ಪುಟ:Mysore-University-Encyclopaedia-Vol-6-Part-18.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೯೦ ಗ್ರೋ‍‍‍‍‌‌‌ಷಿಯಸ, ಹ್ಯೊಗೊ-

ಲ೦ಡನ್ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಯೋಜನೆಯಲ್ಲಿ ಈತ ಅಸಕ್ತಿವಹಿಸಿದ್ದ. ೧೯೨೭ರಿ೦ದ ೧೮೩೦ರವರೆಹಗೆ ಅ ಸ೦ಸ್ಥೆಯ ಮಂಡಲಿಯ ಸದಸ್ಯನಾಗಿದ್ದ. ಜೆ.ಎಸ್.ಮಿರ್ಲ್ನೊಂದಿಗೆ ಈತನಿಗೆ ಭಿನ್ನಾಪ್ರಾಯ ಬಂದದ್ದರಿಂದ ಆ ಸದತ್ಯತ್ವಕ್ಕೆ ರಾಜೀನಾಮೆ ನೀಡಿದ. ೧೮೩೨ ರಿಂದ ೧೮೪೧ ರವರೆಗೆ ಈತ ಲಂಡನ್ ನಗರದಿಂದ ಪಾರ್ಲಿಮೆಂಟ್ ಸದಸ್ಯನಾಗಿದ್ದ. ೧೮೪೧ರಲ್ಲಿ ರಾಜಕೀಯದಿಂದ ನಿವ್ರತ್ತನಾದ. ಮತ್ತೆ ಇತಿಹಾಸ ರಚನೆಯಲ್ಲಿ ನಿರತನಾದ. ಗ್ರೀಕ್ ಇತಿಹಾಸದ ಹನ್ನೆದಡು ಸಂಪುಟಗಳು ೧೮೪೬ ರಿಂದ ೧೮೫೬ರವರೆಗೆ ಕಾಲದಲ್ಲಿ ಪ್ರಕಟವಾದುವು. ಪ್ರ.ಶ.ಪೂ. ೩೦೧ರ ವರೆಗಿನ ಇತಿಹಾಸವದು. ಈ ನಡುವೆ ಮತ್ತೆ ಈತ ವಿಶ್ವವಿದ್ಯಾಲಯದ ಕೋಶಾಧಿಕಾರಿಯೂ ೧೮೬೮ರಲ್ಲಿ ಅದರ ಆಧ್ಯಕ್ಶನೂ ಆದ. ಅಲ್ಲದೆ ೧೮೬೨ರಿಂದ ತನ್ನ ಜೀವನದ ಕೂನೆಯವರೆಗೂ ಕುಲಪತಿಯಾಗಿದ್ದ.ಈತನ ಮರಣಾನಂತರ ಇವನ ವ್ಯಯಕ್ತಿಕ ಗ್ರಂಥಾಲಯ ಆ ವಿಶ್ವವಿದ್ಯಾಲಯಕ್ಕೆ ಬಳುವಳಿಯಾಗಿ ಸೀರಿತು. ಮಾನಸಿಕ ತತ್ತ್ವಶಾಸ್ತ್ರದ ಅಧ್ಯಯನಕ್ಕಾಗಿ ಈತ ೬೦೦೦ ಪೌಂಡುಗಳ ದತ್ತಿ ಬಿಟ್ಟ ಈತ ರಾಯಲ್ ಸೊಸೈಟಿಯ ಸದಸ್ಯನಾಗಿದ್ದ. ಅಕ್ಸ್ಫ಼ರ್ಡ್ ವಿಶ್ವವಿದ್ಯಾಲಯ ಈತನಿಗೆ ಗೌರವ ಡಿ.ಸಿ.ಎಲ್. ಪದವಿಯನ್ನೂ ಕೇಂಬ್ರಿಜ್ ವಿಶ್ವವಿದ್ಯಾಲಯ ಎಲ್.ಎಲ್.ಡಿ. ಪದವಿಯನ್ನೂ ನೀಡಿ ಗೌರವಿಸಿದುವು.ಇವನಿಗೆ ಕೀರ್ತಿ ಬಂದದ್ದು ಗ್ರೀಸ್ ಇತಿಹಾಸ ಕುರಿತು ಗ್ರಂಥದಿಂದ ಮೂಲತಃ ರಾಜಕಾರಣಿಯೂ ವ್ಯವಹಾರಚತುರನೂ ಆದ ಈತ ಪ್ರಜಾಪ್ರಭುತ್ವವಾದಕ್ಕೆ ಗ್ರೀಸ್ ದೇಶದ ಚರಿತ್ರೆಯನ್ನು ನಿರೂಪಿಸಿದ್ದಾನೆ ಮಿಟ್ಫ಼ರ್ಡನ ಬರೆಹವನ್ನು ಖಂಡಿಸುವ ಸಲುವಾಗಿಯೇ ಎಂಬಂತೆ ಈ ಕಾರ್ಯವನ್ನು ಕೈಗೊಂಡ.ಗ್ರೀಸಿನ ಪೌರಾಣಿಕ ಕಥೆಗಳಿಂದ ಅರಂಭವಾಗಿ ಅಲೆಗ್ಸಾಂಡರನ ದಂಡಯಾತ್ರೆಯವರ್ರೆಗೂ, ಅಂದರೆ ಪ್ರ.ಶ.ಪೂ. ೪ನೆಯ ಶತಮಾನದನರೆಗೂ,ಗ್ರೀಸ್ ಇತಿಹಾಸವನ್ನು ಈತ ನಿರೂಪಿಸಿದ್ದಾನೆ. ಇದು ಇಂದು ಉತ್ಕ್ರ‍‍‍‍‍‍‍‍‍‍‍‍‍‍‍‍‍ಷ್ಟ ಇತಿಹಾಸಗ್ರಂಥವೆನಿಸದಿದ್ದರೂ ವಸ್ತು ಸಂಗ್ರಹಣೆ ಮುಂತಾದವುಗಳಲ್ಲಿ ಈತನ ನೈಪುಣ್ಯವನ್ನು ಇದರಲ್ಲಿ ಕಾಣಬಹುದು