ಪುಟ:Mysore-University-Encyclopaedia-Vol-6-Part-18.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರ್ಯಾಫೈಟ್ ಜಾತಿಜಾತಿಗೂ ಕೆಲವು ವೇಳೆ ಐಪ್ರಭೇದ ಪ್ರಭೇದಕ್ಕೂ ಬಟ್ಟಲು ಗಳು ಭಿನ್ನವಾಗಿರುತ್ತದೆ.ತುದಿಯ ಕಡೆಗೆ ಹೋದಂತೆಲ್ಲ ಹೆಚ್ಚಾಗುವುದು.ಬಟ್ಟಲುಗಳಿಗೆ ಕೊಳವೆ,ಕೋನ,ಪ್ರಿಸಮ್ ಆಕಾರಗಳು ಇರಬಹುದು. ಅವುಗಳಲ್ಲಿ ಪರಸ್ಪರ ಸಂಪರ್ಕ ಇರಬಹುದು ಇಲ್ಲವೆ ಇಲ್ಲದಿರಬಹುದು.ಸಿಕ್ಯುಲ ಒಂದು ತಟೊಳ್ಳಾದ ಕೋನಾಕಾರದ ಕೋಳವೆ.ಅದರಲ್ಲಿ ಎರಡು ಭಾಗಗಳಿವೆ.ತೆಳು ಹೊದಿಕೆಯ ಮೇಲ್ಭಾಗ;ಬೆಳೆವಣಿಗೆಯ ಗೀರುಗಳಿಂದ ಕೂಡಿದ ದಪ್ಪ ಹೊದಿಕೆಯ ತಳಭಾಗ,ತಳಭಾಗದ ಕೆಳತುದಿಯಲ್ಲಿ ಒಂದು ಮುಳ್ಳು ಉಂಟು.ಮೇಲ್ಭಾಗ ವಿರ್ಗುಲವಾಗಿ ಮುಂದುವರಿಯುತ್ತದೆ.ಸಿಕ್ಯುಲ ಊರುಗೋಲಾಗಿ ಉಪಯುಕ್ತವಾಗಿರುವುದೇ ಅಲ್ಲದೆ ಪ್ರಜನನ ಕಾರ್ಯವನ್ನೂ ನಿರ್ವಹಿಸುವುದು.

     ಪ್ರಜನನ ವಿಧಾನ:ಸಿಕ್ಯುಲದ ಮಗ್ಗುಲಲ್ಲಿ ಒಂದು ಕುಡಿ ಹೊರಡುತ್ತದೆ.ಇದು ಮೊದಲನೆಯ ಬಟ್ಟಲಾಗಿ ಪರಿಪರ್ತಿಸುತ್ತದೆ.ಬಳಿಕ ಈ ಬಟ್ಟಲು ಇಬ್ಭಾಗವಾಗಿ ಎರಡು ಬಟ್ಟಲುಗಳಾಗುತ್ತವೆ.ಇದೇ ರೀತಿ ಬಟ್ಟಲುಗಳು ಪುನಃ ಪುನಃ ಇಬ್ಭಾಗವಾಗಿ ಅವುಗಳ ಒಂದು ಸಾಲೇ ಆಗುತ್ತದೆ.ದ್ವಿಪಂಕ್ತಿ ಸಂಘಗಳಲ್ಲಿ ಕುಡಿಯ ಜೊತೆಗೆ ಕೊಳವೆಯೊಂದು ಹೊರಡುತ್ತದೆ.ಇದು ಬೇರೊಂದು ಮಗ್ಗುಲಿಗೆ ಹಾಯ್ದು ಅಲ್ಲಿ ಒಂದು ಬಟ್ಟಲಾಗಿ ಪರಿವರ್ತನೆಗೊಳ್ಳುತ್ತದೆ.ಇದು ಇಬ್ಭಾಗವಾಗಿ ಎರಡು ಬಟ್ಟಲುಗಳಾಗುತ್ತದೆ.ಮೇಲೆ ವಿವರಿಸಿದಂತೆ ಈ ಬಟ್ಟಲುಗಳೂ ಎರಡನೆಯ ಬಟ್ಟಲು ಸಾಲಾಗುತ್ತವೆ.ಜಲಜ ಶಿಲೆಗಳಲ್ಲಿ ಮೆಡೂಸಗಳ ಅವಶೇಷಗಳು ದೊರೆತಿಲ್ಲ.ಆದರೆ ಅವುಗಳ ಜನನ ಗ್ರಂಥಿಗಳನ್ನು ಹೋಲುವ ಕೋಶಗಳು ಸಿಕ್ಕಿವೆ.ಇವುಗಳ ರಚನಾ ವಿಧಾನವನ್ನಾಗಲಿ,ಕ್ರಿಯಾತಂತ್ರವನ್ನಾಗಲಿ ನಿರ್ದಿಷ್ಟವಾಗಿ ಹೇಳುವಂತಿಲ್ಲ.ಗ್ರ್ಯಾಪ್ಟೊಲೈಟುಗಳ ಮೃದು ಭಾಗಗಳು ರಕ್ಷಿಸಲ್ಪಟ್ಟಿಲ್ಲ.ಆದ್ದರಿಂದ ಈ ಪ್ರಾಣಿಗಳು ಯಾವ ವರ್ಗದ ಪ್ರಾಣಿಗಳಿಗೆ ಹತ್ತಿರದ ಸಂಬಂಧಿಗಳೆಂದು ಹೇಳುವುದು ಸುಲಭವಲ್ಲ.ಅಂಗರಚನೆಯ ಸಾಮ್ಯ ಮತ್ತು ಪ್ರಜನನ ಗ್ರಂಥಿಗಳನ್ನು ಪಡೆದಿರುವುದರ ಆಧಾರದ ಮೇಲೆ ಈ ಪ್ರಾಣಿಗಳನ್ನು ಹೈಡ್ರೊ‍‍ಜ಼ೋವ ವರ್ಗದ ಒಂದು ಶಾಖೆ ಎಂದು ಅಲ್ ಮನ್ ಅಭಿಪ್ರಾಯಪಟ್ಟಿದ್ದಾನೆ.ಆದರೆ ಹೈಡ್ರೊಜ಼ೋವ ವರ್ಗದ ಪ್ರಾಣಿಗಳಲ್ಲಿ ವಿರ್ಗುಲ,ಸಿಕ್ಯುಲಗಳಿಲ್ಲ.ಗ್ರ್ಯಾಪ್ಟೊಲೈಟುಗಳು ಬೆನ್ನೆಲುಬಿಲ್ಲದ ಪ್ರಾಣಿಗಳ ಮೂಲಶಾಖೆಯೆಂದು ವಿಜ್ನನಿಗಳ ಅಭಿಪ್ರಾಯ.
 ಗ್ರ್ಯಾಫೈಟ್: ಖನಿಜವಾಗಿ ದೊರೆಯುವ ಇಂಗಾಲದ ಒಂದು ರೂಪ.ವಜ್ರ ಮತ್ತು ಗ್ರ್ಯಾಫೈಟುಗಳು ಇಂಗಾಲದ ಸ್ಫಟಿಕರೂಪಗಳು.ಗ್ರ್ಯಾಫೈಟ್ ಷಣ್ಮುಖ ರೂಪದ್ದು(ಹೆಕ್ಸಗೊನಲ್).ಇದರ ಹರಳುಗಳು ಸಿಕ್ಕುವುದು ಅಪರೂಪ.ಆದರೆ ಗಮನಿಸಿ ನೋಡಿದಾಗ ಗ್ರ್ಯಾಫೈಟ್ ಬಹಳ ಮೃದುವಾದ ಖನಿಜ.ಸ್ಪರ್ಶಕ್ಕೆ ಬಲು ನುಣುಪು,ಮುಟ್ಟಿದರೆ ಕೈಮಸಿಯಾಗುವುದು,ಇದರಿಂದ ಕಾಗದದ ಮೇಲೆ ಗುರುತು ಮಾಡಬಹುದು.ಇದರ ಸಾಪೇಕ್ಷ ಸಾಂದ್ರತೆ ೨.೦೯-೨.೨೩.ಬಣ್ಣ ಕಪ್ಪು ಇಲ್ಲವೇ ಉಕ್ಕಿನ ಬಣ್ಣ.ಇದು ವಿದ್ಯುದ್ವಾಹಕ.ಶ್ರೀಲಂಕ,ಭಾರತ,ಸೈಬೀರಿಯ,ಕೊರಿಯ,ಅಮೆರಿಕದ ಸಂಯುಕ್ತಸಂಸ್ಥಾನಗಳು ಮೊದಲಾದ ಸ್ಥಳಗಳಲ್ಲಿ ಗ್ರ್ಯಾಫೈಟ್ ದೊರೆಯುತ್ತದೆ.ಮೊದಲಿಗೆ ಮಾಲಿಬ್ಡಿನೈಟ್,ಗೆಲೆನಾ(ಸೀಸದ ಸಲ್ಪೈಡ್)ಎಂಬ ಅದಿರುಗಳು ಮತ್ತು ಗ್ರ್ಯಾಫೈಟ್ ಎಲ್ಲವೂ ಒಂದೇ ವಸ್ತು ಎಂದು ಭ್ರಮಿಸಿದರು.ಈ ಕಾರಣದಿಂದಲೇ ಪ್ಲಂಬೆಗೋ,ಬ್ಲ್ಯಾಕ್ ಲೆಡ್(ಕರೀ ಸೀಸ)ಎಂಬ ಹೆಸರುಗಳು ಪ್ರಚಲಿತವಾದವು.ರಾಸಾಯನಿಕವಾಗಿ ಗ್ರ್ಯಾಫೈಟ್ ಪಟುವಾದ ವಸ್ತುವಲ್ಲ.ಕ್ರೋಮಿಕ್ ಅಮ್ಲ ಇದನ್ನು ಇಂಗಾಲದ ಡೈಆಕ್ಸೈಡಿಗೆ ಉತ್ಕರ್ಷಿಸುತ್ತದೆ.ನೈಟ್ರಿಕ್ ಆಮ್ಲ ಇದನ್ನು ಗ್ರ್ಯಾಫಿಟಿಕ್ ಆಮ್ಲವೆಂಬ ಒಂದು ಹಳದಿಯ ಪದಾರ್ಥಕ್ಕೆ ಪರಿವರ್ತನೆ ಮಾಡುತ್ತದೆ.ಗ್ರ್ಯಾಫಿಟಿಕ್ ಆಮ್ಲ ಮೆಲಿಟಿಕ್ ಆಮ್ಲವೆಂಬ ಪದಾರ್ಥಕ್ಕೆ ಪರಿವರ್ತನೆ ಆಗುತ್ತದೆ.ಈ ಕ್ರಿಯೆಯಿಂದ ಗ್ರ್ಯಾಫೈಟ್ ಅಂತಾರಚನೆ ಅಂದರೆ ಅದರಲ್ಲಿ ಇಂಗಾಲದ ಪರಮಾಣುಗಳ ಜೋಡಣೆ ಹೇಗಿದೆ ಎಂಬುದರ ಸುಳಿವು ದೊರೆಯುತ್ತದೆ.ಇಂಗಾಲದ ಪರಮಾಣುಗಳು ಷಟ್ಕೋನಾಕೃತಿಯಲ್ಲಿ ಜೋಡಿಸಲ್ಪಟ್ಟಿವೆ.ಎಕ್ಸ್ ಕಿರಣ ಪರೀಕ್ಷೆಯಿಂದ ಈ ರಚನೆ ಸ್ಪಷ್ಟಪಟ್ಟಿದೆ.ಇಂಥ ಷಟ್ಕೋನ ಜೋಡಣೆಗಳ ಪದರಗಳು ಒಂದರ ಮೇಲೊಂದಿವೆ.ಒಂದು ಷಟ್ಕೋನದಲ್ಲಿ ಇಂಗಾಲದ ಪರಮಾಣುಗಳ ಅಂತರ ೩.೪ಅ ಪದರಗಳ ನಡುವಣ ಅಂತರ ಹೆಚ್ಚಾಗಿದ್ದು ಈ ಬಂಧ ಬಹಳ ದುರ್ಬಲವಾಗಿರುವುದರಿಂದ ಒಂದು ಪದರ ಇನ್ನೊದರ ಮೇಲೆ ಜಾರಲು ಅನುಕೂಲವಾಗಿರುತ್ತದೆ.ಇದೆ ಗ್ರ್ಯಾಫೈಟಿನ ಮೃದುತ್ವಕ್ಕೂ ಸ್ನೇಹಿ ಗುಣಕ್ಕೂ೯ಲೂಬ್ರಿಕೇಟಿಂಗ್ ಪ್ರಾಪರ್ಟಿ)ಕಾರಣವಾಗಿದೆ.ಅಲ್ಲದೆ ಇಂಗಾಲದ ಪರಮಾಣುಗಳ ಕೆಲವು ಎಲೆಕ್ಟ್ರಾನುಗಳು ಬಂಧಕ್ಕೊಳಪಡದೆ ಸ್ವತಂತ್ರವಾಗಿರುವುದರಿಂದ ಗ್ರ್ಯಾಫೈಟ್ ವಿದ್ಯುದ್ವಾಹಕವಾಗಿದೆ.