ಪುಟ:Mysore-University-Encyclopaedia-Vol-6-Part-17.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲ್ಲೇ ತತ್ವಶಾಸ್ತ್ರ ಬೂಭಕನಾಗಿ ತನ್ನ ಕಾಲವೆಲ್ಲ ದುದಿದ.ಇಂದ್ರಿಯಾನುಭವಗಲಿಗ ಹೆಚು ಪ್ರಾಶಸ್ಯ ಕೂಡುತ್ತಿದ್ದ ವಾದಗಲು ಈತನ ಕಾಲದಲ್ಲಿ ತಾಂಡವವಾಡುತ್ತಿದ್ದುವಲ್ಲದೆ ಪ್ರಯೂಜನವಾದ ಪ್ರಚಲಿತವಾಗಿತ್ತು. ಇವನ್ನು ಈತ ಪ್ರತಿಭತಿಸಲು ತೂಡಗಿದ.ಈದಕ್ಕಾಗಿ ಕಾಂಟ್ ಮತ್ತು ಹೆಗೆಲರ ದರ್ಶನಗಳಿಂದ ಸೂರ್ತಿಪದಡೆದ. ಈತನ ಅಭಿಪ್ರಯದಲ್ಲಿ ಈ ಜಗತ್ತೆಂಬುದು ಅನೇಕ ರೀತಿಯ ಸಂಬಂಗಳ ಒಂದು ಜಾಲ .ಈ ಸಂಬಂದಗಳ ಗ್ನಾನವನ್ನು ಪದೆಯುವಂಥದು ಮನಸ್ಸು ಭಾವದಿಂದಾಗಲೀ ವೆದನೆಗಳೀಂದಾಗಲಿ ನಮಗೆ ಈ ಸಂಬಂಡದಗ್ನಾನ ಬರುವಂಥದು. ಇದೇ ಪ್ರಗ್ನ್ಮ್ನೆ ವಸ್ತ್ತುಗಳ ನ್ಯ್ ಜಸ್ಥಿತಿಗೂ ಅವೂಗಳ ತೂರಿಕೆಗು ವ್ಯತ್ಯಸವಿದೆ.ಆದರೆ ಈ ವ್ಯತ್ಯಾಸ ಎರಡು ಭಿನ್ನ ತತ್ತ್ವಗಳೀಂದ ಉನ್ನತವಾದ ವ್ಯತ್ಯಾಸವಲ್ಲ.ಇವು ಒಂದೆ ತತ್ವದ ಎರಡು ಮುಖಗಳು ,ಒಂದು ಉಪಾಯಧಿಸಹಿತವಾದ ಪ್ರಗ್ನೆ ಈ ಉಪಾಧಿರಹಿವಾದ ಪ್ರಗ್ನ್ನೆಯನ್ನೆ ಪರಾತ್ವರತತ್ವವೆಂದು ಕರೆಯುತ್ತೆವೆ.ಇದು ಜಗತ್ತಿಗೆಲ್ಲಕ್ಕೂ ಆಧಾರಭೂತವಾದ ತತ್ತ್ವ್.

      ನೀತಿಶಾಸ್ತ್ರದಲ್ಲೂ ಗ್ರೀನ್ ಹೆಸರುವಾಸಿಯಾಗಿದೆ.ಇಲ್ಲಿಯೂ ಹೆಗಲ್ ನ ಪ್ರಭಾವ ಕಂಡುಬರುತ್ತದೆ.ಇಚ್ಚೆಯನ್ನು ಕುರಿತು ವ್ಯಾಖ್ಯಾನವನ್ನು ಈತ ಮುಂದಿಡುತ್ತಾನೆ ಪ್ರಾಣೀಗಳಲ್ಲಿ ಇಚ್ಚೆಗಳು ಪ್ರತ್ಯಕಶಕ್ತಿಗಳು.ಅದರೆ ಮನುಷ್ಯ್ನರಲ್ಲಿ ಅವು ಅತ್ಮದಲ್ಲಿ ಸಮನ್ವಯಗೂಳ್ಳೂತ್ತವೆ.ಅತ್ಮತ್ರುಪ್ಪಿಗಾಗಿ,ಅತ್ಮವಿಕಾಸಕ್ಕಗಿ,ಆತ್ಮಸಾಕಾತ್ಕಾರಕ್ಕಾಗಿ ಮಾನವ ಹಾತೂರೆಯುತ್ತಾನೆ.ಇದರಿಂದಲೆ ಮನುಷ್ಯನಲ್ಲಿ ಕ್ರುರ್ತತ್ವಶಕ್ತಿ ಏರ್ಪದುತ್ತದೇ. ಈ ಶಕ್ತಿಯ ಹಿಂದಿರುವ ಇಚ್ಚಾಶಕ್ತಿ ಇವನಿಗೆ ಇಚ್ಚಾಸ್ವಾತಂತ್ರ್ಯವನ್ನು ನೀಡುತ್ತದೆ.ಪ್ರತಿ ಮಾನವನ ಆತ್ಮವಿಕಾಸ ಕೆವಲ ಆವನೆದೆ ಆಗಿರುವುದಿಲ್ಲ.ಇತರರ ವಿಕಾಸದಲ್ಲಿ ತನ್ನ ವಿಕಾಸವನ್ನು ಸಾಧಿಸಿಕೊಂಡಾಗ ಮಾತ್ರ ಇವನದು ಸುಗಮವಾಗತ್ತದೆ.ಗ್ರೀನ್ ಗೆ ಒಂದೀ ಒಂದು ಸಮಷ್ತಿ ಆತ್ಮದಲ್ಲಿ ನಂಬಿಕೆ ಇರಲಿಲ್ಲ.ಆತ್ಮಗಳ ಪ್ರತ್ಯಕತೆಯನ್ನು ಈತ ಒಪ್ಪಿಕೊಂದಿದ್ದನು. ಪ್ರತಿ ಜೀವಾತ್ವನ ವ್ಯಕ್ತಿತ್ವಕ್ಕೆ ಈತ ಕೂಟ್ಟಾ ಬೆಲೆ ಈತನ ರಾಜ್ಯ ತತ್ತ್ವದ ಆಧಾರನವಾಯಿತು.ವ್ಯಕ್ತಿಗಳ ಪ್ರತ್ಯೆಕ ಹಿತ ಸಾಮುದಾಯಿಕ ಹಿತದಲ್ಲಿ ಬೆರೆತಿದೆ ಎಂದು ಈತ ಬೂಧಿಸಿದ.ಹಕ್ಕುಗಳನ್ನು ಪದೆಯಲು ವ್ಯಕ್ತಿಗೆ ಕರ್ತವ್ಯಪಾಲನೆ ಆರ್ಹತೆ ನೀಡುವುದೆಂದು ತಿಳಿಸಿದ.ರಾಜ್ಯಕ್ಕೆ ಆಧರವಾದ್ದು ದಂಡವಲ್ಲವೆಂದು ಧರ್ಮವೆಂದು ಸರ್ವಸಮ್ಮತಿ ಎಂದು ಪ್ರತಿಪಾದಿಸಿದ. 

ಗೀನನ ಗ್ರಂಥಗಳಲ್ಲಿ ಮುಖ್ಯವಾದವು ಇವು:ಇಂಟೊಡಕ್ಕನ್ ಟು ಹ್ಯೂಮ್ (೧೮೭೪)ಪ್ರೊಲಿಗೊಮೆನಾ ಟು ಎಥಿಕ್ಕ್ಸ್(೧೮೮೩)ಮತ್ತು ಲೆಕ್ಜರ್ಸ್ ಆನ್ ದಿ ಪ್ರಿನ್ಸಿಪಲ್ಸ್ ಆಪ್ ಪೊಲಿಟೀಕಲ್ ಆಬ್ಲಿಗೇಷ್ ನ್ (೧೮೮೩)ಗ್ರಿನನ ಸಮಗ್ರ ಬರಹಗಳನ್ನು ಆರ್. ಎಲ್ ನಟಲ್ ಷಿಪ್ ಎಂಬಾತ ೧೮೮೫-೮ ರ ಅವಧಿಯಲ್ಲಿ ಮೂರು ಸಂಪುಟಗಳಲ್ಲಿ ಸಂಪಾದಿಸಿದ್ದಾನೆ. ಇದರಲ್ಲಿ ಸಂಪಾದಕನೆ ವಸ್ತಾರವಾಗಿ ಬರೆದ ಗ್ರೀನನ ಜೀವನ ಚರಿತ್ರಯೂ ಇದೂ . ಗ್ರೀನ್ ರಾಬರ್ಟ್ ೧೫೫೮-೯೨ ಅತ್ಯುತ್ತಮ ಇಂಗ್ಲಷ್ ಬರೆಹಗಾರರಲ್ಲೊಬ್ಬ.ಜನನ ಬಹಶ ನಾರ್ವಿಚ್ ನಲ್ಲಿ. ಶಿಕ್ಷಣ ಕೆಂಬ್ರಿಜಿನ ಸೆಂಟ್ ಜಾನ್ಸ ಕಾಲೇಜಿನಲ್ಲಿ ೧೫೭೮ ರಲ್ಲಿ ಬಿ.ಎ ಪದವಿ ಪದೆದ.ಇಲ್ಲಿ ಥಾಮನ್ ನ್ಯಾಷನೊಂದಿಗೆ ಸ್ನೇಹ ಬಲಸಿದ.ಇವನಿಗೆ ಆಕ್ ಪರ್ಡ ವಿಶ್ವವಿದ್ಯಾನಿಲಯದ ಸದಸ್ಯತ್ವ ದೂರಕಿತು.ಊರೂರು ಅಲೆತ ಈತನ ಪ್ರವ್ರತ್ತಿ.ಆನೇಕ ಇರೊಪ್ಯ ದೆಶಗಳಲ್ಲಿ ಅಲೆದು ಕೊನೆಗೆ ಲಂಡನಿಗೆ ಬಂದು ನೆಲೆ ನಿಂತ.ಆ ಹೊತ್ತಿಗಾಹಗಲೆ ಮದುವೆಯಾಗಿ ಹೆಂದತಿ ಮತ್ತು ಮಗುವನು ತ್ಯಗಿಸಿದ್ದ. ವಿಶ್ವವಿದ್ಯಾಲಯದಲ್ಲಿದ್ದಾಗಲೇ ಬರಹಕ್ಕೆ ಕೈ ಹಾಕಿದ್ದ ಈತ ಮ್ಯಾಮಿಲಿಯ ಎಂಬ ಕೃತಿಯನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಿದ್ದ. ನಾಟಕಕಾರನಾಗಿ ಈತ ಇಂಗ್ಲಿಷ್ ನಾಟಕಗಳಿಗೆ ತಳಹದಿ ಹಾಕಿದನೆನ್ನಬಹುದು. ಗ್ರೀನ್ ರಚಿಸಿದ ನಾಟಕಗಳಲ್ಲಿ ಈಗ ದೊರೆತಿರುವುವು ಕೆಲವು ಮಾತ್ರ ಆಲ್ಫಾನ್ಸ್ಸ್ ಕಿಂಗ್ ಆಫ್ ಆರಗಾನ್ ಮತ್ತು ಆರ್ಲ್ಯಾಂಡೊ ಫ್ಯೂರಿಯೋಸ ನಾಟ್ಕಗಳ ಮೇಲೆ ಮಾರ್ಲೋನ ಪ್ರಭಾವ ಕಂಡುಬರುತ್ತದೆ. ಫ್ರೈಯರ್ ಬೇಕನ್ ಅಣ್ಡ್ ಫ್ರೈಯರ್ ಬಿಂಗೆ, ಜೇಮ್ಸ್ 14-ಇವು ರೊಮ್ಯಾಂಟಿಕ್ ಹರ್ಷನಾಟಕಗಳು. ಜೇಮ್ಸ್ ೧೪ ಚಾರಿತ್ರಿಕವಾಗಿರದೆ ಯಕ್ಷರಾಜ ಓಟೆರಾನ್ ಬಗ್ಗೆ ರಚಿತವಾದ ಕಾಲ್ಪನಿಕ ನಾಟಕ. ಇದರಲ್ಲಿ ಯಕ್ಷಿಣಿಯ ಪ್ರಯೋಗ ತಂದದ್ದು ಈತನ ವೈಶಿಷ್ಯ್. ಗ್ರೀನ್ ಬರೆದವುಗಳಲ್ಲಿ ಗಮನಿಸಬೇಕಾದ ಸಾಹಿತ್ಯಕೃತಿಗಳೆಂದರೆ ಕಿರುಪುಸ್ತಕಗಳು. ಇವು ಕಾದಂಬರಿಗೆ ತುಂಬ ಹತ್ತಿರವಾದವು. ಇವುಗಳಲ್ಲಿ ಎಲಿಜಬೀತನ್ ಕಾಲದ ಕೆಳಮಟ್ಟದ ಲಂಡನ್ ಜನಜೀವನದ ಬಗ್ಗೆ ಬರೆದ್ದದ್ದೇ ಹೆಚ್ಚು. ಗೈಡೋನಿಯನ್, ಕಾರ್ಡ್ ಆಫ್ ಫ್ಯಾನ್ಸಿ (೧೫೮೫), ಫ್ಯಾಂಡೋಸ್ಟೊ (೧೫೮೮), ಪೆರಿಮೆಡಿಸ್ (೧೫೮೮), ಮೆನಾಫಾನ್ (೧೫೮೯), ಮೌರ್ನಿಂಗ್ ಗಾರ್ಮೆಟ್ (೧೫೯೦), ನೆವರ್ ಟೂ ಲೇಟ್ (೧೫೯೦), ಫೇರ್ವೆಲ್ ಟು ಫಾಲಿ (೧೫೯೧), ಎ ಕ್ವಿಪ್ ಫಾರ್ ಎನ್ ಅಪ್ಸ್ಟಾರ್ಟ್ ಕೋರ್ಟಿಯರ್ (೧೫೯೨), ಫಿಲೊಮೆಲಾ (೧೫೯೨)- ಇವು ಈತನ ಕೆಲವು ಪ್ರಸಿದ್ಧ ಕಿರುಪುಸ್ತಕಗಳು. ಅನೇಕವುಗಳಲ್ಲಿ ಸಮಾಜದ ವಿವಿಧ ವ್ಯಕ್ತಿಗಳನ್ನು ವಿಡಂಬಿಸಿದ್ದಾನೆ. ವಿಡಂಬನೆ, ಹಾಸ್ಯ ಈತನ ಕೃತಿಗಳಲ್ಲಿ ಪ್ರಧಾನವಾಗಿ ತೋರುವ ಗುಣಗಳು. ವಿಶ್ವವಿದ್ಯಾಲಯದಲ್ಲಿರುವಾಗಲೇ ಗ್ರೀನ್ ಕೆಳದರ್ಜೆಯ ಜನರೊಡನೆ ಬೆರೆಯಲು ಪ್ರಾರಂಭಿಸಿದ. ಅಲ್ಲಿಯ ಜೀವನದಲ್ಲಿಯೇ ಆಕರ್ಷಣೆ ಕಂಡು ಅಲ್ಲಿಯೇ ಮುಳುಗಿದ. ಜೇಬುಗಳ್ಳರ, ಕುಡುಕರ, ವೇಶ್ಯೆಯರ ಸಹವಾಸ ಆತನ ನಿತ್ಯದ ಬಾಳಾಯಿತು. ಈ ಸಹವಾಸದಿಂದಲೇ ಈ ಕೃತಿಗಳಲ್ಲಿಯ ಕೆಳಪಾತ್ರಗಳ ಚಿತ್ರಣದಲ್ಲಿ ಜೀವಂತಿಕೆ ಕಾಣುತ್ತದೆ. ಸಹವಾಸ ದೋಷದಿಂದ ಈತನಿಗೆ ಕುಡಿತದ ಚಟ ಅಂಟಿಕೊಂಡಿತು. ಜೀವನದ ಕೊನೆಗಾಲದಲ್ಲಿ ತನ್ನ ಹಿಂದಿನ ಜೀವನದ ಬಗ್ಗೆ ವಿಷಾದಪಟ್ಟು ಅನೇಕ ಲೇಖನಗಳನ್ನು ಬರೆದ. ಮರಣಶಯ್ಯೆಯಲ್ಲಿದ್ದಾಗ ಈತ ಕಡುಬಡವ. ಊಟಕ್ಕೂ ಗತಿ ಇಲ್ಲದವ. ಸಾಯುವ ಮೊದಲು ಹೆಂಡತಿಗೆ ತನ್ನ ತಪ್ಪುಗಳನ್ನು ಕ್ಷಮಿಸುವಂತೆ ಬರೆದು ತೀರಿಕೊಂಡ. ಇವನ ಸಂಸಾರಕ್ಕೆ ಇದ್ದವರು ಇಬ್ಬರೇ. ಈತನ ಚಮ್ಮಾರ ಗೆಳೆಯ ಮತ್ತು ಗೆಳೆಯನ ಹೆಂಡತಿ. ಹೀಗೆ ಇಂಗ್ಲಿಷಿನ ಆದ್ಯ ವೃತ್ತಿಬರೆಹಗಾರರಲ್ಲೊಬ್ಬನಾದ ಗ್ರೀನ್ ರಿಕ್ತಹಸ್ತನಾಗಿ ಅಸುನೀಗಿದ. ಗ್ರೀನ್, ಹೆನ್ರಿ ಗ್ರಹಾಮ್: ೧೯೦೪-೯೧. ನವ್ಯಕಾವ್ಯ ತಂತ್ರವನ್ನು ಯಶಸ್ವಿಯಾಗಿ ಬಳಸಿಕೊಂಡು, ಧರ್ಮ ಅಧರ್ಮಗಳ ಜಂಜಾಟಕ್ಕೆ ಸಿಕ್ಕಿ ತೊಳಲುವ ಮಾನವನ ಸ್ಥಿತಿ ಮತ್ತು ದೇವಮಾನವರ ಸಂಬಂಧವನ್ನು ಅದ್ಭುತವಾಗಿ ಚಿತ್ರಿಸಿರುವ ಇಂಗ್ಲಿಷ್ ಕಾದಂಬರಿಕಾರ. ಹಾರ್ಟ್ ಫರ್ಡ್ಷೈರಿನ ಬರ್ಕ್ ಹ್ಯಾಮ್ ಸ್ಟೆಡ್ನಲ್ಲಿ ಹುಟ್ಟಿದ ಈತ ಅದೇ ಹಳ್ಳಿಯ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಅಕ್ಸಫರ್ಡ್ ವಿಶ್ವವಿದ್ಯಾಲಯದ ಬ್ಯಾಲಿಯಲ್ ಕಾಲೇಜಿನಲ್ಲಿ ಉನ್ನತ ವ್ಯಾಸಂಗವನ್ನು ಪಡೆದ. ೧೯೨೬ರಲ್ಲಿ ಸ್ವಪ್ರೇರಣೆಯಿಂದ ರೋಮನ್ ಕೆಥೊಲಿಕ್ ಪಂಗಡವನ್ನು ಸೇರಿದ. ಈ ಮತಾಂತರ ಈತನ ಜೀವನದಲ್ಲಿ ಎಷ್ಟು ಮಹತ್ತ್ವಪೂರ್ಣವೋ ಸಾಹಿತ್ಯ ಸೃಷ್ಟಿಯಲ್ಲೂ ಅಷ್ಟೇ ಮಹತ್ತ್ವಪೂರ್ಣವಾಗಿದೆ. ಅದು ಈತನ ಜೀವನದಲ್ಲಿ ಸ್ಥಿರತೆ ದೊರಕಿಸಿಕೊಟ್ಟುದ್ದಲ್ಲದೆ ಹಲವು ಕಾದಂಬರಿಗಳಿಗೆ ಸ್ಪೂರ್ತಿ ನೀಡಿತು. ವಿಮರ್ಶಕರು ಈತನ ಕಾದಂಬರಿಗಳನ್ನು ಎರಡು ಗುಂಪುಗಳಾಗಿ ವರ್ಗೀಕರಿಸುತ್ತಾರೆ. ಮೊದಲನೆಯ ಗುಂಪಿನಲ್ಲಿ ಕೇವಲ ಮನೋರಂಜನೆಗಾಗಿ ರಚಿಸಿದ ಕಾದಂಬರಿಗಳು ಬರುತ್ತವೆ. ಉದಾ: ಸ್ಟಾಮ್ ಬೌಲ್ ಟ್ರೇನ್ (೧೯೩೨), ಎ ಗನ್ ಫಾರ್ ಸೇಲ್(೧೯೩೬), ಇಟ್ಸ್ ಎ ಬ್ಯಾಟಲ್ ಫೀಲ್ಡ್(೧೯೩೪) ಇತ್ಯಾದಿ. ಎರಡನೆಯ ಗುಂಪಿನಲ್ಲಿ ಗಂಭೀರವಾದ, ವೈಶಿಷ್ಟ್ಯಪೂರ್ಣವಾದ ಕಾದಂಬರಿಗಳು ಬರುತ್ತವೆ. ಉದಾ: ದಿ ಪವರ್ ಅಂಡ್ ದಿ ಗ್ಲೋರಿ (೧೯೪೦), ದಿ ಹಾರ್ಟ್ ಆಫ್ ದಿ ಮ್ಯಾಟರ್ ೧೯೪೮), ದಿ ಎಂಡ್ ಆಫ್ ದಿ ಅಫೇರ್ (೧೯೫೧) ಇತ್ಯಾದಿ. ದಿ ಪವರ್ ಅಂಡ್ ಎಇ ಗ್ಲೋರಿಗೆ ಹಾತಾರನ್ ಡನ್ ಬಹುಮಾನ ಬಂದಿದೆ. ಈತನ ರಚನಾತಂತ್ರ , ಪ್ರತಿಭೆ ಮತ್ತು ವಿಶಿಷ್ಡಶಕ್ತಿಯನ್ನು ಎರಡೆನೆಯ ಗುಂಪಿನ ಕಾದಂಬರಿಗಳಲ್ಲಿ ಕಾಣಬಹುದು.ದಿ ಮ್ಯಾನ್ ವಿದಿನ್,ದಿ ನೇಮ್ ಆಫ್ ಆಕ್ಷನ್,ದಿ ರೂಮರ್ ಆಟ್ ನೈಟ್ ಫಾಲ್ ಇವು ಮೊದಲ ಮೂರು ಕಾದಂಬರಿಗಳು. ಇವುಗಳಲ್ಲಿ ಇಂಗ್ಲೆಂಡಿನ ಪ್ರಸಿದ್ಧ ಕಾದಂಬರಿಕಾರರಾದ ರಾಬರ್ಟ ಪ್ರಭಾವವನ್ನು ಕಾಣಬಹುದು. ಪ್ರಕಟವಾದ ಇಂಗ್ಲೆಂಡ್ ಮೇಡ್ ಮಿ ಎಂಬ ಕೃತಿಯಲ್ಲಿ ಈತನದೇ ಆದ ವೈಯುಕ್ಕಿಕ ಶೈಲಿ ರೂಪುಗೊಂಡಿದೆ.