಂಡ. ಈಸ್ಟ್ ಇಂಡಿಯಾ ಕಾಲೇಜು ಗ್ರಂಥಾಲಯ ಮತ್ತು ಕಲ್ಕತ್ತದಲ್ಲಿರುವ ಭಾರತದ ಸರ್ಕಾರದ ವಿವಿಧ ಶಾಖೆಗಳನ್ನು ಇದರೊಡನೆ ವಿಲೀನಗೊಳಿಸಿ ಮೆಟ್ಕಾಫ್ ಭವನಕ್ಕೆ ಇದನ್ನು ಸ್ಥಳಾಂತರಿಸಿದ. ಇವೆಲ್ಲವುಗಳ ವಿಲೀನದಿಂದ ಆದ ಗ್ರಂಥಾಲಯವನ್ನು ಇಂಪೀರಿಯಲ್ ಲೈಬ್ರರಿ ಎಂಬ ಹೆಸರಿಸಿದ. ೧೯೦೨ ರಲ್ಲಿ ಇಂಪೀರಿಯಲ್ ಗ್ರಂಥಾಲಯ ಕಾಯಿದೆ ಅಂಗೀಕೃತವಾಯಿತು. ೧೯೦೩ರ ಜನವರಿಯಲ್ಲಿ ಈ ಗ್ರಂಥಾಲಯವನ್ನು ಸಾರ್ವಜನಿಕರ ಉಪಯೋಗಕ್ಕಾಗಿ ತೆರೆಯಲಾಯಿತು. ತಮ್ಮ ಜ್ಞಾನತೃಷೆಯನ್ನಾರಿಸಿಕೊಳ್ಳಲು ಜನ ಬ್ರಿಟಿಷ್ ಮ್ಯೂಸಿಯಂ ಲೈಬ್ರರಿಗೆ ಬರುವಂತೆ ಇಲ್ಲಿಯ ಗ್ರಂಥಾಲಯಕ್ಕೂ ಬರಬೇಕೆನ್ನುವುದು ಕರ್ಜನ್ನನ ಮನೀಷೆ. ಈತ ಭಾರತದ ಗ್ರಂಥಾಲಯಕ್ಕೆ ಬ್ರಿಟಿಷ್ ಮ್ಯೂಸಿಯಂನಲ್ಲಿ ಕೆಲಸ ಮಾಡುತಿದ್ದ ಜಾನ್ ಮ್ಯಾಕ್ಫರ್ಲೆಸ್ ಎಂಬಾತನನ್ನು ಗ್ರಂಥಾಪಾಲನಾಗಿ ನೇಮಿಸಿದ. ಇವನ ಬಳಿಕ ಕ್ರಮವಾಗಿ ಭಾಷಾವಿಜ್ಞಾನಿ ಹರಿನಾಥ ಡೇ, ಕವಿ ಜೆ. ಎ. ಚಾಪ್ಮನ್, ಶಿಕ್ಷಣ ತಜ್ಞ, ಕೆ. ಎಂ. ಅಸದುಲ್ಲ ಇವರು ಗ್ರಂಥಾಲರಾಗಿದ್ದರು.