ಪುಟ:Mysore-University-Encyclopaedia-Vol-6-Part-16.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಗ್ರೀಕ್ ಕಲೆ, ವಾಸ್ತು, ಶಿಲ್ಪ

7ರಲ್ಲಿ ಆಕೆಯನ್ನು ನೀರಿನಿಂದ ಮೇಲಕ್ಕೆ ಎಳೆಯುತ್ತಿರುವ ದೃಶ್ಯವಿದೆ. ಈ ಶಿಲ್ಪದಲ್ಲಿ ಕೊರತೆಗಳಿಲ್ಲದಿಲ್ಲ. ಅಂಗರಚನೆ ಯಲ್ಲಿಯೇ ಕುಂದಿದೆ. ಸ್ತನಗಳೆರಡೂ ಎರಡು ಬದಿಗಳಲ್ಲಿವೆ. ತಲೆಯನ್ನು ಬಲಭಾಗಕ್ಕೆ ಹೊರಳಿಸಿದಾಗ ಆಗಬಹುದಾದ ಸ್ನಾಯುಗಳ ಸೆಳೆತಗಳಾವುವೂ ಇಲ್ಲಿ ಕಾಣುವುದಿಲ್ಲ. ಇವು ಮುಖ್ಯ ತಪ್ಪುಗಳು. ಆದರೂ ಈ ಶಿಲ್ಪ ಅನಂತರ ಬರಲಿದ್ದ ಭವ್ಯ ಕಲಾಕೃತಿಗಳ ಮುನ್ಸೂಚಿಯಂತಿದೆ.

ಈ ದೃಷ್ಟಿಯಿಂದ ಒಲಿಂಪಿಯದ ಜ್ಯೂಸ್ ದೇವಾಲಯದಲ್ಲಿ ಅಳವಡಿಸಿದ, ಹೆರಕ್ಲೀಸ್ ಗೂಳಿಯನ್ನು ಪಳಗಿಸುತ್ತಿರುವ ಚಿತ್ರ ಭವ್ಯವಾದ್ದು. ಇಲ್ಲಿ ಕಾಣುವುದು ಗೂಳಿಯ ಹಾಗೂ ಹೆರಕ್ಲೀಸನ ನಡುವಣ ಘರ್ಷಣೆಯ ಒಂದು ಕ್ಷಣದ ಸ್ತಬ್ಧ ದೃಶ್ಯ. ಒಂದು ಕ್ಷಣದ ಹಿಂದೆ ಚಲನೆ ಇತ್ತು.ಒಂದು ಕ್ಷಣದ ಬಳಿಕ ಪುನಃ ಚಲನೆ ಇರುತ್ತದೆ. ಇವುಗಳ ನಡುವಣ ಕ್ಷಣದ ಸ್ತಬ್ಧ ಚಲನೆ ಇಲ್ಲಿ ರೂಪಿತವಾಗಿದೆ. ಗ್ರೀಕ್ ಕಲೆಯಲ್ಲಿ ಇದೂ ಒಂದು ಪದ್ಧತಿಯಾಗಿ ಉಳಿಯಿತು.

ಗ್ರೀಕ್ ಶಿಲ್ಪಕಾರರಲ್ಲಿ ಪ್ರಸಿದ್ಧರಾದ ಆರು ಜನರ ಹೆಸರುಗಳು ತಿಳಿದುಬಂದಿವೆ. ಅವರು ಮೈರಾನ್. ಫಿಡಿಯಸ್, ಪಾಲಿಕ್ಲೈಟಸ್, ಪ್ರಾಕ್ಸಿಟೆಲೀಸ್, ಸ್ಕೋಪಸ್ ಮತ್ತು ಲೈಸಿಪ್ಪಸ್. ಇವರಲ್ಲಿ ಕೊನೆಯವನು ಅಲೆಗ್ಸಾಂಡರನ ಆಶ್ರೆಯ್ಸ್ ಪಡೆದಿದ್ದ. ಗ್ರೀಕ್ ಸಾಹಿತ್ಯದಲ್ಲಿ ಇವರ ಉಲ್ಲೇಖವಿದೆ. ಆದರೆ ಇವರು ಕೆತ್ತಿದ ವಿಗ್ರಹಗಳು ನಮಗೆ ದೊರೆತಿರುವುದು ಬಹಳ ಕಡಿಮೆ. ಸಿಕ್ಕಿರುವವೂ ಆ ಕಲಾವಿದರರವೇ ಎಂಬ ಬಗ್ಗೆ ಭಿನ್ನಾಭಿಪ್ರಾಯಗಳಿಲ್ಲದಿಲ್ಲ. ಮೈರಾನನದೆನ್ನಲಾದ, ಚಕ್ರ ಎಸೆಯುವವನ ವಿಗ್ರಹ ಉತ್ಕೃಷ್ಟವಾದ್ದು. ಚಕ್ರವನ್ನು ದೂರಕ್ಕೆ ಎಸೆಯುವ ಕ್ಷಣದಲ್ಲಿ ತಲೆಯನ್ನು ಹಿಂಚಾಚಿ, ಎಸೆಯುವ ಕೈಯನ್ನು ದೃಷ್ಟಿಸಿ ನೋಡುವ, ಒಂದು ಕಾಲನ್ನು ತುಸು ಬಾಗಿಸಿ, ಮರುಕ್ಷಣದಲ್ಲಿ ಚಕ್ರವನ್ನು ಎಸೆಯುವಂತೆ ತೋರುವ ಈ ಸ್ಪರ್ಧೆಯ ವಿಗ್ರಹ ಗ್ರೀಕ್ ಶೈಲಿಯ ಒಂದು ಉತ್ತಮ ಮಾದರಿ.

ಫಿಡಿಯಸ್ ಗ್ರೀಕ್ ಮಹಾಯುಗಕ್ಕೆ ಸೇರಿದ ಶಿಲ್ಪ