ಪುಟ:Mysore-University-Encyclopaedia-Vol-6-Part-18.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ಲೂಕ್, ಕ್ರಿಸ್ಟೊಫ್ ವಿಲಿಬಾಲ್ಡ್ ವಿಧಾನಗಳಿಂದಲೂ ಗ್ಲಿಸರಾಲನ್ನು ತಯಾರಿಸುತ್ತಾರೆ. ಅವುಗಳಲ್ಲಿ ವಿಶೇಷವಾಗಿ ವಳಕೆಯಲ್ಲಿರುವ ವಿಧಾನ ಪೆಟ್ರೋಲಿಯಮ್ ಉತ್ಪನ್ನವಾದ ಪ್ರೊಪೈಲೀನಿನಿಂದ ಪ್ರಾರಂಭವಾಗುತ್ತದೆ. ಪ್ರೊಪೈಲೀನನ್ನು ಸುಮಾರು ೫೦೦ ಸೆಂ. ಉಷ್ಣತೆಯಲ್ಲಿ ಕ್ಲೋರಿನೀಕರಿಸಿದಾಗ ಅಲ್ಲೈಲ್ ಕ್ಲೊರೈಡ್ ಉತ್ಪತ್ತಿಯಾಗುವುದು. ಅದನ್ನು ಈ ಕೆಳಗೆ ಕಾಣುವ ಹಂತಗಳಲ್ಲಿ ಗ್ಲಿಸರಾಲಾಗಿ ಪರಿವರ್ತಿಸುತ್ತಾರೆ. ಏಚೆಗೆ ಬಳಕೆಗೆ ಬಮ್ದಿರುವ ಇನ್ನೊಂದು ಸಂಶ್ಲೇಷಣ ವಿಧಾನದಲ್ಲಿ ಆಸ್ಮಿಯಮ್ ಟೆಟ್ರಾಕ್ಸೈಡ್ ಮತ್ತು ಹೈದ್ರೋಜನ್ ಪರಾಕ್ಸೈಡುಗಳ ಸಹಾಯದಿಂದ ಆಕ್ರಾಲ್ಡಿಹೈಡನ್ನು ಗ್ಲಿಸರಾಲ್ಡಿಹೈಡಾಗಿ ಪರಿವರ್ತಿಸಿ ಅದನ್ನು ಕ್ರಿಯಾವರ್ಧಕದ ಸಮ್ಮುಖದಲ್ಲಿ ಹೈಡ್ರಾಜನೀಕರಿಸಿ ಗ್ಲಿಸರಾಲ್ ತಯಾರಿಸುತ್ತಾರೆ. ಗ್ಲಿಸರಾಲ್ ಬಣ್ಣ ವಾಸನೆಗಳಿಲ್ಲದ ಸಿಹಿಯಾದ ಸ್ನಿಗ್ದ ಜಲಾಕರ್ಷಕ ದ್ರವ. ಅದು ನೀರಿಗಿಂತಲೂ ಭಾರ. ಆದರೆ ಎಲ್ಲ ಪ್ರಮಾಣಗಳಲ್ಲೂ ನಿರಿನಲ್ಲಿ ದ್ರಾವ್ಯ. ಅದರ ಕುದಿಬಿಂದು ೨೯೦ ಸೆಂ. ಕುದಿಯುವಾಗ ಭಾಗಶಃ ವಿಭಜಿಸುತ್ತದೆ. ಆದ್ದರಿಂದ ಸಾಮಾನ್ಯವಾಗಿ ಕಡಿಮೆ ಒತ್ತಡದಲ್ಲ ಅದನ್ನು ಆಸವಿಸುತ್ತಾರೆ. ೧೨ ಮಿಮಿ ಒತ್ತಡದಲ್ಲಿ ಅದು ೧೭೦ ಸೆಮ್.ನಲ್ಲಿ ಕುದಿಯುತ್ತದೆ. ೦ ಸೆಮ್. ಉಷ್ಣತೆಯಲ್ಲಿ ಅದು ಕ್ರಮೇಣ ಘನೀಭವಿಸುವುದು. ಘನ ಗ್ಲಿಸರಾಲಿನ ದ್ರವನಬಿಂದು ೧೮ ಸೆ. ಅಲ್ಲ ಆಲ್ಕೊಹಾಲುಗಳಂತೆಯೇ ಜ್ಲಿಸರಾಲು ಸಹ ಸೂಕ್ತ ಸನ್ನಿವೆಶದಲ್ಲಿ ಅಮ್ಲಗಳೊಡನೆ ವರ್ತಿಸಿ ಎಸ್ಟರುಗಳನ್ನು ನೀಡುತ್ತದೆ. ಉದಾಹರಣೆಗೆ, ಅದರ ಟ್ರೈಆಸಿಟೇಟ್, ಟ್ರೈಸ್ಟಿಯರೇಟ್ ಇತ್ಯದಿ. ನೈಟ್ರಿಕ್ ಆಮ್ಲದೊಡನೆ ವರ್ತಿಸಿ ದಾಗ ಉತ್ಪತ್ತಿಯಾಗುವ ಗ್ಲಿಸರಾಲು ಟ್ರೈನೈಟ್ರೇಟ್ ಇವುಗಳಲ್ಲೆಲ್ಲ ತ್ಯಮ್ತ ನಮುಖ್ಯವಾದ ಎಸ್ಟ್ರು. ಅದು ನೈಟ್ರೋಗ್ಲಿಸರಿನನ್ನು ಎಂಬ ವಾಣಿಜ್ಯನಾಮದಿಂದ ಪ್ರಸಿದ್ಧವಾಗಿದೆ. ಡೈನಮೈಟ್, ಸ್ಫೋತಕ ಜಿಲೆಟಿನ್, ಕಾರ್ಡ್ರೈಟ್ ಮೂಮ್ತಾದ ಸ್ಫೋಟಕಗಳ ಸಾಮಾನ್ಯ ಘಟಕವಾದ ನೈಟ್ರೋಗ್ಲಿಸರಿನನ್ನು ತಯಾರಿಸಲು ತಣಿಸಿದ ಸಲ್ಫ್ಯೂರಿಕ್-ನೈಟ್ರಿಕ್ ಆಮ್ಲಗಳ ಮಿಶ್ರನದ ಮೇಲೆ ಗ್ಲಿಸರಿನನ್ನು ಉತ್ಪತ್ತಿಯಾಗಿ ಎನ್ನ್ನೆಯಂತೆ ತೇಲುತ್ತದೆ. ೧೧೦ ಸೆಮ್. ಉಷ್ಣತೆಗೆ ಕಾಯಿಸಿದಾಗ ಗ್ಲಿಸರಾಲಗೆ ಶುಷ್ಕ ಹೈಡ್ರೊಜನ್ ಕ್ಲೋರೈಡ್ ಹಾಯಿಸಿದರೆ ಮೊದಲು ಒಂದು, ಅನ್ನ ಮ್ತರ ಎರ ಡು ಹೈಡ್ರಾಕ್ಸಿಲ್ ಗುಂಪುಗಳು ಕ್ಲೋರಿನಿಂದ ಪಲ್ಲಟಗೊಳ್ಳುತ್ತವೆ. ಮುರು ಹೈಡ್ರಾಕ್ಸಿಲ್ ಗುಮ್ತುಗಳನ್ನೂ ಪಲ್ಲಟಿಸಬೇಕಾದರೆ ರಂಜಕದ ಪೆಮ್ಟಕ್ಲೊರೈಡನ್ನು ಉಪಯೋಗಿಸಬೇಕು. ನೈಟ್ರಿಕ್ ಆಮ್ಲದಂಥ ಉತ್ಕ್ರರ್ಷಣಕಾರಿಗಳು ಗ್ಲಿಸರಿನ್ ಜೊತೆ ವರ್ತಿಸಿದಾಗ ಅನುಕ್ರಮವಾಗಿ ಗ್ಲಿಸರಿಕ್ ಆಮ್ಲ (CH2OH,CHOH.COOH), ಟಾರ್ಟ್ರೋನಿಕ್ ಆಮ್ಲ (COOH.CHOH.COOH) ಮತ್ತು ಮೆಸಾಕ್ಸಾಲಿಕ್ ಆಮ್ಲಗಳು (COOH. CO.COOH) ಉತ್ಪತ್ತಿಯಾಗುವವು. ರಂಜಕ ಮತ್ತು ಆಯೋಡೀನ್ ಗಳು ಗ್ಲಿಸರಿನ್ ಜೊತೆ ವರ್ತಿಸಿದಾಗ ಅನುಕ್ರಮವಾಗಿ ಅಲೈಲ್ ಅಯೋಡೈಡ್ (CH2:CH.CH2L), ಪ್ರೊಪೈಲೀನ್ (CH3.CH:CH2) ಮತ್ತು ಐಸೊಪ್ರೊಪೈಲ್ ಆಯೊಡೈಡುಗಳು (CH3.CHI.CH3) ಉತ್ಪತ್ತಿಯಾಗುತ್ತವೆ. ಸೋಡಿಯಂ ಬೈಸಲ್ಫೇಟ್ ಅಥವಾ ರಂಜಕದ ಪೆಂಟಾಕ್ಸೈಡ್ ನೊಂದಿಗೆ ಕಾಯಿಸಿದಾಗ ಗ್ಲಿಸರಾಲು ನೀರನ್ನು ಕಳೆದುಕೊಂಡು ಆಕ್ರೊಲೀನ್ ಅಥವಾ ಆಕ್ರಾಲ್ಡಿಹೈಡ್ (CH2:CH.CHO) ಎಂಬ ಅಪರ್ಯಾಪ್ತ ಆಲ್ಡಿಹೈಡನ್ನು ನೀಡುತ್ತದೆ. ಇದು ಅತ್ಯಂತ ತೀಕ್ಷ್ಣವಾದ ಘಾಟುವಾಸನೆ ಉಳ್ಳದ್ದಾದುದರಿಂದ ಗ್ಲಿಸಲಾರನ್ನು ಗುರುತಿಸಲು ಈ ಕ್ರಿಯೆಯನ್ನು ಉಪಯೋಗಿಸಬಹುದು. ಫಾರ್ಮಿಕ್ ಅಥವಾ ಆಕ್ಸಾಲಿಕ್ ಆಮ್ಲದೊಡನೆ ೨೬೦ ಸೆಂ. ನಲ್ಲಿ ಕಾಯಿಸಿದರೆ ಗ್ಲಿಸರಾಲು ಅಲೈಲ್ ಆಲ್ಕೊಹಾಲನ್ನು (CH2:CH.CH2OH) ನೀಡುತ್ತದೆ. ಎರಡು ಕಾರ್ಬಾಕ್ಸಿಲ್ ಗುಂಪುಗಳುಳ್ಳ ದ್ವಿಪ್ರತ್ಯಾಮ್ಮೀಯ ಆಮ್ಲಗಳು (ಡೈಬೇಸಿಕ್ ಆಸಿಡ್ಸ್) ಗ್ಲಿಸರಿನಿನೊಂದಿಗೆ ವರ್ತಿಸಿದಾಗ ಆಲ್ಕಿಡ್ ರೆಸಿನುಗಳೆಂಬ ಸಾಂದ್ರೀಕರಣ ಪಾಲಿಮರುಗಳು ಉತ್ಪತ್ತಿಯಾಗುತ್ತವೆ. ಥ್ಯಾಲಿಕ್ ಆನ್ಹೈಡ್ರೈಡಿನ ವರ್ತನೆಯಿಂದ ಉತ್ಪತ್ತಿಯಾಗುವ ಗ್ಲಿಪ್ಟಾಲ್ ಎಂಬುದು ಅವುಗಳಲ್ಲಿ ಅತ್ಯಂತ ಸಾಮಾನ್ಯವಾದುದು. ಗಿಸರಿನ್ ಆವಿಶೀಲ (ವಾಲಟೈಲ್) ಆಲ್ಮದುದರಿಂದ ಅದರಿಮ್ದ ತೇವಗೊಳಿಸಿದ ಪದಾರ್ಥಗಲು ಬೇಗ ಒಣಗುವುದಿಲ್ಲ. ಇ ಕಾರಣದಿಂದ ಅದನ್ನು ಕಾಮ್ತಿಎಅರ್ಧಕಗಳ (ಕಾಸ್ಮೆಟಿಕ್ಸ್) ತಯಾರಿಕೆಯಲ್ಲೂ ಹಣ್ಣುಗಳು ಮತ್ತು ತಳ್ಬಾಕನ್ನು ತೇವಗೊಳಿಸಿ ಮೃದುವಾಗಿಡುವುದಕ್ಕೂ ಕ್ಷಾರದ ಸಾಬೂನು ಮತ್ತು ಟೂತ್ ಪೇಸ್ಟುಗಳ ತಯಾರಿಕೆಗೂ ಬಳಸುತ್ತಾರೆ. ವಾಣಿಜ್ಯದಲ್ಲಿ ಗ್ಲಿಸರಿನಿನ ಅತ್ಯಧಿಕ ಭಾಗ ಸ್ಫೋಟಕಗಳ ತಯಾರಿಕೆಗೆ ವ್ಯಯವಾಗುತ್ತದೆ. ಇಷ್ಟೇ ಅಲ್ಲದೆ ಘನೀಕರಣರೋಧಕ ಮಿಶ್ರಣಗಳಲ್ಲಿ (ಆಂಟಿ-ಫ್ರೀಜ್ ಮಿಕ್ಸ್ ಚರ್ಸ್) ಲಿಸಲಾರನ್ನು ವ್ಯಾಪಕವಾಗಿ ಬಳಸುತ್ತಾರೆ. ಅನೇಕ ಪ್ಲಾಸ್ಟಿಕ್ಕುಗಳಾ ತಯಾರಿಕೆಗೂ ಗ್ಲಿಸರಾಲ್ ಅಗತ್ಯ. ಗ್ಲೂಕ್, ಕ್ರಿಸ್ಟೊಫ್ ವಿಲಿಬಾಲ್ಡ್ : ೧೭೧೪-೮೭. ಜರ್ಮನಿಯ ಒಬ್ಬ ಪ್ರಸಿದ್ಧ ವಾಗ್ಗೇಯಕಾರ. ಈತ ರಚಿಸಿದ ಹಲವಾರು ಗೇಯಕೃತಿಗಳು ಅದರಲ್ಲೂ ಮುಖ್ಯವಾಗಿ ಆಪೆರಗಳು, ಯುರೋಪಿನ ಸಂಗೀತ ಇತಿಹಾಸದಲ್ಲಿ ಹೊಸ ತಿರುವನ್ನು ಗುರಿತಿಸಿದವೆನ್ನಲಾಗಿದೆ. ಗ್ಲೂಕ್ ಹುಟ್ಟಿದ್ದು ಜರ್ಮನಿಯ ವೈಡೆನ್ ವ್ಯಾಂಗ್ ಎಂಬಲ್ಲಿ. ಇವನ ತಂದೆ ರಾಜಕುಮಾರ ಲೊಬ್ಕೋವಿಟ್ ಜ಼ನ ಸೇವೆಯಲ್ಲಿ ಇದ್ದುಕೊಂಡು ಅವನ ಬೇಟೆಯಾಟಗಳಲ್ಲಿ ಸಹಕರಿಸುತ್ತಿದ್ದ. ಗ್ಲೂಕ್ ಗೆ ೧೨ ವಎಷವಾದಾಗ ಅವನನ್ನು ಕೊಮೋಟ ಎಂಬಲ್ಲಿನ ಜೆಸ್ಯೂಟ್ ಕಾಲೇಜಿಗೆ ಸೇರಿಸಲಾಯಿತು. ಈತ ಅಲ್ಲಿ ಪ್ರಪ್ರಥಮವಾಗಿ ಸಂಗೀತ ಪಾಠಗಳನ್ನು ಕಲಿತುಕೊಂಡ. ಅನಂತರ ೧೭೩೨ರಲ್ಲಿ ದ್ರಾಗ್ ವಿಶ್ವವಿದ್ಯಾಲಯ ಸೇರಿದ. ಸುಮಾರು ನಾಲ್ಕು ವರ್ಷಗಳ ಕಾಲ ಜೀವನೋಪಾಯಕ್ಕಾಗಿ ಪಿಟೀಲು, ಸೆಲ್ಲೋ ಮುಂತಾದ ವಾದ್ಯಗಳನ್ನು ನುಡಿಸುತ್ತ ಸಂಗೀತಪಾಠ ಕಲಿಸುತ್ತ ಕಾಲ ಕಳೆದ. ಸರ್ನೊಹರ್ ಸ್ಕಿ ಎಂಬ ಸಂಗೀತ ವಿದ್ವಾಂಸನೊಬ್ಬ ಇವನ ಗುರುವಾದ. ೧೭೩೬ರಲ್ಲಿ ರಾಜುಕುಮಾರ ಲೊಬ್ಕೋವಿಟ್ ಜ಼ನ ಪರಿವಾರದಲ್ಲಿ, ಚೇಂಬರ್ ಸಂಗೀತಗಾರನಾಗಿ ವಿಯೆನ್ನಕ್ಕೆ ಹೋಗಿದ್ದಾಗ ಇವನಿಗೆ ಇಟಲಿಯ ಆಪೆರದಲ್ಲಿ ಹೆಚ್ಚಿನ ಅಭಿರುಚಿಯುಂಟಾಯಿತು. ಮರುವರ್ಷವೇ ಈತ ಅಲ್ಲಿನ ರಾಜಕುಮಾರ ಮೆಲ್ ಜ಼ಯನ್ನು ಸಂದರ್ಶಿಸಿ ಅವನ ಆಶ್ರಯ ದೊರಕಿಸಿಕೊಂಡ. ರಾಜಕುಮಾರನ ನೆರವಿನಿಂದ ಮಿಲಾನಿಗೆ ಹೋಗಿ ಅಲ್ಲಿ