ಪುಟ:Mysore-University-Encyclopaedia-Vol-6-Part-15.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರನಾಡ

ಮಾತ್ರ ತಮ್ಮ ಪ್ರಭಾವ ಬೀರಿ ಅವುಗಳ ಕ್ರಿಯೆಯನ್ನು ನಿಯಂತ್ರಿಸುತ್ತವೆ. ಈ ಗ್ರಂಥಿಗಳ ಪೈಕಿ ತಲೆಚಿಪ್ಪಿನೊಳಗೆ ಮಿದುಳಿನ ಕೆಳಭಾಗದಲ್ಲಿ ಸ್ಥಾಪಿತವಾಗಿರುವ ಬಟಾಣಿಕಾಳಿನ ಗಾತ್ರದ ಪಿಟ್ಯೂಯಿಟರಿ ಗ್ರಂಥಿ ಬಹುಮುಖ್ಯವಾದದ್ದು. ಇದರ ಸ್ರಾವಗಳು ಗುರಾಣಿಕ ಗ್ರಂಥಿ,ಆಡ್ರಿನಲ್ ಗ್ರಂಥಿ,ಲೈಂಗಿಕ ಗ್ರಂಥಿಗಳ ಮುಂತಾದವುಗಳ ಕ್ರಿಯೆಯನ್ನು ನಿಯಂತ್ರಿಸುತ್ತದೆ.ಅಂತಸ್ರಾವಗಳ ಪ್ರಭಾವ ರಾಸಾಯನಿಕ ದೂತಕ್ರಿಯೆಯಿಂದಾಗುತ್ತದೆ. ಆದ್ದರಿಂದ ಕುರಿ,ದನ,ಹಂದಿ ಮುಂತಾದವುಗಳಿಂದ ವಿಶೇಷ ರೀತಿಯಲ್ಲಿ ಅಂತಸ್ರಾವಗಳು ಸಂಗ್ರಹಿನಸಲ್ಪಟ್ಟು ವೈದ್ಯದಲ್ಲಿ ಬಳಕೆಯಲ್ಲಿವೆ. ಕೆಲವು ವೇಳೆ ಇವು ಮಾರಕಹಗಳಾಗುವುದರಿಂದ ಚಿಕಿತ್ಸೆಯಲ್ಲಿ ಅಂತಸ್ರಾವಗಳ ಪ್ರಾಮುಖ್ಯ ಎಷ್ಟೆಂಬುದನ್ನು ಅರಿಯಬಹುದು. ಎಲ್ಲ ರೀತಿಯ ಗ್ರ್೦ಥಿಗಳ ಕೋಶಗಳಲ್ಲೂ ಮಿಕ್ಕ ಕೋಶಗಳಲ್ಲಿರುವಂತೆಯೇ ಕೋಶದ ಎಲ್ಲ ಭಾಗಗಳೂ ಇರುತ್ತವೆ