ಪುಟ:Mysore-University-Encyclopaedia-Vol-6-Part-18.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ಲೈಡರ

  ಬಳಸಿದ ಸಾಧನ  ಗ್ಲೈಡರ. ಇದಕ್ಕೆ ಎಂಜಿನ್ ಜೋಡಿಸಿ ಚಾಲನ ಸಾಮರ್ಥ್ಯವನ್ನು ಒದಗಿಸಿದಾಗ ಸಾಂಪ್ರದಾಯಿಕ ವಿಮಾನ (ಐರೋಪ್ಲೇನ್) ದೊರೆಯುತ್ತದೆ. ಬೀಸುವ ಗಾಳಿಯಲ್ಲಿನ ಶಕ್ತಿಯನ್ನು ಉಪಯೋಗಿಸಿಕೊಂಡು ಗ್ಲೈಡರ ವಾಯುಮಂಡಲದಲ್ಲಿ ತೇಲುತ್ತ ನಿಧಾನವಾಗಿ ಕೆಳಗಿಳಿಯಬಲ್ಲದು. ನೆಲದ ಮೇಲಿರುವ ಕೆಲವು ಯಾಂತ್ರಿಕ ಸಾಧನೆಗಳ ಮೂಲಕ ಇದನ್ನು ಗಾಳಿಪಟದಂತೆ ಭೂಮಿಯಿಂದ ಮೇಲಕ್ಕೆ ಏರಿಸಲೂಬಹುದು. ಇಂಥ ಮೇಲಕ್ಕೇರಬಲ್ಲ ಫಲಕಗಳನ್ನು ಸೇಯ್ಲ್ ಪ್ಲೇನ್ ಎಂದೂ ಕರೆಯುವರು. ಗ್ಲೈಡರನ ವಿನ್ಯಾಸವನ್ನು ಈಚೆಗೆ ಬಹಳ ಅಭಿವೃದ್ಧಿ ಪಡಿಸಲಾಗಿದೆ. ಸೈನ್ಯಕಾರ್ಯಾಚರಣೆಯಲ್ಲಿ ಸೈನಿಕರನ್ನು ಯುದ್ಧ ಪ್ರದೇಶಗಳಲ್ಲಿ ಇಳಿಸುವುದರಲ್ಲಿಯೂ ವಾಯುಯಾನ ಶಾಸ್ತ್ರ ಮತ್ತು ವಾಯುಲಕ್ಷಣ ಶಾಸ್ತ್ರಗಳಿಗೆ ಸಂಬಂಧಿಸಿದ ಸಂಶೋಧನ ಕಾರ್ಯಗಳಲ್ಲಿಯೂ ಗ್ಲೈಡರುಗಳನ್ನು ಹೆಚ್ಚು ಉಪಯೋಗಿಸುವುದುಂಟು.
  ಅಮೆರಿಕದ ಆಟೋ ಲೀಯೆಂಥಾಲ್ ಎಂಬ ವಿಜ್ಞಾನಿ 1867 ರಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿ ವಾಯುಮಾನವನ್ನು (ನೋಡಿ) ಸಾಧ್ಯಗೊಳಿಸಬಲ್ಲ ಕೆಲವು ಬಹುಮುಖ್ಯ ಭೌತ ಸಿದ್ಧಾಂತಗಳನ್ನು ನಿರೂಪಿಸಿದ. ತರುವಾಯ ೧೯೦೦ ರಲ್ಲಿ ರೈಟ್ ಸಹೋದರರು ಈ ಪ್ರಯೋಗಗಳನ್ನು ಇನ್ನೂ ತೀವ್ರವಾಗಿ ಮುಂದುವರೆಸಿ ವಾಯುಮಾನವನ್ನು ಅಪಾಯವಿಲ್ಲದಂತೆ ಮಾಡುವ ಕೆಲವು ನಿಯಂತ್ರಣ ವ್ಯವಸ್ಥೆಗಳನ್ನು ನಿರ್ಮಿಸಿದರು. ಇವುಗಳಲ್ಲಿ ಮುಖ್ಯವಾದವು ವಿಮಾನವನ್ನು ತಿರುಗಿಸುವುದಕ್ಕೆ ಚುಕ್ಕಾಣಿ (ರಡ್ಡರ), ಸುತ್ತುವಂತೆ ಮಾಡುವುದಕ್ಕೆ ಏಲೆರಾನ್ಸ್, ಹತ್ತುವಾಗ ಇಳಿಯುವಾಗ ಉಪಯೋಗಿಸುವ ಎಲೆವೇಟರಸ್ ಎಂಬವು. ಮುಂದೆ ಇವರೇ ನಿರ್ಮಿಸಿದ ಎಂಜಿನ್ ಚಾಲಿತ ವಿಮಾನ ರಚನೆಗೆ ಈ ಆವಿಷ್ಕರಣಗಳು ಪೀಠಿಕೆಯಾದುವು.
  ಕೆಲವು ವಿಶಿಷ್ಟ ಪರಿಸ್ಥಿತಿಗಳಲ್ಲಿ ವಾಯುಮಳ್ಡಲದೊಳಗೆ ಊರ್ಧ್ವಮುಖವಾಗಿ ಹರಿಯುವ ಗಾಳಿಯ ಪ್ರವಾಹಗಳು ಉತ್ಪನ್ನವಾಗುತ್ತವೆ. ಉದಾಹರಣೆಗೆ ವೇಗವಾಗಿ ಬೀಸುವ ಗಾಳಿಯನ್ನು ಬೆಟ್ಟಗುಡ್ಡಗಳು ವೇಗ ತಡೆದಾಗ ಅದು ತನ್ನ ದಿಕ್ಕನ್ನು ಬದಲಿಸಿ ಮೇಲ್ಮೊಗವಾಗಿ ಹರಿಯುತ್ತದೆ. ಬೇರೆ ಬೇರೆ ಉಷ್ಣ ವಿಭವಗಳಲ್ಲಿರುವ ಗಾಳಿಯ ಎರಡು ದೊಡ್ಡ ಭಾಗಗಳು ಪರಸ್ಪರ ಸಂಘಟ್ಟಿಸಿದಾಗ ಕೂಡ ಇಂಥ ಊರ್ಧ್ವಮುಕ ಪ್ರವಾಹ ಉಂಟಾಗುತ್ತದೆ. ಸೂರ್ಯನ ಬಿಸಿಲಿನಿಂದ ಕಾದ ಭೂಮಿ ಸುತ್ತಮುತ್ತಲಿನ ಗಾಳಿಯ ಉಷ್ಣತೆಯನ್ನು ಹೆಚ್ಚಿಸುವುದು. ಹೀಗೆ ಬಿಸಿಯಾದ ಗಾಳಿ ಹಗುರವಾಗಿ ಮೇಲೇರುವುದು. ಈ ಕಾರಣಗಳಿಂದ ಕೂಡ ಕೆಲವು ಪ್ರದೇಶಗಳಲ್ಲಿ ಊರ್ಧ್ವಾಭಿಮುಖವಾದ ವಾಯುವಿನ ಉಷ್ಣಪ್ರವಾಹಗಳು ಏರ್ಪಡುವುವು. ಬಿಸಿಯಾದ ಗಾಳಿ ಮೇಲಕ್ಕೆ ಹೋಗುತ್ತ ತಣ್ಣಗಾಗುವುದು. ಆಗ ಗಾಳಿಯಲ್ಲಿ ತೇವಾಂಶ ಘನಿಸಿ ಕ್ಯುಮಿಲಸ್ ಮೋಡಗಳೆಂಬ ವಿಶಿಷ್ಟ  ರೀತಿಯ ಮೋಡಗಳು ಉದ್ಭವವಾಗುವುವು. ಇಂಥ ಕ್ಯುಮುಲಸ್ ಮೋಡಗಳ ಕೆಳಭಾಗದಲ್ಲಿ ಗಾಳಿಯ ಸಳ್ಚಲನೆ ಇರುತ್ತದೆ. ಗಾಳಿಯ ಈ ಊರ್ಧ್ವ ಪ್ರವಾಹಗಳನ್ನು ಬಳಸಿಕೊಂಡು ಗ್ಲೈಡರುಗಳಲ್ಲಿ ಮೇಲೇರಿ ಬಹಳ ಹೊತ್ತು ಆಕಾಶದಲ್ಲಿ ಮೋಡಗಳ ಸಮೀಪ ತೇಲುತ್ತಿರುವುದು ಸಾಧ್ಯ.
   ಒಂದು ಪ್ರವಾಹದ ಸಹಾಯದಿಂದ ಮೇಲಕ್ಕೆ ಹತ್ತಿ ನಿಧಾನವಾಗಿ ವಾಯುಮಂಡಲದಲ್ಲೆ ಕೆಳಕ್ಕೆ ಜಾರುವುದು ಇಲ್ಲಿನ ತಂತ್ರ. ಆಗ ಗ್ಲೈಡರನ್ನು ಅತ್ತಲಿತ್ತ ತಿರುಗಿಸುತ್ತ ಚಾಲಕ ಇನ್ನೊಂದು ಪ್ರವಾಹವನ್ನು ಸಂಧಿಸುತ್ತಾನೆ. ಇದರ ಸಹಾಯದಿಂದ ಇನ್ನೂ ಮೇಲಕ್ಕೇರುತ್ತಾನೆ. ಇಂಥ ತಂತ್ರಗಳನ್ನು ಉಪಯೋಗಿಸಿ ಸಮುದ್ರಮಟ್ಟಕ್ಕಿಂತ ಮೇಲೆ ೧೩.೭೧ ಕಿಮೀ (೪೫೦೦೦ ಅಡಿ) ಗಳಷ್ಟು ಎತ್ತರಕ್ಕೆ ಹಾರಿದ್ದುದೂ ಉಂಟು; ೭೨ ಘಂಟೆಗಳಿಗಿಂತಲೂ ಹೆಚ್ಚು ಕಾಲ ತೇಲುತ್ತಿದ್ದುದೂ ಉಂಟು.
  ಗ್ಲೈಡರಿನಲ್ಲಿ ರೆಕ್ಕೆಗಳ ಆಕಾರ ಬಲು ಮುಖ್ಯ. ಗಾಳಿಯ ನೆಗಪು (ಲಿಫ್ಟ್) ಗರಿಷ್ಠವಾಗಿಯೂ ಕರ್ಷಣ (ಡ್ರ್ಯಾಗ್) ಕನಿಷ್ಠವಾಗಿಯೂ ಇರುವಂತೆ ವಾಯುಗತಿಶಾಸ್ತ್ರ ರೀತ್ಯ ರೆಕ್ಕೆಯ ಆಕಾರವನ್ನು ನಿರ್ಧರಿಸಲಾಗುವುದು. ಇಂದಿನ ಗ್ಲೈಡರಿನ ರೆಕ್ಕೆಗಳ ಗಾತ್ರ ೧೫ಮೀ ಉದ್ದ ೧.೨ಮೀ ಅಗಲ ಇದೆ. ಹಿಂದಿನ ಕಾಲದಲ್ಲಿ ಪ್ಲೈವುಡ್, ದಪ್ಪ ಬಟ್ಟೆ ಮತ್ತು ಉಕ್ಕಿನ ಕೊಳವೆಗಳನ್ನು ಉಪಯೋಗಿಸಿ ಗ್ಲೈಡರಗಳನ್ನು ಕಟ್ಟುತ್ತಿದ್ದರು. ಅಲ್ಯೂಮಿನಿಯಮ್