ಪುಟ:Mysore-University-Encyclopaedia-Vol-6-Part-17.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಲಿಯಡ್ , ಒಡಿಸ್ಸಿ ಕಾವ್ಯಗಳು ಇಂದಿನ ರೂಪ, ಪ್ರ.ಶ.ಪೂ. 8ನೆಯ ಶತಮಾನದ ಮಧ್ಯದಿಂದೀಚಿನದು. ಹಬ್ಬಹರಿದಿನಗಳ ಸಂದರ್ಭದಲ್ಲಿ ಕವಿ ಗಾಯಕರು (ಬಾರ್ಡ್ಸ) ಸಾಮುದಾಯಿಕ ಆಚರಣೆಯ ಭಾಗವಾಗಿ ಈ ಮಹಾಕಾವ್ಯಗಳನ್ನು ಜನಸಂದಣೆಯ ಎದುರಿಗೆ ಹಾಡುತ್ತಿದ್ದರು.ಈ ಸಭೆಗಳಿಗೆ ಏಷ್ಯ ಮೈನರ್ ಪ್ರದೇಶದ ಇತರ ನಗರ ರಾಜ್ಯಗಳಿಂದಲೂ ಜನ ಬಂದು ಸೇರುತ್ತಿದ್ದರು.ಕವಿ ಗಾಯಕರು ತಂಡ ತಂಡವಾಗಿ ಒಬ್ಬರಾದ ಮೇಲೆ ಇನ್ನೊಬ್ಬರಂತೆ, ಒಬ್ಬ ನಿಲ್ಲಿಸಿದ ನಿರೂಪಣ ಸನ್ನಿವೇಶವನ್ನು ಮುಂದಿನವ ಎತ್ತಿಕೊಂಡು ಮುಂದುವರಿಸಿ ಹಾಡುತ್ತಿದ್ದರು.