ಪುಟ:Mysore-University-Encyclopaedia-Vol-6-Part-15.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಹ ಮೂಡುತ್ತದೆ.ಅಂದರೆ ಆಗ M ಸ್ತಬ್ಧಸ್ಥಿತಿಯಲ್ಲಿ ಇರುವಂತೆ ಭಾಸವಾಗುತ್ತದೆ.ಮುಂದೆ ನಿರ್ದಿಷ್ಟ ಅವಧಿಯ ಬಳಿಕ ಗ್ರಹಗಳು E4,M4 ಗಳಲ್ಲಿದ್ದರೆ E4ರಿಂದ ನೋಡುವಾತನಿಗೆ M ಮುನ್ನಡೆದಿರುವಂತೆ (ಪಶ್ಚಿಮ-ಪೂಎವ ದಿಶೆ) ಕಾಣುವುದು.ಆದ್ದರಿಂದ ಸ್ತಬ್ಧಸ್ಥಿತಿ ಎನ್ನುವುದು ಹಿನ್ನಡೆಗೂ ಮುನ್ನಡೆಗೂ ನಡುವಿನ ಸ್ಥಿತ್ಯಂತರ ಕಾಲ. ಇತರ ನಕ್ಷತ್ರಗಳಲ್ಲಿ ಗ್ರಹವ್ಯವಸ್ಥೆ:ಸೌರವ್ಯೂಹದಲ್ಲಿರುವ ಗ್ರಹೋಪಗ್ರಹಗಳ ಅಸ್ಥಿತ್ವ ನಮಗೆ ತಿಳಿಯುವುದು ಮುಖ್ಯವಾಗಿ ಎರಡು ಪ್ರಧಾನ ಕಾರಣಗಳಿಂದ-೧,ನೇರವಾಗಿ ಅವು ನಮಗೆ ಕಾಣುತ್ತವೆ.೨,ಅವು ನೆರೆ ಗ್ರಹ ಇಲ್ಲವೆ ಉಪಗ್ರಹದ ಮೇಲೆ ಗುರುತ್ವಾಕರ್ಷಣ ಪ್ರಭಾವವನ್ನು-ಅಂದರೆ ಕಕ್ಷೀಯ ಕ್ಷೋಭೆಯನ್ನು-ಬೀರುತ್ತವೆ.ಇತರ ನಕ್ಷತ್ರಗಳಲ್ಲಿ ಗ್ರಹವ್ಯವಸ್ಥೆ ಇರಬಾರದೆಂದೇನೂ ಇಲ್ಲ.ಅಲ್ಲಿಗೆ ಸೌರವ್ಯೂಹ ವಿಶ್ವದ ಆಕಸ್ಮಿಕವೇನೂ ಆಗಿರಬೇಕಾಗಿಲ್ಲ ಎಂದು ಒಪ್ಪಿಕೊಂಡಂತಾಯಿತು.ಹಾಗೆ ನೆರೆಯ ಒಂದು ನಕ್ಷತ್ರಕ್ಕೆ ಗ್ರಹವ್ಯವಸ್ಥೆ ಇರುವುದಾದರೆ ಅದರ ಇರವಿನ ಅರಿವು ನಮಗೆ ಮೂಡುವುದು ಪರೋಕ್ಷವಾಗಿ ಮಾತ್ರ ಗುರುವಿನಂತಹ ದೊಡ್ಡ ಗ್ರಹ ಸೂರ್ಯನ ಮೇಲೆ ಪರಿಣಾಮ ಬೀರಿ ಅದು ಓಲಾಡುವಂತೆ ಮಾಡಬಲ್ಲುದು.ಈ ಪ್ರಮಾಣ ಅತ್ಯಲ್ಪ.ಇಂದು ದೊಡ್ದ ದೊಡ್ಡ ದೂರದರ್ಶಕ ಗಳನ್ನು ಬಳಸಿ ನಕ್ಷತ್ರಗಳ ಈ ಬಗೆಯ ಓಲಾಟವನ್ನು ಅಳೆಯುವುದು ಸಾಧ್ಯವಾಗಿದೆ.ತತ್ಪರಿಣಾಮವಾಗಿ ಸುಮಾರು ೧೦೦ ನಕ್ಷತ್ರಗಳಿಗೆ ಗ್ರಹಗಳಿರುವುದನ್ನು ಪತ್ತೆ ಮಾಡಲಾಗಿದೆ. ಭೂಮಿಯಂತ ಗ್ರಹಗಳನ್ನು ಪತ್ತೆಮಾಡುವುದು ಬಹಳ ಕಷ್ಟ ಸಾಧ್ಯ.ಕಾರಣಗಳು ಸುಸ್ಪಷ್ಟ.ಭೂಮಿಯ ಪ್ರಭಾವ ಸೂರ್ಯನ ಮೇಲೆ ವ್ಯಕ್ತಪಡುವಂತೆಯೇ ಇಲ್ಲ. ಈ ಹೊಸ ಸೌರಮಂಡಲಗಳಲ್ಲಿ ಜೀವಿಗಳಿರಬಹುದೇ ಎಂಬುದನ್ನು ಪತ್ತೆಮಾಡಲು ಜೀವವಿಜ್ನಾನಿಗಳೂ ಖಗೋಳ ವಿಜ್ನಾನದ ಮಿತಿಯೊಳಗೆ ಬಂದು ಸೇರಿದ್ದಾರೆ.ಆಸ್ಟ್ರೋಬಯಾಲಜಿ-ಖಗೋಳ ಜೀವವಿಜ್ನಾನ ಎಂಬ ಹೊಸ ಶಾಖೆ ಜನ್ಮ ತಳೆದಿದೆ.