ಪುಟ:Mysore-University-Encyclopaedia-Vol-6-Part-15.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಹ ೫.ದೃಗ್ಗೋಚರ ಚಲನೆಗಳು:ಗ್ರಹಗಳೂ ಭೂಮಿಯೂ ಸ್ವಂತಾಕ್ಷಗಳ ಸುತ್ತ ಆವರ್ತಿಸುತ್ತ ಸೂರ್ಯನ ಸುತ್ತ ಪರಿಭ್ರಮಿಸುತ್ತ ಇರುವುದರಿಂದ ಭೂಮಿಯಿಂದ ನೋಡುವಾತನಿಗೆ ಗ್ರಹ ಚಲನೆಗಳು ಸಂಕೀರ್ಣವಾಗಿ ಕಾಣುತ್ತವೆ.ಸ್ಥಿರ ನಕ್ಷತ್ರ ಚಿತ್ರಗಳ ಹಿನ್ನೆಲೆಯಲ್ಲಿ ಒಂದು ಗ್ರಹದ ಚಲನೆ ವೀಕ್ಷಕನಿಗೆ ಹೇಗೆ ಕಾಣುವುದು ಎನ್ನುವುದನ್ನು ಚಿತ್ರ(೯)ರಲ್ಲಿ ತೋರಿಸಿದೆ.ಗ್ರಹದ ದೃಗ್ಗೋಚರ ಚಲನೆಗಳು ಎರಡು-ಮುನ್ನಡೆ ಮತ್ತು ಹಿನ್ನಡೆ.ಇವೆರಡರ ನಡುವಿನ ಸ್ಥಿತಿ ಸ್ತಬ್ಧತೆ.ಮುನ್ನಡೆಯಲ್ಲಿ ಗ್ರಹ ಪಶ್ಚಿಮ-ಪೂರ್ವ ದಿಶೆಯಲ್ಲಿ ಚಲಿಸಿದಂತೆಯೂ ಹಿನ್ನಡೆಯಲ್ಲಿ(ಇದನ್ನು ವಕ್ರನಡೆ ಇಂದೂ ಕರೆಯುವುದಿದೆ)ಪೂರ್ವ-ಪಶ್ಚಿಮ ದಿಶೆಯಲ್ಲಿ ಚಲಿಸಿದಂತೆಯೂ ಕಾಣುವುದು.ಸ್ತಬ್ಧ ಸ್ಥಿತಿಯಲ್ಲಿ (ಸ್ಟೇಷನರಿಸ್ಟೇಟ್) ಗ್ರಹ ಚಲನರಹಿತ ವಾಗಿರುವಂತೆ ತೋರುತ್ತದೆ.ಆ ವೇಳೆಯಲ್ಲಿ ಭೂಮಿ-ಗ್ರಹರೇಖೆ ಸಮಾಂತರವಾಗಿ ಚಲಿಸುತ್ತಿರುವುದೇ ಇದರ ಕಾರಣ.ಯಾವುದೋ ಒಂದು ಮುಹೂರ್ತದಲ್ಲಿ ಭೂಮಿ E1 ಮುತ್ತು ಗ್ರಹ M1 ಸೂರ್ಯ S ನ್ನು ಕುರಿತಂತೆ ಏಕರೇಖಸ್ಥವಾಗಿವೆ ಎಂದು ಭಾವಿಸೋಣ.ನಿರ್ದಿಷ್ಟ ಕಾಲಾನಂತರ ಅವು E2 M2 ಸ್ಥಾನಗಳಲ್ಲಿ ಇರುವುವೆಂದು ಭಾವಿಸಿದರೆ E ಯ ಕಕ್ಷಾವೇಗ Mನ ಕಕ್ಷಾವೇಗಕ್ಕಿಂತ ಅಧಿಕವಾಗಿರುವುದರಿಂದ ಕಂಸ E1E2ಕಂಸ M1M2ಕ್ಕಿಂತ ಉದ್ದವಾಗಿರುತ್ತದೆ.ಈಗ E2ರಿಂದ ನೋಡುವಾತನಿಗೆ M2 ಹಿಂದೆ ಬಿದ್ದಿರುವಂತೆ (ಪೂರ್ವ-ಪಶ್ಚಿಮ ದಿಶೆ) ಅಂದರೆ ಹಿನ್ನಡೆದಿರುವಂತೆ ತೋರುವುದು.ಮುಂದಿನ ಒಂದಿಷ್ಟು ವೇಳೆಯಲ್ಲಿ ಈ ಎರಡು ಗ್ರಹಗಳು E3M3 ಸ್ಥಾನಗಳಿಗೆ ಬಂದರೆ ಅವುಗಳ ವೇಗಗಳ ಹಾಗೂ ಕಕ್ಷಾವಿನ್ಯಾಸಗಳ ಫಲವಾಗಿ E3,M3 ರೇಖೆ E2M2 ರೇಖೆಗೆ ಸಮಾಂತರವಾಗಿಯೇ ಇರುತ್ತದೆ.ಆದ್ದರಿಂದ E3 ರಿಂದ ನೋಡುವಾತನಿಗೆ ಈ ಅವಧಿಯಲ್ಲಿ Mಗೆ ಚಲನೆಯೇ ಇಲ್ಲವೆಂಬ ಭಾವನೆ