ಪುಟ:Mysore-University-Encyclopaedia-Vol-6-Part-17.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರೀಕ್ ಭಾಷೆ

ಉತ್ತರಾಧಿಕಾರಕ್ಕೆ ಸಂಬಂಧವಿರುವ ಉಷಬಂಧಗಳು ಐದನೆಯ ಭಾಗದಲ್ಲಿವೆ.ಇಚ್ಚಾಪತ್ರಮೂಲವಾದ ಉತ್ತರಾಧಿಕಾರ,ಇಚ್ಚಾಪತ್ರಹೀನ ಉತ್ತರಾಧಿಕಾರ,ಬಲವಂತದ ಉತ್ತರಾಧಿಕಾರ-ಹೀಗೆ ಮೂರು ರೀತಿ ಉತ್ತರಾಧಿಕಾರ ನಿಯಮಗಳಿವೆ.

ವಾಣಿಜ್ಯಕ್ಕೆ ಸಂಬಂಧಿಸಿದ 1804ರ ಫ್ರೆಂಚ್ ಮಾದರಿಯ ವಾಣಿಜ್ಯ ಸಂಹಿತೆ 1821ರ ವರೆಗೆ ಆಚರಣೆಯಲ್ಲಿತ್ತು. 1878ರ ವರೆಗೆ ಹೆಚ್ಚು ಬದಲಾವಣೆಗಳು ಆಗಲ್ಲಿಲ. 1878ರಲ್ಲಿ ದಿವಾಳಿತನಕ್ಕೆ ಸಂಬಂಧಿಸಿದ ಕಾನೂನು ಬದಲಾಯಿತು. ಹಾಗೆಯೇ 1958ರಲ್ಲಿ ಹೊಸ ಸಾಮುದ್ರವಿಧಿಗಳು ಆಚರಣೆಯಲ್ಲಿ ಬಂದವು. ಇವಲ್ಲದೆ ಅನೇಕ ಆಧುನಿಕ ಕಾನೂನುಗಳು ಜಾರಿಗೆ ಬಂದಿವೆ. ವಿಮಾ ಉದ್ಯಮವನ್ನು ನಿಗಮಗಳು ಮಾತ್ರ ನೆಡೆಯಿಸಬಹುದು.ಈ ವ್ಯವಹಾರ ಸರ್ಕಾರದ ನಿಯಂತ್ರಣಕ್ಕೊಳಪಟ್ಟಿರುತ್ತದೆ.

1834ರ ದಿವಾಣಿ ಸಂಹಿತೆಗೆ ಅನೇಕ ಬಾರಿ ತಿದ್ದುಪಡಿ ಮಾಡಲಾಗಿದೆ. ಎಲ್ಲ ದಿವಾಣೆ ವಿವಾದಗಳಲ್ಲಿ ಮೌಖಿಕ ವಾದ ಮತ್ತು ಪ್ರತಿವಾದಗಳಿಗೆ ಅವಕಾಶ ಉಂಟು.ಮ್ಯಾಜಿಸ್ಟ್ರೇಟರ ನ್ಯಾಯಾಲಯದ, ಮೂಲಾಧಾರವಿರುವ ನ್ಯಾಯಾಧೀಶರ ನ್ಯಾಯಾಲಯದ, ಅಪೀಲು ನ್ಯಾಯಾಲಯಗಳು, ಆರಿಜಪೆಗಸ್ ಎಂಬ ಶ್ರೇಷ್ಠ ನ್ಯಾಯಾಲಯದ ವ್ಯವಸ್ಥೆಯಿದೆ. 1968ರಲ್ಲಿ ಹೊಸ ದಿವಾಣಿ ಸಂಹಿತೆ ಆಚರಣೆಗೆ ಬಂತು.ನ್ಯಾಯಾಲಯದ ಸುಧಾರಣೆ ಮತ್ತು ಪ್ರಕ್ರಿಯೆಯ ಸುಧಾರಣೆ ಈ ಹೊಸ ಸಂಹಿತೆಯ ಉದ್ದೇಶ.

ದಂಡಸಂಹಿತೆ ಮತ್ತು 1834ರ ದಂಡ ಪ್ರಕ್ರಿಯಾಸಂಹಿತೆಗಳಿಗೆ ಬದಲಾಗಿ 1951ರಲ್ಲಿ ಹೊಸ ಸಂಹಿತೆಗಳು ಜಾರಿಗೆ ಬಂದವು. ಹಿಂದಿನ ಅನುಭವ ಇದರಲ್ಲಿ ವ್ಯಕ್ತವಾಗಿದೆ. ಕಾನೂನುಬಾಹಿರವಾಗಿ ಯಾವ ದಂಡವನ್ನೂ ವಿಧಿಸಲಾಗುವುದಿಲ್ಲ ಎಂಬ ತತ್ತ್ವವನ್ನು ದಂಡಸಂಹಿತೆಯಲ್ಲಿ ಅಳವಡಿಸಲಾಗಿದೆ. ಅಪರಾಧಗಳ ವರ್ಗೀಕರಣ ಮುಂತಾದ ವಿಷಯಗಳನ್ನು ಪ್ರತಿಪಾದಿಸಲಾಗಿದೆ. ಅಪರಾಧಗಳನ್ನು ಮತ್ತು ದಿವಾಣಿ ವಿವಾದಗಳನ್ನು ಒಬ್ಬನೇ ನ್ಯಾಯಾಧೀಶ ಬಗೆಹರಿಸಬಹುದು. ಘೋರ ಅಪರಾಧಗಳನ್ನು ತಡೆಯಲು ಜಾಹೀರುಮಾಡುವ ವಿಧಾನವನ್ನು ದಂಡಪ್ರಕ್ರಿಯಾ ಸಂಹಿತೆಯಲ್ಲಿ ಅಳವಡಿಸಲಾಗಿದೆ. ಬಾಲಾಪರಾಧ, ಮನೋರೋಗಿಗಳ ಅಪರಾಧಗಳು ಮುಂತಾದ ವಿಷಯಗಳು ಇದರಲ್ಲಿವೆ.

1909ರ ಶಂತಿಯುತ ಕ್ರಾಂತಿ, ಸಾಮಾಜಿಕ ಕಾನೂನುಗಳ ದೃಷ್ಟಿಯಿಂದ ಒಂದು ಹೊಸ ಯುಗಕ್ಕೆ ನಾಂದಿಯಾಯಿತು. ಕಾರ್ಮಿಕರ ಹಿತರಕ್ಷಣೆಯ ದಿಶೆಯಲ್ಲಿ ಅನೇಕ ಕಾನೂನುಗಳು ಜಾರಿಗೆ ಬಂದಿವೆ. ಕೆಲಸದ ಸ್ಥಳ, ವಾರ್ಷಿಕ ಬಿಡುವು, ಕೂಲಿ ಇವುಗಳ ಸಂಬಂಧದಲ್ಲಿ ಸುಧಾಹರಣೆಗಳು ಆಗಿವೆ. 1920ರಿಂದ ಈಚೆಗೆ ಮತ್ತಷ್ಟು ಸುಧಾರಣೆಗಳು ಆಗಿವೆ. ಕೆಲಸದಿಂದ ತೆಗೆದುಹಾಕುವುದು, ಪರಿಹಾರ ನೀಡಿಕೆ, ಕಾರ್ಮಿಕ ಮಧ್ಯಸ್ಥ ನಿರ್ಣಯ ಹಾಗೂ ಸಾಮಾಜಿಕ ಭದ್ರತೆ, ಕಾರ್ಮಿಕರ ಪರಿಹಾರ-ಹೀಗೆ ಅನೇಕ ವಿಷಯಗಳ ಬಗ್ಗೆ ಕಾನೂನುಗಳು ಇವೆ.

ದಿವಾಣಿಸಂಹಿತೆಯಲ್ಲಿ ಅಂತಾರಾಷ್ಟ್ರೀಯ ವೈಯಕ್ತಿಕ ನ್ಯಾಯಕ್ಕೆ ಸಂಬಂಧಿಸಿದ ಉಪಬಂಧಗಳಿವೆ. ಯಾವೊಂದೂ ವಿವಾದಕ್ಕೆ ಗ್ರೀಕ್ ಕಾನೂನುಗಳು ಅನ್ವಯವಾಗಬೇಕೆ ಎಂಬುದಕ್ಕೆ ಆಯಾ ದೇಶಗಳೊಂದಿಗೆ ಗ್ರೀಕ್ ದೇಶ ಮಾಡಿಕೊಂಡಿರುವ ಒಪ್ಪಂದ ಆಧಾರವಾಗಿರುತ್ತದೆ. ಹೆಚ್ಚಾಗಿ ಒಂದೇ ದೇಶದ ಕಾನೂನುಗಳು ಅನ್ವಯವಾಗುವುದಕ್ಕೆ ಅವಕಾಶವಿದೆ. ಗ್ರೀಕ್ ದೇಶವಾಸಿ ಮತ್ತು ಪ್ರಜೆ ಎಂಬ ಆಧಾರದ ಮೇಲೆ ಅಂತಾರಾಷ್ಟೀಯ ವೈಯಕ್ತಿಕ ನ್ಯಾಯವನ್ನು ಅನ್ವಯಿಸಲಾಗುತ್ತದೆ. ರಾಜ್ಯರಹಿತರಾಗಿದ್ದವರಿಗೆ ವಾಸದ ನಿಮಿತ್ತ ಕೆಲವು ಹಕ್ಕುಬಾಧ್ಯತೆಗಳು ದೊರಕುತ್ತವೆ. 1955ರಲ್ಲಿ ಹೊಸ ಗ್ರೀಕ್ ಪ್ರಜೆತನದ ಸಂಹಿತೆ ಆಚರಣೆಯಲ್ಲಿ ಬಂತು. ಅದರಲ್ಲಿ ಪ್ರಜೆತನವನ್ನು ಹೇಗೆ ಪಡೆಯಬಹುದು ಮತ್ತು ಕಳೆದುಕೊಳ್ಳಬಹುದು ಎಂಬುದನ್ನು ಹೇಳಲಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ಗ್ರೀಕ್ ಸ್ತ್ರೀಪ್ರಜೆ ಬೇರೆ ರಾಷ್ಟ್ರದ ಪ್ರಜೆಯೊಂದಿಗೆ ವಿವಾಹವಾದರೂ ತನ್ನ ಗ್ರೀಕ್ ಪ್ರಜೆತನವನ್ನು ಉಳಸಿಕೊಳ್ಳಬಹುದು. ವಿದೇಶೀಯರಿಗೂ ಶಾಸನ ದೃಷ್ಟಿಯಲ್ಲಿ ಸಮಾನತೆಯ ಹಕ್ಕು ಕೊಡಲಾಗಿದೆ. ಕಾನೂನು ಮತ್ತು ವೈದ್ಯವೃತ್ತಿಗಳನ್ನು ಗ್ರೀಕ್ ಪ್ರಜೆಗಳಿಗೆ ಮಾತ್ರ ಕಾಯ್ದಿರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಸಾರ್ವತ್ರಿಕ ನ್ಯಾಯದ ಸಾಮಾನ್ಯ ನಿಯಮಗಳನ್ನು ದೇಶದ ಇತರ ಕಾನೂನುಗಳಂತೆ ಪರಿಗಣಿಸಲಾಗುತ್ತದೆ. ವಿದೇಶಗಳೊಂದಿಗೆ ಮಾಡಿಕೂಂಡ ಮತ್ತು ಅಂತಾರಾಷ್ಟೀಯ ಒಡಂಬಡಿಕೆಗಳು ಕಾನೂನು ರೂಪದಲ್ಲಿ ಆಚರಣೆಗೆ ಬರಬೇಕಾದರೆ ಸಂಸತ್ತಿನಿಂದ ಆ ಬಗ್ಗೆ ಶಾಸನವಾಗಬೇಕಾಗಿದೆ.

ಗ್ರೀಸ್ ಅನೇಕ ಸಂಸ್ಥೆಗಳಲ್ಲಿ ಸದಸ್ಯತ್ವ ಪಡೆದಿದೆ. ವಿದೇಶಗಳೊಂದಿಗೆ ಸಾರಿಗೆ ಸಂಪರ್ಕಗಳನ್ನು ಹೊಂದಿರುವುದರ ಜೊತೆಗೆ ಅನೇಕ ದೇಶಗಳೊಂದಿಗೆ ಪರಸ್ಪರವಾಗಿ ವಾಣಿಜ್ಯ ಮುಂತಾದ ಒಪ್ಪಂದಗಳನ್ನು ಮಾಡಿಕೊಂಡಿದೆ. ಪರರಾಷ್ಟ್ರಗಳೊಂದಿಗೆ ರಾಜಕೀಯ ಸಂಬಂಧಗಳನ್ನು ಇಟ್ಟುಕೊಂಡಿದೆ. ಹೀಗೆ ಆಧುನಿಕ ಅಂತಾರಾಷ್ಟ್ರೀಯ ನ್ಯಾಯ ಗ್ರೀಕ್ ನ್ಯಾಯದ ಮೇಲೆ ಪ್ರಭಾವ ಬೀರುತ್ತಿದೆ. ಇದೇ ರೀತಿ ಗ್ರೀಕ್ ನ್ಯಾಯದ ಇತಿಹಾಸ ಅಂತಾರಾಷ್ಟ್ರೀಯ ನ್ಯಾಯದ ಮೇಲೆ ಪ್ರಭಾವ ಬೀರಿದೆ. ಪ್ರಜಾತಂತ್ರ ಸ್ವರೂಪದ ಸರ್ಕಾರ, ಮಧ್ಯಸ್ತಿಕೆಯ ಮೂಲಕ ವಿವಾದಗಳನ್ನು ಇತ್ಯರ್ಥಗೊಳಿಸುವ ವಿಧಾನ ಮುಂತಾದ ಕೊಡುಗೆಗಳ ಮೂಲಕ ತನ್ನ ವಿಶಿಷ್ಟತೆಯನ್ನು ಎತ್ತಿ ತೋರಿಸುತ್ತದೆ. (ಎಲ್.ಎಸ್.ಜೆ.)

ಗ್ರೀಕ್ ಭಾಷೆ:ಇಂಡೊ-ಯುರೋಪಿಯನ್ ಪರಿವಾರದಲ್ಲಿ ಗಣನೆ ಮಾಡಲ್ಪಟ್ಟಿರುವ ಭಾಷೆಗಳಲ್ಲಿ ಬಹು ಮುಖ್ಯವಾದುದೊಂದು ಭಾಷೆ. ಈ ಪದ ಪ್ರಾಚೀನ ಕಾಲದ ಮತ್ತು ಇಂದಿನ ಗ್ರೀಸ್ ದೇಶದ ಉಪಭಾಷೆಗಳಿಗೆಲ್ಲ ಸಮಾನ ರೀತಿಯಲ್ಲಿ ಅನ್ವಯವಾಗುತ್ತದೆ. ಏಷ್ಯ ಮೈನರಿನ ಪಶ್ಚಮ ದಂಡೆಯಲ್ಲಿದ್ದು ಬಾಲ್ಕನ ದ್ವೀಪ, ದಕ್ಷಿಣ ಇಟಲಿ ಮತ್ತು ಸಿಸಿಲಿಗಳಲ್ಲಿ, ಅಯೋನಿಯನ್ ಮತ್ತು ಈಜಿಯನ್ ಸಮುದ್ರಗಳ ದ್ವೀಪದಲ್ಲಿ ಗ್ರೀಕ್ ಭಾಷೆಯ ಒಂದಿಲ್ಲೊಂದು ರೂಪ ವ್ಯವಹಾರದಲ್ಲಿತ್ತು. ಗ್ರೀಕಿನ ಮುಖ್ಯ ಭಾಷೆಗಳೆಂದರೆ ಅಯೋನೆಕ್, ಇಯಾಲಿಕ್, ಆರ್ಕೇಡಿಯನ್,ಸಿಪ್ರಿಯನ್ ಮತ್ತು ಡೋರಿಕ್.ಆಟಿಕ್ ಎಂಬ ಗ್ರೀಕ್ ರೂಪ ಅಯೋನಿಕ್ನಲ್ಲಿ ಸೇರಿದೆ.

ಪ್ರ.ಶ.ಪೂ 6 ಮತ್ತು 5 ನೆಯ ಶತಮಾನಗಳಲ್ಲಿ ಈ ಉಪಭಾಷೆಗಳು ವ್ಯವಹಾರದಲ್ಲಿದ್ದ ಪ್ರದೇಶಗಳು ಹೀಗಿವೆ. ಏಷ್ಯ ಮೈನರಿನ ಮಧ್ಯಭಾಗ, ಈಜಿಯನ್ ಸಮುದ್ರ ದ್ವೀಪಗಳು ಯುಬೋಅ ಮತ್ತು ಬೊಯೇಷಿಯಗಳಲ್ಲಿ ಇಯಾಲಿಕ್ ಉಪಭಾಷೆಯೂ ಆಟಿಕ ದ್ವೀಪದಲ್ಲಿ ಆಟಿಕ್ ರೂಪವೂ ಉತ್ತರದಲ್ಲಿ, ಮುಖ್ಯವಾಗಿ ಲೆಸ್ ಬಾಸ್, ತೆಸ್ಸಲಿ ಮತ್ತು ಬೊಯೇಷಿಯಗಳಲ್ಲಿ ಇಯಾಲಿಕ್ ಉಪಭಾಷೆಯೂ, ಆರ್ಕೇಡಿಯನ್ ಭಾಷೆಯೂ ಪ್ರಚಾರದಲ್ಲಿದ್ದವು. ಪ್ರ.ಶ.ಪೂ. ನಾಲ್ಕನೆಯ ಶತಮಾನದ ವೇಳೆಗೆ ಸಾಹಿತ್ಯದ ಹಿರಿಮೆಯಿಂದಾಗಿ ಮತ್ತು ರಾಜಿಕೀಯವಾಗಿ ಅಥೆನ್ಸಿನ ಪ್ರಾಧಾನ್ಯದಿಂದಾಗಿ ಆಟಿಕ್ ಉಪಭಾಷೆ ರಾಷ್ಟ್ರ ಭಾಷೆಯ ಸ್ಥಾನವನ್ನು ಗಳಿಸಿಕೊಂಡಿತು.

ಗ್ರೀಕ್ ಭಾಷೆಯ ಅತಿ ಪ್ರಾಚೀನ ಲಿಖಿತ ರೂಪವನ್ನು ಪ್ರ.ಶ.ಪೂ. ಎಂಟನೆಯ ಶತಮಾನದ ಶಾಸನಗಳಲ್ಲಿ ಕಾಣಬಹುದು. ಪ್ರ.ಶ. ನಾಲ್ಕನೆಯ ಶತಮಾನಕ್ಕೆ ಸೇರಿದೆ,ಚರ್ಮದ ಮೇಲೆ (ವೆಲಮ್) ಬರೆಯಲ್ಟಟ್ಟಿರುವ ಬೈಬಲ್ ಗ್ರಂಥವೇ ಗ್ರೀಕ್ ಭಾಷೆಯ ಪ್ರಾಚೀನ ಹಸ್ತಲಿಖಿತ ಪುಸ್ತಕ.

ಗ್ರೀಕಿನ ಕೆಲವು ಮುಖ್ಯ ಲಕ್ಷಣಗಳಿವು. ಇಂಡೊ-ಯುರೋಪಿಯನ್ ಮೂಲಭಾಷೆಯ ಸ್ವರವರ್ಣಗಳು ಸಂಸ್ಕೃತದಲ್ಲಿನಂತೆ ಬದಲಾವಣೆ ಹೊಂದದೆ ಇರುವುದು ಕಂಡುಬರುತ್ತದೆ. ಸಂಸ್ಕೃತದಲ್ಲಿ ಉಳಿದಿರುವ ಮೂಲಭಾಷೆಯ ವರ್ಣವೊಂದಾದ ಋ ಗ್ರೀಕ್ ಭಾಷೆಯಲ್ಲಿ ಆರ್ ಮತ್ತು ರ ರೂಪದಲ್ಲಿ ಕಾಣಬರುತ್ತದೆ (ಸಂಸ್ಕೃತದ ಪಿತೃಷು ಗ್ರೀಕ್ ಭಾಷೆಯ ಪತ್ರಸಿ). ರ ಕಾರದಿಂದ ಮೊದಲಾಗುವ ಪದಗಳಲ್ಲಿ ಪ್ರಾರಂಭದಲ್ಲಿದ್ದ ಮೂಲಭಾಷೆಯ ಧ್ವನಿಯೊಂದು ಸಂಸ್ಕೃತದಲ್ಲಿ ನಷ್ಟವಾಗಿದೆಯಾದರೆ ಗ್ರೀಕಿನಲ್ಲಿ ಅದು ಉಳಿದುಬಂದಿದೆ. ಸಂಸ್ಕೃತದ ರುಧಿರ ಗ್ರೀಕಿನಲ್ಲಿ ಎರುಥ್ರೋಸ್. ಸ್ವರಗಳೆರಡರ ನಡುವಣ ಸ ಮತ್ತು ಯ ಗ್ರೀಕಿನಲ್ಲಿ ಲೋಪ ಹೊಂದಿದೆ (ಸಂಸ್ಕೃತದ ತ್ರಸತಿ-ನಡುತ್ತಾನೆ=ಗ್ರೀಕಿನ ತ್ರೆ ಓ; ಸಂಸ್ಕೃತದ ತ್ರಯಸ್-ಮೂರು= ಗ್ರೀಕನ ತ್ರೆ ಅಸ್). ಪದ್ಯಾಂತ್ಯದಲ್ಲಿಯ ಮ ಗ್ರೀಕಿನಲ್ಲಿ ನ ಆಗಿದೆ (ಯುಗಂ-ನೂಗ=ಜುಗೊನ್).ದ್ವಿತ್ವ ದಂತ್ಯ ವರ್ಣಗಳಲ್ಲಿ ಮೊದಲ ವರ್ಣ ಸ ಆಗಿ ಮಾರ್ಪಟ್ಟಿದೆ (ವೇತ್ಥ-ತಿಳಿ=ಒಯ್ ಸ್ಥ). ಪದಾದಿಯ ಯ ಮತ್ತು ಸ ಗಳು ಹ ರೂಪವನ್ನು ತಾಳಿವೆ (ಸಾ-ಅವಳು=ಹೇ;ಯಸ್-ಯಾರು=ಹೊಸ್). ಮೇಲಿನ ಉದಾಹರಣೆಯಲ್ಲಿ ಕಂಡುಬಂದಂತೆ ಕೆಲವೊಮ್ಮೆ ಯ ಜ ಆಗಿ ಮಾರ್ಪಡುತ್ತದೆ. ಸ್ವರಗಳೆರಡರ ಮಧ್ಯದ ವಕಾರ ಗ್ರೀಕಿನಲ್ಲಿ ನಷ್ಟವಾಗಿದೆ. ಈ ಮಾರ್ಪಾಟಿನಿಂದ ಆ ಎರಡು ಸ್ವರಗಳು ಸಂಧಿಯ ಪರಿಣಾಮದಿಂದಾಗಿ ಒಂದು ಸ್ವರವಾಗುತ್ತದವೆ. ಸ ಪೂರ್ವದ ಅನುನಾಸಿಕ ಲೋಪಗೊಂಡು ಅದರ ಪೂರ್ವಸ್ವರ ದೀರ್ಘವಾಗಿದೆ (ತಾನ್=ತಾಸ್=ತಾನ್ ಸ್).

ಮಹಾಪ್ರಾಣ ಘೋಷ ವ್ಯಂಜನಗಳು ಗ್ರೀಕಿನಲ್ಲಿ ಅಘೋಷ ವ್ಯಂಜನಗಳು ರೂಪದಲ್ಲಿ ಉಪಲಬ್ಧವಾಗಿವೆ (ಧೂಮ-ಹೊಗೆ=ಥೂಮೊಸ್). ಮೂಲಭಾಷೆಯ ಕಂಠ್ಯವರ್ಣ ಗ್ರೀಕಿನಲ್ಲಿ ಪರ ಸ್ವರವನ್ನನುಸರಿಸಿ ಬದಲಾವಣೆ ಹೊಂದಿದೆ. ಪರ ಸ್ವರ ಆ ಅಥವಾ ಒ ಆಗಿದ್ದರೆ ಓಷ್ಠ್ಯ ವ್ಯಂಜನವಾಗಿಯೂ ಎ ಮತ್ತು ಇ ಆಗಿದ್ದಾಗ ದಂತವರ್ಣವಾಗಿಯೂ ಇತರ ಕಡೆಗಳಲ್ಲಿ ಕಂಠ್ಯವಾಗಿಯೂ ಕಂಡುಬರುತ್ತದೆ.

ಸಂಸ್ಕೃತದಲ್ಲಿರುವಂತೆಯೇ ಗ್ರೀಕ್ ಭಾಷೆಯಲ್ಲೂ ನಾಮಾಪದಗಳಲ್ಲಿ ಮೂರು ಬಗೆಯ ಲಿಂಗಗಳೂ (ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ), ಮೂರು ಬಗೆಯ ವಚನಗಳೂ (ಏಕ, ದ್ವಿ ಮತ್ತು ಬಹುವಚನಳು) ಇವೆ. ಹಾಗೆಯೇ ಐದು ವಿಭಕ್ತಿ ರೂಪಗಳಿವೆ. ಸಂಸ್ಕೃತದ ಪಂಚಮೀ ರೂಪಕ್ಕೆ ಇಲ್ಲಿ ಷಷ್ಠೀ ರೂಪವನ್ನೇ ಬಳಸಿದೆ. ಸಂಸ್ಕೃತದ ತೃತೀಯ, ಸಪ್ತಮೀ ಮತ್ತು ಚತುರ್ಥಿಯಲ್ಲಿಯ ರೂಪಗಳಿಗೆ ಸರಿಸಮಾನವಾದ ರೂಪ ಗ್ರೀಕಿನಲ್ಲಿ ಕೇವಲ ಚತುರ್ಥಿರೂಪ.