ಪುಟ:Mysore-University-Encyclopaedia-Vol-6-Part-15.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಗ್ರಹಕುಂಡಲಿ :ಭೂಮಂಡದಲ್ಲಿ ಸಂಚರಿಸುವ ಗ್ರಹಗಳ ಸ್ಥಾನಗಳನ್ನು ಸುಲಭವಾಗಿ ತಿಳಿಯುವಂತೆ ಬರೆದು ಸೂಚಿಸುವ ವಿಧಾನ.ಕುಂಡಲಿಗೆ ಚಕ್ರವೆಂದೂ ಹೆಸರಿದೆ.ಕುಂಡಲಿಯನ್ನು ಒಂದೊಂದು ಕ್ರಮದಲ್ಲಿ ಬರೆಯುತ್ತಾರೆ.ಹಿಂದು ಕುಂಡದಲಿಯಲ್ಲಿ ಹನ್ನೆರಡು ಮನೆಗಳಿರುತ್ತವೆ.ಇದನ್ನು ಕುಂಡಲಾಕಾರದಲ್ಲಿ ಬರೆಯುತ್ತಿದ್ದುದರಿದ ಇದಕ್ಕೆ ಕುಂಡಲಿ ಎಂಬ ಹೆಸರು ಪ್ರಚಲಿತವಾಗಿದೆ.ದಕ್ಷಿಣ ಭಾರತದಲ್ಲಿ ಇದನ್ನು ಚಚ್ಜೌಕವಾಗಿ ಬರೆಯುತ್ತಾರೆ.ಇದರಲ್ಲಿರುವ ಮನೆಗಳಲ್ಲಿ ಮೇಷಾದಿ ಹನ್ನೆರಡು ರಾಶಿಗಳು ಸ್ಥಾನ ನಿಯತವಾಗಿರುತ್ತದೆ.ಭಮಂಡದಲ್ಲಿ ಗ್ರಹ ಯಾವ ರಾಶಿವಿಭಾಗದಲ್ಲಿ ಇರುವುದೊ ಅದನ್ನು ತಿಳಿದುಕೊಂಡು ಕುಂಡದಲಿಯ ಆ ರಾಶಿಯ ಮನೆಯಲ್ಲಿ ಆ ಗ್ರಹದ ಹೆಸರನ್ನು ಬರೆಯಬೇಕು.ಹೀಗೆ ಸೂಯ೯ ,ಚಂದ್ರ,ಅಂಗಾರಕ,ಬುಧ,ಗುರು,ಶುಕ್ರ,ಶನಿ,ರಾಹು,ಕೇತು ಈ ಒಂಬತ್ತು ಗ್ರಹಗಳ ಹೆಸರುಗಳೂ ಕುಂಡದಲಿಯಲ್ಲಿ ಇರುತ್ತವೆ.ಇದರಿಂದ ಏಕಕಾಲದಲ್ಲಿ ನವಗ್ರಹಗಳು ಯಾವಯಾವ ರಾಶಿಗಳಲ್ಲಿ ಇವೆ ಎಂಬುದು ತಿಳಿಯುತ್ತದೆ.ಜನನ ಲಗ್ನರಾಶಿಯನ್ನು ಲೆಕ್ಕಮಾಡಿ ತಿಳಿದು ಅದನ್ನು.