ಪುಟ:Mysore-University-Encyclopaedia-Vol-6-Part-15.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಹಣಕಾರಕ ಯಮಳ ನಕ್ಷತ್ರಗಳು ಕುಂಡಲಿಯಲ್ಲಿ ಆ ರಾಶಿಯ ಮನೆಯಲ್ಲಿ ಲಗ್ನ ಎಂದು ಗುರ್ತಿಸಬೇಕು. ಹೀಗೆ ಬರೆದು ಸಿದ್ಧಪಡಿಸಿರುವ ಕುಂಡಲಿಯ ಸಹಾಯದಿಂದ ಜಾತಕನಿಗೆ ಗ್ರಹಗಳಿಂದ ಉಂಟಾಗುವ ಫ಼ಲಗಳನ್ನು ತಿಳಿಯಲು ಅನುಕೂಲವಾಗುತ್ತದೆ. ಜನನಕಾಲ, ವಿವಾಹ ಮೊದಲಾದ ಶುಭಕಾರ್ಯಗಳನ್ನು ಮಾಡುವ ಕಾಲ ಮತ್ತು ಪ್ರಶ್ನಕಾಲ, ಈ ಕಾಲಗಳಲ್ಲಿ ಕುಂಡಲಿಗಳನ್ನು ಸಿದ್ಧಪಡಿಸಿ ಅದರ ಸಹಾಯದಿಂದ ಗ್ರಹಫ಼ಲವನ್ನು ತಿಳಿಯಬೇಕಾಗುತ್ತದೆ. ಕುಂಡಿಲಿಯನ್ನು ಬರೆಯುವುದರಲ್ಲಿ ಪ್ರಚಲಿತವಾಗಿರುವ ಕೆಲವು ವಿಧಾನಗಳನ್ನು ಈ ಕೆಳಗೆ ಚಿತ್ರರೂಪದಲ್ಲಿ ಕೊಟ್ಟಿದೆ. 1,2,4ನೆಯ ವಿಧಾನಗಳಲ್ಲಿ ಮೇಷಾದಿ ೧೨ ರಾಶಿಗಳಿಗೆ ಗೊತ್ತಾದ ಮನೆಗಳಿವೆ. ಮೂರನೆಯ ವಿಧಾನದಲ್ಲಿ ರಾಶಿಗಳಿಗೆ ನಿಯತವಾದ ಸ್ಥಾನವಿಲ್ಲ. ಎಲ್ಲಮನೆಗಳಲ್ಲೂ ಮೇಷಾದಿ ಹನ್ನೆರಡು ಸ್ಥಾನಗಳಿಗೆ ನಿಯತಸ್ಥಾನ ಲಗ್ನಾನುಗುಣವಾಗಿ ರಾಶಿಗಳು ಬದಲಾಗುತ್ತವೆ. ಇಷ್ಟಕಾಲದಲ್ಲಿ ಮೇಷ ಲಗ್ನವಾದರೆ ಲಗ್ನದಲ್ಲಿ ಮೇಷರಾಶಿ ಇದ್ದು, ಸಂಖ್ಯಾ ಕ್ರಮದಲ್ಲಿ ಉಳಿದ ರಾಶಿಗಳಿರುತ್ತವೆ. ಲಗ್ನ ವೃಷಭವಾದರೆ ಲಗ್ನ ಸ್ಥಾನದಲ್ಲಿ ವೃಷಭ ರಾಶಿ ಇರುತ್ತದೆ. ಹೀಗೆಯೇ ಲಗ್ನ ಸ್ಥಾನದಲ್ಲಿದ್ದು ಉಳಿದ ರಾಶಿಗಳು ಕ್ರಮವಾಗಿ ಆಯಾ ಸ್ಥಾನಗಳಲ್ಲಿರುತ್ತವೆ. ಬಳಿಕ ಗ್ರಹಣಗಳನ್ನು ಆಯಾರಾಶಿಗಳಲ್ಲಿ ಬರೆಯಬೇಕು. ಮೊದಲಿನ ಕುಂಡಲಿ ವಿಧಾನದಲ್ಲಿ ರಾಶಿಯ ಗಣನೆ ಪ್ರದಕ್ಷಿಣಾಕಾರದಲ್ಲಿದ್ದರೆ ಉಳಿದ ಮೂರು ವಿಧಾನಗಳಲ್ಲೂ ಅಪ್ರದಕ್ಷಿಣಾಕಾರದಲ್ಲಿರುತ್ತದೆ. ಕುಂಡಲಿಗಳಲ್ಲಿ ರಾಶಿಕುಂಡಲಿ ಭಾವಕುಂಡಲಿ ದ್ರೇಕ್ಕಾಣಕುಂಡಲಿ ಅಂಶಕುಂಡಲಿ ಇವು ಮುಖ್ಯವಾದವು. ಇವಲ್ಲದೆ ಇನ್ನು ಕೆಲವು ಕುಂಡಲಿಗಳುಂಟು. ಗ್ರಹಗಳಿರುವ ರಾಶಿಯನ್ನು ರಾಶಿಕುಂಡಲಿ ತಿಳಿಸುತ್ತದೆ. ಭಾವಕುಂಡಲಿ ತನು ಮೊದಲಾದ ಹನ್ನೆರಡು ಭಾವಗಳಲ್ಲಿ ಗ್ರಹಸ್ಥಿತಿಯನ್ನು ಸೂಚಿಸುತ್ತದೆ. ರಾಶಿ, ಭಾವಕುಂಡಲಿಗಳಲ್ಲಿ ಗ್ರಹಸ್ಥಿತಿ ಬಹುಪಾಲು ಒಂದೇ ವಿಧವಾಗಿದ್ದರೂ ಕೆಲವು ವೇಳೆ ಒಂದೆರಡು ಗ್ರಹಗಳು ಮಾತ್ರ ವ್ಯತ್ಯಾಸವಾಗುತ್ತದೆ. ಗ್ರಹವಿರುವ ದ್ರೇಕ್ಕಾಣ ಕುಂಡಲಿ ತಿಳಿಸುತ್ತದೆ. ಅಂತೆಯೇ ನವಾಂಶಕುಂಡಲಿ ಗ್ರಹವಿರುವ ನವಾಂಶವನ್ನು ಸೂಚಿಸುತ್ತದೆ. ಈ ಕುಂಡಲಿಗಳಿಂದ ಪ್ರತ್ಯೇಕವಾದ ಫ಼ಲಗಳನ್ನು ತಿಳಿಯಲು ಅನುಕೂಲವಾಗುತ್ತದೆ. ಪಕ್ಷ ಮತ್ತು ಮಾಸಗಳ ಕೊನೆಯ ದಿನದ ಗ್ರಹಸ್ಥಿತಿಯನ್ನು ಕುಂಡಲಿಯ ಮೂಲಕ ಪಂಚಾಂಗಗಳಲ್ಲಿ ಸೂಚಿಸುತ್ತಾರೆ. ಗ್ರಹಣಕಾರಕ ಯಮಳ ನಕ್ಷತ್ರಗಳು : ಪರಸ್ಪರ ಒಂದರ ಸುತ್ತ ಇನ್ನೊಂದು ಪರಿಭ್ರಮಿಸುತ್ತಿರುವ ಒಂದು ಜೊತೆ ನಕ್ಷತ್ರಗಳಲ್ಲಿ ಒಂದು ಇನ್ನೊಂದನ್ನು ತಾತ್ಕಾಲಿಕವಾಗಿ ಮರೆಮಾಡುವ ವ್ಯವಸ್ಥೆ (ಎಕ್ಲಿಪ್ಸಿಂಗ್ ಬೈನರಿ ಸ್ಟಾರ್ಸ್). ವಿಶ್ವದಲ್ಲಿ ಯಮಳ ನಕ್ಷತ್ರಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಇಂಥ ಒಂದೊಂದು ವ್ಯವಸ್ಥೆಯಲ್ಲೂ ಒಂದು ನಕ್ಷತ್ರ ಇನ್ನೊಂದು ನಕ್ಷತ್ರವನ್ನು ತನ್ನೆಡೆಗೆ ಆಕರ್ಷಿಸುತ್ತ ಒಟ್ಟಾಗಿ ಒಂದರ ಸುತ್ತಾ ಇನ್ನೊಂದು ಪರಿಭ್ರಮಿಸುತ್ತಿರುವುವು. ಸಮಬಲವಿರುವ ಇಬ್ಬರು ವ್ಯಕ್ತಿಗಳ ಅಪ್ಪಾಲೆತಿಪ್ಪಾಲೆ ಆಟದೊಂತೆ ಈ ಪರಸ್ಪರ ಪರಿಭ್ರಮಣೆ ಉಂಟು. ಯಮಳ ನಕ್ಷತ್ರಗಳ ಕಕ್ಷಾತಲ ಭೂಮಿಯ ಮೂಲಕ ಹಾಯುವಂತಿದ್ದರೆ ಆಗ ಒಂದು ನಕ್ಷತ್ರ ಇನ್ನೊಂದು ನಕ್ಷತ್ರದ ಹಿಂದಕ್ಕೆ ಸರಿದು ವೀಕ್ಷಕನ ದೃಷ್ಟಿಯಿಂದ ತಾತ್ಕಾಲಿಕವಾಗಿ ಮರೆಯಾಗಿರುವ ವಿದ್ಯಮಾನ ಘಟಿಸುತ್ತಲೇ ಇರುತ್ತದೆ. ಅಂಥಲ್ಲಿ ಮೊದಲಿನ ನಕ್ಷತ್ರದಿಂದ ಎರಡನೆಯ ನಕ್ಷತ್ರ ಗ್ರಹಣಗೊಂಡಿತು ಎನ್ನುತ್ತೇವೆ. [ಇಲ್ಲಿ ಗ್ರಹಣ ಪದದ ಅರ್ಥ ಕಣ್ಮರೆಯಾಯಿತು ಎಂದು, ಸೌರವ್ಯೂಹದಲ್ಲಿನ ಗ್ರಹಣಗಳನ್ನು ಕುರಿತು ನೀಡಿದ ಅರ್ಥ, ನೆರಳಿನಿಂದ ಅಸ್ಛುಟವಾಗುವಿಕೆ, ಅಲ್ಲ (ನೋಡಿ-ಗ್ರಹಣ, ಖಗೋಳೀಯ). ಆದ್ದರಿಂದ ಭೂಮಿಯನ್ನು ಕುರಿತಂತೆ ಯಮಳನಕ್ಷತ್ರ ವ್ಯವಸ್ಥೆಯೊಂದರ ವಿನ್ಯಾಸವನ್ನು ಅವಲಂಬಿಸಿ ಗ್ರಹಣಕಾರಕ ಯಮಳನಕ್ಷತ್ರ ವ್ಯವಸ್ಥೆ ಉಂಟು. ಪರ್ಸಿಯಸ್ ನಕ್ಷತ್ರಪುಂಜದಲ್ಲಿರುವ