ಪುಟ:Mysore-University-Encyclopaedia-Vol-6-Part-16.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮುಂದುವರೆಯುತ್ತಿರುವ ರಾಷ್ಟ್ರಗಳಲ್ಲಿ ಬಂಡವಾಳದಂತೆ ನೈಪುಣ್ಯಕ್ಕೂ ಕೊರತೆಯಿರುವುದರಿಂದ ಆದರ ಆವಶ್ಯಕತೆ ಹೆಚ್ಚಾಗಿರುವ ಕೈಗಾರಿಕೆಗಳ ಸ್ಥಾಪನೆಯಿಂದ. ವಿದೇಶಿ ನೈಪುಣ್ಯವನ್ನು ದುಬಾರಿ ಬೆಲೆ ಮತ್ತು ಆಮದು ಮಾಡಿಕೊಳ್ಳುವುದು ತಪ್ಪುತ್ತದೆ. ಗ್ರಾಮಕೈಗಾರಿಕೆಗಳಿಗಾಗಿ ವಿದೇಶಿ ಉಪಕರಣಗಳನಾಗಲಿ, ಯಂತ್ರಗಳನ್ನಾಗಲಿ, ಬಿಡಿಭಾಗಗಳನಾಗಲಿ ಆಮದು ಮಾಡಿಕೊಳ್ಳುವ ಅವಶ್ಯಕತೆಯಿರುವುದಿಲ್ಲ. ಇದರಿಂದ ವಿದೇಶಿ ವಿನಿಮಯದ ಕೊರತೆಯಾಗಲಿ. ವ್ರತಿಕೂಲ ಪಾವತಿ ಶಿಲ್ಕನ ಸಮಸ್ಯೆಯಾಗಲಿ ತೀವ್ರವಾಗುವುದಿಲ್ಲ ಈ ಕೈಗಾರಿಕೆಗಳು ಶೀಘ್ರವಾಗಿ ಫಲ ಕೊಡುತ್ತವೆ. ಬ೦ಡವಾಳ ಹೂಡಿಕೆಗೂ ಉತ್ಪಾದಿತ ವಸ್ತುಗಳು ಮಾರಾಟಕ್ಕ ಬರುವುದಕ್ಕೂ ನಡುವಣ ಕಾಲ ತುಂಬ ಕಡಿಮೆ. ಆದ್ದರಿಂದ ಬೆಲೆ ಏರಿಕೆಯನ್ನು ತಡೆಗಟ್ಟಲು ಇವು ಸಹಾಯಕವಾಗಿವೆ. ಈ ಕೈಗಾರಿಕೆಗಳನ್ನೂ ಸ್ಥಾಪಿಸುವುದರಿಂದ ಪಾದೇಶಿಕ ಆಸಮತೆಗಳನ್ನು ಹೋಗಲಾಡಿಸೆಬಹುದಾಗಿದೆ. ಬೃಹತ ಕೈಗಾರಿಕೆಗಳು ಒಂದೆಡೆಯೆಲ್ಲೇ ಕೇಂದ್ರಿಕೃತವಾಗಿ. ಅವುಗಳ ಸುತ್ತಮುತ್ತಲಿನ ಪ್ರದೇಶಗಳು ಮಾತ್ರ ಬೆಳೆಯುಲ್ಲವು. ಇದರಿಂದ ಇತರ ಪ್ರದೇಶಗಳು ಅರ್ಥಿಕಾ ಅಭಿವೃದ್ಧಿಯಲ್ಲ ಹಿಂದುಳಿದು, ಪ್ರಾದೇಶಿಕ ಅಸಮಾನತೆಯುಂಟಾಗುತ್ತದೆ. ಇಂಥ ಆಸಮತೆಯಮ್ನ ನಿವಾರಿಸಲು ಈ ಕೈಗಾರಿಕೆಗಳು ನೆರವಾಗುತ್ತವೆ. ಹಣ ಮತ್ತು ಅಧಿಕಾರ ಕೆಲವರಲ್ಲೇ ಕೇಂದ್ರಕೃತವಾಗದಂತೆ ವರಮಾನ ಮತ್ತು ಸಂಪತ್ತಿನ ಹಂಚಿಕೆಯಲ್ಲಿ ಇವು ಸಮನತೆಯನ್ನು ತರಬಲ್ಲವು. ಬೃಹತ್ ಕೈಗಾರಿಕೆಗಳ ಸ್ಥಾಪನೆಯಿಂದುಂಟಾಗುವ ವಸತಿ ಮತ್ತು ಆಹಾರ ಸಮಸ್ಯೆ, ಕೊಳಚೆ ಪ್ರದೇಶಗಳ ನಿರ್ಮಾಣ, ರೋಗರುಜಿನಗಳು ಈ ಕೈಗಾರಿಕೆಗಳ ಸ್ಥಾಪನೆಯಿಂದಂಟಾಗುವುದಿಲ್ವ ಅಲ್ಲದೆ. ಇವು ಉದ್ಯೋಗವನ್ನು ಕಾರ್ಮಿಕನಿರುವಲ್ಲಿಗೆ ಕೊಂಡೊಯ್ಯುವುದರಿಂದ. ಕಾಮಿ೯ಕರು ಒಂದೆಡೆಯಿರಿದ ಮತ್ತೊಂದೆಡೆಗ ಚಲಿಸುವ ಸಮಸೈ ಏಳುವುದಿಲ್ಲ. ಭಾರತದಲ್ಲಿ ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಗ್ರಾಮಕೈಗಾರಿಕಾ ಯೋಜನೆಗಳನ್ನು ರೂಪಿಸಲಾಗಿದೆ. ಈ ಕೈಗಾರಿಕಾ ಯೋಜನೆಯಲ್ಲಿ ಅನೇಕ ಕೈಗಾರಿಕೆಗಳು ಸ್ಥಾಪಿತವಾಗಿವೆ. ಜೊತೆಗೆ ಆಯಾ ಪ್ರದೇಶೆಗಳಲ್ಲಿ ಪ್ರಸಿದ್ಧವಾಗಿರುವ ಕಲೆ ಮತ್ತು ಕೈಗಾರಿಕೆಗಳನ್ನು ಈ ಯೊಜನೆಯೆ ಮಾಲಿಕ ಪುನರುಜ್ಜೀವನಗೊಳಿಸಲಾಗಿದೆ. ಭಾರತದ ಮೊದಲನೆಯ ಪಂಚವಾರ್ಷಿಕ ಯೊಜನೆಯಲ್ಲಿ ಕೈಮಗ್ಗದ ಕೈಗಾರಿಕೆಗಳು. ಖಾದಿ. ಗುಡಿಕೈಗಾರಿಕೆಗಳು. ತೆಂಗಿನನಾರಿನ ಕೈಗಾರಿಕೆಗಳು ಮುಂತಾದವುಗಳ ಅಭಿವೃದ್ಧಿಯ ಬಗ್ಗೆ ಸಲಹೆ ಮತ್ತು ಸಹಾಯ ನೀಡಲು ಅಖಿಲ ಭಾರತ ಮಂಡಳಿಗಳನ್ನು ಸ್ಥಾಪಿಸಲಾಯಿತು. ಎರಡನೆಯ ಯೋಜನೆಯಲ್ಲಿ ಗ್ರಾಮಕೈಗಾರಿಕೆಗಳ ಯೋಜನೆಗಾಗಿ 180 ಕೋಟಿ ರೂ. ಗಳನ್ನೂ ಮೂರನೆಯ ಪಂಚವಾರ್ಷಿಕ ಯೋಜನೆಯಲ್ಲಿ 264 ಕೋಟಿ ರೂ. ಗಳನ್ನು ವಿನಿಯೋಗಿಸಲಾಯಿತು. ಗ್ರಾಮಕೈಗಾರಿಕೆಗಳು ಶೀಘ್ರ ಪ್ರಗತಿ ಹೊಂದುವಂತೆ ನೋದಿಕೊಳ್ಳಲು ಉನ್ನತಮಟ್ಟದ ಗ್ರಾಮ ಕೈಗಾರಿಕಾ ಯೋಜನಾಮಂಡಳಿಯನ್ನು ಸ್ಥಾಷಿಸಲಾಗಿದೆ. ಕೈಮಗ್ಗದ ಕೈಗಾರಿಕೆ ಭಾರತದ ಗ್ರಾಮ ಕೈಗಾರಿಕೆಗಳಲ್ಲಿ ಪ್ರಾಮುಖ್ಯವಾದ್ದು. ಈ ಕೈಗಾರಿಕೆ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಒದಗಿಸಿದ. ರೇಷ್ಮೆ ಹುಳುಗಳ ಸಾಕಣೆಯಿಂದೆ ಉದ್ಯೋಗದ ಜೊತೆಗೆ ರೇಷ್ಮೆ ಕೈಗಾರಿಕೆಗೆ ಬೇಕಾದ ಕಚ್ಚಾಸಾಮಗ್ರಿಯೂ ಒದಗುತ್ತದೆ. ಕುಂಬಾರಿಕೆ. ಮರಗೆಲಸ, ಬಿದಿರು ಹೆಣಿಗೆ. ಜೇನು ಸಾಕಣೆ ಮುಂತಾದವು ಇತರೆ ಮುಖ್ಯ ಗ್ರಾಮಕೈಗಾರಿಕೆಗಳು. ಭಾರತದ ವಿವಿಧ ಪ್ರದೇಶಗಳ ವಾಯುಗುಣಗಳಿಗೆ ಅನುಗುಣವಾಗಿ ಗ್ರಾಮಕೈಗಾರಿಕೆಗಳನ್ನು ಸ್ಥಾಪಿಸುವುದರಿಂದ ನಿರುದ್ಯೋಗ ನಿವಾರಣೆಯ ಜೊತೆಗೆ. ಭೂಮಿಯ ಉತ್ಪಾದನ ಶಕ್ತಿಯನ್ನು ಹೆಚ್ಚಿಸಬಹುದು. ಇದರಿಂದ ಗ್ರಾಮಸ್ಥರ ಜೀವನಮಟ್ಟ ಸುಧಾರಿಸುತ್ತದೆ. ಭಾರತದಲ್ಲಿ ವ್ಯವಸಾಯ ಪೂರ್ಣಕಾಲದ ಉದ್ಯೋಗವಲ್ಲ. ವರ್ಷದ ಕೆಲವು ತಿಂಗಳುಗಳಲ್ಲಿ ಮಾತ್ರ ಹೆಚ್ಚು ಕೆಲಸವಿದ್ದು ಉಳಿದ ಸಮಯದಲ್ಲಿ ಬಿಡುವು ಇರುತ್ತದೆ. ಆದ್ದರಿಂದ ಗ್ರಾಮಗಳಲ್ಲಿ ಸ್ಥಾಪಿತವಾಗುವ ಕೈಗಾರಿಕೆಗಳು ವ್ಯವಸಾಯಕ್ಕೆ ಪೂರಕವಾಗಿರಬೇಕು. ಆಂದೆರೆ ವ್ಯವಸಾಯ ಕ್ಷೇತ್ರದಲ್ಲಿ ಬಿಡುವು ದೊರೆತಾಗ. ಆ ಕ್ಷೇತ್ರದಿಂದ ಬಿಡುಗಡೆ ಹೊಂದುವ ಕಾರ್ಮಿಕ ಶಕ್ತಿಯನ್ನು ಮತ್ತೆ ಆ ಕೆಲಸದಲ್ಲಿ ಉದ್ಯುಕ್ತಗೊಳಿಸುವ ಸಮಯೋಚಿತ ರೀತಿಯಲ್ಲಿ ಗ್ರಾಮಕೈಗಾರಿಕೆಗಳು ಕೆಲಸ ನಿರ್ವಹಿಸಬೇಕು. ಮರದ ಕೆತ್ತನೆ ಕೆಲಸ. ಹಿತ್ತಾಳೆ ಸಾಮಾನಿನ ಕುಸುರಿ ಕೆಲಸ. ಲೊಹ ಕೈಗಾರಿಕೆ, ಬಟ್ಟೆಗಳಿಗೆ ಬಣ್ಣ ಹಾಕುವುದು, ಕೆಂಬಳಿ ನೇಯುವುದು. ಕಾಗದ ಮತ್ತು ಸಾಬೂನಿನ ತಯಾರಿಕೆ. ಚಮ೯ ಹದ ಮಾಡುವುದು. ಷಾದರಕ್ಷೆಯ ತಯಾರಿಕೆ ಮುಂತಾದ ಕೈಗಾರಿಕೆಗಳಲ್ಲಿ ಕೆಲಸ ಮಾಡಲು ಆಲ್ಪಾವಧಿಯ ತರಬೇತು ಮತ್ತು ನೈಪುಣ್ಯ ಆಗತ್ಯ. ಗ್ರಾಮ ಪ್ರದೇಶಗಳನ್ನು ವೃದ್ಧಿಗೊಳಿಸಲು ಈ ಕೈಗಾರಿಕೆಗಳು ಅತ್ಯಾವಶ್ಯಕವಾಗಿವೆ. ಗ್ರಾಮದಾನ: ಸರ್ವೋದಯ ಸಮಾಜದ ಸ್ಥಾಪನೆಗಾಗಿ ವಿನೋಬಾ ಭಾವೆಯವರು ಭಾರತದಲ್ಲಿ ಆರಂಭಿಸಿದ ಭೂದಾನ ಚಳವಳಿಯ ವಿಕಾಸದ ಘಟ್ಟ ಒಂದು ಗ್ರಾಮದ ಪ್ರತಿಯೊಬ್ಬರೂ ತಮ್ಮತಮ್ಮ ಭೂಹಿಡುವಳಿಯೆ ಮಾಲೀಕತ್ವದ ಹಕ್ಕನ್ನು ತ್ಯಜಿಸಿ. ಗ್ರಾಮದ ಭೂಸಂಪತ್ತನ್ನು ಗ್ರಾಮೀಕರಣ ಮಾಡುವ ಕ್ರಮ. ಅಹಿಂಸಾತ್ಮಕ ಕ್ರಾಂತಿಯ ಕಾರ್ಯವಿಧಾನ. ಭೂದಾನ ಚಳವಳಿ ಆರಂಭವಾದ ಒಂದು ವರ್ಷದಲ್ಲಿ (1952) ಗ್ರಾಮದಾನ ಅರಂಭವಾಯಿತು. ಉತ್ತರ ಪ್ರದೇಶ ರಾಜ್ಯದ ಮಂಗರೋರ್ ಎಂಬುದು ಮೊಟ್ಟಮೊದಲಿಗೆ ದಾನವಾಗಿ ಬಂದ ಗ್ರಾಮ. ಆನಂತರ ಒಂದೆರಡು ವರ್ಷಗಳಾದ ಮೇಲೆ ಇತರ ರಾಜ್ಯಗಳಲ್ಲೂ ನೂರಾರು ಗ್ರಾಮಗಳು ದಾನವಾಗಿ ಬಂದುವು. ಒರಿಸ್ಸ ರಾಜ್ಯದಲ್ಲಿ ಎರಡುಮೂರು ಸಾವಿರ ಗ್ರಾಮಗಳು ದಾನವಾಗಿ ಕೊಡಲ್ಪಟ್ಟವು. ಹೀಗೆ ಭೂದಾನ - ಗ್ರಾಮದಾನ ಚಳವಳಿಯ ಮೊದಲ ದಶಕದಲ್ಲಿ ಸುಮಾರು ಐದು ಸಾವಿರ ಗ್ರಾಮಗಳು ಭಾರತದಲ್ಲಿ ದಾನವಾಗಿ ದೊರೆತವು. ಭೂದಾನಕ್ಕಿಂತ ವಿಶಿಷ್ಣವೂ ಪ್ಯಾಪಕವೂ ಆದ್ದು ಗ್ರಾಮದಾನ. ಭೂದಾನದಲ್ಲಿ ಭೂಮಾಲೀಕ ಆ೦ಶಿಕದಾನ ಕೊಡುತ್ತಾನೆ. ಸಾಮಾನ್ಯವಾಗಿ ತನ್ನ ಒಡೆತೆನದಲ್ಲಿರುವ ಭೂಮಿಯ ಆರನೆಯೆ ಒಂದು ಭಾಗವನ್ನು ಆತ ಭೂದಾನವಾಗಿ ಕೊಡುತ್ತನೆ. ಹಾಗೆ ಕೊಡಲ್ಪಟ್ಟ ಭೂಮಿಯನ್ನು ಭೂಹೀನ ಕೃಷಿಕಾಮಿ೯ಕನಿಗೆ ಹಂಚತಕ್ಕದ್ಧಾಗಿದೆ. ಆದರೆ ಗ್ರಾಮದಾನದಲ್ಲಿ ಗ್ರಾಮದಲ್ಲಿರುವ ಸಮಸ್ತರೂ ತಮ್ಮ ಎಲ್ಲ ಭೂಮಿಯನ್ನೂ ದಾನವಾಗಿ ಕೊಡುತ್ತರೆ. ಗ್ರಾಮದ ಪ್ರತಿಯೊಬ್ಬ ಮಾಲೀಕನೂ ತನ್ನ ಭೂ ಹಿಡುವಳಿಯ ಮಾಲೀಕತ್ವದ ಹಕ್ಕನ್ನು ತ್ಯಾಗ ಮಾಡುತ್ತಾನೆ. ಇಡೀ ಗ್ರಾಮಸಮುದಾಯದ ಸಲುವಾಗಿ ಈ ಸಮಪ೯ಣೆಯಾಗುತ್ತದೆ. ಅಂಥ ಗ್ರಾಮದಲ್ಲಿ ವೈಯಕ್ತಿಕ ಒಡೆತನ ಹೋಗಿ ಗ್ರಾಮಸಮುದಾಯದ ಒಡೆತನ ಉಂಟಾಗುತ್ತದೆ. ಗ್ರಾಮದಾನವಾದ ಮೇಲೆ ಗ್ರಾಮದ ಭೂಮಿ ಮತ್ತು ಇತರ ಸಾಧನ ಸೌಲಭ್ಯಗಳನ್ನು ಯುಕ್ತವಾಗಿ ರೂಢಿಸಿಕೊಳ್ಳುವುದು ಗ್ರಾಮಸಮುದಾಯದ ಹೊಣೆಯಾಗುತ್ತದೆ. ಗ್ರಾಮದ ಎಲ್ಲ ಸಾಧನ ಸಂಪತ್ತನ್ನೂ ಇಡೀ ಗ್ರಾಮಸಮಾಜದ ಉನ್ನತಿಗಾಗಿ ಬಳಸಿಕೊಳ್ಳಲು ಗ್ರಾಮಸ್ಥರು ವ್ಯವಸ್ಥಿತವಾಗಿ ಉಪಕ್ರಮಿಸುತ್ತರೆ. ದಾನವಾದ ಪ್ರತಿ ಹಳ್ಳಿಯೆಲ್ಲೂ ಸ್ಥಳೀಯ ಸ್ಥಿತಿಗತಿಗಳಿಗನುಗುಣವಾಗಿ ಮತ್ತು ಅಲ್ಲಿಯ ಜನರ ಮನೊಭಿಪ್ರಾಯಕ್ಕೆ ಅನುಗುಣವಾಗಿ ಕೃಷಿವ್ಯವೆಸ್ಥೆ ಆಗುತ್ತದೆ. ಜನೆರೆಲ್ಲ ಇಪ್ಪಪಟ್ಟರೆ ಸಾಮೂಹಿಕ ಅಥವಾ ಸಹಕಾರಿ ಬೇಸಾಯವನ್ನವಲಂಬಿಸಬಹುದು. ಹಾಗಿಲ್ಲದೆ ಕೌಟುಂಬಿಕ ಬೇಸಾಯವನ್ನವಲಂಬಿಸುವುದಾದರೆ ಎಲ್ಲ ಕುಟುಂಬಗಳಿಗೂ ಪ್ರತಿಯೊಂದು ಕುಟುಂಬದ ಜನಸಂಖ್ಯೆ ಹಾಗೂ ಆಗತ್ಯಕ್ಕೆ ಅನುಗುಣವಾಗಿ ಭೂಮಿಯನ್ನು ಹೆಂಚಿಕೊಡಬಹುದು ಭೂಮಾಲೀಕತ್ವ ಮಾತ್ರ ಗ್ರಾಮಸಮುದಾಯದಲ್ಲೇ ಉಳಿದಿರುತ್ತದೆ. ಪ್ರತಿ ಕುಟುಂಬವೂ