ಪುಟ:Mysore-University-Encyclopaedia-Vol-6-Part-17.pdf/೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರೀಕ್ ನಾಟಕಗಳು (ಪ್ರಾಚೀನ) ಊಹಿಸಬಹುದೇ ಹೊರತು ಅದರ ಯಥಾರ್ಥ ಚಿತ್ರ ದೊರೆಯುವುದಿಲ್ಲ. ಹೊಸ ಹರ್ಷನಾಟಕದ ಗ್ರೀಕ್ ನಿದರ್ಶನ ಯಾವುದೂ ಇಲ್ಲದಿದ್ದರೂ ಪ್ಲಾಟಸ್ ಸ್ಪಾಷಿಯಸ್ ಟೆರೆನ್ಸ್ ಎಂಬ ಪ್ರಾಚೀನ ರೋಮನ ಹರ್ಷನಾಟಕ ಅದರ ಮಾದರಿಯಲ್ಲಿ ಕಟ್ಟಿದ್ದಾದ್ದರಿಂದ ಅದರ ಲಕ್ಷಣ ನಮಗೆ ತಿಳಿಯುತ್ತದೆ. ಅಷ್ಟೊಂದು ವಿನೋದ ನಾಟಕಗಳ ನಷ್ಟ ಹೇಗಾಯಿತೊ ಏಕಾಯಿತೊ ಹೇಳಲಾಗದ. ಕಾಮೆಡಿ (ಹರ್ಷನಾತಟಕ) ಎಂಬ ಶಬ್ದ ಕೋಮೆ ಎಂದರೆ ಹಳ್ಳಿ ಎಂಬುದರಿಂದ ಉತ್ಪನ್ನವಾಯಿತೆಂದೂ ಹಳ್ಳಿಗಾಡಿನವರು ಗುಂಪುಗುಂಪಾಗಿ ಹಾಡಿ ಲೇವಡಿ ಕುಣಿತವನ್ನು ಮೆರೆಯಿಸುತ್ತ ನೋಟಕರಿಗೆ ಸಂತಸ ಉಂಟುಮಾಡುತ್ತಿದ್ದರೆಂದೂ ಅದರಿಂದ ಕಾಮೆಡಿಗೆ ಪ್ರಾರಂಭವೆಂದೂ ಅರಿಸ್ಟಾಟಲ್ ವಿವರಸಿದ.ಆ ಸ್ವಚ್ಛಂದ ತಂಡದವರು ಬಹುವಾಗಿ ಶಿಶ್ನಗೀತ ಗಾಯನಮಾದುತ್ತ ಶಿಶ್ನಲಾಂಛನವನ್ನು (ಫ಼್ಯಾಲಸ್) ಅಲಂಕರಿಸಿ ಎತ್ತಿ ಹಿಡಿಯುತ್ತಿದುದರಿಂದ ಅವರಿಗೆ ನಗರಗಳಲ್ಲಿ ಅವಕಾಶ ಸಿಕ್ಕದೆ ಹೋಯಿತು; ಕ್ರಮೇಣ ಆ ಅಶ್ಲೇಲತೆ ನಗರಗಳನ್ನೂ ಪ್ರವೇಶಿಸಿತು.ಇದೂ ಅವನ ಅಭಿಪ್ರಾಯ. ಆದರೆ ಕಾಮೆಡಿ ಪದ ಬಂದದ್ದು ಕೋಮೆಯಿಂದಲ್ಲ; ಕಾಮಾಸ್ (ಬಹುವಚನ ಕಾಮಯ್) ಪದದಿಂದ, ಅದರ ಅರ್ಥ ಮೋದಗಾರರು (ರೆವೆಲರ್ಸ್). ದ್ರಾಕ್ಷಿಯನ್ನು ಕೊಯ್ದು ಮದ್ಯಮಾಡುವ ಸಮಯದಲ್ಲೂ ಬೆಳೆಯನ್ನು ಕೊಯ್ದು ಕನಜಕ್ಕೆ ತುಂಬುವಾಗಲೂ ಜನರಿಗೆ ಸ್ವಾಭಾವಿಕವಾಗಿ ಸುಗ್ಗಿಯ ಉಲ್ಲಾಸ. ಕುಡಿತ ಕುಣಿತ ಪೈರುಪಚ್ಚೆಗಳ ಅಧಿದೇವತೆಯಾದ ಡಯೊನೈಸಸ್ಸನನ್ನು ಭಜಿಸುತ್ತ ಒಂದೆರೆಡು ದಿನ ಆಮೋದದ ಹಬ್ಬವನ್ನು ಆಚರಿಸುತ್ತಿದ್ದರು; ಅದರ ಅಂಗವಾಗಿ ಪ್ರಜೋತ್ಪತ್ತಿಯ ಸಂಕೇತಕ್ಕೆ ಅವರು ಮುಚ್ಚುಮರೆಯಿಲ್ಲದೆ ಪೂಜೆ ಸಲ್ಲಿಸಿದುದು ಅಚ್ಚರಿಯಲ್ಲ. ಅಷ್ತೇಕೆ, ಕಾಮೆಡಿ ಕಲಾತ್ಮಕವಾಗಿ ಅಭಿವೃದ್ಧಿ ಹೊಂದಿದ ಮೇಲೂ ಅದರ ನಟರು ದೊಡ್ದ ಕೃತಕ ಶಿಶ್ನವನ್ನು ತಮ್ಮ ವೇಷದ ಭಾಗವನ್ನು ಕಟ್ಟಿಕೊಳ್ಳುತ್ತಿದ್ದರು.ಕಾಮೆಡಿ ಅತ್ಯಂತವಾಗುವುದು ನಾಯಕನಾಯಕಿಯರ ವಿವಾಹದಿಂದ; ಗ್ರೀಕರಲ್ಲೂ ಅವರ ಶಿಷ್ಯರಾದ ರೋಮನರಲ್ಲೂ ಕೆಲವು ವೇಳೆ ಯಾವುದೊ ಹುಡುಗಿಯನ್ನು ತಂದು ನಾಯಕನಿಗೆ ಮದುವೆಮಾಡಿಸುವುದೂ ನಾಟಕದಲ್ಲಿ ಜರುಗುತ್ತಿತ್ತು. ಮೈಥುನದ ವಿಚಾರ ನಿರ್ಲಜ್ಜೆಯಿಂದ ಪ್ರಕಟಿತವಾಗಿತ್ತಿತು, ನಟರ ಮೂಲಕ. ಅರಿಸ್ಟಾಫ಼ನೀಸ್ ತನ್ನಿಂದ ಹರ್ಷನಾಟಕದ ಶುದ್ದ್ದೀಕರಣ ಮತ್ತು ಅಂದಗೋಳಿಕ ಆಯಿತು ಎಂದು ಹೇಳಿದ ಮಾತಿನಲ್ಲಿ ಅವನ ಹಿಂದೆ ಅದು ಹೇಗಿದ್ದಿತೆಂಬುದು ವ್ಯಂಜಕವಾಗುತ್ತದೆ. ಗಂಭೀರನಾಟಕಕ್ಕಿಂತ ಹರ್ಷನಾಟಕ ವಾಸ್ತವಿಕ ಜೀವನಕ್ಕೆ ಬಲು ಹತ್ತಿರವಾದ್ದು. ಕಮೆಡಿ ಮೊದಲು ಬೆಳೆದುಬಂದದ್ದು ಸಿಸಿಯಲ್ಲಿ, ಆಮೇಲೆ ಆಟಿಕದಲ್ಲಿ. ನಾನಾ ರೀತಿಯ ವಿನೋದ ದೃಶ್ಯಗಳೂ ಪ್ರಸಂಗಗಳೂ ಮೂಕಾಭಿನಯಗಳೂ ಮೆಗಾರಾ ಮೊದಲಾದ ಸ್ಥಳಗಳಲ್ಲಿ ಎದ್ದುಬಂದವು. ಪ್ರ.ಶ.ಪೂ. ಸು. ೫೮೦ರ ಹೊತ್ತಿಗೇ ಸುಸಾರಿಯನ್ ಎಂಬಾತನ ಮೆಗಾರಾ ಪ್ರಹಸನಕ್ಕೆ ಪ್ರಸಿದ್ದ್ದಿ ಬಂದಿತು. ಪ್ರ.ಶ.ಪೂ. ಸು. ೫೨೬ರಲ್ಲಿ ಜನಿಸಿದ ಎಪಿಕಾರ್ಮಸ್ ಪಡೆದ ಖ್ಯಾತಿ ದೊಡ್ಡದು. ಆತ ಮೆಗಾರಾದಲ್ಲಿದ್ದು ಆಮೇಲೆ ಸಿರಕ್ಯೂಸಿಗೆ ಹೋದ. ಅವನ ಕ್ರುತಿಗಳು ಮೂರು ಬಗೆಯವು: ಪುರಾಣ ಕಥಾವಳಿಯ ಶ್ರೇಷ್ಠ ಪುರುಶರನ್ನು ನಕಲಿಗೈಯುವ ಅಣಕನಾಟಕ; ಜನಜೀವನದ ಸಾಮನ್ಯ ಲಘುಪ್ರಸಂಗಗಳ ದೃಶ್ಯಾವಳಿ; ತತ್ವ ಪ್ರಮುಖವಾದ ವಾದವಿವಾದ. ತ್ವರೆ ಗಡಿಬಿಡಿ ಓಡಾಟಗಳಿಂದ ಅವನ ನಾಟಕ ತುಂಬಿರುತ್ತಿತ್ತಂತೆ. ಇನ್ನೊಬ್ಬ ನಾಟಕಕಾರ ಸೊಫ಼್ರಾನ್; ಗಂಡು ಮೈಮ್, ಹೆಣ್ಣು ಮೈಮ್ ಎಂಬ ಎರಡು ಬಗೆಯ ಕೃತಿ ಅವನಿಂದ ರಚಿತವಾದುವು. ಅವನಿಗೂ ಪ್ರಖ್ಯಾತಿಯಿತ್ತು. ಸಿಸಿಲಿಯ ವಿನೋದನಾಟಕದ ಪ್ರಭಾವ ಆಟಿಕದ ಮೇಲೂ ಬಿದ್ದಿತೆಂಬುದು ನಿಸ್ಸಂದೇಹ. ಆದರೂ ಹರ್ಷನಾಟಕ ಕಲಾಪೂರ್ಣವಾದದ್ದೂ ಉತ್ತಮ ಪ್ರಗತಿ ಹೊಂದಿದ್ದೂ ಆಟಿಕದ ಪ್ರಧಾನಪಟ್ಟಣವೂ ಪ್ರಾಚೀನ ಗ್ರೀಕರ ಸಮಸ್ತಸಂಸ್ಕೃತಿಯ ಏಕೈಕ ಕೇಂದ್ರವೂ ಆದ ಆಥೆನ್ಸಿನಲ್ಲಿ ಪ್ರ.ಶ.ಪೂ. ಸು. ೪೮೬ರಂದು ಹರ್ಷನಾಟಕಕ್ಕೆ ಅಧಿಕೃತವಾಗಿ ಕೋರಸ್ಸು ಸಿಕ್ಕಿತು; ಎಂದರೆ ರಾಷ್ತ್ರದ ಡಯೊನೈಸಿಯ ಲೀನಿಯ ಉತ್ಸವ ಸಮಯದಲ್ಲಿ ಅದೂ ಪ್ರದರ್ಶನಗೊಳ್ಳಬೇಕೆಂದು ನೇಮಕವಾಯಿತು. ಐದು ಕವಿಗಳಿಗೆ ಒಬ್ಬೊಬ್ಬರೂ ಒಂದೊಂದು ಕೃತಿ ಆಡಿಸುವಂತೆ ಏರ್ಪಾಡು. ಗೆದ್ದವನಿಗೆ ಬಹುಮಾನ. ಅವರು ಗಂಭೀರನಾಟಕದ ವಸ್ತುಸಂವಿದಾನವನೇ ಅನುಕರಿಸಿ ಹರ್ಷನಾಟಕಕ್ಕೂ ಒಂದು ಅಂಗಾಂಗ ಸಂಯೂಜನೆಯನ್ನು ನೆರವೇರಿಸಿದರು. ಮೋದಗಾರರಿಂದ ಇಳಿದುಬಂದಿದ್ದ ಪರಿಹಾಸ ಚತುರೋಕ್ತಿ ವ್ಯಕ್ತಿವಿಡಂಬನ ಗೇಲಿಯ ಜೊತೆಗೆ ರಾಜಕೀಯ ಸಾಮಾಜಿಕ ಸಾಹಿತ್ಯಕ ಕಟುವಿಮರ್ಶೆಯನ್ನೂ ಸೇರಿಸಿದರು. ದೇವತೆಯ ಹಬ್ಬವಾದ್ದರಿಂದ ಕೋರಸ್ಸಿನ ನೃತ್ಯಗೀತ ಕಡ್ಡಾಯವಾಗಿ ಇರಬೇಕಾಯಿತು. ಹೀಗೆ ಕಾವ್ಯ, ನಾಟಕ, ಸಂಗೀತ ಚಾಟೂಕ್ತಿ ಚರ್ಚೆ ಉಪದೇಶ ಭಾಷಣ ವಿಡಂಬನೆ ಮೊದಲಾದ ಅಂಶಗಳ ಕೂಟವದ್ದು ಹಳೆಯ ಹರ್ಷನಾಟಕದ ಸ್ವಂತಿಕೆ, ಸ್ವಾರಸ್ಯ, ಸೊಗಸು. ಕೋರಸ್ಸಿನ ಸಂಖ್ಯೆ ೨೪; ಕೆಲವು ಸಾರಿ ಅದು ೧೨, ೧೨ ಆಗಿ ಇಬ್ಭಾಗವಾಗುತಿತ್ತು, ಮುಖ್ಯವಾಗಿ ಗಂಡು ಹೆಣ್ಣುಗಳ ಸಮಾಗಮ ಅವಶ್ಯಕವಾದಗ.ಆದಿಯಲ್ಲಿ ಒಂದು ಪೀಠಿಕೆ, ಆಮೀಲೆ ಪಕ್ಷಿಗಳಂತೆ ವಸನ ಧರಿಸಿದ ನೃತ್ಯಮೇಳದ ಪ್ರವೇಶ, ಅನಂತರ ನಾಟಕದ ಮುಖ್ಯವಷಯವಾದ ಒಂದು ಸೆಣಸಾಟ, ಆನಂತರ ನಮಗೆ ವಿಸ್ಮಯ ಹಿಡಿಸುವ ಒಂದು ವಿಚಿತ್ರ ಅಂಶ. ಮುಂಬರುವಿಕೆ (ಪ್ಯರಾಬಸಿಸ್). ಅದರಲ್ಲಿ ಮುಖ್ಯ ಪಾತ್ರವೊ ಪ್ರತ್ಯಕ್ಷವಾಗಿ ಕವಿಯೊ ರಂಗದ ಮುಂಭಾಗಕ್ಕೆ ಬಂದು ನಾನಾ ವಿಚಾರಗಳನ್ನು ಕುರಿತು ಸ್ಪಷ್ಟ ಅಭಿಪ್ರಾಯ ಒತ್ತಿಹೇಳುತ್ತದೆ. ಪ್ಯರಾಬಸಿಸ್ ಆದ ಮೇಲೆ ಕೆಲವು ಘಟನಾವಳಿ (ಎಪಿಸೋಡಿಯ). ಅವು ನಾಟಕದ ಹಥೆಯನ್ನು ಮುಂದುವರೆಸುವುದಕ್ಕಿಂತ ಹೆಚ್ಚಾಗಿ ಸೆಣಸಾಟದ ತೀರ್ಮಾನಕ್ಕೆ ಪುಷ್ತಿಕೊಡುವ ಉದಾಹರಣೆ. ಮುಕ್ತಾಯವಾಗಿ ಭೋಜನಕೂಟಕ್ಕೋ ವಿವಾಹಕ್ಕೊ ತೆರಳುವ ಗಲಭೆ, ಮೆರವಣಿಗೆ. ನಾಟಕದ ವಿಷಯ ಕಲ್ಪಿತವೂ ನವನವ್ಯವೂ ನಗು ಬರಿಸುವಂಥದೂ ದ್ವಿಪಕ್ಷವುಳ್ಳದ್ದೂ ಜಗಳಕ್ಕೆ ಆಸ್ಪದ ಕೊಡುವಂಥದೂ ಆದರೆ ಸಮಕಾಲಿನ ಪರಿಸ್ಥಿತಿಗೆ ಮೋಪಾಗಿ ಅನ್ವಯಿಸುವುದೂ ಆದ ಒಂದು ಸಮಸ್ಯೆ: ಈ ಹಾಳು ಒಲಂಪಿಕ್ ದೇವತೆಗಳಿಂದ ನರರಿಗೆ ತ್ರಾಸಃ ಅವರೇತಕ್ಕೆ ಆಗಸದಲ್ಲಿ ಒಂದು ಅಡ್ಡ ರಾಜ್ಯ ಸ್ಥಾಪಿಸಿ ಆಹುತಿ ಅರ್ಪಣೆ ಯಾವುದೂ ದೇವತೆಗಳಿಗೆ ತಲಪದಂತೆ ತೆಡೆಗಟ್ಟಬಾರದು? ಗಂಡಸರು ಎಲ್ಲವನ್ನೂ ಹದಗೆಡಿಸಿಬಿಟ್ಟಿದ್ದಾರೆ: ಹೆಂಗಸರು ಆಡಳಿತವನ್ನು ಪೂರ್ತಿ ಕಸಿದುಕೊಂಡು ನೇರ್ಪಾಟಿಸಬಾರದೇತಕ್ಕೆ? ಸರಿ, ಎರಡು ಕಕ್ಷಿಗಳು ಅನೀವಾರ್ಯ; ವಾಗ್ಯುದ್ಧ ಹಣಾಹಣಿ ಆಗಲೇಬೇಕು. ನೃತ್ಯಮೇಳದ ಕೆಲಸ ಹೋರಾಟಕ್ಕೆ ಸಮಾಧಾನ ಬಗೆಯುವುದಿಲ್ಲ, ಅದನ್ನು ಇನ್ನೂ ಹೆಚ್ಚಾಗಿ ಉಲ್ಬಣಗೊಳಿಸುವುದು. ವಿನೋದಪ್ರಮುಖವಾದರೂ ಅರಿಸ್ತಾಫ಼ನೀಸನ ನಾಟಕಗಳಲ್ಲಿ ಮನನೀಯವಾದ ವಿವೇಕತ್ತತ್ವ ಹೇರಳವಾಗಿದೆ; ಹಾಸ್ಯಗಾರನಾದರೂ ಅವನೊಬ್ಬ ಹೃದಯಸೊರೆಮಾಡುವ ಅತ್ಯುತ್ತಮ ಕವಿ, ಮನಸ್ಸು ತುಂಬುವ ದೊಡ್ಡ ದಾರ್ಶನಿಕ. ಹಳೆಯ ನಾಟಕಕಾರರಲ್ಲಿ ಮೊದಲು ಹೆಸರು ಗಳಿಸಿದವ ಕ್ರಾಟಿನಸ್ (ಪ್ರ.ಶ.ಪೂ. ಸು. ೫೨೦-ಪ್ರ.ಶ.ಪೂ. ೪೨೩). ಆತ ೨೧ ಕೃತಿಗಳನ್ನು ಕಟ್ಟಿದನಂತೆ.ಪ್ರಧಾನ ವ್ಯಕ್ತಿ ಪೆರಿಕ್ಲೀಸನನ್ನೇ ಆತ ತನ್ನ ವಿಡಂಬನೆಗೆ ಗುರಿಮಾಡಿದೆ. ಅವನೊಬ್ಬ ಕುಡುಕ, ಶಕ್ತಕವಿಯಾಗಿದ್ದರೂ ಅವನ ವೃದ್ಧಾಪ್ಯದಲ್ಲಿ ಯುವಕನಾದ ಅರಿಸ್ಟಾಫ಼ನೀಸ್ ಶೂರರು ಎಂಬ ತನ್ನ ನಾಟಕದಲ್ಲಿ ಅವನನ್ನು ಅಪಹಾಸ್ಯಗೈದ; ಕ್ರಾಟಿನಸ್ ರೇಗಿ ಮದ್ಯದ ಹೂಜಿ ಎಂಬ ಹಷನಾಟಕ ಬರೆದು ಸ್ಪರ್ಧೆಯಲ್ಲಿ ಅರಿಸ್ಟಾಫ಼ನೀಸನ ಘನ ಕೃತಿ ಮೋಡಗಳು ಎಂಬುದನ್ನು ಸೋಲಿಸಿ, ಬಹುಮಾನ ಗಳಿಸಿದ. ಕ್ರೇಟೀಸ್ ಮತ್ತು ಅವನ ಹಿಂಬಾಲಿಕ ಪೆರಿಕ್ರೇಟೀಸ್ ಇಬ್ಬರೂ ಒಳ್ಳೆಯ ಕವಿಗಳು. ಕ್ರೇಟೀಸ್ ಮೊದಲಾಗಿ ಬಿಡಿ ವ್ಯಕ್ತಿಯ ಅವಹೇಳನವನ್ನು ತ್ಯಜಿಸಿ ಹಲವರಿಗೆ ಅನ್ವಯಿಸುವ ಸಾಧಾರಣ ಸಂಗತಿಯ ವಿಡಂಬನವನ್ನು ಬಳಕೆಗೆ ತಂದ. ಆಮೇಲೆ ಬಂದ ಯೂಪೋಲಿಸ್ ಶ್ರೇಷ್ಠ ಕವಿ, ಕಲ್ಪನಾ ಪ್ರವೀಣ, ಬಲಿಷ್ಠ ವಿಡಂಬನಕಾರ, ಅರಿಸ್ಪಾಫ಼ನೀಸನ ಸಮಕಾಲಿನ, ಸ್ನೇಹಿತ, ಜೊತೆಗಾರ ಕಾವ್ಯಕರ್ತೃ ಹಾಗೂ ವಿರೋಧಿ. ನಡುವಣ ಹರ್ಷನಾಟಕದ ಬಗೆಗೆ ಹೇಳುವ ಸಂಗತಿ ಹೆಚ್ಚಾಗಿಲ್ಲ, ಹಳೆಯ ಕರ್ಷನಾಟಕದ ವ್ಯಕ್ತಿನಿಂದ, ಬಯ್ಗಳ, ಕೀಳು ಅಪಹಾಸ್ಯ ಅದರಲ್ಲಿ ಇರಲ್ಲಿಲ್ಲ. ಬದಲಾಗಿ ಉಚ್ಚ ಕೃತಿಗಳ ಅಣಕ, ಪುರಾಣ ಕಥಾವಳಿಯ ಹೀನಯಿಕೆ, ತತ್ವಶಾಸ್ತ್ರದ ಟೀಕೆ, ಸಾಹಿತ್ಯದ ಲಘು ವಿಮರ್ಶೆಗಳು ತುಂಬಿಕೊಂಡು ರಸಯುಕ್ತವಾಗುತ್ತಿದ್ದುವು. ಆಂಟಿಫ಼ೇನೀಸ್ ಮತ್ತು ಅಲೆಕ್ಸಿಸ್ ನಡುನಾಟಕದ ಲೇಖಕರು. ಒಬ್ಬೊಬ್ಬರೂ ಇನ್ನೂರಕ್ಕೂ ಹಚ್ಚಾಗಿ ರೂಪಕ ರಚಿಸಿದರಂತೆ. ಅರಿಸ್ಟಾಫ಼ನೀಸ್ ಕೊನೆಯಲ್ಲಿ, ಎಂದರೆ ಪ್ರ.ಶ.ಪೂ. ೩೮೮ರಲ್ಲಿ, ಬರೆದ ಕೃತಿ ಧನ (ಪ್ಲೂಟಸ್). ಇದು ಅವನ ಇತರ ಕೃತಿಗಳಿಂದ ಬಹುಮಟ್ಟಿಗೆ ಬೇರೆಯಾಗಿದೆ. ಅದು ಹಳೆಯ ಹರ್ಷನಾಟಕ ಅಲ್ಲವೇ ಅಲ್ಲ್, ನಡುವಣ ಹರ್ಷನಾಟಕ ಎಂದು ತ ‍‍‍‍ ನಿರ್ಧರಿಸಿದ್ದಾರೆ. ನಡುವಣ ಹರ್ಷನಾಟಕದಲ್ಲಿ ಕಟ್ಟರೆ ಊಟದ ಮತ್ತು ಕಂಠಪೂರ್ತಿ ಪಾನದ ಆಸಕ್ತ ವರ್ಣನೆ ಮತ್ತೆ ಮತ್ತೆ ಬರುತ್ತಿತ್ತಂತೆ. ಅದು ಕವಿಗಳ ದೈಹಿಕಾಪೇಕ್ಷೆಯ ಕ್ಷುದ್ರತನವೆಂದು ದೂರಿದ್ದಾರೆ. ನಿಜಾಂಶ ಅದಲ್ಲ. ಆಗಿನದು ಬರಗಾಲ. ಕ್ಷುದ್ಬಾಧೆಯಿಂದ ಸಂತಪ್ತರಾದವರಿಗೆ ಮೃಷ್ಟನ್ನಭೋಜನದ ವಿವರಣೆಯೇ ಒಂದು ವಿಧದಲ್ಲಿ ತೃಪ್ತಿಕಾರಕ. ಹೊಸ ಹರ್ಷನಾಟಕದ ಕರ್ತರಲ್ಲಿ ಮಿನಾಂಡರ್, ಫ಼ಿಲಿಮಾನ್, ಡೀಫ಼ಿಲಸ್ ಮುಖ್ಯರು. ಮೊದಲಿನ ಇಬ್ಬರೂ ಬರೆದ ರೂಪಕ ೨೦೦ರಕ್ಕೂ ಹೆಚ್ಚು; ಮೂರನೆಯವ ಬರೆದವು ೧೦೦. ಮಿನಾಂಡರ್ ಬಹಳಾ ಖ್ಯಾತಿವಂತ, ದಕ್ಷ. ಅವರ ಯಾರದೂ ಒಂದು ಕೃತಿಯೂ ಉಳಿದುಬಂದಿಲ್ಲ. ಹೊಸ ನಾಟಕದ ಲಕ್ಷಣಗಳು ನಮಗೆ ಅರಿವಾಗಬೇಕಾದರೆ ಪ್ರಾಚೀನ ರೋಮನರ ಹರ್ಷನಾಟಕಕಾರರ ಬರೆವಣಿಗೆ ಉಂಟು, ಅದರ ನಿರ್ದುಷ್ಟ ಸಹಾಯವೂ ಉಂಟು. ರೋಮನರ ಟೆರೆನ್ಸ್, ಅವನಿಗಿಂತಲೂ ಹೆಚ್ಚಾಗಿ ಪ್ಲಾಟಸ್, ಗ್ರೀಕ್ 'ಹೊಸ' ಹರ್ಷನಾಟಕಕ್ಕೆ ಕನ್ನಡಿ. ಅದರ ಲಕ್ಷಣ್ಗಲಲ್ಲಿ ಮುಖ್ಯವಾದವು ಇವು; ಕಾಲ್ಪನಿಕ ಪಾತ್ರಗಳ ಮೂಲಕ ಸಮಕಾಲದ ವಾಸ್ತವ ಜೀವನದ ಚಿತ್ರಣ; ಕಥಾಸಂವಿದಾನದ ಅಚ್ಚುಕಟ್ಟು; ಪಾತ್ರಶಿಲ್ಪ; ಬರಿ ಚತುರೋಕ್ತಿಯಲ್ಲದ ಉತ್ತಮ ಹಾಸ್ಯ; ಮೇಲಾಗಿ ಸಾಹಸಗೂಡಿದ ರೊಮ್ಯಾಂಟಿಕ್ ಪ್ರಣಯ. ಹಲವಾರು ನಾಟಕಗಳಲ್ಲಿ ಕೊನೆಯ ಅಂಶದ ಮೇಲೆಯೇ ಅವಧಾರಣೆ. ನಾಯಕಿ ವೇಶ್ಯಾವರ್ಗಕ್ಕೆ ಸೇರಿದವಳಾಗಿರಬಹುದು. ಪ್ರಾಮಾಣಿಕ ಪ್ರಿಯ