ಪುಟ:Mysore-University-Encyclopaedia-Vol-6-Part-15.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಹಣ, ಖಗೋಳೀಯ ಸೂರ್ಯ ಭೂಮಿಯಿಂದ ಒಂದೇ ದಿಶೆಯಲ್ಲಿ ಇರುವುದರಿಂದ ಅವುಗಳ ರೇಖಾಂಶಗಳು ಸಮ. ಆದ್ದರಿಂದ ಅಂದು ಅಮಾವಾಸ್ಯೆಯೂ ಹೌದು. ಚಂದ್ರಗ್ರಹಣವಾದರೆ ಚಂದ್ರ ಮತ್ತು ಸೂರ್ಯ ಭೂಮಿಯಿಂದ ವಿರುದ್ಧ ದಿಶೆಗಳಲ್ಲಿ ಇರುವುದರಿಂದ ಅವುಗಳ ರೇಖಾಂಶ ವ್ಯತ್ಯಾಸ ೧೮೦. ಆದರಿಂದ ಅಂದು ಹುಣ್ಣಿಮೆಯೂ ಹೌದು. ಹೀಗೆ ಗ್ರಹಣಗಳು ಚಂದ್ರ ಮತ್ತು ಸೂರ್ಯರು ಪಾತಬಿಂದುಗಳ ಸಮೀಪವಿರುವ ಅಮಾವಾಸ್ಯೆ ಇಲ್ಲವೇ ಹುಣ್ಣಿಮೆ ದಿವಸಗಳಂದು ಮಾತ್ರ ಸಂಭವಿಸುತ್ತವೆ. ಈ ಷರತ್ತುಗಳ ಪೈಕಿ ಯಾವುದೇ ಒಂದು ಪೂರೈಕೆ ಆಗದಿದ್ದರೆ ಗ್ರಹಣ ಸಂಭವಿಸುವುದಿಲ್ಲ. ಕ್ರಾಂತಿವೃತ್ತತಲದ ಮೇಲೆಯೇ ಚಂದ್ರಕಕ್ಷೆಯೂ ಇದ್ದಿದ್ದರೆ ಪ್ರತಿ ಅಮಾವಾಸ್ಯೆಯಂದು ಸೂರ್ಯಗ್ರಹಣವೂ ಪ್ರತಿ ಹುಣ್ಣಿಮೆಯಂದು ಚಂದ್ರಗ್ರಹಣವು ಆಗುತ್ತಿದ್ದುವು. ಹೀಗಾಗದಿರುವುದಕ್ಕೆ ಮುಖ್ಯಕಾರಣಗಳು ಎರಡು : ಒಂದು, ಚಂದ್ರಕಕ್ಷಾತಲ ಕ್ರಾಂತಿವೃತ್ತಾತಲಕ್ಕೆ ಬಾಗಿಕೊಂಡಿರುವುದು; ಎರಡು, ಪಾತಬಿಂದುಗಳ ಹಿನ್ನಡೆ (ರಿಟ್ರೊಗ್ರೇಡ್ ಮೋಷನ್). ಇವು ವಾರ್ಷಿಕವಾಗಿ ೨೦ ಗಳಷ್ಟು ಪ್ರದಕ್ಷಿಣ ದಿಶೆಯಲ್ಲಿ ಸಂಚರಿಸುತ್ತ ಸುಮಾರು ೧೮ ವರ್ಷಗಳಿಗೊಮ್ಮೆ ಮೊದಲಿನ ಸ್ಥಾನಗಳನ್ನು ಹೊಂದುತ್ತವೆ. ಈ ಕಾರಣಗಳಿಂದಲೆ ಪ್ರತಿ ಅಮಾವಾಸ್ಯೆ (ಚಂದ್ರ ಮತ್ತು ಸೂರ್ಯರ ರೇಖಾಂಶ ವ್ಯತ್ಯಾಸ ೧೮೦ ಆಗುವ ಘಟನೆ). ಚಂದ್ರನ ನೆರಳು ಭೂಮಿಯ ಮೇಲೆ ಬೀಳುವುದಿಲ್ಲ. ಅಥವ ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದಿಲ್ಲ ಮತ್ತು ಗ್ರಹಣಗಳು ಸಂಭವಿಸುವುದಿಲ್ಲ. ಇದರ ಪರಿಣಾಮವೆಂದರೆ ಯಾವುದಾದರೂ ಒಂದು ವರ್ಷದಲ್ಲಿ ಆಗಬಹುದಾದ ಗ್ರಹಣಗಳ ಒಟ್ಟು ಸಂಖ್ಯೆ ಏಳಕ್ಕಿಂತ ಹೆಚ್ಚಾಗಿರುವುದಿಲ್ಲ ಮತ್ತು ಎರಡೇ ಎರಡರಷ್ಟು ಕಡಿಮೆಯಾಗಿರಬಹುದು. ಗರಿಷ್ಟ ಸಂಖ್ಯೆಯಾದ ಏಳರಲ್ಲಿ ಐದು ಸೂರ್ಯಗ್ರಹಣಹಳು ಮತ್ತು ಎರಡು ಚಂದ್ರಗ್ರಹಣಗಳು; ಇಲ್ಲವೇ ನಾಲ್ಕು ಸೂರ್ಯಗ್ರಹಣಗಳು ಮತ್ತು ಮೂರು ಚಂದ್ರಗ್ರಹಣಗಳು ಇವೆ. ಕನಿಷ್ಟ ಸಂಖ್ಯೆಯಾದ ಎರಡರಲ್ಲಿ ಎರಡೂ ಸೂರ್ಯಗ್ರಹಣಗಳೇ. ಅಂದಮಾತ್ರಕ್ಕೆ ಯಾವುದೇ ಒಂದು ಸ್ಥಳದಲ್ಲಿರುವ ವೀಕ್ಷಕನಿಗೆ ಇವೆಲ್ಲವೂ ಕಾಣಲೇಬೇಕೆಂದೇನೂ ಇಲ್ಲ. ಭೂಮಿಯ ಮೇಲಿನ ಒಂದು ಸ್ಥಳದಿಂದ ಕಾಣಬಹುದಾದ ಗ್ರಹಣ ಮತ್ತು ಅದರ ವಿನ್ಯಾಸ (ಆಂಶಿಕವೋ ಪೂರ್ಣವೋ ಎಂಬ ಅಂಶ) ಗ್ರಹಣ ಸಂಭವಿಸುವಾಗ ಆ ಸ್ಥಳದ ಸ್ಥಾನವನ್ನು (ಅಂದರೆ ಆಕಾಂಶ ರೇಖಾಂಶಗಳನ್ನು) ಅವಲಂಬಿಸಿವೆ. ಚಂದ್ರಗ್ರಹಣ : ಭೂಮಿಯ ಸೂರ್ಯವಿಮುಖ ಪಾರ್ಶ್ವದಲ್ಲಿ ಶಂಕುವಿನಾಕಾರದ ನೆರಳು ಉಂಟಾಗಿರುತ್ತದೆ. ಚಿತ್ರ (೪) ರಲ್ಲಿ ಈ ದೃಶ್ಯದ ಅಡ್ಡಕೊಯ್ತವನ್ನು ಕಾಣಿಸಿದೆ. ಇಲ್ಲಿ S, E, M ಅನುಕ್ರಮವಾಗಿ ಸೂರ್ಯಕೇಂದ್ರ, ಭೂಮಿಕೇಂದ್ರ ಮತ್ತು ಚಂದ್ರಕೇಂದ್ರ. AD, BC ಸೂರ್ಯ ಮತ್ತು ಚಂದ್ರಬಿಂಬಗಳಿಗೆ ಎಳೆದ ನೇರ ಸಾಮಾನ್ಯ ಸ್ಪರ್ಶರೇಖೆಗಳು. ಅವು Gಯಲ್ಲಿ ಸಂಧಿಸುತ್ತವೆ. ACK, BDL ಈ ಬಿಂಬಗಳಿಗೆ ಎಳೆದ ಅಡ್ಡ ಸಾಮಾನ್ಯ ಸ್ಪರ್ಶರೇಖೆಗಳು. ಅವು Fನಲ್ಲಿ ಸಂಭವಿಸುತ್ತದೆ. CGD ಸೂರ್ಯನ ಬೆಳಕಿನಿಂದಾದ ಭೂಮಿಯ ನೆರಳಿನ ಶಂಕು(ಅಂಬ್ರ) ಎಂದು ಹೆಸರು. KCG ಮತ್ತು LDG ವಲಯದಲ್ಲಿ ಭಾಗಶಃ ನೆರಳಿರುತ್ತದೆ. ಇದಕ್ಕೆ ಅರೆನೆರಳಿನ ಶಂಕು (ಪಿನಂಬ್ರ) ಎಂದು ಹೆಸರು. ಈ ವಲಯದಿಂದ ನೋಡುವಾತನಿಗೆ ಸೂರ್ಯನ ಕೆಲವು ಭಾಗ ಮಾತ್ರ ಕಾಣುವುದಷ್ಟೆ. ಉಳಿದ ಭಾಗವನ್ನು ಭೂಮಿ ಮರೆ ಮಾಡಿರುತ್ತದೆ. ADCB ವೃತ್ತ ಭೂಮಿಯ ಸುತ್ತ ಇರುವ ಚಂದ್ರನ ಕಕ್ಷೆಯನ್ನು ಸೂಚಿಸುವುದು. ಸೂರ್ಯ, ಭೂಮಿ ವ್ಯಾಸಗಳನ್ನೂ ಅವುಗಳ ಕೇಂದ್ರಗಳ ನಡುವಿನ ಸರಾಸರಿ ಅಂತರವನ್ನೂ ತೆಗೆದುಕೊಂಡು ಲೆಕ್ಕ ಹಾಕಿದರೆ ಶಂಕುವಿನಾಕಾರದ ದಟ್ಟ ನೆರಳಿನ ಉದ್ದ ಭೂವ್ಯಾಸದ ಸುಮಾರು ೧೦೮ ಪಾಲು ದೊಡ್ಡದು ಎಂದು ತಿಳಿಯುವುದು. ಅಂದರೆ ದಟ್ಟ ನೆರಳಿನ ಶೃಂಗ G ಭೂಕೇಂದ್ರದಿಂದ ಸರಾಸರಿ ಸುಮಾರು ೧೩,೮೦,೫೨೨ ಕಿಮೀಗಳಷ್ಟು ದೂರದಲ್ಲಿರುತ್ತದೆ. ಚಂದ್ರ ಮತ್ತು ಭೂಕೇಂದ್ರಗಳ ನಡುವಿನ ಅಂತರ ಭೂವ್ಯಾಸದ ಸುಮಾರು ೩೦ ರಷ್ಟು ಉಂಟು. ಇದು ಸರಾಸರಿ ಸುಮಾರು ೩,೮೪,೫೫೧ ಕಿಮೀಗಳೆನ್ನಬಹುದು. ಆದ್ದರಿಂದ ಭೂಮಿಯ ಉಪಗ್ರಹವಾದ ಚಂದ್ರ ಭೂಮಿ ತನ್ನ ಹಿಂದೆ ಕೆಡೆಯುವ ದಟ್ಟ.