ಪುಟ:Mysore-University-Encyclopaedia-Vol-6-Part-15.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪. ಸೊರ್ಯನನ್ನು ಪರಿಭ್ರಮಿಸಲು ಗ್ರಹ ತೆಗೆದುಕೊಳ್ಳುವ ಆವಧಿಕಾಲದ ವರ್ಗ ಸೊರ್ಯ-ಗ್ರಹ ಸರಾಸರಿ ದೊರದ ಘನದ ಅನುಪಾತದಲ್ಲಿದೆ. ಈ ಅನುಪಾತದಲ್ಲಿದೆ. ಈ ಅನುಪಾತದ ಸ್ಧಿರಾಂಕ ಪ್ರತಿಯೊಂದು ಗ್ರಹಕ್ಕೊ ಒಂದೇ(ಕೆಪ್ಪರನ ಮೂರನೆಯ ನಿಯಮ).

೫. ಸೊರ್ಯ-ಗ್ರಹ ನಡುವಿನ ಬಲಸಂಬಂಧ ವ್ಯಸ್ತವರ್ಗನಿಯಮಾನುಸರ(ಇನ್ವರ್ಸ್ ಸ್ಕ್ವೇರ್ ಲಾ) ಇರುವುದರಿಂದ ಗ್ರಹಗಳ ಚಲನೆ ಈ ಮೇಲೆ (೨),(೩),(೪) ರಲ್ಲಿ ವಿವರಿಸಿದಂತೆ ಉಂಟು(ಈ ನಿಯಮವನ್ನು ಅವಿಷ್ಕರಿಸಿದವ ಐಸಾಕ್ ನ್ಯೊಟನ್, ೧೬೪೨-೧೭೨೭).

೬. ಎಲ್ಲ ಗ್ರಹಗಳಿಹಗೊ ಬೆಳಕು, ಉಷ್ಣ ಮುಂತಾದ ಶಕ್ತಿಗಳ ಅಕರ ಸೊರ್ಯನೇ. ಸೊರ್ಯನಿಂದ ತಮ್ಮ ಮೇಲೆ ಪಾತವಾಗವ ಬೆಳಕನ್ನು ಪ್ರತಿಫಲಿಸಿ ಅವು ಅಕಾಶದಲ್ಲಿ ಬೆಳಗುತ್ತವೆ,ಅಷ್ಟೆ

೭. ಗ್ರಹಗಳಿಗೆ ಉಪಗ್ರಹಗಳು ಇರಬಹುದು, ಇಲ್ಲದೆಯೂ ಇರಬಹುದು. ಉಪಗ್ರಹಗಳ ಹಾಗೂ ಬೇರೆ ವಿವರಗಳನ್ನು ಲೇಖನದ ಕೂನೆಯಲ್ಲಿರುವ ಯಾದಿಗಳಲ್ಲಿ ಕೂಟ್ಟಿದೆ.

೮. ಭೂಮಿಯನ್ನುಳಿದು ಮಿಕ್ಕ ಯಾವ ಗ್ರಹದಲ್ಲೂ ಜೇವಿಗಳಿರುವುದಕ್ಕೆ ಪುರಾವೆಗಳು ಲಭಿಸಿಲ್ಲ. ಮಂಗಳದಲ್ಲಿ ಏನಾದರೊ ಇದ್ದರ ಅದು ತೀರ ಆದಿಮ ಸ್ಧಿತಿಯಲ್ಲಿ ಇರಬಹುದೆಂದು ಅಂದಾಜು ಮಾಡಲಾಗಿದೆ.

ವರ್ಗೀಕರಣ: ಗಾತ್ರಾನುಸುರ ಎರಡು ಪ್ರಧಾನ ವರ್ಗಗಳಿವೆ. ಬುಧ, ಶುಕ್ರ, ಭೊಮಿ, ಮಂಗಳ ಮತ್ತು ಪ್ಲೊಟೋ-ಇವು ಕಿರಿಯ ಗ್ರಹಗಳು; ಗುರು, ಶನಿ, ಯುರೇನಸ್ ಮತ್ತು ನೆಪ್ಟೊನ್-ಇವು ಹಿರಿಯ ಗ್ರಹಗಳು. ಸೊರ್ಯ ಮತ್ತು ಗ್ರಹಗಳನ್ನು ನಾವು ವೀಕ್ಷಿಸುವುದು ಭೊಮಿಯ ಮೇಲಿನಿಂದಾದ್ದರಿಂದ ಬುಧ ಹಾಗೊ ಶುಕ್ರ ಗ್ರಹಗಳನ್ನು ಒಳಗ್ರಹಗಳೆಂದೊ ಮಂಗಳದಿಂದ ಪ್ಲೊಟೋದ ವರೆಗಿನ ಗ್ರಹಗಳನ್ನು ಹೊರಗ್ರಹಗಳೆಂದೊ ಕರೆಯುವುದುಂಟು.

ಸೊರ್ಯನಿಂದ ಗ್ರಹಗಳ ದೊರಗಳು ಮೇಲುನೋಟಕ್ಕೆ ಯಾದೈಚ್ಘಿಕವಾಗಿರುವಂತೆ ತೋರುತ್ತೆವೆ. ಇವುಗಳಲ್ಲಿ ಒಂದು ಕ್ರಮ ಇರಲಾರದೇ ಎಂಬುದನ್ನು ವಿಜ್ನನಿಗಳು ಪರಿಶೀಲಿಸಿದ್ದಾರೆ. ಇಂಧ ಚಿಂತನೆಯ ಫಲಿತಾಂಶವಾಗಿ ಟೆಶಿಯಸ್-ಬೋಡ್ ನಿಯಮ (ರೊಢಿಯಲ್ಲಿ ಬೋಡ್ ನಿಯಮ ಎಂದೇ ಇದನ್ನು ಕರೆಯುತ್ತಾರೆ) ಪ್ರಸಿದ್ಧಿಗೆ ಬಂದಿದೆ(೧೭೭೨). ಈ ನಿಯಮದ ವಿವರಗಳನ್ನೊ ಇದರ ಅನ್ವಯದಿಂದ ಹೇಗೆ ಕ್ಷುದ್ರಗ್ರಹಗಳ ಆವಿಷ್ಕಾರಆಯಿತೆಂಬ ವಿಷಯವನ್ನೊ ತಿಳಿಯಲು ನೋಡಿ-ಕ್ಷುದ್ರಗ್ರಹಗಳು. ಸೊರ್ಯನಿಂದ ಗ್ರಹಗಳ ದೊರಗಳು ಬೋಡ್ ನಿಯಮಾಸಾರವೇ ಏಕೆ ಇರಬೇಕು ಎನ್ನುವುದಕ್ಕೆ ಸಾಕ್ಷ್ಯಾಧಾರಗಳನ್ನು ಪ್ರಾಯಶಃ ಸೌರವ್ಯೊಹದ ಉಗಮ, ಸಮಗ್ರ ವ್ಯವಸ್ತೆಯ ಗತಿವಿಜ್ನಾನ ಮುಂತಾದ ಹಲವಾರು ಪ್ರಾಚಲಗಳನ್ನು ಆಧರಿಸಿ ಒದಹಗಿಸಬೇಕಾಹಗುತ್ತದೆ. ದ್ರವ್ಯರಾಶಿ, ಗುರುತ್ವ ಮತ್ತು ಸಾಂದ್ರತೆ: ಒಂದು ಆಧವಾ ಹೆಚ್ಚು ಉಪಗ್ರಹಗಳಿರುವ ಗ್ರಹದ ದ್ರವ್ಯರಾಶಿ ಯನ್ನು ನ್ಯೊಟನನ ಗುರುತ್ವಾಕರ್ಷಣ್ ನಿಯಮದ ಆನ್ವಯದಿಂದ ಸುಲಭವಾಗಿ ಕಂಡುಹಿಡಿಯಬಹುದು. ಉಪಗ್ರಹದ ಕಕ್ಷಯ ಆರ್ಧದೀರ್ಘಾಕ್ಷ a ಖಗೋಳ್ಮಾನ ಮತ್ತು ಅದರ ಪರಿಭ್ರಮಣೆಯ ಆವಧಿ ಕಾಲ T ನಾಕ್ಷತ್ರಿಕ ವರ್ಷ ಆಗಿದ್ದರೆ ಆಗ ಗ್ರಹದ ದ್ರವ್ಯರಾಶಿ m = a³/T². ಇಲ್ಲಿ ಸೊರ್ಯನ ದ್ರವ್ಯರಾಶಿ ಏಕಮಾಬನ. ಈ ಗಣನೆ ಮಾಡುವಾಗ ಗ್ರಹಕ್ಕೆ ಸಾಪೇಕ್ಷವಾಗಿ ಉಪಗ್ರಹದ ದ್ರವ್ಯರಾಶಿಯನ್ನೊ ಸೊರ್ಯನಿಗೆ ಸಾಪೇಕ್ಷವಾಗಿ ಭೊಮಿಯ ದ್ರವ್ಯರಾಶಿಯನ್ನೊ ಉಪೇಕ್ಷಿಸಬಹುದೆಂದು ಭಾವಿಸಲಾಗಿದೆ.ಭೊಮಿ(me) ಹಾಗೊ ಸೊರ್ಯ (ms) ದ್ರವಯರಾಶಿಗಳ ನಿಷ್ವತ್ತಿ me:ms ನ್ನು ಇದೇ ಪ್ರಕಾರ ಶೋಧಿಸಬಹುದಾದ್ದರಿಂದ me ಪದಗಳಲ್ಲಿ ಕೊಡ ಗ್ರಹದ್ರವಯರಾಶಿಗಳನ್ನು ಪಡೆಯಬಹುದು. ಗ್ರಹಕ್ಕೆ ಒಂದು ಉಪಗ್ರಹ ಕೊಡ ಇಲ್ಲದಾಗ (ಉದಾಹರಣೆಗೆ ಬುಧ, ಶುಕ್ರ) ಆ ಗ್ರಹದ ದ್ರವ್ಯರಾಶಿಯನ್ನು ಆದು ನೆರೆಗ್ರಹಗಳ ಕಕ್ಷೆಯ ಮೇಲೋ ಆಪರೊಪವಾಗಿ ಆದರ ಸಮೀಪ ಹಾಯುವ ಧೊಮಕೇತುವಿನ ಕಕ್ಷೆಯ ಮೇಲೋ ಪ್ರಯುಕ್ತಿಸುವ ಕ್ಷೋಭಗಳನ್ನು(ಪರ್ಟರ್ಬೇಷನ್ನ್) ಆಳೆದು ಪಡೆಯಬಹುದು. ಈ ಕ್ರಮದಿಂದ ಆಷ್ಟೇನೊ ನಿಖರವಾದ ಮಾಪನ ದೊರೆಯುವುದಿಲ್ಲ. ಏಕೆಂದರೆ ಕಕ್ಷೆಗಳಲ್ಲಿ ಗ್ರಹದಿಂದ ಉಂಟಾಗುವ ಕ್ಷೋಭಗಳು ಆಲ್ಲ ಪ್ರಮಾಣದವು.ಈಚೆಗೆ ಕೈತಕ ಉಪಗ್ರಹಗಳ ನೆರವಿನಿಂದ ಮತ್ತು ರಾಡಾರ್ ವೀಕ್ಷಣೆಗಳಿಂದ ಬುಧ, ಶುಕ್ರ ಮತ್ತು ಮಂಗಳ ಗ್ರಹಗಳ ದ್ರವ್ಯರಾಶಿಗಳನ್ನು ಹೆಚ್ಚು ನಿಷ್ಕೈಷವಾಗಿ ಪಡೆಯಲಾಗಿದೆ. ಗ್ರಹದ ದ್ರವ್ಯರಾಶಿ m ಮತ್ತು ತ್ರಿಜ್ಯ r ಭೊಮಿಯ ದ್ರವ್ಯರಾಶಿ