ಪುಟ:Mysore-University-Encyclopaedia-Vol-6-Part-15.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಂಥಾಲಯ ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಪುಸ್ತಕ ತಯಾರಿಕೆಯ ಉದ್ಯಮ ಅದ್ಭುತವಾಗಿ ಬೆಳೆಯಿತು; ೨೧ನೆಯ ಶತಮಾನದಲ್ಲಿ ಅದು ಇನ್ನೂ ವಿಸ್ತರಿಸಿದೆ. ಆಧುನಿಕ ತಂತ್ರಕಜಾನದಿಂದಾಗಿ ಪುಸ್ತಕ ಮುದ್ರಣದ ಇಡೀ ಪ್ರಕ್ರಿಯೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಬರೆಹವನ್ನು ಮೈಕ್ರೋಫಿಲ್ಮ್ ಆಗಿ ಪರಿವರ್ತಿಸುವುದು ಇಂದು ಸುಲಭ. ಒಂದು ಕಡೆ ಘನವಾದ, ಗಟ್ಟಿಮುಟ್ಟಾದ, ನೂರು ವರ್ಷ ಬಾಳಬಲ್ಲ ಪುಸ್ತಕ ತಯಾರಾಗುತ್ತಿರುವಂತೆ, ಒಮ್ಮೆ ಓದಿ ಬಿಸಾಡಬಹುದಾದ, ಅಲ್ಪ ಬೆಲೆಯ ಆದರೂ ಅಮೂಲ್ಯವಾದ ಪುಸ್ತಕಗಳೂ ಲಕ್ಷಸಂಖ್ಯೆಯಲ್ಲಿ ಹೊರಬರುತ್ತವೆ. ಇದು ಪುಸ್ತಕದ ವಿಕಸನ ಕಥೆ. ‌ಗ್ರಂಥಾಲಯ ವಿಜಾನಿಗಳು ಗ್ರಂಥಾಲಯ ವಿಕಾಸದ ಚರಿತ್ರೆಯನ್ನು ನೋಡಿದರೆ ಒಂದು ಅಂಶ ಸ್ಪಷ್ಟವಾಗುತ್ತದೆ. ಪ್ರಾರಂಭದ ದಿನಗಳಲ್ಲಿ ಆಸಕ್ತರಾದ ಖಾಸಗಿ ಮಹನೀಯರು ತಮ್ಮ ಮತ್ತು ತಮ್ಮ ಜನರ ಉಪಯೋಗಕ್ಕಾಗಿ ಗ್ರಂಥಸಂಗ್ರಹ ಮಾಡುತ್ತ ಬಂದಿದ್ದಾರೆ. ಕ್ರಮೇಣ ಆಯಾ ದೇಶಗಳ ರಾಜ ಮಹಾರಾಜರುಗಳು ಕವಿಗಳಿಗೂ ವಿದ್ವಾಂಸರಿಗೂ ಆಶ್ರಯ, ಪ್ರೋತ್ಸಾಹ, ಧನಸಹಾಯಗಳನ್ನು ಕೂಟ್ಟುದಲ್ಲದೆ ತಮ್ಮ ಅರಮನೆಯ ಒಂದು ಭಾಗದಲ್ಲಿ ಗ್ರಂಥ ಸಂಗ್ರಹಣ ಮಾಡತೊಡಗಿದರು. ಇವರಲ್ಲನೇಕರು ಗ್ರಂಥ ಪ್ರತೀಕರಣ, ಗ್ರಂಥ ವಿಂಗಡಣೆ, ಗ್ರಂಥಸೂಚೀ ರಚನೆ ಮೊದಲಾದ ವಿಷಯಗಳಿಗೆ ಗಮನ ಕೊಟ್ಟರು. ಕ್ರಮೇಣ ಸರ್ಕಾರ ಹಾಗೂ ಸಾರ್ವಜನಿಕೆ ಸಂಸ್ಥೆಗಳು, ವಿದ್ಯಾಪೀಠಗಳು ಗ್ರಂಥಾಲಯಗಳು ಜವಾಬ್ದಾರಿಯನ್ನು ಹೊರತೊಡಗಿದುವು. ವಿವಿಧ್ಧೋದ್ದೇಶಗಳಿಗಾಗಿ ವಿವಿಧ ಮಾದರಿಯ ಗ್ರಂಥಾಲಯಗಳು ರೂಪುಗೊಳ್ಳತೊಡಗಿದುವು. ಈ ಸಂದರ್ಭದಲ್ಲಿ ಗ್ರಂಥಾಲಯಗಳ ನಿರ್ಮಾಣ ಹಾಗೂ ಸಕ್ರಮ ವಿಕಾಸಕ್ಕೆ ಕಾರಣರಾದ ಕೆಲವು ಮಹನೀಯರ ಪರಿಚಯವನ್ನಿಲ್ಲಿ ಕೊಡಲಾಗಿದೆ. ೧. ಕಾರ್ನೇಗಿ, ಆಂಡ್ರ್ಯೂ : ೧೮೩೫-೧೯೧೯. ವಿವಿಧ ಬಗೆಯ ಗ್ರಂಥಾಲಯಗಳ ಸ್ಥಾಪಕ. ಅಮೆರಿಕದ ಕೈಗಾರಿಕೋದ್ಯಮಿ ಮತ್ತು ದಾನಿಯಾದ ಈತ ಗ್ರಂಥಾಲಯಗಳಿಗಾಗಿ ಆರು ಕೋಟಿಗೂ ಹೆಚ್ಚು ಡಾಲರುಗಳನ್ನು ದಾನ ಮಾಡಿದ. ಈತನ ದಾನದತ್ತಿಗಳ ಲೆಕ್ಕದಲ್ಲಿ ೧೯೧೯ ರ ಹೊತ್ತಿಗೆ ೨,೮೧೧ ಸಾರ್ವಜನಿಕ ಗ್ರಂಥಾಲಯಗಳನ್ನು ತೆರೆದಿರುವುದಾಗಿ ತಿಳಿಯುತ್ತದೆ. ಗ್ರಂಥಾಲಯಗಳಿಂದಾಗುವ ಮುಖ್ಯ ಲಾಭ ಜಾನಾರ್ಜನೆ. ನಾವೇನಾದರೂ ಕೊಡದಿದ್ದರೆ ಅವು ನಮಗೇನೂ ಕೊಡಲಾರವು ಎಂಬುದು ಈತನ ಅಭಿಪ್ರಾಯ (ನೋಡಿ-ಕಾರ್ನೇಗಿ, ಅಯ್ಂಡ್ರ್ಯೂ). ೨. ಕಟ್ಟರ್, ಚಾರ್ಲ್ಸ್ ಅಮ್ಮಿ : ೧೮೩೭-೧೯೦೩. ಗ್ರಂಥಾಲಯ ವಿಜ್ಯ್ನಾನದಲ್ಲಿ ಜನಪ್ರಿಯವಾಗಿರುವ ವ್ಯಾಪಕ ವರ್ಗೀಕರಣ ಪದ್ಧತಿಯ (ಎಕ್ಸ್ ಪ್ಯಾನ್ಸಿವ್ ಕ್ಲ್ಯಾಸಿಫಿಕೇಶನ್) ಕರ್ತೃ. ಈತ ಹುಟ್ಟಿದ್ದು ಅಮೆರಿಕದ ಬಾಸ್ಟನ್ ನಗರದಲ್ಲಿ. ಹಾರ್ವರ್ಡ್ ಕಾಲೇಜಿನಲ್ಲಿ ವ್ಯಾಸಂಗಮಾಡಿ ಪದವೀಧರನಾದ (೧೮೫೫). ಕ್ರೈಸ್ತ ಧರ್ಮೋಪದೇಶಕನಾಗಲು ಆಶಿಸಿ ಹಾರ್ವರ್ಡಿನ ದೇವಜಾನ ಶಾಲೆಯಲ್ಲಿ ಕಲಿಯುತ್ತಿದ್ದಾಗ, ಆ ಶಾಲೆಯ ಗ್ರಂಥಾಲಯದ ಸೂಚಿಯನ್ನು ತಯಾರಿಸುವ ಕೆಲಸ ಈತನ ಪಾಲಿಗೆ ಬಂತು. ಇದರಿಂದಾಗಿ ಗ್ರಂಥಾಲಯ ವಿಜ್ಞಾನದಲ್ಲಿ ಆಸಕ್ತಿ ಮೂಡಿತು. ಮುಂದೆ ಹಾರ್ವರ್ಡ್ ಕಾಲೇಜಿನ ಗ್ರಂಥಾಪಾಲನ ಸಹಾಯಕನಾಗಿ ನೇಮಕಗೊಂಡ (೧೮೬೦). ಬಿಡುವಿನ ವೇಳೆಯಲ್ಲಿ ಬಾಸ್ಟನ್ ಸಾರ್ವಜನಿಕ ಗ್ರಂಥಾಲಯ ಮತ್ತು ಅದರ ಆಂಗಸಂಸ್ಥೆಗಳ ಗ್ರಂಥಾಲಯಗಳಲ್ಲಿ ಕೆಲಸಮಾಡಿ. ಅಲ್ಲಿನ ಗ್ರಂಥ ಸೂಚಿಗಳನ್ನು ಪರಿಷ್ಕರಿಸಿದ. ಆನಂತರ ಆಥೀನಿಯಮ್ ಗ್ರಂಥಾಲಯದ ಪ್ರಧಾನ ಗ್ರಂಥಾಪಾಲನಾಗಿ ನೇಮಕಗೊಂಡ. ಗ್ರಂಥಾಸೂಚಿ ಕಾರ್ಯದಲ್ಲಿ ವಿಶೇಷ ಪರಿಶ್ರಮ ಪಡೆದಿದ್ದ. ಈತ ದರಮೂಲ ತತ್ತ್ವಗಳನ್ನು ಕುರಿತು ರೂಲ್ಸ್ ಫಾರ್ ಎ ಡಿಕ್ಷನರಿ ಕ್ಯಾಟಲಾಗ್ ಎಂಬ ಗ್ರಂಥವನ್ನು ರಚಿಸಿದ (೧೮೭೫). ಪ್ರಪಂಚದ ಅನೇಕ ಗ್ರಂಥಾಲಯಗಳಲ್ಲಿ ಇಂದಿಗೂ ಇದು ಬಳಕೆಯಲ್ಲಿದೆ. ಆಮೆರಿಕ ಗ್ರಂಥಾಲಯ ಸಂಘದ ಸ್ಥಾಪನೆಗೆ ಪ್ರಯತ್ನಿಸಿದ ಈತ ಅದರ ಅಭಿವೃದ್ಧಿಗಾಗಿಯೂ ಶ್ರಮಿಸಿದ, ಈತನ ಸೋದರಳಿಯ ಡಬ್ಲ್ಯೂ ಪಿ. ಕಟ್ಟರ್ ಎಂಬಾತ ಈತನ ಜೀವನ ಚರಿತ್ರೆಯನ್ನು ಬರೆದು ಪ್ರಕಟ ಮಾಡಿದ್ದಾನೆ (೧೯೩೧). (ಎಸ್.ಆರ್.ಜಿಯು.) ೩. ಖುದಾಭಕ್ಷ್ ಖಾನ್ : ೧೮೪೨-೧೯೦೮. ಪಾಟ್ನಾದ ಪ್ರಸಿದ್ಧ ವಕೀಲ, ಹೈದರಾಬಾದ್ ಸಂಸ್ಥಾನದ ಮುಖ್ಯ ನ್ಯಾಯಾಧೀಶ ಮತ್ತು ಖುದಾ ಭಕ್ಷ್ ಪ್ರಾಚ್ಯ ಸಾರ್ವಜನಿಕ ಗ್ರಂಥಾಲಯದ ಸ್ಥಾಪಕ. ಬಿಹಾರ್ ಜಿಲ್ಲೆಯ ಛಾಪ್ರಾದಲ್ಲಿ ಜನಿಸಿದ. ತಂದೆ ಮಹಮದ್ ಭಕ್ಷ್ ಪುಸ್ತಕ ಪ್ರೇಮಿ ಮತ್ತು ಹಸ್ತಪ್ರತಿಗಳ ಸಂಗ್ರಾಹಕ. ಅರಬ್ಬಿ ಮತ್ತು ಫಾರಸಿ ಭಾಷೆಗಳಲ್ಲಿ ಪಾಂಡಿತ್ಯವನ್ನು ಸಂಪಾದಿಸಿದ ಖುದಾ ಭಕ್ಷ್ ಇಂಗ್ಲಿಷ್ ಭಾಷೆಯನ್ನು ಕಲಿತ. ಇಸ್ಲಾಂ ಗ್ರಂಥಾಲಯಗಳನ್ನು ಕುರಿತು ಅನೇಕ ಲೇಖನೆಗಳನ್ನು ಪ್ರಕಟಿಸಿದ. ತಂದೆಯ ಸಂಗ್ರಹದಿಂದ ದೊರೆತ ಸು.೧೪೦೦ ಹಸ್ತಪ್ರತಿಗಳೊಂದಿಗೆ ಒಂದು ಸಾರ್ವಜನಿಕ ಗ್ರಂಥಾಲಯವನ್ನು ತೆರೆದ. ಮೊಗಲರು ಸಂಗ್ರಹಿಸಿದ್ದ ಅಮೂಲ್ಯ ಹಸ್ತಪ್ರತಿಗಳು ಪರದೇಶಗಳಿಗೆ ಹೋಗುವುದನ್ನು ತಡೆಯಲು ಹಾಗೂ ನಾಶವಾಗದಂತೆ ನೋಡಿಕೊಳ್ಳಲು ಪ್ರಯತ್ನಿಸಿದ. ಹಸ್ತಪ್ರತಿಗಳ ಸಂಗ್ರಹಕಾರನ ನೆರವನ್ನು ಪಡೆದ. ಆಪೂರ್ವ ಹಸ್ತಪ್ರತಿಗಳ ಸಂಗ್ರಹಕ್ಕಾಗಿ ಈತನನ್ನು ಆರೇಬಿಯ, ಪರ್ಷಿಯ, ಈಜಿಪ್ಟ್, ಸಿರಿಯ ಮೊದಲಾದ ದೇಶಗಳಿಗೆ ಕಳುಹಿಸಿಕೊಟ್ಟ. ಕಮಿಷನ್ ಜೊತೆಗೆ ತಿಂಗಳ ವೇತನವನ್ನೂ ಕೊಟ್ಟು ೧೮ ವರ್ಷಗಳ ಕಾಲ ಈತನಿಂದ ಗ್ರಂಥ ಸಂಗ್ರಹ ಮಾಡಿದ. ಹಸ್ತಪ್ರತಿ ಗಳನ್ನು ಮಾರಲು ಬಂದವರಿಗೆ ಯೋಗ್ಯ ಬೆಲೆಯನ್ನು ಕೊಡುತ್ತಿದ್ದ ನಲ್ಲದೇ ಅವರ ಪ್ರಯಾಣ ವೆಚ್ಚದ ಎರಡರಷ್ಟು ಮೊತ್ತವನ್ನೂ ಕೊಡುತ್ತಿದ್ದ. ಹಸ್ತಪ್ರತಿಗಳ ಬೆಲೆ ಕಟ್ಟುವುದರಲ್ಲಿಯೂ ಈತ ನಿಷ್ಣಾತನಾಗಿದ್ದ. ಈತ ಸ್ಥಾಪಿಸಿದ ಪ್ರಾಚ್ಯ ಸಾರ್ವಜನಿಕ ಗ್ರಂಥಾಲಯ ಎಂದು ಪ್ರಸಿದ್ಧವಾಯಿತು. ಮುಂದೆ ಅದನ್ನು ಬಂಗಾಳ ಸರ್ಕಾರ ವಹಿಸಿ ಕೊಂಡಿತು. ಖುದಾಭಕ್ಷನ ಸಾಮಾಜಿಕ ಸೇವೆಯನ್ನು ಗಮನಿಸಿ ಆಗಿನ ಬ್ರಿಟಿಷ್ ಸರ್ಕಾರ ಖಾನ್ ಬಹಾದೂರ್ (೧೮೮೧) ಮತ್ತು ಸಿ.ಐ.ಇ. (೧೯೦೩) ಬಿರುದುಗಳನ್ನು ನೀಡಿ ಗೌರವಿಸಿತು. ೪. ಡ್ಯೂಯಿ, ಮೆಲ್ ವಿಲ್ : ೧೮೫೧-೧೯೩೧. ಗ್ರಂಥ ವರ್ಗೀಕರಣಕ್ಕೆ ಸಂಬಂಧಿಸಿದಂತೆ ದಾಶಮಿಕ ವರ್ಗೀಕರಣ (ಡೆಸಿಮಲ್ ಕ್ಲ್ಯಾಸಿಫಿಕೇಶನ್) ಪದ್ಧತಿಯನ್ನು ರೂಪಿಸಿದ ವ್ಯಕ್ತಿ. ಗ್ರಂಥಾಲಯವನ್ನು ಓರಣವಾಗಿಟ್ಟುಕೊಳ್ಳುವುದರಲ್ಲಿ ಎಷ್ಟರಮಟ್ಟಿಗೆ ಕ್ರಮಬದ್ಧ ವಿಧಾನವನ್ನು ಆನುಸರಿಸಬಹುದೆಂಬುದನ್ನು ಮೊಟ್ಟಮೊದಲಿಗೆ ತೋರಿಸಿಕೊಟ್ಟವ, ಹುಟ್ಟಿದ್ದು ಅಮೆರಿಕ ಸಂಯುಕ್ತ ಸಂಸ್ಥಾನಗಳ ನ್ಯೂಯಾರ್ಕ್ ರಾಜ್ಯದ ಆಡಮ್ಸ್ ಸೆಂಟರ್ ಎಂಬಲ್ಲಿ. ತಂದೆ ಜ್ಯೋಯಲ್ ಡ್ಯೂಯಿ; ತಾಯಿ ಎಲಿಜ್ಯಾ ಗ್ರೀನ್, ಓದುವುದೆಂದರೆ ಮೆಲ್ ವಿಲ್ ಗೆ ಮೊದಲಿನಿಂದಲೂ ಬಹಳ ಆಸಕ್ತಿ. ದುಡಿದು ತಿನ್ನಬೇಕೆಂಬ ಭಾವನೆ ಯಂತೂ ತೀರ ಉತ್ಕಟವಾಗಿತ್ತು. ಕೇವಲ ೧೩ ವರ್ಷದವನಿದ್ದಾಗಲೇ ಅಲ್ಪಷ್ಟು ಇಲ್ಲಷ್ಟು ಕೂಲಿ ಕಂಬಳಿ ಮಾಡಿ ಕೆಲವಾರು ಡಾಲರ್ ಗಳನ್ನು ಸಂಪಾದನೆ ಮಾಡುತ್ತಿದ್ದ. ಸೇರಿಸಿಟ್ಟ ಹಣದಲ್ಲಿ ಒಂದು ವೆಬ್ ಸ್ಟರ್ ನಿಘಂಟನ್ನು ಕೊಂಡು ಅದದಲ್ಲಿನ ಶಬ್ದಾರ್ಥಗಳನ್ನು ಹೆಚ್ಚಿನ ಆಸಕ್ತಿಯಿಂದ ಗ್ರಹಿಸಿದ. ಧಾರ್ಮಿಕ ಮನೋಭಾವವೊ ಇದ್ದ ಕಾರಣ ಒಂದು ಕ್ರೈಸ್ತಶಾಲೆಯಲ್ಲಿ ಕೆಲವು ಕಾಲ ಅಭ್ಯಾಸ ನಡೆಸಿದನಲ್ಲದೆ ಕೆಲಕಾಲ ಬೋಧಕನಾಗಿಯೂ ಕೆಲಸ ಮಾಡಿದ. ಶಿಕ್ಷಕ ವೃತ್ತಿಯಲ್ಲಿ ಬೇಸರ ತಲೆದೋರಿದ ಕಾರಣ ಅದನ್ನು ತ್ಯಜಿಸಿ ಮೆಸಾಚುಸೆಟ್ಸ್ ನ