ಪುಟ:Mysore-University-Encyclopaedia-Vol-6-Part-15.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊಲಕ ರಸ ಹೊರಬರದೆ ನೇರವಾಗಿ ರಕ್ತಕ್ಕೋ ದುಗ್ಧರಸಕ್ಕೋ ಸೇರುವಂತಿರುವ ಗ್ರಂಧಿಗಳು ನಿರ್ನಾಳ ಗ್ರಂಧಿಗಳು. ಇವುಗಳಿಗೆ ಅಂತಃಸ್ರಾವಿಗಳು(ಎಂಡೋಕ್ರೈನ್ಸ್) ಎಂದು ಹೆಸರು. ಪಿಟ್ಯುಯಿಟರಿ,ಗುರಾಣೆಕ ಗ್ರಂಧಿ ಮುಂತಾದವು ಇಂಧವು. ಇವು ಉತ್ಪಾದಿಸುವ ಆಂತಃಸ್ರಾವಗಳಿಗೆ ಹಾರ್ಮೊನುಗಳು(ನೋಡಿ) ಎಂದು ಹೆಸರು. ಕೆಲವು ಗ್ರಂಧಿಗಳು ಮಿಶ್ರ ಗ್ರಂಧಿಗಳಾಗಿ ಬಾಹ್ಯಸ್ರಾವ ಆಂತಃಸ್ರಾವಗಳೆರಡನ್ನೊ ಉತ್ಪಾದಿಸುತ್ತವೆ. ಮೇದೋಜೇರಕಾಂಗ (ಪ್ಯಾಂಕ್ರಿಯಾಸ್) ಇಂಧ ಒಂದು ಗ್ರಂಧಿ. ಇದರ ಬಾಹ್ಯಸ್ರಾವವಾದ ಮೇದೋಜೇರಕರಸ ನಾಳದ ಮೂಲಕ ಸಣ್ಣಕರುಗಳೊಳಕ್ಕೆ ಪ್ರವಹಿಸಿ ತಿಂದ ಆಹಾರದಲ್ಲಿರುವ ಹಿಟ್ಟು ಸಕ್ಕರಗಳುಸ ಮತ್ತು ಪ್ರೋಟೀನು ಕೊಬ್ಬುಗಳನ್ನು ಆರಗಿಸುವುದಖಕ್ಕೆ ಸಹಾಯ ಮಾಡುತ್ತದೆ. ಆಂತಃಸ್ರಾವವಾದ ಇನ್ಸುಲಿನ್ ನೇರವಾಗಿ ರಕ್ತಗತವಾಗಿ ವ್ಯಕ್ತಿ ಮಧುಮೇಹ ರೋಗದಿಂದ(ಡಯಾಬೆಟಿಸ್ ಮೆಲೈಟಸ್) ನರಳದಂತೆ ಕಾಪಾಡುವುದು. ಪುರಿಷರ ವೈಷಣಗಳೊ ಸ್ತ್ರೀಯರ ಆಂಡಾಶಯಗಳೊ ಒಂದು ರೀತಿಯ ಮಿಶ್ರ ಗ್ರಂಧಿಗಳು. ಇವು ವ್ಯಕ್ತಿಯ ಪ್ರಜನನಶೀಲ ಅವಧಿಯಲ್ಲಿ ಕಾರ್ಯ ಸಾಫಲ್ಯಕ್ಕೆ ಆಗತ್ಯವಾದ ವಿಶೇಷ ಆಂತಃಸ್ರಾವಗಳನ್ನು ಉತ್ಪಾದಿಸುತ್ತೆವೆ. ಮತ್ತು ಆದೇ ವೇಳೆ ಕೋಟಿಗಟ್ಟಲೆ ಪುರುಷಾಣುಗಳನ್ನೊ ಆಂಡಾಶಯ ನಿರ್ದಿಷ್ಟ ಒಂದೊಂದು ಆಂಡಾಣುವನ್ನೊ ತಯಾರಿಸಿ ಅವನ್ನು ಬಾಹ್ಯಸ್ರಾವದಂತೆ ನಾಳಗಳ ಮೂಲಕ ಹೊರಹಾಕುತ್ತವೆ ಕೊಡ.

ಬಾಹ್ಯಸ್ರಾವಿ ಗ್ರಂಧಿಗಳು ಒಂದೇ ಕೋಶದಿಂದಾಗಿರಬಹುದು. ಜರರ ಕರುಳಿನ ನಾಳ ಮತ್ತು ಶ್ವಾಸನಾಳಗಳಲ್ಲಿ ಇವು ಕಾಣಬರುತ್ತವೆ. ಇವುಗಳಿಗೆ ಗಾಬ್ಲೆಟ್ (ಲೋಟಾಕೈತಿ) ಕಣಗಳೆಂದು ಹೆಸರು. ಇವು ನಿರಂತರವಾಗಿ ಲೋಳೆಯನ್ನು ಸ್ರವಿಸಿ ಹೊರಹಾಕುತ್ತವೆ. ಅದು ಸುತ್ತಲೊ ಹರಡಿ ಆ ಭಾಗವನ್ನು ಒದ್ದೆಯಾಗಿ ಜಾರುವಂತೆ ಇಟ್ಟಿರುತ್ತದೆ. ಸಾವಿರ, ಲಕ್ಷ, ಕೋಟಿಗಟ್ಟಲೆ ಕೋಶಗಳು ನಿರ್ದಿಷ್ಟ ರಚನೆಗೆ ಒಳಪಟ್ಟು ಆಗಿರುವುದು ಗ್ರಂಧಿಗಳ ಸಾಮಾನ್ಯ ಲಕ್ಷಣ. ಗ್ರಂಧಿಗಳು ಕಣ್ಣೆಗೆ ಕಾಣದಷ್ಟು ಸಣ್ಣವಿರಬಹುದು ಇಲ್ಲವೇ ಯಕೈತ್ತು, ಮೂತ್ರಪಿಂಡಗಳಂತೆ ಬಹುಗಾತ್ರದ ಗ್ರಂಧಿ ಗಳಾಗಿರಬಹುದು. ಮಿದುಳಿನ ಕೋರಾಯ್ಡ್ ಪ್ಲೆಕ್ಸಸಿನಲ್ಲಿ ಕೋಶಗಳು ಮಡಿಸಿದ ಹಾಳೆಯಂತೆ ಜೋಡಿ ಕೊಂಡಿವೆ. ಇವುಗಳಿಗೆ ಮಿಕ್ಕಗ್ರಂಧಿಗಳಂತೆಯೇ ಸ್ರಾವಸಾಮರ್ಧ್ಯ ಉಂಟು. ಕರುಳಿನಲ್ಲಿರುವ ಗ್ರಂಧಿಗಳು ಪ್ರಯೋಗನಳಿಕೆ (ಟೆಸ್ಟ್ ಟ್ಯೊಬ್) ಆಕಾರದಲ್ಲಿವೆ. ಜರರದ ಗ್ರಂಧಿಗಳು ಕೊಡ ನಳಿಕೆಯಾಕಾರದಲ್ಲಿವೆ. ಆದರೆ ಆವುಗಳಲ್ಲಿ ಸ್ರವಿಸುವ ಭಾಗ ಮತ್ತು ಸ್ರಾವವನ್ನು ಹೂರಕ್ಕೊಯ್ಯುವ ನಾಳಭಾಗವೆಂದು ಗುರುತಿಸಬಹುದು. ಸ್ವೇದಗ್ರಂಧಿಗಳಲ್ಲಿ ಸ್ರವಿಸುವ ಭಾಗ ಸುರುಳಿ ಸುತ್ತಿಕೊಂಡಿರುವ ನಾಳದಂತೆಯೂ ಸ್ರಾವವನ್ನು ಹೊರಕ್ಕೊಯ್ಯುವ ಮತ್ತು ಸ್ವತಃ ಸ್ರಾವಸಾಮರ್ಧ್ಯ ಇಲ್ಲದ ನಾಳಭಾಗ ಸುಮಾರಾಗಿ ನೇರವಾಗಿಯೂ ಇವೆ.

ಮೈಜಿಡ್ಡಿನ ಗ್ರಂಧಿಗಳಲ್ಲಿ (ಸೆಬೇಶಿಯಸ್ ಗ್ಲ್ಯಾಂಡ್ಸ್) ಸ್ರವಿಸುವ ಭಾಗ ಕುಡಿಕೆಯಂತಿದೆ. ಇಲ್ಲಿ ಸಹ ಸ್ರಾವವನ್ನು ಹೊರಕ್ಕೆ ಒಯ್ಯುವ ಭಾಗವನ್ನು ನಾಳವಾಗಿ ಗುರುತಿಸಬಹುದು. ಇಂಧ ಗ್ರಂಧಿಗಳೆಲ್ಲ ಸರಳ ಗ್ರಂಧಿಗಳು ಮತ್ತು ಕಣ್ಣೆಗೆ ಕಾಣಿಸದವು. ಹೀಗಲ್ಲದೇ ನಾಳ ಕವಲೊಡೆದು ಪ್ರತಿ ಕವಲೊ ನಳಿಕೆಯಾಕಾರದ ಇಲ್ಲವೇ ಕುಡಿಕೆಯಾಕಾರದ ಸ್ರವಿಸುವ ಭಾಗಗಳಲ್ಲಿ ಕೊನೆಗೊಂಡಿದ್ದರೆ ಆಂಧ ಗ್ರಂಧಿಗಳಿಗೆ ಜಟಿಲ ರಚನೆಯ ಗ್ರಂಧಿಗಳೆಂದು ಹೆಸರು. ಇವು ಸಾಮಾನ್ಯವಾಗಿ ದ್ರಾಕ್ಷಿ ಗೊಂಚಲಿನಂತಿವೆ.ಸೊಕ್ಷದರ್ಶಕದಲ್ಲಿ ಮಾತ್ರ ಕಾಣಬಹುದು. ಅನೇಕ ಗ್ರಂಧಿಗಳಲ್ಲದೇ ದೊಡ್ಡ ಗ್ರಂಧಿಗಳಾದ ಲಾಲಾಗ್ರಂಧಿಗಳು,ಮೇದೋಜೇರಕಾಂಗಗಳು ಕೊಡ ಈ ಬಗೆಯವು. ಮುಖ್ಯ ನಾಳದ ಬೇರೆ ಬೇರೆ ಪ್ರಾಧಮಿಕ ಮತ್ತು ದ್ವಿತೀಯಕ ಕವಲುಗಳಿಗೆ ಆಂಟಿದಂತೆ ಗ್ರಂಧಿಭಾಗಗಳನ್ನು ಗುರುತಿಸಬಹುದು. ಈ ಗ್ರಂಧಿ ಭಾಗಗಳನ್ನಲ್ಲ ಅಧವಾ ಹಾಲೆಗಳನ್ನೆಲ್ಲ ಜೋಡಿಸಿ ಗ್ರಂಧಿಯನ್ನು ಒಂದು ಆಂಗವಾಗಿ ಪ್ರತ್ಯೇಕಿಸುವ ಹೊರಕವಚ ಉಂಟು. ಗ್ರಂಧಿಯ ಸ್ರವಣ ಭಾಗಗಳು, ಸಾಗುನಾಳಗಳು,ಗ್ರಂಧಿಗೆ ಪೊರೈಕಯಾಗುವ ರಕ್ತ ಮತ್ತು ದುಗ್ಧರಸನಾಳಗಳು, ನರಗಳು ಇವನ್ನು ಯುಕ್ತಸ್ಧಾನಗಳಲ್ಲಿ ಹೊಂದಿಸಿ ಇಡಲು ಗ್ರಂಧಿಯ ಮಿಕ್ಕ ಭಾಗವನ್ನೆಲ್ಲ ತುಂಬಿಕೊಂಡಿರುವ ಬಂಧನಾಂಗಾಂಶ (ಕನೆಕ್ಟಿವ್ ಟಿಶ್ಯೊ) ಉಂಟು. ಗ್ರಂಧಿಯ ಸ್ರವಿಸುವ ಭಾಗದ ಕೋಶಗಳು ರಕ್ತದಿಂದ ಬೇಕಾದ ವಸ್ತುಗಳನ್ನು ಹೀರಿಕೊಂಡು ನಿರ್ದಿಷ್ಟವಾದ ಸ್ರಾವವನ್ನು ಉತ್ಪಾದಿಸುತ್ತವೆ. ಇದು ಕೋಶ್