ಪುಟ:Mysore-University-Encyclopaedia-Vol-6-Part-18.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ಲೂಕೋಸ್

ಸೆಲ್ಯೂಲೂಸ್ ಸ್ಟಾರ್ಟ್ ಮತ್ತು ಗ್ಲೈಕೊಜನ್ ಮುಂತಾದ ಅನೇಕ ನೈಸರ್ಗಿಕ ಬಹುಶರ್ಕರಗಳನ್ನು ರಾಸಾಯನಿಕವಾಗಿ ಗ್ಲೂಕೊಸೈಡುಗಳು ಎನ್ನಬಹುದು. ಏಕೆಂದರೆ ಇವೆಲ್ಲವು ಗ್ಲೂಕೊಸೈಡಿಕ್ ಬಂಧದಿಂದ ಸೇರಿಸಲ್ಪಟ್ಟ ಗ್ಲೂಕೋಸ್ ಘಟಕಗಳನ್ನು ಒಳಗೊಂಡಿವೆ.

ನೈಸರ್ಗಿಕ ಗ್ಲೂಕೊಸೈಡುಗಳು ಸಸ್ಯ ಚಯಾಪಚಯದಲ್ಲಿ ಅಲ್ಲದೆ ಔಷದಿ,ü ವರ್ಣದ್ರವ್ಯ, ಸಂಬಾರ ಸಾಮಗ್ರಿ ಮತ್ತು ಸುಗಂಧಗಳ ರೂಪದಲ್ಲಿ ಪ್ರಾಮುಖ್ಯ ಪಡೆದಿವೆ. ಸಸ್ಯ ತನಗೆ ಮಾರಕ (ಟಾಕ್ಸಿಕ್) ವಸ್ತುಗಳನ್ನು ಗ್ಲೂಕೊಸೈಡ್ ರೂಪದಲ್ಲಿ ತೊಗಟೆಗೋ ಹಣ್ಣಿನ ಸಿಪ್ಪೆಗೋ ಬೀಜದ ಹೊದಿಕೆಗೋ ಹೂವಿನ ಬಣ್ಣಕ್ಕೋ ರವಾನಿಸುತ್ತದೆನ್ನುವ ವಾದಕ್ಕೆ ಆಧಾರಗಳಿವೆ. ಅಂದರೆ ಗ್ಲೂಕೊಸೈಡ್ ತಯಾರಿಕೆ ಸಸ್ಯದ ಒಂದು ವಿಷನಿವಾರಕತಂತ್ರ, ಬಹುಪಾಲು ಗ್ಲೂಕೊಸೈಡುಗಳು D - ರೂಪದಲ್ಲಿವೆ. ಅವುಗಳಿಗೆ B - ವಿನ್ಯಾಸ ಉಂಟು. ಆದ್ದರಿಂದ ಅವೆಲ್ಲವೂ ಲೇವೊರೊಟೇಟರಿ.

ವಿಲ್ಲೊ ತೊಗಟೆಯಲ್ಲಿ ದೊರೆಯುವ ಸ್ಯಾಲಿಸಿನ್ ಪೂರ್ವಕಾಲದಿಂದಲೂ ಜ್ವರ ಮತ್ತು ಕೀಲುನೋವುಗಳ ವಿರುದ್ಧ ಉಪಯೋಗಿಸಲ್ಪಡುತ್ತದೆ ಜಲವಿಶ್ಲೇಷಣೆ ಹೊಂದಿದಾಗ ಸ್ಯಾಲಿಸಿನ್ D- ಗ್ಲೂಕೊಸ್ ಮತ್ತು ಸ್ಯಾಲಿಜೆನಿನುಗಳನ್ನು ಕೊಡತ್ತವೆ.

ಸ್ಯಾಪೊನಿನುಗಳು ಆ್ಯಲಿಫ್ಯಾಟಿಕ್ ಆಲ್ಕೊಹಾಲುಗಳಿಂದಾದ ಗ್ಲೂಕೊಸೈಡುಗಳು. ಸಸ್ಯಗಳನ್ನು ಹೇರಳ ನೀರಿನೊಡನೆ ಕುಲುಕಿದಾಗ ನೊರೆಕೊಡುವುದು ಇವುಗಳ ವಿಶಿಷ್ಟಗುಣ. ಇವು ಮೀನುಗಳಿಗೆ ವಿಷ. ಆದ್ದರಿಂದ ಮೀನು ಹಿಡಿಯುವವರು ಇವನ್ನು ಉಪಯೋಗಿಸುವುದುಂಟು. ಇವುಗಳಿಂದ ಸಾಯುವ ಮೀನು ಜೀವಗಳಿಗೆ ಹಾನಿಯುಂಟುಮಾಡುವುದಿಲ್ಲ.

ಸ್ಟೆರಾಯ್ಡ್ ಗ್ಲೂಕೊಸೈಡುಗಳು : ಇವನ್ನು ಹೃತ್ಪ್ರಭಾವಿ (ಕಾರ್ಡಿಆ್ಯಕ್) ಗ್ಲೂಕೊಸೈಡುಗಳೆಂದು ಕರೆಯುವರು. ಜಲವಿಶ್ಲೇಷಣೆಯಿಂದ ಇವು ಅನೇಕ ಬಗೆಯ ಸಕ್ಕರೆಗಳನ್ನು ಮತ್ತು ಸ್ಟೆರಾಯ್ಡುಗಳನ್ನು ಕೊಡುತ್ತವೆ. ಇವು ಪಬಲ ಹೃದ್ವಿಷಗಳು. ಆದರೆ ಅಲ್ಪಪ್ರಾಮಾಣದಲ್ಲಿ ಹೃದಯೋದ್ದೀಪಕಗಳು. ಆಧುನಿಕ ವೈದ್ಯದಲ್ಲಿ ಡಿಜಿಟಾಲಿಸ್ ಎಲೆಗಳ ಸಾರದ ಉಪಯೋಗ ಸರ್ವವೇದ್ಯ.

ಸೈಯನೋಜನಕ (ಸಯನೊಜೆನಿಟಿಕ್) ಗ್ಲೂಕೊಸೈಡುಗಳು ಮತ್ತೊಂದು ಗುಂಪು. ಪೀಚ್, ಚೆರಿ ಮತ್ತು ಪ್ಲಮ್ ಬೀಜದ ತಿರುಳುಗಳಲ್ಲಿ ಈ ಗುಂಪನ್ನು ಕಾಣಬಹುದು. ಇವು ಮುಖ್ಯವಾಗಿ ಮ್ಯಾಂಡಿಲೊನೈಟ್ರೈಲ್ ಗ್ಲೂಕೊಸೈಡುಗಳು. ಆಮ್ಲ ಅಥವಾ ಎಂಜೈಮುಗಳಿಂದ ಜಲವಿಶ್ಲೇಷಣೆ ಹೊಂದಿ ವಿಷವಸ್ತು ಹೈಡ್ರೊಸಯನಿಕ್ ಆಮ್ಲ, ಬೆಂಜಾಲ್ಡಿಹೈಡ್ ಮತ್ತು ಮುಖ್ಯವಾಗಿ ಆ- ಗ್ಲೂಕೋಸನ್ನು ಕೊಡುತ್ತವೆ. ಆಮಿಗ್ಡಲಿನ್ ಈ ಗುಂಪಿಗೆ ಸೇರಿದ್ದು. ಪೂರ್ವಕಾಲದಲ್ಲಿ ಬಹುವಾಗಿ ಉಪಯೋಗಿಸುತ್ತಿದ್ದ ಅನೇಕ ಸಸ್ಯಜನ್ಯ ಬಣ್ಣಗಳು ಗ್ಲೂಕೊಸೈಡುಗಳು. ಅವುಗಳಲ್ಲಿ ಮ್ಯಾಡರ್ ಮುಖ್ಯವಾದದು. ಮ್ಯಾಡರ್ ಬೇರು ಜಲವಿಶೇಷಣೆಯಿಂದ ಆ - ಕ್ಲೈಲೋಸ್ ಮತ್ತು ಅಲಿಜರಿನ ವರ್ಣಕ್ರಿಯೆಯನ್ನು ಕೊಡುತದೆ. ನೀಲಿ ಮತ್ತು ಕೆಂಪು ವರ್ಣದ ಅನ್ನೊಸೈಯನಿಡಿನ್ ಗ್ಲೂಕೊಸೈಡುಗಳು. ಇವುಗಳಲ್ಲಿ ಅಗ್ಲೈಕಾನ್ ಭಾಗಕ್ಕೆ ಆನ್ತೊಸೈಯನಿಡಿನ್ ಎಂದು ಹೆಸರು. ಫಲಪುಷ್ಪಗಳಲ್ಲಿ ಕಾಣುವ ಅನೇಕ ವರ್ಣಗಳು ಕ್ಯಾರೋಟಿನಾಯ್ಡ್ ಗ್ಲೂಕೊಸೈಡುಗಳು.

ಗೂಕೊಸೈಡುಗಳ ತಯಾರಿಕೆ : ಸಕ್ಕರೆಯನ್ನು ವೇಗವರ್ಧಕದ ಸಮಕ್ಷಮ ಆಲ್ಕೊಹಾಲ್ ಅಥವಾ ಫೀನಾಲಿನೊಡನೆ ಸಾಂದ್ರೀಕರಿಸಿ ಗ್ಲೂಕೊಸೈಡುಗಳನ್ನು ತಯಾರಿಸಬಹುದು. 1% ರಿಂದ 0.5% ಹೈಡ್ರೊಜನ್ ಕ್ಲೋರೈಡ್ ಲೀನವಾಗಿರುವ ಜಲರಹಿತ ಆಲ್ಕೊಹಾಲಿನಲ್ಲಿ ಸಕ್ಕರೆಯನ್ನು ವಿಲೀನಮಾಡಿ ತರುವಾಯ ಮಿಶ್ರಣವನ್ನು ಕೆಲವು ಘಂಟೆಗಳ ಕಾಲ ಪುನರಭಿವಾಹ (ರಿಫ್ಲೆಕ್ಸ್) ಮಾಡುವುದು ಅಥವಾ ಒಂದೆರಡು ದಿವಸಗಳ ಕಾಲ ಪ್ರಯೋಗಶಾಲೆಯಲ್ಲಿ ಉಷ್ಣತೆಯಲ್ಲಿ ಬಿಡುವುದು ತಯಾರಿಕೆಯ ಒಂದು ಸರಳ ವಿಧಾನ. ಈ ವಿಧಾನದಲ್ಲಿ α- ಮತ್ತು β- ಗ್ಲೂಕೊಸೈಡುಗಳ ಮಿಶ್ರಣ ದೊರೆಯುತ್ತದೆ. ಆದರೆ ಪರಿಶುದ್ದ ಐಸೊಮರುಗಳ ಸಂಶ್ಲೇಷಣೆಗೂ ವಿಶಿಷ್ಟವಾದ ವಿಧಾನಗಳಿವೆ. (ಎಲ್.ಎ.ಆರ್.)

ಗ್ಲೂಕೋಸ್ : ಆ - ಗ್ಲೂಕೋಸ್, ಆ - ಗ್ಲೂಕೋಪೈರನೋಸ್, ದ್ರಾಕ್ಷಿ ಸಕ್ಕರೆ, ಧಾನ್ಯ ಸಕ್ಕರೆ ಡೆಕ್ಸ್‍ಟ್ರೋಸ್, ಸೆರೆಲೋಸ್ ಎಂಬ ವಿವಿಧ ಹೆಸರುಗಳಿಂದ ಪರಿಚಿತವಾಗಿರುವ ಒಂದು ಏಕಶರ್ಕರ. ಇದರ ರಾಸಾಯನಿಕ ಅಣುಸೂತ್ರ ಅ6ಊ12ಔ6. ಪಿಷ್ಟಪದಾರ್ಥಗಳಲ್ಲಿ ಇದಕ್ಕೆ ಅತ್ಯಂತ ಪಮುಖ ಸ್ಥಾನ ಉಂಟು. ಬಹುಶಃ ಹೆಚ್ಚಿನ ಎಲ್ಲ ಹಣ್ಣು (ವಿಶೇಷತಃ ದ್ರಾಕ್ಷಿ, ಬಾಳೆಹಣ್ಣು, ಚೆರಿ) ಮತ್ತು ಜೇನಿನಲ್ಲಿ ತನ್ನದೇ ರೂಪದಲ್ಲಿಯೂ ಗ್ಲೂಕೋಸ್ ಇದೆ. ಆದ್ದರಿಂದ ಸಸ್ಯರಾಜ್ಯದಲ್ಲಿ ಇದು ಬಲು ವಿಪುಲ. ಹೂ, ಎಲೆಗಳಲ್ಲಿ ಕೂಡ ಇದು ಗ್ಲೂಕೋಸೈಡುಗಳ ಘಟಕವಾಗಿ ಉಂಟು. ಸರ್ವಸಾಮಾನ್ಯವಾಗಿ ಎಲ್ಲ ಪ್ರಾಣದೇಹಗಳಲ್ಲಿಯೂ ಇರುತದೆ ಆದರೆ ಅತ್ಯಲ್ಪ ಗಾತ್ರದಲ್ಲಿ ಮಾತ್ರ ಪ್ರಾಣಿದೇಹದ ದ್ರವಗಳಲ್ಲಿ ಕೆಲವು ಸಂದರ್ಭಗಳಲ್ಲಿ ಸ್ವಾಬಾವಿಕ ಘಟಕವಾಗಿಯೂ ಕೆಲವೊಮ್ಮೆ ಯಾವುದಾದರೂ ರೋಗದ ಲಕ್ಷಣವಾಗಿಯೂ ಗ್ಲೂಕೋಸ್ ಕಂಡುಬರುತ್ತದೆ. ಆರೋಗ್ಯವಂತ ಮಾನವನ ರಕ್ತದಲ್ಲಿ 0.15 % ತೂಕದ ಗಾತ್ರದಲ್ಲಿಯೂ ಮಧುಮೇಹರೋಗಿಗಳ ರಕ್ತ ಮೂತ್ರಗಳಲ್ಲಿ 3% ವರೆಗೂ ಇರುವುದು.

ಸುಕ್ರೋಸನ್ನು (ಸಕ್ಕರೆ) ಮದ್ಯಾರ್ಕದಲ್ಲಿ ಹೈಡ್ರೊಕ್ಲೋರಿಕ್ ಆಮ್ಲದೊಂದಿಗೆ ಸೇರಿಸಿ ಕುದಿಸಿ ಆರಿಸಿದರೆ ಗ್ಲೂಕೋಸ್ ಬಿಳಿ ಪುಡಿಯಾಗಿ ಹೊರಬರುತ್ತದೆ. ಅದನ್ನು ಸೋಸಿ ಕುದಿಯುವ ಮದ್ಯಾರ್ಕದಲ್ಲಿ ಕರಗಿಸಿ ಆ ದ್ರವಣವನ್ನು ಆರಿಸಿದರೆ ಶುದ್ಧ ಗ್ಲೂಕೋಸ್ ದೊರೆಯುತ್ತದೆ. ದೊಡ್ಡ ಗಾತ್ರದಲ್ಲಿ ಸ್ಟಾರ್ಚನ್ನು ಸಲ್ಫ್ಯೂರಿಕ್ ಆಮ್ಲದೊಂದಿಗೆ ಬೆರೆಸಿ ಹೆಚ್ಚು ಒತ್ತಡದಿಂದ ಕುದಿಸಿದ ಬಳಿಕ ತಯಾರಾಗುವ ದ್ರಾವಣದಲ್ಲಿಯ ಅಧಿಕಾಂಶ ನೀರನ್ನು ಆವಿಯಾಗಿ ಕಳೆಯುತ್ತಾರೆ. ಇದರಿಂದ ದೊರೆಯುವ ಸ್ನಿಗ್ಧ ದ್ರಾವಣವನ್ನು ಕಾರ್ನ್ ಸಿರಪ್ ಎಂದು ಮಾರುವುದುಂಟು. ಈ ಸಿರಪನ್ನು ಇದ್ದಲು ಪುಡಿಯಲ್ಲಿ ಹಾಯಿಸಿ, ನೀರನ್ನು ಆವಿಯಾಗಿ ಕಳೆದಾಗ ದೊರೆಯುವ ಬಿಳಿ ಪುಡಿಯೇ ಗ್ಲೂಕೋಸ್. ಆರು ಭುಜಗಳ ಬಿಳಿ ಸ್ಫಟಿಕ ಇದಕ್ಕಿದೆ.

ಇದು ನೀರಿನಲ್ಲಿ ಅಧಿಕವಾಗಿಯೂ ಮದ್ಯಾರ್ಕದಲ್ಲಿ ಕಡಿಮೆ ಪ್ರಮಾಣದಲ್ಲಿಯೂ ವಿಲೀನವಾಗುವುದು. ರುಚಿಯಲ್ಲಿ ಸಕ್ಕರೆಗಿಂತ ಕಡಿಮೆ ಸಿಹಿ (ಸುಮಾರು ಅರ್ಧದಷ್ಟು). ಸ್ಫಟಿಕಜಲಸಹಿತವಾದ ಗ್ಲೂಕೋಸ್ (ಅ6ಊ12ಔ6ಊ2ಔ) 86ಲಿ ಸೆಂ. ನಲ್ಲೂ ಒಣ ಗ್ಲೂಕೋಸ್ 146ಲಿ ಸೆಂ. ನಲ್ಲೂ ದ್ರವಿಸುತ್ತದೆ ಗ್ಲೂಕೋಸಿನ ಪುಡಿಯನ್ನು 200ಲಿ ಸೆಂ. ಉಷ್ಣತೆಯಲ್ಲಿ ಕಾಯಿಸಿದರೆ ಅನುಕ್ರಮವಾಗಿ ಹಳದಿ, ಕಂದು, ಚಾಕೊಲೇಟ್ ಬಣ್ಣಗಳನ್ನು ಪಡೆದು ಕ್ಯಾರಮೆಲ್ ತಯಾರಾಗುತ್ತದೆ ಅದನ್ನು ಮಿಠಾಯಿ ತಯಾರಿಸುವುದಕ್ಕಾಗಿಯೂ ಮದ್ಯಕ್ಕೆ ಆಕರ್ಷಕ ಕಂದು ಬಣ್ಣವನ್ನು ಕೊಡುವುದಕ್ಕಾಗಿಯೂ ಉಪಯೋಗಿಸುತ್ತಾರೆ. ನಿಕೋಲ್ ಪ್ರಿಸ್ಮಿನೊಳಗಿಂದ ಹಾಯ್ದು ಬಂದ ಬೆಳಕಿನ ಕಿರಣಗಳನ್ನು (ಅಂದರೆ ಧ್ರುವೀಕೃತ ಕಿರಣಗಳನ್ನು) ಗ್ಲೂಕೋಸ್ ದ್ರಾವಣದಲ್ಲಿ ಹಾಯಿಸಿದಾಗ ಕಿರಣಗಳ ಕಂಪನಕಕ್ಷೆ ಬಲಕ್ಕೆ (ಅಂದರೆ ಪ್ರದಕ್ಷಿಣ ದಿಶೆ) ತಿರುಗಿಸಲ್ಪಡುತದೆ ಅದೇ ತಯಾರಿಸಿದ ಗ್ಲೂಕೋಸ್ ದ್ರಾವಣದ ವಿಶಿಷ್ಟ ಕಿರಣಾವರ್ತನ ಸಾಮಥ್ರ್ಯ (ಸ್ಪೆಸಿಫಿಕ್ ರೊಟೇಷನ್) + 110ಲಿ. ಇದು ಕ್ರಮೇಣ ಕಡಿಮೆಯಾಗುತ್ತ ಸುಮಾರು 24 ಗಂಟೆಗಳಲ್ಲಿ + 52.2ಲಿ ಬಂದು ನಿಲ್ಲುತ್ತದೆ. ಈ ವ್ಯತ್ಯಯಾವರ್ತನೆಯ (ಮ್ಯೂಟರೊಟೇಷನ್) ಕಾರಣದ ಸಂಶೋಧನೆಯ ಪರಿಣಾಮವಾಗಿ ಗ್ಲೂಕೋಸಿನ ಎರಡು ರೂಪಗಳೂ (α-ಮತ್ತು β- ಗ್ಲೂಕೋಸ್) ಅವುಗಳ ರಚನೆಯ ಸೂಕ್ಮ ವಿವಗಳೂ ಕಂಡುಹಿಡಿಯಲ್ಪಟ್ಟವು . ಅಮೋನಿಯದಲ್ಲಿ ವಿಲೀನವಾಗಿಸಿದ ಸಿಲ್ವರ್ ನೈಟ್ರೇಟ್ ದ್ರಾವಣದಲ್ಲಿ ಗೂಕೋಸನ್ನು ಬೆರೆಸಿ ಒಂದು ಪರೀಕ್ಷಾ ನಳಿಕೆಯಲ್ಲಿ ಕಾಯಿಸಿದರೆ ದ್ರಾವಣದೊಳಗಿಂದ ಬೆಳ್ಳಿ ಹೊರ ಬಂದು ಗಾಜಿನ ಮೇಲೆ ತೆಳುವಾಗಿ ಹರಡಿಕೊಂಡು ಗಾಜು ಕನ್ನಡಿಯಂತಾಗುತ್ತದೆ. ಅದೇ ಪ್ರಕಾರ ಫೆಹ್ಲಿಂಗನ ದ್ರಾವಣಗಳೆರಡನ್ನೂ ( ಮತ್ತು ) ಸಮಪ್ರಮಾಣದಲ್ಲಿ ಬೆರೆಸಿ ಆ ಮಿಶ್ರಣಕ್ಕೆ ಗ್ಲೂಕೋಸ್ ದ್ರಾವಣವನ್ನು ಕುದಿಸಿದರೆ ಕೆಂಪು ಪುಡಿ ಹೊರಬರುತ್ತದೆ. ಗ್ಲೂಕೋಸನ್ನು ಕಂಡುಹಿಡಿಯಲಿಕ್ಕೂ ಯಾವುದೇ ವಸ್ತುವಿನಲ್ಲಿ ಗ್ಲೂಕೋಸಿನ ತೂಕದ ಪಮಾಣವನ್ನು ಅಳೆಯಲಿಕ್ಕೂ ಈ ಪಯೋಗವನ್ನು ಉಪಯೋಗಿಸುತ್ತಾರೆ ಇದಲ್ಲದೆ ಗ್ಲೂಕೋಸಿನ ಕಿರಣಾವರ್ತನ ಸಾಮಥ್ರ್ಯವೂ ಇದಕ್ಕಾಗಿ ಉಪಯೋಗಿಸಲ್ಪಡುತ್ತದೆ. ಮದ್ಯವೊಂದನ್ನು ಬಿಟ್ಟರೆ ಮಾನವನ ಜಠರದಲ್ಲಿ ಬದಲಾವಣೆಯನ್ನು ಹೊಂದದೆ ನೇರವಾಗಿ ರಕ್ತದಲ್ಲಿ ಆಕರ್ಷಿಸಲ್ಪಡುವ ಆಹಾರವೆಂದರೆ ಗ್ಲೂಕೋಸ್ ಒಂದೇ. ಆದ್ದರಿಂದ ಜಡ ಆಹಾರವನ್ನು ಪಚನ ಮಾಡಿಕೊಳ್ಳಲಾರದ ರೋಗಿಗಳಿಗೆ ಇದನ್ನು ಆಹಾರದಲ್ಲಾಗಲಿ ಎನಿಮಾದಿಂದಾಗಲಿ ಅಥವ ನೇರವಾಗಿ ರಕ್ತನಾಳಗಳಿಗೆ