ಪುಟ:Mysore-University-Encyclopaedia-Vol-6-Part-17.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೊಸ ಗದ್ಯಪದ್ಯ ಪ್ರಭೇದಗಳು: ಆರಿಸ್ಪಾಟಲನ ತಾತ್ತ್ವಕ ಪರಂಪರೆಯನ್ನು ಮುಂದುವರಿಸಿದವರಲ್ಲಿ ಕ್ಯಾರೆಕ್ಟರ್ಸ್ ಎಂಬ ವಿಶಿಷ್ಣ ತೆರನಾದ (ನಾಗರಿಕ) ವ್ಯಕ್ತಿಚಿತ್ರಣಗಳನ್ನೂ ಸಸ್ಯವಿಜ಼್ಣಾನ ಗ್ರಂಥವನ್ನೂ ಬರೆದು ಪ್ರಸಿದ್ಧನಾದ ಥಿಯೋಫ್ರಾಸ್ಟಸ್ ಮುಖ್ಯನಾದವ. ಪ್ರ.ಶ.ಪೂ.ನಾಲ್ಕನೆಯ ಶತಮಾನದಲ್ಲಿ ಗ್ರೀಸಿನ ಹಳೆಯ ತಾತ್ತ್ವಿಕ ಸಂಪ್ರದಾಯದ ಜೊತೆಯಲ್ಲೇ ಸ್ಟೋಯಿಕ್ಸ್ ಮತ್ತು ಎಪಿಕ್ಯೂರಿಯನ್ಸ್ ಎಂಬ ಎರಡು ಹೊಸ ವೈಚಾರಿಕ ಪಂಥಗಳು ಹುಟ್ಟಿ ಜನಪ್ರಿಯವಾದುವು. ಥಿಯೋಫ್ರಾಸ್ಟಸನ ಶಿಷ್ಯ ಘಾಲೆರೆಮ್ಮಿನ ಡೆಮಿಟ್ರಿಯಸ್ ಪ್ರಾ.ಶ.ಪೊ 307ರಲ್ಲಿ ದೇಶಭ್ರಷ್ಟನಾಗಿ ಆಲೆಗ್ಸಾಂಡ್ರಿಯದ ಟಾಲಮಿಯ ಆಶ್ರಯ ಪಡೆದ.ಆಲೆಗ್ಸಾಂಡ್ರಿಯದಲ್ಲಿ ಜಗದ್ವಿಖ್ಯಾತ ಪುಸ್ತಕ ಭಂಡಾರವನ್ನು ಸ್ಥಾಪಿಸಿದವ ಅವನೇ. ಆವನ ಪ್ರಯತ್ನದಿಂದಾಗಿ ಅರಿಸ್ಪಾಟಲನ ವೈಜ್ಞಾನಿಕ ವಿಚಾರಗಳೂ ಶಾಸ್ತ್ರಪದ್ಧತಿಗಳೂ ಆಲೆಗ್ಸಾಂಡ್ರಿಯದಲ್ಲಿ ಬೇರೂರಿದುವು. ಆಲೆಗ್ಸಾಂಡ್ರಿಯದಂದ ಹಲವು ಮಂದಿ ವಿದ್ವಾಂಸರು ರೋಮ್ ನಗರಕ್ಕೆ ವಲಸೆ ಬಂದಾಗ ಅವರು ತಮ್ಮ ಜೊತೆಯಲ್ಲಿ ಗ್ರೀಕ್ ಅಭಿಜಾತ ಪರಂಪರೆಯ ಸಾರಸವ೯ಸ್ವವನ್ನೂ ಹೊತ್ತು ತಂದರು. ಆಲೆಗ್ಸಾಂಡ್ರಿಯದಲ್ಲಿ ಸ್ಥಾಪಿತವಾದ ಗ್ರೀಕ್ ಸಾಹಿತ್ಯ ಸಂಪ್ರದಾಯದಲ್ಲೂ ಹಲವು ಕವಿಗಳು ಹುಟ್ಟಿಕೊಂಡರು ಆಲೆಗ್ಸಾಂಡ್ರಿಯದ ಕವಿಗಳಿಂದ ರಚಿತವಾದ ಕಾವ್ಯ ಪಾಂಡಿತ್ಯಪೂಣ೯ವಾಗಿದ್ದು, ಮನೋವಿಶ್ಲೇಷಣಾತ್ಮಕ ಅಂಶಗಳಿಂದ ಕುಡಿದೆ. ಹಿಂದಿನ ಪರಂಪರೆಯನ್ನು ಬಿಡಬಾರದೆಂಬ ಹಂಬಲದಿಂದ ಇವರು ಹಳೆಯ ಛಂದೋನಿಯಮಗಳನ್ನೊ ಭಾಷೆಯನ್ನು ಆನುಕರಿಸಲೆತ್ನಿಸಿದರು. ನಾಗರಿಕ ಓದುಗರಿಗಾಗಿ ಇವರು ಹಳ್ಳಿಗಾಡಿನ ಪ್ರಶಾಂತ ಬದುಕಿನ ಚೆಲುವನ್ನು ನವಿರಾಗಿ ಬಣ್ಣೀಸಿದರು.ಈ ಶಿಷ್ಟಕವಿಗಳು ತಾವು ಕಂಡುಂಡ ವೈಜ಼ಾನಿಕ ವಿಚಾರಗಳನ್ನು ಹಳೆಯ ಸೆಂಪ್ರದಾಯದ ರೀತಿಯಲ್ಲೇ ಹೇಳಲು ಪ್ರಯತ್ನಿಸುವುದರಿಂದ ಇವರ ಕಾವ್ಯ ಹಳತು ಹೊಸತುಗಳ ಮಿಶ್ರಣವಾಗಿದೆ. ಆಲೆಗ್ಸಾಂಡ್ರಿಯದ ಕವಿಗಳಲ್ಲಿ ಮೊದಲಿಗರೆಂದರೆ; ಗ್ರಾಮಜೀವನವನ್ನು ಚಿತ್ರಿಸುವ ಪ್ಯಾಸ್ಟೊರಲ್ ಕವಿ ಥಿಯೋಕ್ರಟಿಸ್.ಪುರಾಣಕಾವ್ಯಶೈಲಿಯಲ್ಲಿ ಬರೆದ ರೋಡ್ಸ್ ಪ್ರಾಂತದ ಅಪೊಲೋನಿಯಸ್, ಪುರಾಣಗಳ ಮತಪ್ರಕ್ರಿಯೆಗಳ ಉಗಮವನ್ನು ವಿವರಿಸುವ ಐಷಿಯಾ ಎಂಬ ಗ್ರಂಥ ಬರೆದ ಕ್ಯಾಲಿಮಾಕಸ್ ಮುಂತಾದವರು. ಶೋಕಾತ್ಮಕವಾದ ಎಪಿಗ್ರಾಮಗಳನ್ನು (ನಾಟುನುಡಿ) ಬರೆದ ಹೆರಾಕ್ಲಿಟಸ್ ಹೊಸದೊಂದು ಕಾವ್ಯಪ್ರಕಾರವನ್ನೇ ಪ್ರಾರಂಭಿಸಿದನೆನ್ನಬಹುದು.

ಗ್ರೀಕರನ್ನು ಗೆದ್ದ ರೋಮನರಿಗೆ ಗ್ರೀಕರ ಹೊಸ ಗ್ರೀಕ್ ವೈನೋದಿಕಗಳ,ಆಲೆಗ್ಸಾಂಡ್ರಿಯನ್ ಕಾವ್ಯ,ವಿಜ಼ಾನ, ಭೊಗೋಳಶಾಸ್ತ್ರ,ಇತಿಹಾಸ, ವಿಮರ್ಶೆ, ಪಾಂಡಿತ್ಯ ಪದ್ಧತಿಳೆಲ್ಲದರ ಫಲಶ್ರುತಿ ದೊರೆಯುವಂತಾಗಿ ರೋಮನ್ ಸಾಹಿತ್ಯದ ನಿರ್ಮಾಣಕ್ಕೆ ಬೇಕಾದ ಸ್ಫೂರ್ತಿ, ಮಾದರಿಗಳು ಒದಗಿದವು. ಅಭಿಜಾತ ಯುಗದ ಕಟ್ಟಡೆಯ ಘಟ್ಟದಲ್ಲಿ ಇತಿಯಾಸಗ್ರಂಥಗಳನ್ನು ಬರೆದವರಲ್ಲಿ ಪಾಲಿಬಿಯಸ್ ನ ಹೆಸರು ಉಲ್ಲೇಖಾರ್ಹ. ಅವನ ವಿಶಿಷ್ಟ ತಾತ್ತ್ವಿಕಚಿಂತನೆ, ವಿಚಿತ್ರ ಶೈಲಿ ಅನಂತರದ ಸಾಹಿತ್ಯಗಳ ಮೇಲೆ ಪ್ರಭಾವ ಬೀರಿ, ಹೊಸ ಮಾರ್ಗ ಸ್ಥಾಪಿಸಿದವು.

ಪ್ರ.ಶ.ಪೂ. ಎರಡನೆಯ ಶತೆಮಾನದಲ್ಲಿ ರೂಪ ತಳೆದ (ಅದ್ಭುತಕಥೆಗಳು) ಗದ್ಯ ರೊಮಾನ್ಸುಗಳು ಸಮಗ್ರ ಯುರೋಪಿನ ಸಾಹಿತ್ಯದ ಬಹುಮುಖ ಬೆಳವಣಿಗೆಗೆ ಕಾರಣವಾದವು. ರೊಮಾನ್ಸಗಳು ಗ್ರೀಸಿನ ಅವಿಚ್ಛಿನ್ನ ಕಥಾನಕ ಪರಂಪರೆಯಿಂದ ಉದ್ಭನಿಸಿದರೂ ಅವುಗಳ ಮೇಲೆ ಗ್ರೀಕ್ ನಾಟಕಗಳೂ ತಮ್ಮ ಪ್ರೆಭಾವವನ್ನು ಅಚ್ಚೊತ್ತಿದವೆಂಬುದನ್ನು ಗಮನಿಸಬೇಕು. ಪ್ರ.ಶ.ಪೂ ಎರಡನೆಯ ಶತಮಾನದ ಅನಂತರ ಗ್ರೀಕ್ ಸಾಹಿತ್ಯದ ಇಳಿಗತಿ ಪ್ರಾರಂಭವಾಯಿತು. ಆಮೇಲೆ ಬಂದ ಸಾಹಿತಿಗಳು ಆಷೇ೯ಯವಾದ ಸಾಹಿತ್ಯಸಂಪ್ರದಾಯಗಳನ್ನು ಉಳಿಸಿಕೊಳ್ಳುವುದರಲ್ಲಿ ಹೆಚ್ಚಾಗಿ ಆಸಕ್ತಿ ವಹಿಸಿದರು. ಪ್ಲೂಟಾರ್ಕನ ನೀತಿಪ್ರಧಾನವಾದ ಜೀವನಚರಿತ್ರೆಗಳಲ್ಲಿ (ಲೈವ್ಸ್) ಲೂಸಿಯನ್ನನ ಗದ್ಯ ಸಂವಾದಗಳಲ್ಲಿ ಸಾಕ್ರಟೀಸನ ತಾತ್ತ್ವಕ ವಿಚಾರಗಳು ಮತ್ತೆಮತ್ತೆ ಅಭಿವ್ಯಕ್ತಿ ಪಡೆದಿವೆ.ಲೂಸಿಯನ್ನನ ವಿಚಿತ್ರ ಲಘುಕಲ್ಪನೆ ಅರಿಸ್ಟಾಫನೀಸನ ನಾಟಕಗಳ ನೆನಪು ತರುತ್ತದೆ. ಪ್ಲೇಟೊ, ಅರಿಸ್ಟಾಟಲರ ವಿಚಾರಗಳು ಇಲ್ಲಿ ಚರ್ಮಿತಚರ್ವಣವಾದಂತೆ ಭಾಸವಾಗುತ್ತದೆ. ಆಲ್ಸಿಪ್ರಾನ್ ಬರೆದ ಪತ್ರಗಳಲ್ಲಿ ಮಿನಾಂಡರನ ನಾಟಕಗಳ ವಾತವರಣ, ವಸ್ತು, ಶೈಲಿ ಮತ್ತೆ ಕಾಣಿಸಿಕೊಳ್ಳುತ್ತವೆ. ಹೀಗೆ ಪುನಃಪುನಃ ಹಳೆಯ ಪರಂಪರೆಯತ್ತ ವಾಲುವ ಈ ಸಾಹಿತಿಗಳು ಅಭಿಜಾಅತಯುಗದ ಇಳಿಗತಿಯನ್ನು ಸೂಚಿಸುತ್ತಾರೆ. ಇವರಲ್ಲಿ ಯಾರು ಸಂಪ್ರದಾಯವನ್ನು ಅರಗಿಸಿಕೊಂಡು ತಮ್ಮ ಶೈಲಿವಸ್ತುಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿಕೊಂಡರೋ ಅವರು ಬಾಲಬಲ್ಲ ಕೃತಿಗಳನ್ನು ರಚಿಸುವುದು ಸಾಧ್ಯವಾಯಿತು.

ಪೂರ್ವ ಕ್ರಿಶ್ಚನ್ ಯುಗ : ಅಭಿಜಾತ ಗ್ರೀಕ್ ಸಂಪ್ರದಾಯ ಮಧ್ಯಯುಗದ ಗ್ರೀಕ್ ಸಾಹಿತ್ಯಕ್ಕೂ ಅನಂತರದ ರೋಮನ್ ಸಾಹಿತ್ಯಕ್ಕೂ ಮುಖ್ಯ ಪ್ರೇರಕಶಕ್ತಿಯಾಗಿ ಮುಂದುವರಿಯಿತು. ಕ್ರೈಸ್ತಧರ್ಮ ಸ್ಥಾಪಿತವಾದ ಮೇಲೆ ಅದರ ಚೈತನ್ಯದಾಯಕ ಪ್ರಬಲಶಕ್ತಿಗಳಿಂದಾಗಿ ಹೊಸಹೊಸ ಪ್ರಕಾರಗಳು, ವೈವಿದ್ಯಮಯ ವಿಚಾರಗಳು ರೂಪುಗೊಂಡವು. ಹೊಸ ಒಡಂಬಡಿಕೆಯ ಸೃಷ್ಟಿಕರ್ತರಲ್ಲೊಬ್ಬನಾದ ಸೇಂಟ್ ಪಾಲ್ ಪ್ಯಾಲಸ್ತೀನ್ ಸುವಾರ್ತೆಯನ್ನು ಗ್ರೀಕ್ ಲೋಕಕ್ಕ್ರ್ ಅರ್ಥವತ್ತಾಗಿ ಪರಿಚಯ ಮಾಡಿಕೊಟ್ಟು ಹೊಸ ಮಾರ್ಗಗಳನ್ನು ಸೂಚಿಸಿದ. ಆದರೆ ಪಾಲಗೆ ಪ್ರೇರಣೆಯಾದ ಸೃಜನಶೀಲ ಶಕ್ತಿಗಳು ಅನಂತರದ ಕ್ರಿಶ್ಚನ್ ಅಪಾಸಲರ ತಲೆಮಾರಿನಲ್ಲಿ ಹೆಚ್ಚು ಕಾರ್ಯಪ್ರವೃತ್ತವಾದಂತೆ ಕಾಣಿಸುವುದಿಲ್ಲ. ಇದಕ್ಕೆ ನಿದರ್ಶನವಾಗಿ (ಹೊಸ ಒಡಂಬಡಿಕೆಯಲ್ಲಿ ಸೇರದೆ ಉಳಿದಿರುವ) ಪೂರ್ವ ಕ್ರಿಶ್ಚನ್ ಚರ್ಚಿನ ದರ್ಮಪ್ರವರ್ತಕರ ಗ್ರೀಕ್ ಲೇಖನಗಳನ್ನು ನೋಡಬಹುದು. ಫಸ್ಟ್ ಎಪಿಸಲ್ ಆಫ್ ಕ್ಲೆಮಂಟ್ ಎನ್ನುವ ಪತ್ರದಲ್ಲಿ ಕಾರಿಂತಿಯನ್ ಚರ್ಚನ್ನು ಕುರಿತ ಖಂಡಿನೆ ಇದೆ. ಚರ್ಚಿನ ನಿಯಮಕ್ಕೆನುಸಾರವಾಗಿ ನೇಮಿತವಾಗಿದ್ದ ಪ್ರವಚಧಿಕಾರಿಗಳನ್ನು ತೆಗೆದುಹಾಕಿದರೆಂಬುದೇ ಈ ಖಂಡನಾಪತ್ರಕ್ಕೆ ಮುಖ್ಯ ಪ್ರೇರಣೆ. ಈ ಚಿತ್ರ ಮೊದಲ ಕ್ರಿಶ್ಚನ್ ಶತಮಾನದ ಚರ್ಚುಗಳ ಇತಿಹಾಸದ ಮೇಲೆ ಬೆಳಕು ಹರಿಸುತ್ತದೆ. ಪಾಪದೋಷ, ತಪ್ಪೊಪ್ಪಿಗೆ, ಕ್ಷಮೆ ಮುಂತಾದ ಕ್ರೈಸ್ತಧರ್ಮ ಸಮಸ್ಯೆಗಳನ್ನು ಕುರಿತ ಲೇಖನಗಳು ಆ ಕಾಲದ ಕೆಲವು ಗ್ರಂಥಗಳಲ್ಲಿ ಕಾಣಿಸಿಗುತ್ತವೆ. ಪ್ರ.ಶ.ಪೂ. ೧೩೦ರಲ್ಲಿ ಬರೆದ ಸೆಕಂಡ್ ಎಪಿಸಲ್ ಆಫ್ ಕ್ಲೆಮಂಟ್ ಎಂಬ ಪ್ರವಚನದ ದಿ ಷಪರ್ಡ್ ಆಫ್ ಹೆರ್ಮಾಸ್ ಎಂಬ ಭಾಗದಲ್ಲಿ ಕ್ರಿಸ್ತಪೂರ್ವಯುಗದ ಪೇಗನ್ ಕಾದಂಬರಿಗಳಿಂದಲೂ ಹಲವು ಬೇರೆಬೇರೆ ಲೌಕಿಕ ಗ್ರಂಥಗಳಿಂದಲೂ ಆರಿಸಿ ಸೇರಿಸಿದ ಕಲಬೆರಕೆಯ ಅಂಶಗಳಿವೆ. ಈ ರೀತಿಯ (ಯೆಪಿಸಲ್ಸ್) ಧಾರ್ಮಿಕ ಪತ್ರಗಳು, ಪ್ರವಚನಗಳು (ಸರ್ಮನ್ಸ್) ಮತ್ತು ಬೈಬಲಿನ ವ್ಯಾಖ್ಯಾನಗಳು, ಪೂರ್ವ ಕ್ರಿಶ್ಚನ್ ಚರ್ಚಿನ ಇತಿಯಾನ ತಿಳಿಯಬೇಕೆನ್ನುವವರಿಗೆ ಸಾಕ್ಷ್ಯಾಧಾರವಾಗಿವೆ. ಆ ಕಾಲದಲ್ಲಿ ರಚಿತವಾದ ಅಪಾಲಜಿ ಎಂಬ ದಾರ್ಮಿಕ ಲೇಖನಗಳಲ್ಲಿ ಕ್ರೈಸ್ತಧರ್ಮವನ್ನು ಸಕಾರಣವಾಗಿ ಸಮರ್ಥಿಸಲಾಗಿದೆ. ಅಂಥ ಲೇಖನಗಳನ್ನು ಬರೆದವರಲ್ಲಿ ಆರಿಸ್ಟಿಡೀಸ್ (ಪ್ರ.ಶ. ೧೪೦), ಹುತಾತ್ಮ ಜಸ್ಟಿಸ್(೧೫೦), ಅವನ ಶಿಷ್ಯ ಟೇಷಿಯನ್(೧೬೦), ಅಥೀನಾಗೊರಸ್(೧೭೭), ಓರೆಗಾನ್ ಮತ್ತು ಆಂಟಿಯೋಕಿನ ಥಿಯಾಫೈಲಸ್ ಮುಂತಾದವರ ಹೆಸರು ಹೇಳಬಹುದು. ಕ್ರೈಸ್ತಧರ್ಮವನ್ನು ಸಮರ್ಥಸಲು ಧರ್ಮಪ್ರವರ್ತಕರು ಹಲವೊಮ್ಮೆ ಯಹುದ್ಯರ ಧರ್ಮಗ್ರಂಥಗಳಿಂದಲೇ ವಸ್ತುವನ್ನು ಆರಿಸಿಕೊಂಡರೆ. ಮೋಸೆ ರಚಿಸಿದನೆಂದು ಹೇಳಲಾದ ಹಳೆಯ ಒಡಂಬಡಿಕೆಯ ವಸ್ತುವನ್ನು ಆರಿಸಿಕೊಂಡುರು. ಮೋಸೆ ರಚಿಸಿದನೆಂದು ಹೇಳಲಾದ ಹಳೆಯ ಒಡಂಬಡಿಕೆಯ ಮೊದಲ ಭಾಗದಿಂದ ಅವರು ತಮಗೆ ಬೇಕಾದ ಭಾಗಗಳನ್ನು ಬೇಕಾದಂತೆ ಬಳಸಿಕೊಂಡರು. ಸಿಸಿರೋ, ಲೂಸಿಯಾನ್ ಮುಂತಾದವರ ವಿಡಂಬನಾತ್ಮಕ ಲೌಕಿಕ ಬರೆಹಗಳನ್ನು ತಮ್ಮ ಧರ್ಮಜಿಜ಼ಾಸೆಗಳಿಗೆ ಉಪಯೋಗಿಸಿಕೊಂಡರು. ಪ್ರ.ಶ.ಪೂ. ೨ನೆಯ ಶತಮಾನದ ವೇಳೆಗೆ ಆಪಾಲಜಿ ಎನ್ನುವ ಈ ಪ್ರಕಾರದ ಬರೆವಣಿಗೆ ಸ್ಪಷ್ಟವಾದ ಸಾಹಿತ್ಯಕ ಅಂಶಗಳನ್ನು ಮೈಗೂಡಿಸಿಕೊಂಡಿತೆನ್ನಬಹುದು. ಐರಿನೇಯಸ್, ಹಿಪ್ಪಾಲಿಟಸ್, ಅಲೆಗ್ಸಾಂಡ್ರಿಯದ ಕ್ಲೆಮಂಟ್ ಮುಂತಾದವರ ಬರಹಗಳಲ್ಲಿ ಬೌದ್ಧಿಕತೆ, ನೇರ ನಿಶಿತ ಶೈಲಿ ಮುಂತಾದ ಉತ್ತಮ ಸಾಹಿತ್ಯಕ ಮುಂತಾದವರ ಬರೆಹಗಳಲ್ಲಿ ಬೌದ್ಧಿಕತೆ, ನೇರ ನಿಶಿತ ಶೈಲಿ ಮುಂತಾದ ಉತ್ತಮ ಸಾಹಿತ್ಯಕ ಅಂಶಗಳಿವೆ. ೩೩೯ರಲ್ಲಿ ಯೂಸಿಬಿಯಸ್ ಅಫ್ ಸಿಸಾರಿಯೋ ರಚಿಸಿದ ಎಕ್ಲೀಸಿಯಾಸ್ಟಿಕಲ್ ಹಿಸ್ಟರಿ ಕ್ರಿಶ್ಚನ್ ಚರ್ಚಿನ ಅಧಿಕಾರವನ್ನು ಸಮರ್ಥಿಸುವ ಈ ಗ್ರಂಥಕ್ಕೆ ಪುರಾತನ ಗ್ರೀಕರ ಸಾಮ್ರಾಜ್ಯಶಾಹಿ ತತ್ತ್ವಗಳು ಸ್ಫೂರ್ತಿ ನೀಡಿದುವೆಂಬ ಮಾತು ಗಮನಾರ್ಹ.

ಮಧ್ಯ ಕ್ರಿಶ್ಚನ್ ಯುಗ: ಮಧ್ಯಯುಗದ ಕ್ರೈಸ್ತಸಾಹಿತಿಗಳು, ಪೂರ್ವ ಕ್ರಿಶ್ಚನ್ ಯುಗದ ಓರೆಗಾನ್ ಮತ್ತು ಕ್ಲೆಮಂಟರಂತೆ ಗ್ರೀಕ್ ಮತ್ತು ರೋಮನ್ ಓರೆಗಾನ್ ಮತ್ತು ಕ್ಲೆಮಂಟರಂತ ಗ್ರೀಕ್ ಮತ್ತು ರೋಮನ್ ಅಭಿಜಾತ ಸಾಹಿತ್ಯ ಹಾಗೂ ಶಿಕ್ಷಣಪರಂಪರೆಯಿಂದ ಗ್ರಹಿಸಿದ ತತ್ತ್ವಗಳನ್ನು ಧರ್ಮಗ್ರಂಥಗಳ ರಚನೆಗಾಗಿ ಅಳವಡಿಸಿಕೊಂಡರು. ಪ್ರ.ಶ. ೪ನೆಯ ಶತಮಾನದಲ್ಲಿ ಬರೆದ ದಿ ಬ್ಯಾಂಕ್ವೆಟ್ ಆಫ್ ಸೇಂಟ್ ಮೆಥೋಡಿಯಸ್ ಎಂಬ ಗ್ರಂಥ ಪ್ಲೇಟೊವಿನ ಸಂವಾದಗಳನ್ನೂ ೩ನೆಯ ಶತಮಾನದ ಗ್ರೀಕ್ ಅಭಿಜಾತ ಸಾಹಿತ್ಯದಿಂದ ಆರಿಸಿದ ಉಲ್ಲೇಖಗಳ ಮೂಲಕ ದೈವೀಕರಣದ ತತ್ತ್ವವನ್ನು ಪಂಡಿತ ಪಾಮರರಿಗೆ ಅರ್ಥವಾಗುವಂತೆ ವಿವರಿಸಿದ್ದಾನೆ. ಒಟ್ಟಿನಲ್ಲಿ ಹೇಳುವುದಾದರ, ಮಧ್ಯಯುಗದ ಧಾರ್ಮಿಕ ಅನುಯಾಯಿಗಳು ಗ್ರೀಕ್ ಅಭಿಜಾತಯುಗದ ವಾಗ್ಮಿಕಲೆ, ದರ್ಶನ, ಶಾಸ್ತ್ರಗಳಲ್ಲಿ ವಿಶೇಶ ಪಾಂಡಿತ್ಯ ಪಡೆದಿದ್ದರು. ಪ್ರ.ಶ ೫ನೆಯ ಶತಮಾನದಿಂದ ೧೧ನೆಯ ಶತಮಾನದವರೆಗೆ ತಾತ್ತ್ವಿಕ ಜಿಜಾಸೆ ಹಾಗೂ ಧಾರ್ಮಿಕ ಪ್ರವಚನಗಳನ್ನುಳ್ಳ ವ್ಯಾಖ್ಯಾನಗಳೂ ಉಮನ್ಯಾಸಗಳೂ ರಚಿತವಾಗುತ್ತಲೆ ಇದ್ದವು . ಬೈಜ಼ಾಂಟಿಯನ್ ತಾತ್ತ್ವಿಕರಲ್ಲಿ ೧೧ನೆಯ ಶತಮಾನದ ಸಿಮಿಯನ್ ಎಂಬಾತ ತನ್ನ ಪ್ರವಚಹಳಲ್ಲಿ ೧೫ ಮಾತ್ರಗಣದ ಕಾವ್ಯ ಛಂದಸ್ಸನ್ನು ಅತ್ಯಂತ ಪರಿಣಾಮಯುತವಾಗಿ ಪ್ರಯೊಗಿಸಿದ್ದಾನೆ. ಕ್ರೈಸ್ತ ಪ್ರಾರ್ಥನಾ ವಿಧಿಗೆ ಸಂಬಂಧಿಸಿದ ಉತ್ತಮ ಗೀತಗಳ ಪ್ರವಚನಗಳ ರಚನೆಯನ್ನು ಅಭಿಜಾತ ಯುಗದ ಗ್ರೀಕರ ಧರ್ಮಶ್ರದ್ಧೆ ಹಾಗೂ ಕಲಾವಂತಿಕೆಗಳೇ ನೇರವಾಗಿ ನಿರ್ದೇಶಿಸಿದವು. ಬೈಜ಼ಾಂಟಿಯನ್ ಪ್ರಾರ್ಥನಾ ಗೀತೆಗಳಲ್ಲಂತೂ ಉತ್ತಮ ಶಬ್ದಸಂಯೋಜನೆಯಿಂದ ಹೇಗೆ ಸಂಗೀತಮಯ ಕಾವ್ಯ ನಿರ್ಮಾಣವಾಯಿತೆಂದು ನೋಡಬಹುದು . ಬೈಜ಼ಾಂಟಿಯನ್ ಚರ್ಚೆನ ಲೇಖಕರು ಸಾಮಾನ್ಯ ಜನರಿಗೆ ಧರ್ಮಬೋಧೆ ಮಾಡಲು ನೀತಿಕಥೆ ಮುಂತಾದ