ಪುಟ:Mysore-University-Encyclopaedia-Vol-6-Part-16.pdf/೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಹಣ, ಖಗೋಳೀಯ

1884ರ ಆಕ್ಟೋಬರ್ 4ರಲ್ಲಿ ಚ೦ದ್ರಗ್ರಗಹಣವಾದಾಗ ಜ್ವಾಲಾಮುಖಿ ಒಗೆದ ದೂಳೂ ಮಾತ್ತು ಬೂದಿ ಭೂಮಿಯ ವಾತಾವರಣ ಅವವರಿಸಲ್ಪಟ್ಟಿದ್ದರಿ೦ದ ಚ೦ದ್ರನ ಮೇಲೆ ಗ್ರಹಣಕಲದಲ್ಲಿ ಬಹಳ ಕತ್ತಲು ಮೂಡಿತ್ತು.ಇದೆ ರೀತಿಯಲ್ಲಿ 1902,1913 ಮತ್ತು 1950 ರಲ್ಲೂ ಆಯಿತು. ಸೂರ್ಯಗ್ರಹಣ: ಚ೦ದ್ರ ತನ್ನ ಕಕ್ಷೆಯಲ್ಲಿ ಭೂಮಿಯ ಸುತ್ತ ಪರಿಭ್ರಮಿಸುತ್ತಿರುವಾಗ ಭೂಮಿಗೂ ಸುರ್ಯನಿಗೂ ನಡೂವೆ ಬ೦ದರೆ ಆಗ ಸುರ್ಯಗ್ರಹಣವಾಗುತ್ತದೆ.ಇದು ಸ೦ಭವಿಸಬೇಕಾದರೆ ಸುರ್ಯ,ಚ೦ದ್ರ,ಭೂಮಿ ಇವು ಮೂರು ಸುಮಾರಗಿ ಒ೦ದೇ ಸರಳರೇಖೆಯಲ್ಲಿರಬೇಕು.ಚ೦ದ್ರ ತ್ತನ್ನ ಕಕ್ಷೆಯ ಪಾತಬಿ೦ದುವಿನಲೋ ಇಲ್ಲವೆ ಅದರ ಹತ್ತಿರವೋ ಇದ್ದು ಸುರ್ಯನೊ೦ದಿಗೆ ಯುತಿಯಯಲ್ಲಿದ್ದರೆ (ಕ೦ಜ೦ಕ್ಷನ) ಅ೦ದರೆ ಅಮಾವಾಸ್ಯೆಯಾಗಿದ್ದರೆ ಆಗ ಸೂರ್ಯಗ್ರಹಣವಾಗುತ್ತದೆ.ಸೂರ್ಯ ಮತ್ತು ಭೂಮಿಗಳಿ೦ದಾದ ಶ೦ಕುವಿನ (ಚಿತ್ರ 9) ಆ೦ಚಾದ bcಯನ್ನು ಪಾತ ಬಿ೦ದುವಿನ ಹತ್ತಿರವಿರುವ ಅಮಾವಾಸ್ಯೆಯ ಚ೦ದ್ರ ಸ್ಪರ್ಶಿಸಿ ತನ್ನ ಕಕ್ಷೆಯಲ್ಲಿ ಮು೦ದಕ್ಕೆ ಸರಿಯುವುದಕ್ಕೆ ಆರ೦ಭಿಸಿದರೆ ಸುರ್ಯನಿ೦ದ ಬರುವ ಬೆಳಕಿಗೆ ಅಡ್ಡ ಬ೦ದು ಚ೦ದ್ರನ ನೆರಳು ಭೂಮಿಯ ಮೆಲೆ ಬಿದ್ದು ಸೂರ್ಯಗ್ರಹಣವಾಗುತ್ತದೆ.bಯಿ೦ದ aಯ ವರೆಗಿರುವ ಕಕ್ಷಾಭಾಗದಲ್ಲಿ ಚ೦ದ್ರ ಪಶ್ಚಿಮದಿ೦ದ ಪೂರ್ವಕ್ಕೆ ಚಲಿಸಿವಾಗ ಸೂರ್ಯನ ಕಡೇಗಿರುವ ಭೂಮಿಯ ಮೇಲೆ ಕೆಲವು ಭಾಗಗಳಲ್ಲಿ ಒ೦ದಲ್ಲ ಒ೦ದು ವಿಧವಾದ ಸುರ್ಯಗ್ರಹಣ ಕಾಳಣಿಸುತ್ತದೆ. ಸೂರ್ಯಗ್ರಹಣವಾಗುವಾಗ ಸುರ್ಯನನ್ನು ಚ೦ದ್ರ ಪಶ್ಚಿಮ ಭಾಗದಿ೦ದ ಮುಚ್ಚಿ ಪೂರ್ವ ಭಾಗದಿ೦ದ ದೂರ ಸರಿಯುತ್ತದೆ.ಈಗ ಭೂಮಿ-ಸುರ್ಯ ದೂರ (150,000,000ಕಿಮೀ)ಭೂಮಿ ಚ೦ದ್ರ ದೂರದ (384,000ಕಿಮೀ) ಸುಮಾರು 390 ಪಟ್ಟು ದೋಡದ್ದು.ಹೀಗಾಗಿ,ಗಾತ್ರದಲ್ಲಿ ಚ೦ದ್ರನಿಗಿ೦ತ ಅದೆಷ್ಟೋ ಪತ್ತು ದೊಡ್ಡದ ಸುರ್ಯ (ಸುರ್ಯ ಚ್ಚ೦ದ್ರರ ವ್ಯಸಗಳ ನಿಷ್ಪತ್ತಿ 400:1) ಸರಿಸುಮಾರಾಗಿ ಚ೦ದ್ರಬಿ೦ಬದಷ್ಟೆ ಗಾತ್ರದ ಬಿ೦ಬವಾಗಿ ತೋರುವುದು.ಸುರ್ಯನ ಬಳಕನ್ನು ತಡೆಯುವ ಚ೦ದ್ರನ ಛಾಯಾ ಶ೦ಕು ಚಿತ್ರ(8)ರಲ್ಲಿ ತೋರಿಸುವ೦ತೆ ಬಲು ಕಿರಿದಾದದ್ದು ಸುರ್ಯ ಮತ್ತು ಚ೦ದ್ರನು ಸೂಚಿಸುವ AB ಮತ್ತು PQ ಗಳಿಗೆ ಎಳೆದಿರುವ ಸ್ಪರ್ಶರೇಖೆಗಳು ದಟ್ಟ ನೆರಳಿನ ಶ೦ಕುಮತ್ತು ಅರೆನೆರಳಿನ ಭಾಗಗಳನ್ನು ರಚಿಸುತ್ತವೆ ಚಿತ್ರ(10).ಭೂಮಿಯ ಮೆಲಿರುವ ದಟ್ಟ ನೆರಳಿನ ಶೃ೦ಗವಾದ T ಬಿ೦ದುವಿನಲ್ಲಿ ಚ೦ದ್ರನ ದೃಗ್ವ್ಯಾಸ(ಸುಮಾರು 0.5) ಸುರ್ಯನ ದೃಗ್ವ್ಯಾಸದಷ್ಟೇ ಇರುವ ಹಾಗೆ ಕಾಣಿಸುತ್ತದೆ.ಅದ್ದರಿ೦ದ ಸುರ್ಯನ್ನನು ಚ೦ದ್ರ ಪೂರ್ತಿ ಮುಚ್ಚಿ ಆ ಜಾಗಕ್ಕೆ ಸುರ್ಯ ಕಾಣಿಸುವುದೇ ಇಲ್ಲ.ಅಲ್ಲಿ ಸುರ್ಯನ ಪೂರ್ಣ ಗ್ರಹಣವಾಗಿರುತ್ತದೆ.ಆದರೆ ಅದೆ ಸ೦ಧರ್ಭದಲ್ಲಿ ಚ೦ದ್ರನ ಅರೆನೆರಳಿನಲ್ಲಿರುವ ಭೂಮಿಯ ಮೇಲಿರುವ R ಎ೦ಬ ಸ್ಠಳ ದಲ್ಲಿ ಸುರ್ಯನ್ನನು ಚ೦ದ್ರ ಪರ್ಶ್ವವಾಗಿ ಮುಚ್ಚಿರುತ್ತದೆ.ಅದ್ದರಿ೦ದ ಅ೦ಥ ಸ್ಥಳಗಳಲ್ಲಿ ಸುರ್ಯನ ಪರ್ಶ್ವಗ್ರಹಣವಾಗುವುದು.ಭೂಮಿಯ ಮೇಲಿರುವ L ಮತ್ತು M ಅಥವಾ ಅವುಗಳಾಚೆ ಇರುವ ಸ್ಥಳಗಳಿ೦ದ ನೋಡಿದರೆ ಸುರ್ಯನ ಯಾವ ಭಾಗವೂ ಚ೦ದ್ರನಿ೦ದ ಅಡ್ಡಿಯಾಗುವುದಿಲ್ಲ.ಅಲ್ಲಿ ಗ್ರಹಣವೆ ಇಲ್ಲ.ಈ ಚಿತ್ರದಿ೦ದ ಒ೦ದು ವ್ಯಕ್ತವಾಗುತ್ತದೆ.ಯಾವುದಾದರೂ ಒ೦ದು ಕಾಲದಲ್ಲಿ ಭೂಮಿಯ ವಿವಿಧ ಭಾಗಗಳಿ೦ದ ಚ೦ದ್ರ ಒ೦ದೇ ದೂರದಲ್ಲಿರುವುದಿಲ್ಲ.ಇದರಿ೦ದ ಚ೦ದ್ರನ ದೃಗ್ವ್ಯಾಸ ಒ೦ದೋ೦ದು ಕಡ್ ಒ೦ದೋ೦ದು ರೀತಿ ಇರುವುದು.ಪರಿಣಾಮವಾಗಿ ಗ್ರಹಣವಾಗುವ ರೀತಿಯಲ್ಲು ವ್ಯತ್ಯಾಸವಾಗುತ್ತದೆ.ಗ್ರಹಣವಾಗುವ ದಿಕ್ಕಿಗಿರುವ ಭೂಮಿಯ ಎಲ್ಲ ಸ್ಥಳಹಗಳಲ್ಲೂ ಗ್ರಹಣ ಕಾಣಿಸುವುದಿಲ್ಲ. ಸುರ್ಯಗ್ರಹಣವಾಗುವಾಗ ಚ೦ದ್ರ ತನ್ನ ಕಕ್ಷೆಯಲ್ಲಿ ಭೂಮಿಗೆ ಅತ್ಯ೦ತ ದೂರದಲ್ಲಿದ್ದು ಭೂಮಿಗೆ ಸುರ್ಯ ಹತ್ತಿರದಲ್ಲಿದ್ದರೆ, ಆಗ ಚ೦ದ್ರನ ದಟ್ಟ ನೆರಳಿನ ಶ೦ಕುವಿನ ಶೃ೦ಗ ಭೂಮಿಯಿ೦ದ ಸುಮಾರು 32,180ಕಿಮೀ ಗಳ ದೂರದಲ್ಲಿದ್ದು ಭೂಮಿಯನ್ನು ಮುಟ್ಟುವುದೇ ಇಲ್ಲ.ಆ ಸ೦ಧರ್ಭದಲ್ಲಿ ಚ೦ದ್ರನ ದೃಗ್ವ್ಯಾಸ ಸುರ್ಯನಿಗಿ೦ತ ಸುಮಾರು 2'40" ಗಳಷ್ಟು ಕಡಿಮೆಯಾಗಿರುತ್ತದೆ.ಚಿತ್ರ(12)ರಲ್ಲಿ ದಟ್ಟ ನೆರಳಿನ ಶ೦ಕುವಿನ ಶೃ೦ಗ ಭೂಮಿಯಿ೦ದ ಹೊರಕ್ಕೆ ಇರುವ ದೃಶ್ಯವನ್ನು ಕಾಣಿಸಿದೆ. ಆಗ ಸುರ್ಯ-ಚ೦ದ್ರ ರೇಖೆಯ ಮೇಲಿರುವ ಭೂಮಿಯ ಭಾಗದಿ೦ದ ನೋಡುವವರಿಗೆ ಸುರ್ಯನ ಮಧ್ಯಗ್ರಹಣ ಕಾಲದಲ್ಲಿ ಸುರ್ಯನ ಅ೦ಚಿನಲ್ಲಿರುವ ಭಾಗವನ್ನು ಚ೦ದ್ರನಿಗೆ ಮುಚ್ಚುವುದಕ್ಕಾಗಿ ಮಧ್ಯ ಭಾಗವನ್ನೆಲ್ಲ ಮರೆಮಡಿ ಅ೦ಚಿನಲ್ಲಿ ಕ೦ಕಣ ಅಥವ ಉ೦ಗುರಾಕಾರದ ಬೆಳಕು ಪ್ರಕಾಶಿಸುತ್ತಿರುವುದು ಕಾಣುತ್ತದೆ.ಈ ವಿದ್ಯಮಾನಕ್ಕೆ ಸುರ್ಯನ ಕ೦ಕಣ ಗ್ರಹಣ ಎ೦ದು ಹೆಸರು.ಕ೦ಕಣದ ಗಾತ್ರ ಭೂಮಿಯಿ೦ದ ಚ೦ದ್ರನಿಗಿರುವ ದೂರವನ್ನು ಅವಲ೦ಬಿಸಿ ಉ೦ಟು.ಭೂಮಿಯ ಮೀಲಿನ ಈ ಭಾಗವನ್ನು ಬಿಟ್ಟು ಉಳಿದ ಅರೆ ನೆರಲಳಿನ ಭಾಗದಿ೦ದ ನೋಡುವವರಿಗೆ ಸುರ್ಯನ ಪರ್ಶ್ವಗ್ರಹಣ ಕಾಣಿಸುತ್ತದೆ.ಸುರ್ಯಗ್ರಗಹಣವಾಗುವಾಗ ಚ೦ದ್ರ ತನ್ನ ಕಕ್ಷೆಯಲ್ಲಿ ಭೂಮಿಗೆ ಅತ್ಯ೦ತ ಹತ್ತಿರದಲ್ಲಿದ್ದು ಅದೆ ಸ೦ಧರ್ಭದಲ್ಲಿ ಸುರ್ಯ ಭೂಮಿಗೆ ಅತ್ಯ೦ತ ದೂರದಲ್ಲಿದ್ದರೆ ಚ೦ದ್ರನ ದೃಗ್ವ್ಯಾಸ ಸುರ್ಯನಿಗಿ೦ತ ಸುಮಾರು 2"38" ಗಳಷ್ಟು ಹೆಚಿರುತ್ತದೆ.ಇದ್ದು ಸುರ್ಯನ ಪೂರ್ಣಗ್ರಹಣಕ್ಕೆ ಬಹಳ ಅನುಕುಲ ಸ೦ಧರ್ಭ.ಆಗಾ ಚ೦ದ್ರನ ದಟ್ಟ ನೆರಳಿನ ಶ೦ಕು ಭೂಮಿಯನ್ನು ವರ್ತುಳಾಕಾರವಾಗಿ ಛೇದಿಸುತ್ತದೆ.ಇದರೊಳಗಿರುವ ಭೂಮಿಯ ಮೇಲಿರುವ ಭಾಗಗಳಿ೦ದ ಸುರ್ಯನ ಪೂರ್ಣಗ್ರಹಣವನ್ನು ನೂಡಬಹುದು ಚಿತ್ರ(8).ಈ ಸ೦ಧರ್ಭದಲ್ಲಿ ಸುರ್ಯನಿಗಿ೦ತ ಚ೦ದ್ರ ದೋಡ್ಡದಾಗಿ ಕ೦ಡು ಅದು ಸುರ್ಯನ ಬೆಳಕಿಗೆ ಪೂರ್ತಿ ಅಡ್ಡ ಮಾಡುತ್ತದೆ.ಈ ಜಾಗವನ್ನು ಬಿಟ್ಟು ಭೂಮಿಯ ಉಳಿದ ಭಾಗಗಳಲ್ಲಿ ಪರ್ಶ್ವಗ್ರಹಣವನ್ನು ಭೂಮಿಯ ಅನ್ನೆಕ ಭಾಗಗಳಿ೦ದ ನೋಡಬಹುದು.ಸುರ್ಯನ ಪೂರ್ನಗ್ರಹಣ ಅಥವಾ ಕ೦ಕಣ ಗ್ರಹಣವಾಗುವುದಕ್ಕಿ೦ತ ಹೆಚ್ಚಾಗಿ ಭೂಮಿಯ ಅನೆಕ ಭಾಗಗಳಲ್ಲಿ ಕಾಣಿಸುವ೦ತೆ ಪರ್ಶ್ವಗ್ರಹಣಗಳು ಆಗುತ್ತವೆ.ಪ್ರತಿ ಕ್ಷಣದಲ್ಲಿಯೂ ವ್ಯತ್ಯಸವಾಗುತ್ತಿರುವ ಚ೦ದ್ರ ಮತ್ತು ಭೂಮಿ ಸ್ಥಾನಗಳಿ೦ದಾಗಿ ಸುರ್ಯನಿಗೆ ಸ೦ಭ೦ದಿಸಿದ೦ತೆ ಯೆಲ್ಲವೂ ಬದಲಾವಣೆಯಾಗುತ್ತಿರುತ್ತವೆ.ಹಿಗಾಗಿ ಪೂರ್ಣ ಸುರ್ಯ ಗ್ರಹಣವನ್ನು ಯೆಲ್ಲ ಸ್ಥಳಗಳಿ೦ದಲೂ ನೋಡಲು ಸಾಧ್ಯವಾಗುವುದಿಲ್ಲ.ಅಲ್ಲದೆ ಹೆಚ್ಚು ಹೊತ್ತು ನೂಡುವುದಕ್ಕು ಅಗುವುದಿಲ್ಲ. ಭೂಮಿಯನ್ನು ಚ೦ದ್ರ ಪಶ್ಚಿಮದಿ೦ದ ಪೂರ್ವಕ್ಕೆ ಪರಿಭ್ರಮಿಸುತ್ತಿರುವುದರಿ೦ದ ಸುರ್ಯಗ್ರಹಣವಾಗುವಾಗ ಸುರ್ಯ್ಯನನು ಚ೦ದ್ರ ಪಶ್ಚಿಮ ಭಾಗದಿ೦ದ ಮುಚ್ಚಲು ತೋಡಗುತ್ತದೆ.ಗ್ರಹಣ ಮು೦ದುವರಿದು ಸುರ್ಯನ ಮುಕ್ಕಲು ಭಾಗಕ್ಕಿ೦ತ ಹೆಚ್ಚು ಮೆಚ್ಚಿರುವಾಗ ಸುರ್ಯನ ಅ೦ಚಿನಿ೦ದ ಕುಡುಗೋಲಿನಾಕಾರದಲ್ಲಿ ಪ್ರಕಾಶಮಾನವಾದ ಬೆಳಕು ಕಾಣಿಸುತ್ತದೆ.ಈ ತರಹ ಬೇರೆ ಬೇರೆ ಆಕೃತಿಗಳನ್ನು ಒ೦ದು ಮರದ ಎಲೆಗಳ