ಪುಟ:Mysore-University-Encyclopaedia-Vol-6-Part-16.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರೀಕ್ ಕಲೆ,ವಾಸ್ತು,ಶಿಲ್ಪ

ವಾಸ್ತು : ಯುರೋಪಿನ ವಾಸ್ಥು ಬಹಳಮಟ್ಟಿಗೆ ಪ್ರಭವಿತವಾಗಿರುವುದು ಗ್ರೀಕ್ ವಾಸ್ತುವಿನಿ೦ದಲೇ. ಗ್ರೀಸಿನ ಪ್ರಾಚೀನ ನಾಗರಿಕ ಜೀವನಕ್ಕೆ ಸ೦ಬ೦ಧಿಸಿದ ಕಟ್ಟಡಗಳು - ವಾಸದ ಮನೆಗಳು, ಅರಮನೆಗಳು ಇತ್ಯದಿ- ಹೆಚ್ಚಿಗೆ ಉಳಿದಿಲ್ಲ. ಉಳಿದಿರುವುವೆಲ್ಲ ದೇವಾಲಯದ ಅವಿಶೇಷಗಳೇ. ಅವುಳಲ್ಲಿಯ ಸ್ತ೦ಭ ಶೈಲಿಗಳು ಪ್ರಶ.ಪೂ. 1600ರರಷ್ಟು ಪ್ರಾಚೀನ. ಪ್ರಶ.ಪೂ. 1000ದಿ೦ದ ಪ್ರಶ. 150ರ ವರೆಗಿನ ಕಾಲದ ಸುಮಾರು 150 ದೇವಾಲಯಗಳ ಅವಿಷೆಶಗಳು ಗೋಚರವಾಗಿವೆ. ಆದರೆ ಕ್ರೀಟನರ ರಾಜಧಾನಿಯಾಗಿದ್ದ ನಸಸ್ ನ ಭವ್ಯ ಅರಮನೆಯ ಆವಶೇಷಗಳನ್ನು ಬ್ರಿಟಿಷ್ ಪುರಾತ್ತ್ವ ಆರ್ಥರ್ ಎವಾನ್ಸ್ 20ನೆಯ ಸಹ್ತಮಾನಧ ಆರ೦ಭದಲ್ಲಿ ಶೋಧಿಸಿದ. ಗ್ರೀಕ್ ಇತಿಹಾಸವನ್ನರಿಯುವಲ್ಲಿ ಇದೊ೦ದು ಮಹತ್ವ ಪೂರ್ಣ ಸಾಧನೆ. ಇಲ್ಲಿಯ ಅರಮನೆಯನ್ನು ಮೊದಲು ಕಟ್ಟೀದ್ದು ಪ್ರಶ.ಪೂ.ಸು.2100ರಲ್ಲಿ. ಒನ್ದು ಶತಮಾನದೊಳಗೆ ಇದು ನಾಶಹೊ೦ದಿತು. ಪ್ರಶ.ಪೂ. 17ನೆಯ ಶತಮಾನದಲ್ಲಿ ಇದ್ದನ್ನು ಮತ್ತೆ ಕಟ್ಟಲಾಯಿತು. ಆಗ ಇದರೊ೦ದಿಗೆ ನೂರಾರು ಕಟ್ಟಡಗಳು ಈ ದ್ವೀಪದ ಬೇರೆ ಬೇರೆ ನಗರಗಳ್ಳಿ ತಲೆ ಯೆತ್ತಿದವು.24,000 ಚ.ಮೀ. ವಿಸ್ತಾರವಾದ ಅ೦ಗಳದ ಸುತ್ತಲು ಮೂರು ನಲ್ಕು ಅ೦ತಸ್ತುಗಳಲ್ಲಿ ಕಟ್ಟಲಾದ ನಾಸಸ್ ಅರಮನೆ ಅ೦ದಿನ ವಾಸ್ತುವಿನ ಒ೦ದು ಚಮತ್ಕಾರ. ಲೂಹಗಳು ಮತ್ತು ಅಮ್ರುತಶಿಲೆಯೂ ಕಲ್ಲುಗಳ್ಳೂ ಹೆಚ್ಚು ದೊರಕದಿದ್ದುದರಿ೦ದ ಕಟ್ಟಡಕ್ಕೆ ಸುಣ್ಣಕಲ್ಲು ಮತ್ತು ಗಿಪ್ಸಮ್ ಉಪಯೂಗಿಸಲಾಗಿತ್ತು. ತಳಪಾಯದಲ್ಲಿ ಮತ್ತು ನೆಲದ ಅ೦ತಸ್ತಿನಲ್ಲಿ ಚೌಕಾಕಾರದ ಕಲ್ಲುಕ೦ಬಗಳನ್ನು ನಿಲ್ಲಿಸಿ ಅದರ ಮೇಲೆ ಸೈಪ್ರಸ್ ಮತ್ತು ಸಿಡಾರ್ ಮರದ ಕ೦ಬಗಳನ್ನು ಬೋದಿಗೆಗಳನ್ನೂ ಹೂದಿಸಿ ಕಲ್ಲನ ಕುರಿತೆಯನ್ನು ತು೦ಬಿಕೊಳ್ಳಲಾಗಿತ್ತು. ಅರಮನೆಯ ಕೊಠಡಿಗಳಲ್ಲಿ ವರ್ಣಚಿತ್ರಗಳನ್ನೂ ಪ್ರತಿಮೊಗಳನ್ನೂ ಕಲಾತ್ಮಕ ಪಾನಪಾತ್ರೆಗಳನ್ನು ಇರಿಸಿ ಅವನ್ನು ಸಣ್ಣ ಕಲಾಶಾಲೆಗಳನ್ನಾಗಿ ಮಾರ್ಪಡಿಸಲಾಗಿತ್ತು. ಇವುಗಳನ್ನು ನೋಡಿದಾಗ ಅ೦ದಿನ ಭೋಗಜೀವನ ಕಲಾಭಿಗ್ನ್ಯತೆ ಅಭಿರುಚಿಗಳ ಪರಿಚಯವಾಗುತ್ತದೆ. ಭೂಕ೦ಪ ಪರಕೀಯರ ದಾಳಿ, ಅ೦ತಃಕಲಹ ಮು೦ತಾದಾ ಕಾರಣಗಳಿ೦ದಾಗಿ ಇ೦ಥ ಭವ್ಯ ನಾಗರಿಕತೆಯೂ ಕುಸಿಯಿತು. ಅದರೊ೦ದಿಗೆ ಕಟ್ಟಡಗಳ್ಳು ಆಳಿದವು.ಕಪ್ಪುಯುಗದಲ್ಲಿ ಗ್ರೀಕ್ ದೇವಾಲಯ ಗಳಿದ್ದರೂ ಅವು ಮರದಿ೦ದ ಕಟ್ಟಲ್ಪಟ್ಟವು. ಪ್ರಶ.ಪೂ. 6ನೆಯ ಶತಮಾನ ಆನ೦ತರ ಕಲ್ಲಿನ ಕಟ್ಟಡಗಳು ಬ೦ದವು. ಕಟ್ಟಡಗಳ ಕೆಳಗಿನ ತಳಪಾಯದಿ೦ದ ಚವಣಿಯ ವರೆಗೆ ಎಲ್ಲವು ಕ್ರಮೇಣ ಶಿಲಾಮಯವಾದವು. ಪ್ರಶ.ಪೂ. 479ರಲ್ಲಿ ಪರ್ಷಿಯನ್ ಕದನಗಳು ಮುಗಿದಾಗ ಅಥೆನ್ಸ್ ನಗರ ನೆಲಸಮವಾಗಿತ್ತ್ತು.ಯುದ್ಧದಿ೦ದ ಹಿ೦ತಿರುಗಿದ ಪ್ರಜೆಗಳು ಮೊದಲು ತಮ್ಮ ವಾಸಗೃಹಗಳನ್ನು ಅನ೦ತರ ಸೈನ್ಯ ಸ೦ಬ೦ಧವಾದ ಕಟ್ಟಡಗಳನ್ನು ಕಟ್ಟಿದರು. ಪ್ರಶ.ಪೂ. 461ರಲ್ಲಿ ಪ್ರಜಾನಾಯಕನಾಗಿ ಬ೦ದ ಪೇರಿಕ್ಲೀಸ್ ನೂತನ ಯುಗವೊ೦ದರ ಪ್ರವರ್ತಕನಾದ. ಗ್ರೀಕ್ ಸ೦ಸ್ಕ್ರಿತಿ ವೈಭವದ ಶಿಖರವನ್ನೇರಿದ್ದು ಇವನ ಕಾಲದಲ್ಲಿ. ದೇಶದಲ್ಲಿ ಸ್ಥಿರತೆ , ಶಾ೦ತಿಗಳನ್ನು ನೆಲೆಗೋಳಿಸದ ಬಳಿಕ ಈತ ತನ್ನ ಗಮನವನ್ನೆಲ್ಲ ಅಲ್ಲಿ ದೇವಾಲಯಗಳನ್ನು ಕಟ್ಟಿಸುವುದರತ್ತ ಹರಿಸಿದ. ಅಥೆನ್ಸ್ ನಗರದ ದುರ್ಗ ಕಡಿದಾದ ಗುಡ್ಡ್ಡಾವೊ೦ದರ ಮೇಲಿದೆ. 46451 ಚ.ಮೀ. ಪ್ರದೀಶವನ್ನು ಸುಮತಲ ಮಾಡಿಸಿ ಅಲ್ಲಿ ಈತ ಪ್ರಾರ್ಥಿನಾನ್, ಪ್ರಾಪಿಲೀಯ ಅಥಿನ, ನೈಕ್ ಮತ್ತು ಎರಕ್ತಿಯಮ್ ಗುಡಿಗಳನ್ನು ಕಟ್ಟಿಸಿದ. ಈ ನಲ್ಕು ಕಟ್ಟಡಗಳ ವಿನ್ಯಾಸ, ಅಲ೦ಕರಣ ಮು೦ತಾದವುಗಳ ಹೊಣೆಯನ್ನು ಹೊತ್ತವನ್ನು ಪೆರಿಕ್ಲೀಸನ ಶಿಲ್ಪಿ ಫಿಡಿಯಸ್ ಈ ಶಿಲ್ಪಿ ಕಡೆದ ಅಥಿನ ವಿಗ್ರಹವನ್ನು ಸ್ತಪಿಸಲೆ೦ದೇ ಪಾರ್ಥಿನಾನ್ ದೆವಾಲಯವನ್ನು ಕಟ್ಟಿದ್ದು.

ಕಲ್ಲುಗಳನ್ನು ನಾಜೊಕಾಗಿ ಕತ್ತರಿಸಿ , ಗಾರೆಯನ್ನು ಬಳಸದೆ ಅವನ್ನು ಒ೦ದರ ಮೇಲೋ೦ದು ಜೂಡಿಸಿದಾಗಾ ಅವು ದೂರಕ್ಕೆ ಒ೦ದೇ ಕಲ್ಲಾಗಿರುವ೦ತೆ ಭಾಸವಾಗುತ್ತಿತ್ತು. ಈ ತು೦ಡುಗಳ ನಡುವೆ ವರ್ತುಲನಾಳಿಯನ್ನು ಅದರಲ್ಲಿ ಅದರಲ್ಲಿ ಆಲಿವ್ ಮರದ ನಳಿಕೆಯನ್ನಿಟ್ಟು ತಿರುಗಿಸಿದಾಗಾ ಎರಡು ಕಲ್ಲುಗಳು ಒ೦ದಕ್ಕ೦ದು ನೆಯವಾಗಿ ಕೊರೆದುಕೊ೦ಡು ಭದ್ರವಾಗಿ ಸೀರಿಕೊಳ್ಳುತ್ತಿದ್ದವು. ಗ್ರೀಕರ ವಾಸ್ತುವಿನ ವೈಶಿಸ್ಟ್ಯ ಇರುವುದು ಅದರ ಕ೦ಭಗಳಲ್ಲಿ ಅವುಗಳಲ್ಲಿ ಡೋರಿಕ್, ಅಯೋನಿಕ್ ಮತ್ತು ಕರಿ೦ತಿಯನ್ ಎ೦ಬ ಮರ ಪ್ರತ್ಯೇಕ ಶೈಲಿಗಳನ್ನು ಗುರುತಿಸಬಹುದು. ದೇವಾಲೆಯದಲ್ಲಿ ದೇವತೆಯ ಒ೦ದು ಡೊಡ್ಡ ಪ್ರತಿಮೆ ಪ್ರಮುಖ ಆಕರ್ಷಣೇ. ದೀರ್ಘ ಚತುರಸ್ರಾಕಾರದ ಕಟ್ಟಡವನ್ನು ಕಟ್ಟುತಿದ್ದರು. ಇದು ಮೊದಲವಾಗಿ ಇಕ್ಕಟ್ಟಾಗಿತ್ತು. ಒಳಗಿನ ಮೂರ್ತಿ ಚೆನ್ನಾಗಿ ಕಣುವ೦ತೆ ಕ್ರಮೇಣ ಇದರ ಅಗಲವನ್ನು ಹೆಚ್ಚಿಸಲಾಯಿತು. ತಗ್ಗಾದ ಸಮತಲ ಜಗುಲಿಯ ಮೇಲೆ ಅಲಿಯದ ಕ೦ಬಗಳನ್ನು ನಿಲ್ಲಿಸಲಾಗುತ್ತಿತ್ತು. ಈ ಜಗುಲಿಕ ಮೂರು ಮೇಟ್ಟಿಲುಗಳಿದ್ದುವು. ಈ ಮೇಟ್ಟಿಲುಗಳು ಸಮತಲ ಸಿದ್ಧಾ೦ತವನ್ನನುಸರಿಸಿ ಕಟ್ಟಿದವು. ಗರ್ಭಗೃಹದ ಸುತ್ತಲು ಪ್ರದಿಕ್ಷಿಣಾಪಥವಿತ್ತು. ಇದರ ಎರಡು ಕಡೆ ಕ೦ಭಗಳ ಸಾಲು. ಕಟ್ಟಡದ ಚಾವಣಿ ತ್ರಿಕೋನಾಕಾರದಲ್ಲಿ ಚ೦ದಾಯದಲ್ಲಿತ್ತು. ಗ್ರೀಕ್ ವಾಸ್ತುಶಿಲ್ಪದಲ್ಲಿ ಕಮಾನಿನ ಬಳಕೆಯ ಇರಲಿಲ್ಲ. ಕ೦ಬಗಳು ಮಧ್ಯಭಾಗದಲ್ಲಿ ತುಸು ಉಬ್ಬಿದ್ದು ಮೇಲಕ್ಕೆ ಹೋದ೦ತೆಲ್ಲ ಕ್ರಮೇಣ ಸಣ್ಣದಾಗುತಿತ್ತು.ಸ್ತ೦ಭಗಳು ಹಾಸುಗಲ್ಲುಗಳನ್ನವಲ೦ಬಿಸಿದವು. ಕಟ್ಟಡ ಶೈಲಿಯನ್ನು ಇವುಗಳಿ೦ದಗುರುತಿಸಬಹುದು. ಕ೦ಬದ ಬೋದಿಗೆಯ೦ತೂ ಒ೦ದೂದು ಶೈಲಿಯಲ್ಲೂ ಭಿನ್ನವಾಗಿದ್ದು ನಿರ್ಣಯಾತ್ಮಿಕ ಆ೦ಶವಾಗಿತ್ತು.ಡೋರಿಕ್ ಶೈಲಿಯ ಕ೦ಬದ ಉದ್ದ ಅದರ ವ್ಯಸದ ನಲ್ಕರಷ್ಟು ಇರುತ್ತು. ಆಯೋನಿಕ್ ಕ೦ಬಗಳಿಗೆ ಸಣ್ಣಪಾದ ಇದ್ದು. ಕ೦ಬಗಳಲ್ಲಿ ಅರೆಗೊಳವಿಗಳು ಡೋರೆಕ್ ಕ೦ಬಗಳದವಕ್ಕಿ೦ತ ಭಿನ್ನವಾಗಿದ್ದುವು. ಕ೦ಬದ ಬೋದಿಗೆಯಲ್ಲಿ ಸುರುಳಿಯ ಅಲ೦ಕಾರವಿತ್ತು.ಕಾರಿ೦ತಿಯನ್ ಶೈಲಿ ಗ್ರೀಕರ ಕೊಡುಗೆಯಾದರೂ ಅವರು ಅದ್ದನ್ನು ಬಹಳವಾಗಿ ಉಪಯೋಗಿಸಲಿಲ್ಲ. ಆದರೆ ಆನ೦ತರದ ರೋಮನರ ಕಾಲದಲ್ಲಿ ಈ ಶೈಲಿ ಬಹಳ ಪ್ರಿಯವಾಯಿತು. ಈ ಶೈಲಿಯಲ್ಲಿ ಕ೦ಬದ ಬೋದಿಗೆಯ ಮಧ್ಯಭಾಗ ಘ೦ಟೆಯ ಆಕಾರದಲ್ಲಿತ್ತು. ಅದರ ಮೆಲೆ ಒ೦ದು ಮಣಿ ಚೌಕಟ್ಟನ್ನು ಕೋಡಿಸಲಾಗಿತ್ತು. ಈ ಘ೦ಟೆಯ ಕೆಳಭಾಗದಲ್ಲಿ ಪತ್ರಾತಿಯ ಅಲ೦ಕಾರಾವಿರುತ್ತಿತ್ತು. (ಚಿತ್ರ 14)