ಪುಟ:Mysore-University-Encyclopaedia-Vol-6-Part-15.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಹಣ, ಖಗೋಳೀಯ (ವಿಷುವದಂಶ ೧ ಗಂ. ೨೫ಮಿ.-೪ಗಂ. ೪೫ ಮಿ. ಮತ್ತು ಘಂಟಾವೃತ್ತಾಂಶ ೩೧-೫೯) ಆಲ್ಗಾಲ್ ಎನ್ನುವ ನಕ್ಷತ್ರ ಸುಪ್ರಸಿದ್ಧ ಉದಾಹರಣೆ. ಒಂದು ಪ್ರಕಾಶಮಾನ ನಕ್ಷತ್ರ ಮತ್ತು ಒಂದು ಮಸುಕು ನಕ್ಷತ್ರ ಇವುಗಳ ವ್ಯವಸ್ಥೆ ಆಲ್ಗಾಲ್. ಸುಮಾರಾಗಿ ಪ್ರತಿ ಎರಡು ದಿವಸಗಳು ಮತ್ತು ಇಪ್ಪತ್ತೊಂದು ಗಂಟೆಗಳಲ್ಲಿ ಪ್ರಕಾಶಮಾನ ಘಟಕ ಮಸಕು ಘಟಕದ ಹಿಂದಕ್ಕೆ ಹೋಗುತ್ತದೆ. ಮತ್ತು ಆಗ ಆಲ್ಗಾಲಿನ ದೃಗ್ಗೋಚರ ಪ್ರಕಾಶ ಗಣನೀಯವಾಗಿ ಅಂದರೆ ಸಾಮಾನ್ಯ ಪ್ರಕಾಶದ ಅರ್ಧಕ್ಕಿಂತಲೂ ಕಡಿಮೆ ಮಟ್ಟಕ್ಕೆ ತಗ್ಗುತ್ತದೆ. ಇದನ್ನು ಬರಿಗಣ್ಣಿನಿಂದ ನೋಡಿ ಗುರುತಿಸಬಹುದು. ಗ್ರಹಣಕಾರಕ ಯಮಳ ನಕ್ಷತ್ರಗಳ ಪ್ರಕಾಶದ ಏರಿಳಿತಗಳ ಅಧ್ಯಯನದಿಂದ ವ್ಯವಸ್ಥೆಯ ಘಟಕಗಳ ಗಾತ್ರಗಳನ್ನೂ ದ್ರವ್ಯರಾಶಿಗಳನ್ನೂ ಗಣನೆ ಮಾಡುವುದು ಸಾಧ್ಯ. ಗ್ರಹಣ, ಖಗೋಳೀಯ : ಒಂದು ಆಕಾಶಕಾಯ ಇನ್ನೊಂದು ಆಕಾಶಕಾಯದ ನೆರಳಿನಿಂದ ಅಂಶಿಕವಾಗಿ ಇಲ್ಲವೇ ಪೂರ್ಣವಾಗಿ ಅಸ್ಛುಟವಾಗುವಿಕೆ (ಎಕ್ಲಿಪ್ಸ್, ಸೆಲೆಸ್ಟಿಯಲ್). ಗ್ರಹಣಕ್ಕೆ ಒಳಗಾಗುವ ಕಾಯ ಸ್ವಯಂಪ್ರಭಾಯುತವಾಗಿದ್ದು ಅಪಾರ ದರ್ಶಕ ಕಾಯವೊಂದರ ನೆರಳಿನಿಂದ ಅಸ್ಛುಟವಾಗುವುದು ಒಂದು ಬಗೆಯ ಗ್ರಹಣ; ಬದಲು ಅದು ಪ್ರತಿಫ಼ಲಿತ ಬೆಳಕಿನಿಂದ ಹೊಳೆಯುವುದಾಗಿದ್ದು ಅಪಾರ ದರ್ಶಕ ಕಾಯವೊಂದು ಇದಕ್ಕೂ ಇದರ ಬೆಳಕಿನ ಆಕರಕ್ಕೂ ನಡುವೆ ಸರಿಯುವಾಗ ಅಸ್ಛುಟವಾಗುವುದು ಇನ್ನೊಂದು ಬಗೆಯ ಗ್ರಹಣ. ಮೊದಲನೆಯ ಪ್ರರೂಪದ ಗ್ರಹಣಕ್ಕೆ ಆಚ್ಛಾದನೆ (ಅಕಲ್ಟೇಷನ್) ಎಂದು ಹೆಸರು. ಇದಕ್ಕೆ ಸೂರ್ಯಗ್ರಹಣ ಮತ್ತು ನಕ್ಷತ್ರಗ್ರಹಣ ನಿದರ್ಶನಗಳು. ಸೂರ್ಯಗ್ರಹಣದಲ್ಲಿ ವೀಕ್ಷಕನಿಗೂ ಸೂರ್ಯನಿಗೂ ನಡುವೆ ಚಂದ್ರ ಸರಿಯುತ್ತದೆ. ಗ್ರಹನಕಾರಕ ಯಮಳ ನಕ್ಷತ್ರಗಳು (ಎಕ್ಲಿಪ್ಸಿಂಗ್ ಬೈನರಿ ಸ್ಟಾರ್ಸ್) ಕೂಡ ಈ ಬಗೆಯ ಗ್ರಹಣಕ್ಕೆ ನಿದರ್ಶನಗಳು. ಎರಡನೆಯ ಪ್ರರೂಪದ ಗ್ರಹಣಕ್ಕೆ ಚಂದ್ರಗ್ರಹಣ ಅದರಂತೆಯೇ ಗ್ರಹಗಳ ಉಪಗ್ರಹಗಳ ಗ್ರಹಣಗಳು ಕೂಡ ಉದಾಹರಣೆಗಳು. ರೂಢಿಯಲ್ಲಿ ಗ್ರಹಣ ಎನ್ನುವ ಪದದ ಬಳಕೆ ಭೂಮಿಯಿಂದ ಕಾಣುವಂತೆ ಸೂರ್ಯ ಮತ್ತು ಚಂದ್ರಗ್ರಹಣಗಳನ್ನು ಕುರಿತು ಉಂಟು. ಪ್ರಸಕ್ತ ಲೇಖನದಲ್ಲಿ ಇವೆರಡು ಗ್ರಹಣಗಳ ಸವಿವರ ನಿರೂಪಣೆ ಇದೆ. ಗ್ರಹಣಕಾರಕ ಯಮಳ ನಕ್ಷತ್ರಗಳನ್ನು ಕುರಿತು ವಿವರಣೆಗೆ ನೋಡಿ- ಗ್ರಹಣಕಾರಕ ಯಮಳ ನಕ್ಷತ್ರಗಳು. ಇದಲ್ಲದೆ ಶುಕ್ರ ಮತ್ತು ಬುಧ, ಸೂರ್ಯನ ಮುಂದೆ ಹಾದುಹೋಗುವ ಅಪೂರ್ವ ಘಟಣೆಗಳನ್ನು ಸಂಕ್ರಮ (ಟ್ರಾನ್ಸಿಟ್) ಎಂದು ಕರೆಯಲಾಗಿದೆ. ಸೂರ್ಯ ಮತ್ತು ಚಂದ್ರಗ್ರಹಣಗಳು : ಭೂಮಿ ತನ್ನ ಅಕ್ಷದ ಸುತ್ತ ಆವರ್ತಿಸುತ್ತ ಮತ್ತು ಸೂರ್ಯನ ಸುತ್ತ ಪರಿಭ್ರಮಿಸುತ್ತ ಇರುವ ಒಂದು ಅಪಾರ ಕಾಯ; ಚಂದ್ರ ಸ್ವಂತಾಕ್ಷದ ಸುತ್ತ ಆವರ್ತಿಸುತ್ತ ಮತ್ತು ಭೂಮಿಯ ಸುತ್ತ ಪರಿಭ್ರಮಿಸುತ್ತ ಇರುವ ಇನ್ನೊಂದು ಅಪಾರದರ್ಶಕ ಕಾಯ. ಭೂಮಿ ಸಾಗುವ ಕಕ್ಷಾತಲ ಖಗೋಳವನ್ನು ಛೇದಿಸುವ ಮಹಾವೃತ್ತಕ್ಕೆ ಕ್ರಾಂತಿವೃತ್ತ (ನೋಡಿ) ಎಂದು ಹೆಸರು. ಈ ಮಹಾವೃತ್ತದ ಮೇಲೆ ಭೂಮಿಯ ಸುತ್ತ ಸೂರ್ಯ ಪರಿಭ್ರಮಿಸುತ್ತಿರುವಂತೆ ಭೂಮಿಯ ಮೇಲಿನ ವೀಕ್ಷಕನಿಗೆ ಭಾಸವಾಗುವುಧು. ಚಂದ್ರನ ಕಕ್ಷಾತಲ ಖಗೋಳವನ್ನು ಇನ್ನೊಂದು ಮಹಾವೃತ್ತದಲ್ಲಿ ಛೇದಿಸುತ್ತದೆ. ಈ ಮಹಾವೃತ್ತದ ಮೇಲೆ ಭೂಮಿಯ ಸುತ್ತ ಚಂದ್ರ ಪರಿಭ್ರಮಿಸುತ್ತಿರುವಂತೆ ಭೂಮಿಯ ಮೇಲಿನ ವೀಕ್ಷಕನಿಗೆ ಭಾಸವಾಗುವುಧು. ಕ್ರಾಂತಿವೃತ್ತತಲವೂ ಚಂದ್ರಕಕ್ಷಾವೃತ್ತತಲವೂ ಎರಡು ಬಿಂದುಗಳಲ್ಲಿ (N,N') ಪರಸ್ಪರ ಸಂಧಿಸುತ್ತವೆ; ಇವೆರಡು ತಲಗಳೂ ಪರಸ್ಪರ ೫೮ ಗಳಷ್ಟು ಬಾಗಿಕೊಂಡಿವೆ. N ಮತ್ತು N' ಬಿಂದುಗಳಿಗೆ ಪಾತ ಬಿಂದುಗಳು ಅಥವಾ ಸರಳವಾಗಿ ಪಾತಗಳು (ನೋಡ್ಸ್) ಎಂದು ಹೆಸರು. ಚಿತ್ರ (೩) ರಲ್ಲಿ E ಭೂಮಿ; NMN'MM' ಚಂದ್ರಕಕ್ಷೆ; NSN'S' ಕ್ರಾಂತಿವೃತ್ತ (ಸೂರ್ಯ ಕಕ್ಷೆ). ಚಂದ್ರ ಮತ್ತು ಸೂರ್ಯರು ಆಯಾ ಕಕ್ಷೆಯ ಮೇಲೆ ಅನುರೂಪ ಕಕ್ಷಾವೇಗಗಳಿಂದ ಸಂಚರಿಸುತ್ತಿರುವಾಗ ಭೂಮಿಯ ಮತ್ತು ಚಂದ್ರನ ನೆರಳುಗಳು ನಿರಂತರ ಚಲನೆಯಲ್ಲಿರುತ್ತವೆ. ಮಾತ್ರವಲ್ಲ, ವಾಸ್ತವಿಕವಾಗಿ ಈ ಮೂರು ಕಾಯಗಳ ವಿನ್ಯಾಸಗಳೂ ನಡುವಿನ ಅಂತರಗಳೂ ಬದಲಾಗುತ್ತಲೇ ಇರುವುದರಿಂದ ನೆರಳುಗಳ ಗಾತ್ರಗಳು ಕೂಡ ಬದಲಾಗುತ್ತಲೇ ಇರುತ್ತವೆ. ನಿರಂತರವಾಗಿ ನಡೆಯುತ್ತಿರುವ ಈ ವಿದ್ಯಮಾನದಲ್ಲಿ ಚಂದ್ರನ ನೆರಳು ಭೂಮಿಯ ಮೇಲೆ ಪತನವಾದಾಗ ಸೂರ್ಯ ಗ್ರಹಣ ಸಂಭವಿಸುವುದು; ಹಾಗೆಯೇ ಭೂಮಿಯ ನೆರಳು ಚಂದ್ರನ ಮೇಲೆ ಪತನವಾದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರಕಕ್ಷೆ ಕ್ರಾಂತಿವೃತ್ತಕ್ಕಿಂತ ಭಿನ್ನವಾಗಿರುವುದರಿಂದ ಗ್ರಹಣಗಳು ಪದೇ ಪದೇ ಸಂಭವಿಸುವ ಘಟನೆಗಳಲ್ಲ, ವಿರಳ ಘಟನೆಗಳು. ಚಿತ್ರ (೧) ನ್ನು ಇಲ್ಲವೇ ಚಿತ್ರ (೨) ನ್ನು ಗಮನಿಸಿ ಒಂದು ಅಂಶವನ್ನು ಖಾತ್ರಿ ಮಾಡಿಕೊಳ್ಳ ಬಹುದು: ಸೂರ್ಯ ಮತ್ತು ಚಂದ್ರ ಎರಡೂ ಪಾತಬಿಂದುಗಳ ಸನಿಹದಲ್ಲಿರುವಾಗ ಮಾತ್ರ ಗ್ರಹಣ ಸಂಭಾವ್ಯ. ಸೂರ್ಯಗ್ರಹಣವಾದರೆ ಚಂದ್ರ ಮತ್ತು