ಪುಟ:Mysore-University-Encyclopaedia-Vol-6-Part-16.pdf/೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಹಣ, ಖಗೋಳೀಯ ನಡುವೆ ತೂರಿಬರುವ ಸೂರ್ಯರಶ್ಮಿ ನೆಲದ ಮೇಲೆ ಕೆಡೆಯುವ ಬಿಂಬದಿಂದ, ನೋಡಬಹುದು. ಚಂದ್ರನ ಮೆಲ್ಮೈ ಬಹಳ ಹಳ್ಳಕೊಳ್ಳಗಳಿಂದ ಕೂಡಿರುವುರಿಂದ, ಅದರ ಬಿಂಬದಿಂದ ಅಂಚು ನುಣುಪಾಗಿದರೆ ಏರುಪೇರುಗಳಿಂದ ಕುಡಿರುತ್ತದೆ. ಪೂರ್ಣ ಸುರ್ಯಗ್ರಹಣವಾಗುವುದಕ್ಕೆ ಮುಂಚೆ ಏರುಪೇರು ಅಂಚಿನಿಂದ ಸೂರ್ಯನ ಬೆಳಕು ತೂರಿಬಂದು ಮಣೆಗಳನ್ನು ಜೋಡಿಸಿಟ್ಟ ಹಾಗೆ ಕಾಣಿಸುತ್ತದೆ. ಇದನ್ನು ಬೈಲಿಯ ಮಣಿಗಳು ಎನ್ನುತ್ತಾರೆ (ಚಿತ್ರ 15). ತತ್ ಕ್ಷಣವೆ ಮಣಿಗಳು ಮಾಯವಗಿ ಪೂರ್ಣಗ್ರಹಣವಾಗುತ್ತದೆ. ಅತ್ಯಂತ ಹೆಚ್ಚೆಂದರೆ ಐದಾರು ನಿಮಿಷಗಳ ಕಾಲ ಪೂರ್ಣ ಸೂರ್ಯ ಗ್ರಹಣವಿದ್ದು ಪುನಃ ಚಂದ್ರ ಪೂರ್ವಭಾಗಕ್ಕೆ ತನ್ನ ಪಥದಲ್ಲಿ ಸರಿಯುತ್ತ ಗ್ರಹಣ ಮೋಕ್ಷವಾಗುತ್ತದೆ. ಹಾಗೆ ಆಗುವಾಗ ಮೇಲೆ ವಿವರಿಸುವ ಎಲ್ಲ ಸನ್ನಿವೇಶಗಳೂ ಕೊನೆಯಿಂದ ಮೊದಲಿಗೆ ಪುನರಾವರ್ತಿಸುತ್ತವೆ. ಪಾರ್ಶ್ವಗ್ರಾಣದಿಂದ ಆರಂಭವಾಗಿ ಪೂರ್ಣಗ್ರಹಣವಾಗಿ ಪುನ್ಃ ಪಾರ್ಶ್ವಗ್ರಹಣದಿಂದ ಕೊನೆಗೊಳ್ಳುತ್ತದೆ. ಕೆಲವು ಸಂದರ್ಭಗಳಲ್ಲಿ ಸುರ್ಯನ ಬಿಂಬವನ್ನು ಚಂದ್ರ ಪುರ್ತಿಯಾಗಿ ಮುಚ್ಚದೆ ಅಂಚಿನಲ್ಲಿ ಬೈಲಿಯ ಮಣಿಗಳು ಕಾಣ ಸಿಕೊಳ್ಳಬಹುದು. ಯಾವ ತರಹ ಸೂರ್ಯಗ್ರಹಣವೇ ಆಗಲಿ ಬರಿಗಣ್ಣೆನಿಂದ ನೋಡಿದರೆ ಕಣ್ಣುಗಳಿಗೆ ಬಹಳ ಹಾನಿಯಾಗುತ್ತದೆ. ದಟ್ಟವಾಗಿ ಮಸಿ ಬಳಿದ ಗ್ರಹಣದ ಪ್ರಗತಿಯನ್ನು ನೋಡಬೇಕು.

ಚಂದ್ರ ತನ್ನ ಕಕ್ಷೆಯಲ್ಲಿ ಚಲಿಸುವಾಗ ಅದರ ನೆರಳಿನ ಶಂಕು ಅಥವಾ ಕಂಕಣ ಶಂಕುವಿನ ಭಾಗ ಭೂಮಿಯ ಮೇಲ್ಮೈ ಮೇಲೆ ಹಾಯುವ ಕ್ಷೆತ್ರಕ್ಕೆ ಗ್ರಹಣದ ಪಥ 








ಎಂದು ಹೆಸರು. ಇದರ ಅಕ್ಕಪಕ್ಕದಲ್ಲಿರುವ ಭೂಭಾಗದಿಂದ ಗ್ರಹಣವನ್ನು ನೋಡಿದರೆ ಸುರ್ಯನ ಪಾರ್ಶ್ವಗ್ರಹಣ ಕಾಣಿಸುತ್ತದೆ. ಈ ಪಥದ ಪ್ರಾರಂಭದಲ್ಲಿ ಕಂಕಣಗ್ರಹಣವಾಗಿದ್ದು, ಮಧ್ಯ ಪೂರ್ಣ ಗ್ರಹಣದ್ದಾಗಿ ಕೊನೆಗೊಳ್ಳಬಹುದು. ಸೂರ್ಯನ ಪೂರ್ಣ ಗ್ರಹಣವಾದಾಗ ಭೂಮಿಯ ಮೇಲೆ ಹಗಲಲ್ಲಿ ಕತ್ತಲು ಕವಿಯುತ್ತದೆ. ಈ ಘಟನೆ ಬಹಳ ಅಪರೂಪವಾಗಿ ಆಗುವುದರಿಂದ ಮೂಢ ನಂಬಿಕೆ ಇರುವ ಜನಗಳಿಗೆ ಸ್ವಲ್ಪ ಗಾಬರಿ ಹುಟ್ಟಿಸುವುದುಂಟು. ಸೂರ್ಯನ ಬೆಳಕಿಲ್ಲವಾಗುವುದರಿಂದ ಸಂಜೆಗತ್ತಲು ಆದ ಹಾಗೆ ಪಕ್ಷಿಗಳೂ ತಮ್ಮ ವಾಸಸ್ಥಾನಗಳಿಗೆ ಧಾವಿಸುತ್ತವೆ. ಹಲವು ದೊಡ್ಡ ಪ್ರಾಣಿಗಳು ಗಾಬರಿಗೊಳ್ಳುತ್ತವೆ ಮತ್ತು ಸುರ್ಯ ಸಾಮಾನ್ಯವಾಗಿ ಮುಳುಗಿದಾಗ ವರ್ತಿಸುವಂತೆ ಗಿಡಗಳು ವರ್ತಿಸುತ್ತವೆ. ಗೂಬೆ ಮುಂತಾದ ನಿಶಾಚರ ಪಕ್ಷಿಗಳು ಸಂಚಾರ ಹೊರಡುತ್ತವೆ. ಭೂಮಿ ಮೇಲೆ ಉಷ್ಣತೆಯಲ್ಲಿ ವ್ಯತ್ಯಾಸವಾಗಿ ಮಂಜು ಕೂಡ





ಕವಿಯಬಹುದು. ಆಕಾಶದಲ್ಲಿರುವ ಪ್ರಕಾಶಮಾನವಾದ ನಕ್ಷತ್ರಗಳೂ ಗ್ರಹಗಳೂ ಕಾಣಿಸಿಕೊಳ್ಳುತ್ತವೆ. ಇಷ್ಟೆಲ್ಲ ನಡೆಯುವುದು ಕೇವಲ ಐದಾರು ನಿಮಿಷಗಳ ಕಾಲದಲ್ಲಿ. ಇದು ರೇಡಿಯೋ ಅಲೆಗಳ ಪ್ರಸಾರದ ಮೇಲೆ ಪರಿಣಾಮವನ್ನು ಬೀರುತ್ತದೆ.






  ಪೂರ್ಣ ಸೂರ್ಯಗ್ರಹಣವಾದಾಗ ಸೂರ್ಯ ಸ್ವರ್ಶ ಮತ್ತು ಮೋಕ್ಷ ಕಾಲಗಳನ್ನು ಸರಿಯಾಗಿ ಗುರುತು ಹಾಕಿಕೊಂಡು ಚಂದ್ರ ಚಲನೆಯ ವಿಚಾರವಾಗಿ ಖಚಿತಪಡಿಸಿ ಕೊಳ್ಳಲಾಗಿದೆ. ಕ್ರಮವಿಲ್ಲದ ಭೂಮಿಯ ಪರಿಭ್ರಮಣೆ ವಿಚಾರವಾಗಿಯೂ ತಿಳಿಯಬಹುದು. ಸೂರ್ಯ ಪ್ರಭಾಘಗೋಲವನ್ನು ಚಂದ್ರನ ಬಿಲ್ಲೆ ಮುಚುವುದರಿಂದ ಸೂರ್ಯ ಹತ್ತಿರವಿರುವ ಹೆಚ್ಛು ಪ್ರಕಶವಿಲ್ಲದ ಆಕಾಶಕಾಯಗಳನ್ನು ನೋಡಬಹುದು. ಅಲ್ಲದೆ ಹತ್ತಿರವಿರುವ ಹೆಚ್ಚು ಗ್ರಹಗಳ ಉಪಗ್ರಹಗಳ ಶೋಧನೆ ಮೊದಲು ಇದರಿಂದ ನೆರವಾಗುತ್ತದೆ. ಸೂರ್ಯನ ವಾತಾವರಣದ ರಾಸಾಯನಿಕ ಸಂಯೋಜನೆ,ಉಷ್ಣತೆ ಮತ್ತು ಒತ್ತದ ಇವುಗಳ ವಿಚಾರವಾಗಿ ತಿಳಿಯಲು ಸಾಧ್ಯ ಸೂರ್ಯನ ಹೂರವಲಯದಲ್ಲಿರುವ ಪ್ರಭಾವಲಯವನ್ನು(ಕರೋನ) ನೋಡಬಹುದು. ಬೇರೆ ಸಂದರ್ಭಳಲ್ಲಿ ಸಾಧಾರಣವಾಗಿ ಇದನ್ನು ನೋಡುವುದು ಕಷ್ಟ. ಈ ವಲಯಕ್ಕೆ ಮುತ್ತಿನ ಬೆಲಕಿದೆ. ಇದು ಸೂರ್ಯನ ವ್ಯಾಸದ ಎರಡರಿಂದ ನಾಲ್ಕರಷ್ಟು ಕ್ಷೆತ್ರಕ್ಕೆ ಹರಡಿಕೊಂಡು ಪ್ರಕಾಶಿಸುತ್ತದೆ. ಇದರ ಅಕಾರವೂ ಬೆರೆಯಾಗಿರುತ್ತದೆ.ಈ ಹಿಂದಿ ಹೂರವಲಯದ ಈ ಭಾಗವನ್ನು ಸೂರ್ಯನ ಪೂರ್ಣ ಗ್ರಹಣವಾದಾಗ ಮಾತ್ರ ನೋಡಲು ಸಾದ್ಯವಾಗುತ್ತಿತ್ತು. ಆದರೆ ಈಗ ಕರೋನಲೇಖ ಎಂಬ ಉಪಕರಣದ ಸಹಾಯದಿಂದ ಗ್ರಹಣವಿಲ್ಲದಾಗಲೂ ಹೂರವಲಯದ ವೀಕ್ಷಣೆ ಮತ್ತು ವಿಶ್ಲೇಷಣೆಗೆ ಅವಕಾಶ ಒದಗಿದೆ. ಪೂರ್ಣ ಸೂರ್ಯಗ್ರಹಣ ಕಾಲದಲ್ಲಿ ಸೂರ್ಯ ಹೂರವಲಯವನ್ನು ನೋಡಿದರೆ ಲಕ್ಷಾಂತರ ಕಿಮೀಗಳಷ್ಟು ಚಿಮಿ ಬೀಳುವ ಜ್ವಾಲೋನ್ನತಿಗಳು ತೋರುವುವು. ಇವುಗಳಿಗೆ ಪ್ರಾಮಿನೆನ್ಸಸ್ ಎಂದು ಹೆಸರು. ಇವುಗಳ ಬಣ್ಣ ಗುಲಾಬಿ ಕೆಂಪು. ಪೂರ್ಣ ಸೂರ್ಯಗ್ರಹನ ಕಾಲದಲ್ಲಿ ಸೂರ್ಯನ ಅಂಚಿನಲ್ಲಿ ಕಾಣಿಸುವ ಯಾವುದಾದರೂ ಒಂದು ನಕ್ಷತ್ರದ ಸ್ಥಾನವನ್ನು ಅಕಾಶದಲ್ಲಿ ಗುರ್ತಿಸಿ ಸೂರ್ಯನಿಲ್ಲದಾಗ ಅದೇ ನಕ್ಷತ್ರದ ಸ್ಥಾನವನ್ನು ನೋಡಿ ಅವುಗಳಲ್ಲಾಗುವ ಬದಲಾವಣೆ ನಕ್ಷತ್ರರಶ್ಮಿಯ.