ಪುಟ:Mysore-University-Encyclopaedia-Vol-6-Part-17.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರೀಕ್ ಸಾಹಿತ್ಯ

ಭಾಷೆಗಳ ಒಂದು ಸ್ವತಂತ್ರ ಭಾಗವಾಗಿದ್ದು, ಇದು ಗ್ರೀಕರ ಭಾಷೆಯಾಗಿದೆ. ಇದು ದಕ್ಷಿಣ ಬಾಲ್ಕನ್ಸ್‌ನ ಮೂಲದಿಂದ ಹುಟ್ಟಿದ್ದು, ಸುಮಾರು 34 ಶತಮಾನಗಳ ಲಿಖಿತ ದಾಖಲೆಯನ್ನು ಹೊಂದಿರುವ ಈ ಭಾಷೆಯು ಇತರ ಯಾವುದೇ ಇಂಡೋ-ಯೂರೋಪ್ ಭಾಷೆಗಳಿಗಿಂತಲೂ ಧೀರ್ಘಕಾಲದ ದಾಖಲೆಯ ಚರಿತ್ರೆಯನ್ನು ಹೊಂದಿದೆ.[೯]

ಇದರ ಬರವಣಿಗೆಯ ವಿಧಾನವು ಪ್ರಮುಖವಾಗಿ ಗ್ರೀಕ್ ಅಕ್ಷರಮಾಲೆಯಿಂದ ಉಗಮಗೊಂಡಿದೆ.(ಇದಕ್ಕೆ ಮೊದಲು ಇತರ ಪದ್ದತಿಗಳಾದ ಲೀನಿಯರ್ ಬಿ ಮತ್ತು ಸಿಪ್ರಿಯೋಟ್ ಕಾಗುಣಿತ , ಪದ್ದತಿಗಳನ್ನು ಬಳಸಲಾಗುತ್ತಿತ್ತು). ಈ ಅಕ್ಷರಮಾಲೆಯು ಫೀನೀಸಿಯನ್ ಲಿಪಿಯಿಂದ ಉಗಮಗೊಡಿದ್ದು, ನಂತರ ಇದು ಲ್ಯಾಟಿನ್, ಸಿರಿಲಿಕ್, ಕೋಪ್ಟಿಕ್, ಮತ್ತು ಇತರ ಬರಹ ಪದ್ದತಿಗಳ ಮೂಲವಾಯಿತು.


ಗ್ರೀಕ್ ಭಾಷೆಯು ಹೆಚ್ಚು ದುರ್ಬಲವಾಗಿ ವ್ಯಾಖ್ಯಾನಿಸಲಾದ "ಪಾಶ್ಚಿಮಾತ್ಯ" ಪ್ರಪಂಚವಾದ ಯೂರೋಪ್, ಮತ್ತು ಕ್ರೈಸ್ತ ಚರಿತ್ರೆಯಲ್ಲಿ ಪ್ರಮುಖವಾದ ಸ್ಥಾನ ಮಾನವನ್ನು ಹೊಂದಿದೆ.ಪುರಾತನ ಗ್ರೀಕ್ ಸಾಹಿತ್ಯದ ಸಾಮಾನ್ಯ ನಿಯಮಗಳು ಸ್ಮಾರಕ ದೃಷ್ಟಿಕೋನ ಮತ್ತು ಮಹಾಕಾವ್ಯಗಳಾದ ಈಲಿಯಡ್ ಮತ್ತು ಒಡಿಸ್ಸಿ ಯಂತಹ ಪಾಶ್ಚಿಮಾತ್ಯ ನಿಯಮಗಳ ಮೇಲಿನ ಪ್ರಭಾವ ಕಾರಣವಾದ ಅಂಶಗಳನ್ನು ಒಳಗೊಂಡಿದೆ.


ಪ್ಲೇಟೋನ ಸಂಭಾಷಣೆಗಳು ಮತ್ತು ಅರಿಸ್ಟಾಟಲ್‌ನ ಬರಹಗಳಂತಹ ಪಾಶ್ಚಿಮಾತ್ಯ ತತ್ವಜ್ಞಾನದ ಮೂಲಭೂತ ಗ್ರಂಥಗಳನ್ನು ಗ್ರೀಕ್ ಭಾಷೆಯಲ್ಲಿಯೇ ರಚಿಸಲಾಗಿದೆ. ಕೈಸ್ತರ ಧರ್ಮಗ್ರಂಥವಾದ ಬೈಬಲ್‌ನ ಹೊಸಒಡಂಬಡಿಕೆಯು ಕೊಯಿನ್ ಗ್ರೀಕ್ ಭಾಷೆಯಲ್ಲಿ ಬರೆಯಲ್ಪಟ್ಟಿದೆ. ಹಲವಾರು ಕ್ರೈಸ್ತ ಪಂಗಡಗಳು (ವಿಶೇಷವಾಗಿ ಪೂರ್ವ ಸಂಪ್ರದಾಯಸ್ಥರು ಮತ್ತು ಕ್ಯಾಥೊಲಿಕ್ ಚರ್ಚ್‌ನ ಗ್ರೀಕ್ ಪದ್ದತಿಗಳ ಅನುಯಾಯಿಗಳು) ತಮ್ಮ ಕ್ರೈಸ್ತ ಪೂಜಾ ವಿಧಿ ವಿಧಾನಗಳನ್ನು ಈ ಭಾಷೆಯಲ್ಲಿ ಆಚರಣೆ ಮಾಡುವುದನ್ನು ಮುಂದುವರೆಸಿದರು.

ಲ್ಯಾಟೀನ್ ಗ್ರಂಥಗಳು ಮತ್ತು ರೋಮ್ ಪ್ರಪಂಚದ ಸಂಪ್ರದಾಯಗಳ (ಗ್ರೀಕ್ ಸಮಾಜದ ಪ್ರಭಾವಕ್ಕೆ ಒಳಗಾಗಿದ್ದ) ಜೊತೆಗೆ, ಗ್ರೀಕ್ ಗ್ರಂಥಗಳ ಅಧ್ಯಯನ ಮತ್ತು ಪ್ರಾಚೀನಕಾಲದ ಸಮಾಜವು ಉತ್ಕೃಷ್ಟತೆಗಳ ಅಂಕೆಯನ್ನು ಸ್ಥಾಪಿಸುತ್ತವೆ.


ಗ್ರೀಕ್ ಭಾಷೆಯು ಮೆಡಿಟರೇನಿಯನ್ ಭಾಗಗಳಲ್ಲಿ ವ್ಯಾಪಕವಾಗಿ ಮಾತನಾಡುತ್ತಿದ್ದ ಒಂದು ಭಿನ್ನ ಜನಾಂಗಗಳ ಸಂಕರ ಭಾಷೆ ಯಾಗಿತ್ತು. ಅಷ್ಟೇ ಅಲ್ಲದೆ ಶ್ರೇಷ್ಠ ಪ್ರಾಚೀನ ಕಾಲದ ಹಿಂದೆಯೂ ಇದು ಬಳಕೆಯಲ್ಲಿತ್ತು. ಕಾಲಾಂತರದಲ್ಲಿ ಬೈಝಾಂಟಿನ್ ಸಾಮ್ರಾಜ್ಯದ ಅಧಿಕೃತ ಆಡುಭಾಷೆಯಾಯಿತು. ಈ ಭಾಷೆಯ ಆಧುನಿಕ ರೂಪವು ಇಂದು ಗ್ರೀಸ್ ಮತ್ತು ಸಿಪ್ರಸ್ ದೇಶಗಳ ಅಧಿಕೃತ ಭಾಷೆಯಾಗಿದೆ. ಮತ್ತು ಯೂರೋಪ್ ಒಕ್ಕೂಟದ 23 ಅಧಿಕೃತ ಭಾಷೆಗಳಲ್ಲಿ ಇದೂ ಒಂದಾಗಿದೆ. ಇಂದು [೧] ಗ್ರೀಸ್, ಸಿಪ್ರಸ್ ಮತ್ತು ಪ್ರಪಂಚದ ಹಲವಾರು ಭಾಗಗಳಹಂಚಿಹೋದ ಜನಾಂಗಗಳಲ್ಲಿ ಸುಮಾರು 13 ಮಿಲಿಯನ್ ಜನರು ಗ್ರೀಕ್ ಭಾಷೆಯನ್ನು ಮಾತನಾಡುವವರಾಗಿದ್ದಾರೆ. ಆಂಗ್ಲ ಭಾಷೆಯಂತಹ ಅನೇಕ ಆಧುನಿಕ ಭಾಷೆಗಳು , ಗ್ರೀಕ್ ಭಾಷೆಯಿಂದ ಅನೇಕ ಪದಗಳನ್ನು ಸ್ವೀಕರಿಸಿವೆ.

ಆಂಗ್ಲ ಭಾಷೆಯ ನಿಘಂಟಿನಲ್ಲಿರುವ,ವಿಶೇಷವಾಗಿ ವಿಜ್ಞಾನ ಮತ್ತು ವೈದ್ಯಕೀಯ ಶಾಸ್ತ್ರದ 50,000 ಕ್ಕೂ ಹೆಚ್ಚು ಪದಗಳು ಗ್ರೀಕ್ ಭಾಷೆಯ ಮೂಲದಿಂದ ಬಂದಿವೆ.[ಸಾಕ್ಷ್ಯಾಧಾರ ಬೇಕಾಗಿದೆ] ಲ್ಯಾಟೀನ್ ಭಾಷೆಯೊಂದಿಗೆ ,ಗ್ರೀಕ್ ಭಾಷೆಯನ್ನೂ ಸಹ ಇಂದಿನ ಆಧುನಿಕ ಭಾಷೆಗಳಲ್ಲಿ ನೂತನ ಪದಗಳನ್ನು ರಚಿಸಲು ಬಳಸುತ್ತಿದ್ದಾರೆ.